ದೈವದ ಕೃಪೆ ಇಲ್ಲದೆ ಏನೂ ನಡೆಯಲ್ಲ. ಅದ್ರಲ್ಲೂ ಕರಾವಳಿಯ ಪಂಜುರ್ಲಿ ದೈವ, ದೈವ ನರ್ತಕ ಆಚಾರಗಳ ಮೇಲೆ ಅಲ್ಲಿನ ಜನಕ್ಕೆ ಎಲ್ಲಿಲ್ಲದ ಭಕ್ತಿ, ನಂಬಿಕೆ. ಅದನ್ನೇ ಇಟ್ಕೊಂಡು, ಅಲ್ಲೇ ಹುಟ್ಟಿ ಬೆಳೆದ ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮಾಡಿದ್ರು. ಡಿವೈನ್ ಟಚ್ ಕೊಟ್ಟಿದ್ದ ಆ ಸಿನಿಮಾ, 450 ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿತ್ತು.

ತಾವೇ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ರಿಷಬ್ ಶೆಟ್ಟಿಗೆ ಇದ್ರಿಂದ ಡಿವೈನ್ ಸ್ಟಾರ್ ಪಟ್ಟವೂ ಬಂತು. ಕುಂದಾಪುರ ಕುವರ ಕರಾವಳಿಯಿಂದ ವಿಶ್ವಸಂಸ್ಥೆವರೆಗೆ ಕನ್ನಡದ ಬಾವುಟ ಹಾರಿಸಿದ್ರು. ಎಲ್ಲೇ ಹೋದರೂ ಪಂಚೆಯಲ್ಲೇ ನಮ್ಮ ನೆಲದ ಗತ್ತು, ಗಮ್ಮತ್ತು ತೋರಿದರು. ಇದೀಗ ಅವರ ಕಾಂತಾರ ಪ್ರೀಕ್ವೆಲ್, ಕಾಂತಾರ-1 ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಶೂಟಿಂಗ್ ಮುಗಿಸಿ ತೆರಳುತ್ತಿದ್ದ ಶೂಟಿಂಗ್ ವಾಹನಕ್ಕೆ ಆದ ಅಪಘಾತ, ಕಾಂತಾರ-1 ವೇಳೆ ನಡೆದ ಬಾಂಬ್ ಬ್ಲಾಸ್ಟ್, ಅದಕ್ಕಾಗಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಹಾಕಿದ ಕೇಸ್ ಸೇರಿದಂತೆ ಸಾಕಷ್ಟು ವಿಘ್ನಗಳು ಎದುರಾಗಿವೆ.

ಕಾಂತಾರ ಸಿನಿಮಾ ಹಿಟ್ ಬಳಿಕ ಸ್ವತಃ ನಿರ್ಮಾಪಕರಾದ ವಿಜಯ್ ಕಿರಗಂದೂರು ಹಾಗೂ ರಿಷಬ್ ಪಂಜುರ್ಲಿ ದೈವಕ್ಕೆ ಧನ್ಯವಾದ ಹೇಳುವ ಕಾರ್ಯ ಮಾಡಿತ್ತು. ಆದಾಗ್ಯೂ ಕೂಡ ರಿಷಬ್ ಶೆಟ್ಟಿಗೆ ಶತ್ರುಗಳ ಭಾದೆ ಕಾಡ್ತಿದೆಯಂತೆ. ಅದನ್ನ ಡಿವೈನ್ ಸ್ಟಾರ್ ಹೇಳ್ತಿರೋದಲ್ಲ, ಖುದ್ದು ಪಂಜುರ್ಲಿ ದೈವವೇ ನುಡಿದಿದೆ. ಇಷ್ಟಕ್ಕೂ ಪಂಜುರ್ಲಿ ನುಡಿದಿದ್ದೇನು ಅಂತೀರಾ..? ಮಕ್ಕಳು, ಮಡದಿ ಸಮೇತ ಮಂಗಳೂರಿಗೆ ತೆರಳಿದ್ದ ಡಿವೈನ್ ಸ್ಟಾರ್ ರಿಷಬ್ ಸೆಟ್ಟಿ, ನಡುರಾತ್ರಿ ಪಂಜುರ್ಲಿ ನೇಮಕ್ಕೆ ತೆರಳಿದ್ದಾರೆ. ಬೆಳಗಿನವರೆಗೂ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿದ್ರು. ಹೌದು.. ಕಾಂತಾರ-1 ಶೂಟಿಂಗ್ಗೆ ತೊಂದರೆ ಆಗ್ತಿದೆ. ನೀವು ಹೇಳ್ತಿರೋದು ನಿಜ ಎಂದ ರಿಷಬ್ಗೆ ಸ್ವತಃ ಪಂಜುರ್ಲಿ ದೈವವೇ ಅಭಯ ನೀಡಿದೆ.

ಈಗಾಗ್ಲೇ ವಿಶ್ವ ಹಿಂದೂ ಪರಿಷತ್ನವರು ದೈವದ ಹೆಸರಲ್ಲಿ ಯಾರೂ ಸಿನಿಮಾ, ಸೀರಿಯಲ್ ಮಾಡಬಾರದು ಅಂತ ವಿರೋಧ ವ್ಯಕ್ತಪಡಿಸಿದ್ದಾರೆ. ಆದರ ನಡುವೆಯೇ ಸಿನಿಮಾದ ಶೂಟಿಂಗ್ ಮಾಡಿ ಮುಗಿಸೋ ಹಂತಕ್ಕೆ ತಂದಿದ್ದಾರೆ ರಿಷಬ್ ಶೆಟ್ಟಿ. ಹೀಗಾಗಿ ರಿಲೀಸ್ಗೆ ವಿರೋಧ ವ್ಯಕ್ತವಾಗುವ ಮುನ್ಸೂಚನೆ ನೀಡಿತಾ ದೈವ ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ. ಅದೇನೇ ಇರಲಿ, ಐದು ತಿಂಗಳಲ್ಲಿ ನಿನಗೆ ಒಳ್ಳೆಯದು ಮಾಡ್ತೀತಿ ಅಂದಿದೆ ದೈವ. ಇದನ್ನ ಕಂಡು ಶೆಟ್ರ ಬಳಗ ಕೊಂಚ ನಿರಾಳವಾಗಿದೆ. ಇತ್ತ ನಿರ್ಮಾಪಕರು ಕೂಡ ದೈವ ಮಾತಿಗೆ ರಿಲ್ಯಾಕ್ಸ್ ಆಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ