-ಶರತ್ ಚಂದ್ರ.
ಅರ್ಜುನ್ ಸರ್ಜಾ ಉಪ್ಪಿ ಅಣ್ಣನ ಮಗ ನಿರಂಜನ್ ನಾಯಕನಾಗಿ ಹಾಗೂ ಮಗಳು ಐಶ್ವರ್ಯ ನಾಯಕಿಯಾಗಿ ನಟಿಸುತ್ತಿರುವ 'ಸೀತಾ ಪಯಣ ' ಚಿತ್ರ ನಿರ್ದೇಶನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇತ್ತೀಚಿನ ಬೆಳವಣಿಗೆ ಏನಂದರೆ ಅರ್ಜುನ್ ಸರ್ಜಾ ಅವರ ಅಳಿಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪವನ್ ಎಂಬ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುವ ಬಗ್ಗೆ ರಾಮನವಮಿಯ ದಿನ ಧ್ರುವ ಸರ್ಜಾ ಫಸ್ಟ್ ಲುಕ್ ಪೋಸ್ಟರ್ ಸೋಶಿಯಲ್ ಮೀಡಿಯಾ ದಲ್ಲಿ ಬಿಟ್ಟಿದ್ದು ಸಕತ್ ವೈರಲ್ ಆಗಿದೆ.
ಧ್ರುವ ಸರ್ಜಾ ಸೇರ್ಪಡೆಯಿಂದ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಸದ್ಯಕ್ಕೆ ಪಾತ್ರದ ಕುರಿತು ಸುಳಿವು ನೀಡದ ಅರ್ಜುನ್ ಸರ್ಜಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಯಾಗಿದ್ದಾರೆ. ಅರ್ಜುನ್ ಸರ್ಜಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೂ ದಕ್ಷಿಣ ಭಾರತದ ಟಾಪ್ ಮೋಸ್ಟ್ ಕಲಾವಿದರಾದ ಸತ್ಯರಾಜ್, ಪ್ರಕಾಶ್ ರಾಜ್, ಜಗಪತಿ ಬಾಬು ಕೂಡ ಪಾತ್ರವರ್ಗದಲ್ಲಿ ದ್ದಾರೆ, ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆ ಯಲ್ಲಿ ಕೂಡ ಚಿತ್ರ ಬಿಡುಗಡೆ ಯಾಗಲಿದೆ
ಅರ್ಜುನ್ ಸರ್ಜಾ ಈ ಹಿಂದೆ ಮಗಳು ಐಶ್ವರ್ಯ ನಾಯಕಿಯಾಗಿ ನಟಿಸಿದ್ದ ' ಪ್ರೇಮ ಬರಹ ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ಆಂಜನೇಯ ಕುರಿತಾದ ಹಾಡಿನಲ್ಲಿ ದರ್ಶನ್, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಕಾಣಿಸಿಕೊಂಡಿದ್ದರು.
ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ಈ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದೂ
ನಾಯಕ ನಿರಂಜನ್ ಗೆ ಈ ಚಿತ್ರ ಟರ್ನಿಂಗ್ ಪಾಯಿಂಟ್ ಆಗಬಹುದೆOಬ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಗೆಸ್ಟ್ ರೋಲ್ ಆದರೂ ಕೂಡ ಧ್ರುವ ಲುಕ್ ನೋಡಿದ ಧ್ರುವ ಸರ್ಜಾ ಅಭಿಮಾನಿಗಳು ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.