ಶರತ್ ಚಂದ್ರ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿರುವ ಇನ್ನೂ ಹೆಸರಿಡದ ಹೊಸ ಚಿತ್ರವೊಂದು ಸೆಟ್ಟೇ ರಿದೆ.’ಲವ್ ಇನ್ ಮಂಡ್ಯ ‘ ಚಿತ್ರದ ನಂತರ ಬಹಳ ವರ್ಷಗಳ ನಂತರ ಚಿತ್ರ ಸಾಹಿತಿ ಅರಸು ಅಂತಾರೆ  ಆಕ್ಷನ್ ಕಟ್ ಹೇಳುತ್ತಿದ್ದಾರೆ.

‘ಕೃಷ್ಣಂ ಪ್ರಣಯ ಸಖಿ ‘ಚಿತ್ರದ ಯಶಸ್ಸಿನ ನಂತರ ಗಣೇಶ್  ಪಾತ್ರಗಳ ಆಯ್ಕೆಯ ಜೊತೆಗೆ, ನಿರ್ದೇಶಕರು ಮತ್ತು ಕಥೆಯ ಆಯ್ಕೆ ವಿಷಯದಲ್ಲಿ ಕೂಡ ಬಹಳಷ್ಟು ಮುತುವರ್ಜಿ ವಹಿಸುತ್ತಿರುವುದು ಕಂಡು ಬರುತ್ತಿದೆ. ಯಾವಾಗ ಪ್ರೀತಮ್ ಗುಬ್ಬಿ ನಿರ್ದೇಶನದ’ ಬಾನ ದಾರಿಯಲ್ಲಿ’ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಯಿತೋ, ಗಣೇಶ್  ಈ ಹಿಂದೆ ಕೆಲಸ ಮಾಡಿದ ರೆಗ್ಯುಲರ್ ನಿರ್ದೇಶಕರ ಜೊತೆ ಕೆಲಸ ಮಾಡುವ ಬದಲು ಈ ಹಿಂದೆ ತಾನು ಕೆಲಸ ಮಾಡದೆ ಇರುವ ನಿರ್ದೇಶಕರ ಕಥೆ ಗಳನ್ನು ಕೇಳಿ ಇಷ್ಟ ಪಟ್ಟು ಸಿನಿಮಾ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

1000479197

‘ದಂಡು ಪಾಳ್ಯ ‘ ಸೀರಿಸ್ ಸಿನಿಮಾ ಗಳ ನಿರ್ದೇಶಕ ಶ್ರೀನಿವಾಸು ರಾಜು ಅವರ ಸಿನಿಮಾ ಗಳ ಹಿನ್ನಲೆ ಅರಿತ್ತಿದ್ದರೂ ಕೂಡ,   ಅವರ ಪ್ರತಿಭೆ ನಂಬಿ ಕಾಲ್ ಶೀಟ್ ಕೊಟ್ಟು ನಟಿಸಿದ್ದ  ಗಣೇಶ್ ಗೆ ಕೃಷ್ಣಂ ಪ್ರಣಯ ಸಖಿ ಚಿತ್ರ ಅವರ ಕೆರಿಯರ್ ನ ಮತ್ತೊಂದು ಮೈಲಿ ಗಲ್ಲಾಗಿದ್ದು ಈಗ ಇತಿಹಾಸ.

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಗಣೇಶ್ ಆಯ್ಕೆ ಮಾಡಿದ್ದು ನಿರ್ಮಾಪಕ ವಿಖ್ಯಾತ್ ನಿರ್ದೇಶನದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರ. ರಮೇಶ್ ಅರವಿಂದ್ ಜೊತೆ ಕಾಂಬಿನೇಶನ್ ಚಿತ್ರ ಇದಾಗಿದ್ದು ಹಿಂದೆ ‘ಪುಷ್ಪಕ ವಿಮಾನ’ ‘ಮನ್ಸೂನ್ ರಾಗ’ ದಂತಹ ವಿಭಿನ್ನ ಚಿತ್ರಗಳನ್ನು ನಿರ್ಮಿಸಿದ ವಿಖ್ಯಾತ್ಎ. ಆರ್. ಈ ಚಿತ್ರಕ್ಕೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. , ಟೈಟಲ್ ಲಾಂಚ್ ಆದಾಗ ತೋರಿಸಿದ ಸಣ್ಣ ತುಣುಕು ಆತನ ಪ್ರತಿಭೆ ಯ ಬಗ್ಗೆ ನಿರೀಕ್ಷೆ ಮೂಡಿಸಿದೆ. ಗಣೇಶ್ ಫ್ಯಾನ್ಸ್ ಕೂಡ ಗಣೇಶ್  ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ  ಖುಷಿ ಪಟ್ಟಿದ್ದರು.

1000479130

ಕೆಲವು ತಿಂಗಳುಗಳ ಹಿಂದೆ ಆರಂಭವಾದ ‘ಪಿನಾಕಾ’ ಎಂಬ ಚಿತ್ರ ದಲ್ಲಿ ಕೂಡ ಗಣೇಶ್ ಈ ಹಿಂದೆ ಮಾಡದೇ ಇರುವಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಅವರ ಗೆಟಪ್ ನೋಡಿ ಇದೊಂದು ವಿಭಿನ್ನ ಪಾತ್ರವಿರಬಹುದು ಅನಿಸಿದ್ದು ಸುಳ್ಳಲ್ಲ. ಈ ಚಿತ್ರ ನಿರ್ದೇಶಿಸುತ್ತಿರುವ ಧನಂಜಯ. ಬಿ. ಗೆ ಇದು ಚೋಚ್ಚಲ ಅವಕಾಶ ಕೂಡ.

1000479120

ಇನ್ನೂ ‘ಎಲ್ಲೆಲ್ಲೂ ಓಡುವ ಮನಸೇ’ ಯಂತಹ ಹಲವಾರು ಜನಪ್ರಿಯ ಹಾಡುಗಳನ್ನು ಬರೆದಿರುವ ಅರಸು ಅಂತಾರೆ ಆಕ್ಷನ್ ಕಟ್ ಹೇಳಲಿರುವ ರವಿ ಭದ್ರಾವತಿ ನಿರ್ಮಾಣ ದ ಪ್ರೊಡಕ್ಟನ್ ನಂ 1 ಚಿತ್ರಕ್ಕೆ ಭಾನುವಾರ ಮುಹೂರ್ತ ನಡೆದಿದೆ.ಈ ಹಿಂದೆ ನೀನಾಸಮ್ ಸತೀಶ್ ಅಭಿನಯದ ‘ ಲವ್ ಇನ್ ಮಂಡ್ಯ’ ಚಿತ್ರ   ನಿರ್ದೇಶನ  ಮಾಡಿ ಯಶಸ್ವಿಯಾಗಿದ್ದ ಅರಸು ಅಂತಾರೆ ಮತ್ತು ಗಣೇಶ್ ಕಾಂಬಿನೇಶನ್ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ.

1000479134

ಗಣೇಶ್ ಅಂದ ಮೇಲೆ ಒಳ್ಳೆಯ ಹಾಡುಗಳನ್ನು ನಿರೀಕ್ಷಿಸುವುದು ಸಹಜ. ಲವ್ ಇನ್ ಮಂಡ್ಯ ಚಿತ್ರದಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಅರಸು ಅಂತಾರೆ ಈ ವಿಷಯ ದಲ್ಲೂ  ಕೂಡ ಗೆಲ್ಲ ಬಹುದು ಎಂಬ ನಂಬಿಕೆ ಯಿದೆ.

ಒಟ್ಟಿನಲ್ಲಿ ಗಣೇಶ್ ಬೇರೆ ಬೇರೆ ತರದ ಪಾತ್ರ ಗಳನ್ನು ನಿಭಾಯಿಸುವುದರ ಜೊತೆಗೆ ನಿರ್ದೇಶಕರ ಆಯ್ಕೆ ಯಲ್ಲೂ ಚೂಸಿಯಾಗಿರುವುದು ಗಮನಾರ್ಹ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ