ಇತ್ತೀಚೆಗೆ ಶ್ರೀದೇವಿಯ ಹಿರಿ ಮಗಳು ಜಾಹ್ನವಿ ಕಪೂರ್‌ ತನ್ನ ಬೋಲ್ಡ್ ಲುಕ್ಸ್ ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಬಲು ಮಿಂಚುತ್ತಿದ್ದಾಳೆ. ಈ ಸಲ ಅವಳು ಭಲೇ ಭಲೇ ಹಂಗಾಮಾ ಮಾಡಿದ್ದಾಳೆ. ಅಸಲಿಗೆ ಅವಳು ತನ್ನ ಬೆಸ್ಟ್ ಫ್ರೆಂಡ್‌ ಓರಹನ್  ಓತ್ರಮನಿ ಜೊತೆ ಡೇಟ್‌ ಮಾಡುತ್ತಾ ಓಡಾಡುತ್ತಿದ್ದಾಳೆ. ಹಲವಾರು ಪಾರ್ಟಿಗಳಲ್ಲಿ ಈ ಜೋಡಿ ಬಹಿರಂಗವಾಗಿ ಕೈಯಲ್ಲಿ ಕೈ ಬೆಸೆದು ಕಾಣಿಸಿದ್ದಿದೆ. ಸಿನಿರಂಗದಲ್ಲಿ ಹೀಗೆ ಓಡಾಡೋದು ಮಾಮೂಲೇ ಬಿಡಿ. ಅವಳು ಒಂದು ಪಾರ್ಟಿಯಲ್ಲಿ, ಎಲ್ಲರಿಗಿಂತ ನಾನು ಓರಹನ್‌ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದೇನೆ, ಬೆಸ್ಟ್ ಸಪೋರ್ಟರ್‌ ಎಂದು ಭಾವಿಸುತ್ತೇನೆ, ಅವನು ಸದಾ ನನ್ನ ಜೊತೆಯೇ ಇರಲಿ ಎಂದು ಬಯಸುತ್ತೇನೆ ಎಂದಳು. ಇತ್ತೀಚೆಗಷ್ಟೇ ಜಾಹ್ನವಿ ಮುಂಬೈನಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ಹೊಸ ಬಂಗಲೆ ಖರೀದಿಸಿದ್ದಾಳೆ. ಅವಳು ಬಾಲಿವುಡ್‌ ನಲ್ಲಿ ಎಷ್ಟು ಯಶಸ್ವಿ ಎಂದು ಇದೇ ತೋರಿಸುತ್ತದೆ. ಅಂತೂ ಅವಳ ಬಾಯ್‌ ಫ್ರೆಂಡ್ ಅದೃಷ್ಟ ಖುಲಾಯಿಸಿದೆ ಎಂದೇ ಬಾಲಿವುಡ್‌ ಮಾತನಾಡಿಕೊಳ್ಳುತ್ತಿದೆ.

Bebo_ne_baadli_payal_ki_jindagi

ಪಾಯಲ್ ರಾಜಪೂತ್ ಜೀವನವನ್ನೇ ಬದಲಿಸಿದ ಬೇಬೋ

ಯಾರ ಹೆಸರನ್ನು ಕೇಳಿದೊಡನೆ ಅಭಿಮಾನಿಗಳು ಹುಚ್ಚಾಗುತ್ತಾರೋ, ತನ್ನ ನಟನೆ, ಚಿತ್ರ, ಡೈಲಾಗ್ಸ್ ನಿಂದ ಅಭಿಮಾನಿಗಳನ್ನು ಕುಣಿಸಬಲ್ಲಳೋ ಅಂಥ ಕೆಲವೇ ಹಿಂದಿ ನಾಯಕಿಯರಲ್ಲಿ ಬೇಬೋ ಅಂದ್ರೆ ಕರೀನಾ ಕಪೂರ್‌ ಸಹ ಒಬ್ಬಳು. ಆದರೆ ಇವಳು `ಜಬ್  ವಿ ಮೆಟ್‌’ ಚಿತ್ರದಲ್ಲಿ `ಸಿಖ್ನಿ ಹ್ಞೂಂ ಮೈ ಭಟಿಂಡಾ ಕೀ’ ಅಂತ ಡೈಲಾಗ್‌ ಹೊಡೆದೊಡನೆ, ದಕ್ಷಿಣದ ನಟಿ ಪಾಯಲ್ ರಾಜಪೂತ್‌ ಳ ಜೀವನವೇ ಬದಲಾಗಿ ಹೋಯಿತು! ಇದನ್ನು ಒಂದು ಸಂದರ್ಶನದಲ್ಲಿ ಖುದ್ದಾಗಿ ಇವಳೇ ಹೇಳಿಕೊಂಡಿದ್ದಾಳೆ. ನಡೆದ ವಿಚಾರ ಇಷ್ಟೇ, ಎಷ್ಟೋ ಸಂದರ್ಶನಗಳಲ್ಲಿ ಮೂಲತಃ ಪಂಜಾಬಿಯಾದ ಈ ಪಾಯಲ್, ಇದೇ ಡೈಲಾಗ್‌ ಹೊಡೆದು ಎಲ್ಲರಿಂದ ಶಭಾಶ್‌ ಗಿರಿ ಗಿಟ್ಟಿಸಿದ್ದಾಳೆ. ಈ ಕ್ರೆಡಿಟ್‌ ನ್ನು ಇವಳು ಪ್ರಾಮಾಣಿಕವಾಗಿ ಬೇಬೋಗೆ ಸಲ್ಲಿಸುತ್ತಾಳೆ. ಕರೀನಾ ಕಾರಣದಿಂದ ತನ್ನ ಜೀವನ ಬದಲಾಗಿ ಸೌತ್‌ ಸಿನಿಮಾ ನಟಿ ಆದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಇತ್ತೀಚೆಗೆ ಬಿಡುಗಡೆಯಾದ ಇವಳ `ಜಿನ್ನಾ’ ಚಿತ್ರ ಎಂಥ ಮೋಡಿ ಮಾಡಲಿದೆ…. ಕಾದು ನೋಡೋಣ!

Tiger_ne_mangi_fees

ಟೈಗರ್ಡಿಮ್ಯಾಂಡ್ಮಾಡಿದ ಸಂಭಾವನೆ

ಶಶಾಂಕ್‌ ಖೇತಾನ್‌ ನಿರ್ದೇಶನದಲ್ಲಿ ಮೂಡಿಬಂದ `ಸ್ಕ್ರೂ ಡೀವಾ’ ಚಿತ್ರದ ಟ್ರೇಲರ್‌ ಅಭಿಮಾನಿಗಳಲ್ಲಿ ಹೊಸ ಹುಚ್ಚೆಬ್ಬಿಸಿದೆ. ಆದರೆ ಏನಾಯ್ತೋ ಏನೋ, ದಿಢೀರ್‌ ಎಂದು ಈ ಚಿತ್ರ ಬಜೆಟ್‌ ಸಮಸ್ಯೆಯಿಂದಾಗಿ ಬಂದ್‌ ಆಗಲಿದೆ, ಚಿತ್ರೀಕರಣಕ್ಕೆ ಫುಲ್ ಸ್ಟಾಪ್‌ ಎನ್ನುತ್ತಿದ್ದಾರೆ ಸುದ್ದಿಗಾರರು. ಆದರೆ ನಿರ್ಮಾಪಕರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಸದ್ಯಕ್ಕೆ ತುಸು ಬ್ರೇಕ್‌, ಮುಂದಿನ ವರ್ಷದ ಆರಂಭದಲ್ಲೇ ಇದರ ಶೂಟಿಂಗ್‌ ಮುಂದವರಿಯಲಿದೆ ಎನ್ನುತ್ತಾರೆ. ಅಸಲಿ ವಿಷಯ ಏನು? ಇದರ ನಾಯಕನಟ ಟೈಗರ್ ಶ್ರಾಫ್‌ ತನ್ನ ಸಂಭಾವನೆಯನ್ನು 30 ಕೋಟಿಗೆ ಏರಿಸಿಕೊಂಡಿದ್ದಾನಂತೆ! ಅರ್ಧಂಬರ್ಧ ಚಿತ್ರೀಕರಣ ಮುಗಿಸಿ ಈಗಾಗಲೇ ಕೈ ಸುಟ್ಟುಕೊಂಡಿರುವ ನಿರ್ಮಾಪಕರು ಇಂಥ ಭಾರಿ ಸಂಭಾವನೆಯನ್ನು ತೆರಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮುಂದೆ ಏನಾಗಲಿದೆ? ಟೈಗರ್‌ ಅಭಿಮಾನಿಗಳಿಗೆ ನಿರಾಸೆ ಆಗುತ್ತಾ? ಕಾಲವೇ ನಿರ್ಣಯಿಸಬೇಕು.

Chote_baal_bane_lisa

ಲೀಜಾಳ ಪ್ರಗತಿಗೆ ಶಾರ್ಟ್ಹೇರ್ಅಡ್ಡಿಯೇ?

ಬೆರಳೆಣಿಕೆಯಷ್ಟು ಕೆಲವೇ ಚಿತ್ರಗಳಲ್ಲಿ ನಟಿಸಿ ತೆರೆಮರೆಗೆ ಸರಿದಿದ್ದ ಲೀಜಾ ರೇ ನಿಮಗೆ ನೆನಪಿದ್ದಾಳಷ್ಟೇ? ಆದರೆ ಧಾರಾಳ ಹೆಸರು ಗಿಟ್ಟಿಸಿಕೊಂಡಳು. ಇವಳ ಫ್ಯಾನ್ಸ್ ಸಂಖ್ಯೆಗೇನೂ ಕಡಿಮೆ ಇಲ್ಲ. ಈಕೆ ಕ್ಯಾನ್ಸರ್‌ ನಂಥ ಗಂಭೀರ ಕಾಯಿಲೆ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾಳೆ! ಕ್ಯಾನ್ಸರ್‌ ನಂತರ 3 ವರ್ಷ ಆದ ಮೇಲೆ 2012ರಲ್ಲಿ ಈಕೆ ಮದುಎ ಆದಳು. ನಂತರ ನಿಧಾನವಾಗಿ ಈಕೆಯ ಜೀವನದಲ್ಲಿ ಬದಲಾವಣೆ ಕಾಣಿಸತೊಡಗಿತು. ಕ್ಯಾನ್ಸರ್‌ ಕ್ರಮೇಣ ಹೆಚ್ಚಿ, ಈಕೆಯ ಕೂದಲು ಬಹುತೇಕ ಉದುರಿಹೋಯಿತು. ಅತಿ ಶಾರ್ಟ್‌ ಹೇರ್‌ ಆಗಿಹೋದ ಕಾರಣ ಯಾರೂ ಈಕೆಯನ್ನು ಈ ಗ್ಲಾಮರಸ್‌ ಜಗತ್ತಿನಲ್ಲಿ ಆದರಿಸಲಿಲ್ಲ, ಕೆಲಸ ಕೊಡಲಿಲ್ಲ. ಈಕೆಯ ಮನಸ್ಸು ಸಂಪೂರ್ಣ ಮುರಿದು ಹೋಯಿತು. ಆದರೆ ಈಕೆ ಸಂಪೂರ್ಣ ಆತ್ಮವಿಶ್ವಾಸದಿಂದ ಜನರ ಮುಂದೆ ನಿಂತು ಕಾರ್ಯನಿರತಳಾಗಿದ್ದಾಳೆ. ಆಲ್ ದಿ ಬೆಸ್ಟ್ ಲೀಜಾ!

India_lockdown

ಇಂಡಿಯಾ ಲಾಕ್ಡೌನ್ಟೀಸರ್ರಿಲೀಸ್

ಬಹು ಕಾಲದಿಂದ ಚರ್ಚೆಯಲ್ಲೇ ಉಳಿದಿದ್ದ  `ಇಂಡಿಯಾ ಲಾಕ್‌ ಡೌನ್‌’ ಚಿತ್ರ ಅಂತೂ ತನ್ನ ಟೀಸರ್‌ ರಿಲೀಸ್‌ ಮಾಡಿ ಗದ್ದಲಕ್ಕೆ ಶುರು ಹಚ್ಚಿಕೊಂಡಿದೆ. ಈ ಚಿತ್ರದ ಟೈಟಲ್ ನಿಂದಲೇ ಈ ಚಿತ್ರದ ಕಥಾವಸ್ತು ಬಗ್ಗೆ ಊಹಿಸಬಹುದು. ಮಹಾಮಾರಿ ಕೊರೋನಾ ವೈರಸ್‌ ಕಾಟದಿಂದಾಗಿ ದೇಶವಿಡೀ ಲಾಕ್‌ ಡೌನ್‌ ಆದಾಗ ನಡೆದಿರಬಹುದಾದ ಕಷ್ಟಕೋಟಲೆಗಳ ಸಾಮಾಜಿಕ ಚಿತ್ರವಿದು. ಚಿತ್ರದ ನಿರ್ದೇಶಕರು ಮಧುರ್‌ ಭಂಡಾರ್‌ ಕರ್‌. ಈ ಚಿತ್ರದಲ್ಲಿ ಪ್ರತೀಕ್‌ ಬಬ್ಬರ್‌, ಶ್ವೇತಾ ಬಸು ಪ್ರಸಾದ್‌, ಅಹಾಮಾ, ಜರೀನಾ, ಆಯೇಶಾ, ಸಾನದ್‌ ವರ್ಮಾ ಮುಂತಾದ ಕಲಾವಿದರ ದಂಡೇ ಇದೆ. ಈ ಚಿತ್ರದಲ್ಲಿ ಲಾಕ್‌ ಡೌನ್‌ ದೆಸೆಯಿಂದ ಯಾವ ತರಹ ಎಲ್ಲರ ಜೀವನ ಉಲ್ಟಂಪಲ್ಟಾ ಆಯಿತು ಎಂದು ತೋರಿಸಲಾಗಿದೆ. ಈ ಚಿತ್ರ ಇಷ್ಟರಲ್ಲೆ OTT ಪ್ಲಾಟ್‌ ಫಾರ್ಮ್ ನಲ್ಲಿ ರಿಲೀಸ್ ಆಗಲಿದೆಯಂತೆ!

Kartik_kar_rahe_ritik_ki_bahan_ko_date

ಯಾರಿದು ಕಾರ್ತಿಕ್ ಹೊಸ ಗರ್ಲ್ ಫ್ರೆಂಡ್‌?

ಕಾರ್ತಿಕ್‌ ಆರ್ಯನ್‌ ಗೆ ಲಕ್ಷಾಂತರ ಮಂದಿ ಫ್ಯಾನ್‌ ಫಾಲೋಯೆರ್ಸ್‌ ಇದ್ದಾರೆ. ಈತನ ದರ್ಶನ, ಸೆಲ್ಛಿಗಾಗಿ ಅಭಿಮಾನಿಗಳು ಹಾತೊರೆಯುತ್ತಾರೆ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು FB‌, ಇನ್‌ ಸ್ಟಾಗ್ರಾಮ್ ಫಾಲೋ ಮಾಡುತ್ತಾ ಮುಂದಿನ ವಿಷಯ ಸಂಗ್ರಹಿಸಲು ತುದಿಗಾಲಲ್ಲಿ ಕಾಯುತ್ತಾರೆ. ನಟನಟಿಯರ ಕುರಿತು ಈ ಅತಿರೇಕದ ಹುಚ್ಚು ಅಭಿಮಾನ ನಮ್ಮ ದೇಶದಲ್ಲೇ ಹೆಚ್ಚು. ಇತ್ತೀಚೆಗಷ್ಟೇ ತಿಳಿದು ಬಂದ ಸಂಗತಿ ಎಂದರೆ, ಹೃತಿಕ್‌ ರೋಶನ್‌ ನ ಕಸಿನ್‌ ಪಶ್ಮೀನಾ ರೋಶನ್‌ ಜೊತೆ ಕಾರ್ತಿಕ್‌ ಎಲ್ಲೆಂದರಲ್ಲಿ ಗುಸುಗುಸು ಸುತ್ತಾಡುತ್ತಾ ಸುದ್ದಿಗಾರರ ಕ್ಯಾಮೆರಾ ಕಣ್ಣಿಗೆ, ಪಾರ್ಟಿಗಳಲ್ಲಿ ಸಹ ಕಂಡುಬರುತ್ತಿದ್ದಾನೆ. ಅಂತೂ ಹೊಸ ಗರ್ಲ್ ಫ್ರೆಂಡ್‌ ಸಿಕ್ಕಿದ ಖುಷಿಯಲ್ಲಿ ಕಾರ್ತಿಕ್‌ ಮುಂದಿನ ಶುಭ ಸಮಾರಂಭದ ಬಗ್ಗೆ ಮಾತ್ರ ತುಟಿ ಪಿಟಕ್‌ ಎನ್ನುತ್ತಿಲ್ಲ.

Rucha_Hasabnis

ತಾಯಿ ಆಗಲಿರುವ ರುಚಾ ಹಸ್ಬನೀಸ್

ಇತ್ತೀಚೆಗೆ ಆಲಿಯಾ ಭಟ್‌ ತಾಯಿ ಆಗಿದ್ದು ಹಳೆಯ ಸುದ್ದಿಯಾಯಿತು. ಇಡೀ ಬಾಲಿವುಡ್‌ ಮಾತ್ರವಲ್ಲದೆ ಅವಳ ಮತ್ತು ಪತಿ ರಣಬೀರ್‌ ಕಪೂರ್‌ ನ ಅಭಿಮಾನಿಗಳೆಲ್ಲ ಹೊಗಳಿದ್ದೇ ಹೊಗಳಿದ್ದು! ಈ ಮಧ್ಯೆ ಮತ್ತೊಂದು ಹೊಸ ಗುಡ್‌ ನ್ಯೂಸ್‌ ಎಂದರೆ, `ಸಾಥ್‌ ನಿಭಾನಾ ಸಾಥಿಯಾ’ ಜನಪ್ರಿಯ ಧಾರಾವಾಹಿಯ ಟಿವಿ ನಟಿ ರುಚಾ ಹಸ್‌ ಬನೀಸ್‌ ಸಹ ತಾಯಿ ಆಗಿದ್ದಾಳಂತೆ! ಈ ಧಾರಾವಾಹಿಯ ಆದರ್ಶ ಸೊಸೆ `ರಾಶೀ’ಯಾಗಿ ಈಕೆ ದೇಶಾದ್ಯಂತ ಮನೆ ಮನೆಯಲ್ಲೂ ಫೇಮಸ್‌. ಗಂಡು ಮಗುವಿಗೆ ಜನ್ಮವಿತ್ತ ಈಕೆ, ಮಗು ಸಮೇತ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಫೋಟೋ ಹಂಚಿಕೊಂಡಿದ್ದಾಳೆ. ಮಗುವಿನ ಫೋಟೋ ಮೇಲೆ `ಯೂ ಆರ್‌ ಮೈ ಮ್ಯಾಜಿಕ್‌!’ ಎಂದು ಸಾರಿಕೊಂಡು ಬೀಗುತ್ತಿದ್ದಾಳೆ, ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ!

Harshvardhan_rane

ಹರ್ಷವರ್ಧನನ ಮೋಡಿ

ಹರ್ಷವರ್ಧನ್‌ ರಾಣೋ 2016ರಲ್ಲಿ ಮೂಡಿಬಂದ `ಸನಮ್ ತೇರಿ ಕಸಮ್’ ಚಿತ್ರದಿಂದ ಬಾಲಿವುಡ್‌ ನಲ್ಲಿ ಬೇರೂರಿ ಅಪಾರ ಜನಪ್ರಿಯತೆ ಗಳಿಸಿದ್ದಾನೆ. ಇತ್ತೀಚೆಗೆ ಈತನ `ತಾರಾ V/S ಬಿಲಾಲ್‌’ ಚಿತ್ರ ಬಹು ಚರ್ಚೆಯಲ್ಲಿದೆ. ತನ್ನ ಅಭಿಮಾನಿ ವೀಕ್ಷಕ ಬಳಗಕ್ಕೆ ವಂದನೆ ಸಲ್ಲಿಸುತ್ತಾ ಈತ ಅವರ ಪ್ರೀತಿಗೆ ಮಾರುಹೋಗಿದ್ದಾನೆ. ಹೊರಗಿನವನಾದರೂ ತನಗೆ ಜಾನ್‌ ಅಬ್ರಹಾಂ, ಸಂಜಯ್‌ ಗುಪ್ತಾರಂಥ ಬಾಲಿವುಡ್‌ ನ ಘಟಾನುಘಟಿಗಳ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ತನ್ನ ಸೌಭಾಗ್ಯ ಎನ್ನುತ್ತಾನೆ. ತನ್ನ ವೈವಿಧ್ಯಮಯ ಪಾತ್ರಗಳಿಂದ ಈತ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದಾನೆ.

Double_xl_ki_jaan_Huma

ಡಬಲ್ XL  ಚಿತ್ರದ ಜೀವಾಳ ಹುಮಾ ಕುರೇಶಿ

ಹುಮಾ ಕುರೇಶಿ ಮತ್ತು ಸೋನಾಕ್ಷಿ ಸಿನ್ಹಾರ ಚಿತ್ರ `XL’ ಚಿತ್ರಮಂದಿರದಲ್ಲಿ ದೊಡ್ಡ ಗದ್ದಲ ಎಬ್ಬಿಸಿದೆ, ಉತ್ತಮ ಗಳಿಕೆ ಸಿಕ್ಕಿದೆ! ಈ ಚಿತ್ರದ ಯಶಸ್ಸಿಗೆ ಕಾರಣ….. ಇಲ್ಲಿ ಬಾಡಿ ಶೇಮಿಂಗ್‌ ನಿಂದಾಗಿ ಹೆಣ್ಣುಮಕ್ಕಳು ಏನೆಲ್ಲ ಕಷ್ಟಪಡುತ್ತಾರೆ ಎಂಬುದೇ ವಿಷಯ. ಇಲ್ಲಿ ಹುಮಾ ಸ್ಪೋರ್ಟ್ಸ್ ಪ್ರೆಸೆಂಟರ್‌ ಆಗಬಯಸುತ್ತಾಳೆ, ಸೋನಾಕ್ಷಿ ಫ್ಯಾಷನ್‌ ಡಿಸೈನರ್‌. ಡುಮ್ಮಿಗಳಾದ ಕಾರಣ ಇಬ್ಬರಿಗೂ ಈ ಅವಕಾಶ ಸಿಗುವುದೇ ದುಸ್ತರವಾಗುತ್ತದೆ. ಇಬ್ಬರೂ ಕಲೆತು ಈ ಸಮಸ್ಯೆಗೆ ಹೇಗೆ ಪರಿಹಾರ ಹುಡುಕಿ ತಮ್ಮ ಕನಸು ನನಸಾಗಿಸಿಕೊಂಡವರು ಎಂಬುದೇ ಮುಂದಿನ ಕಥಾಭಾಗ. ಸ್ಥೂಲಕಾಯದವರಿಗೆ ಈ ಚಿತ್ರ ಎಷ್ಟೋ ಪ್ರೇರಣಾದಾಯಕವಂತೆ. ಹುಮಾ, ಸೋನಾಕ್ಷಿಯರ ಕಮಾಲ್ ‌ಇಲ್ಲಿ ಭಾರಿ ಕೆಲಸ ಮಾಡಿದೆ!

Stree_ko_le_kar

ಸ್ತ್ರೀ ಚಿತ್ರಕ್ಕೆ ದೊರೆತ ಮನ್ನಣೆ

ರಾಜ್‌ ಕುಮಾರ್‌ ರಾವ್ ‌ಹಾಗೂ ಶ್ರದ್ಧಾ ಕಪೂರ್‌ ರ ಚಿತ್ರ `ಸ್ತ್ರೀ’ ಬಾಕ್ಸ್ ಆಫೀಸಿನಲ್ಲಿ ಇನ್ನಿಲ್ಲದ ರೆಕಾರ್ಡ್‌ ಮಾಡುತ್ತಾ ಮುನ್ನುಗ್ಗುತ್ತಿದೆ! ವೀಕ್ಷಕರು ಈ ಚಿತ್ರವನ್ನು ಬಹಳ ಬಹಳ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಇದರ ಸೀಕ್ವೆಲ್ ‌ಆಗಲೇಬೇಕು ಎಂಬ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ರಾಜ್‌ ಕುಮಾರ್‌ ಈ ಚಿತ್ರದ ಸೀಕ್ವೆಲ್ ‌ಬಗ್ಗೆ ಘೋಷಣೆ ನೀಡಿದ. ಇಷ್ಟರಲ್ಲಿ ಈ ಚಿತ್ರದ ಪಾರ್ಟ್ ಶೂಟಿಂಗ್‌ ಶುರು ಆಗಲಿದೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ