ಇತ್ತೀಚೆಗೆ ಶ್ರೀದೇವಿಯ ಹಿರಿ ಮಗಳು ಜಾಹ್ನವಿ ಕಪೂರ್‌ ತನ್ನ ಬೋಲ್ಡ್ ಲುಕ್ಸ್ ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಬಲು ಮಿಂಚುತ್ತಿದ್ದಾಳೆ. ಈ ಸಲ ಅವಳು ಭಲೇ ಭಲೇ ಹಂಗಾಮಾ ಮಾಡಿದ್ದಾಳೆ. ಅಸಲಿಗೆ ಅವಳು ತನ್ನ ಬೆಸ್ಟ್ ಫ್ರೆಂಡ್‌ ಓರಹನ್  ಓತ್ರಮನಿ ಜೊತೆ ಡೇಟ್‌ ಮಾಡುತ್ತಾ ಓಡಾಡುತ್ತಿದ್ದಾಳೆ. ಹಲವಾರು ಪಾರ್ಟಿಗಳಲ್ಲಿ ಈ ಜೋಡಿ ಬಹಿರಂಗವಾಗಿ ಕೈಯಲ್ಲಿ ಕೈ ಬೆಸೆದು ಕಾಣಿಸಿದ್ದಿದೆ. ಸಿನಿರಂಗದಲ್ಲಿ ಹೀಗೆ ಓಡಾಡೋದು ಮಾಮೂಲೇ ಬಿಡಿ. ಅವಳು ಒಂದು ಪಾರ್ಟಿಯಲ್ಲಿ, ಎಲ್ಲರಿಗಿಂತ ನಾನು ಓರಹನ್‌ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದೇನೆ, ಬೆಸ್ಟ್ ಸಪೋರ್ಟರ್‌ ಎಂದು ಭಾವಿಸುತ್ತೇನೆ, ಅವನು ಸದಾ ನನ್ನ ಜೊತೆಯೇ ಇರಲಿ ಎಂದು ಬಯಸುತ್ತೇನೆ ಎಂದಳು. ಇತ್ತೀಚೆಗಷ್ಟೇ ಜಾಹ್ನವಿ ಮುಂಬೈನಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ಹೊಸ ಬಂಗಲೆ ಖರೀದಿಸಿದ್ದಾಳೆ. ಅವಳು ಬಾಲಿವುಡ್‌ ನಲ್ಲಿ ಎಷ್ಟು ಯಶಸ್ವಿ ಎಂದು ಇದೇ ತೋರಿಸುತ್ತದೆ. ಅಂತೂ ಅವಳ ಬಾಯ್‌ ಫ್ರೆಂಡ್ ಅದೃಷ್ಟ ಖುಲಾಯಿಸಿದೆ ಎಂದೇ ಬಾಲಿವುಡ್‌ ಮಾತನಾಡಿಕೊಳ್ಳುತ್ತಿದೆ.

Bebo_ne_baadli_payal_ki_jindagi

ಪಾಯಲ್ ರಾಜಪೂತ್ ಜೀವನವನ್ನೇ ಬದಲಿಸಿದ ಬೇಬೋ

ಯಾರ ಹೆಸರನ್ನು ಕೇಳಿದೊಡನೆ ಅಭಿಮಾನಿಗಳು ಹುಚ್ಚಾಗುತ್ತಾರೋ, ತನ್ನ ನಟನೆ, ಚಿತ್ರ, ಡೈಲಾಗ್ಸ್ ನಿಂದ ಅಭಿಮಾನಿಗಳನ್ನು ಕುಣಿಸಬಲ್ಲಳೋ ಅಂಥ ಕೆಲವೇ ಹಿಂದಿ ನಾಯಕಿಯರಲ್ಲಿ ಬೇಬೋ ಅಂದ್ರೆ ಕರೀನಾ ಕಪೂರ್‌ ಸಹ ಒಬ್ಬಳು. ಆದರೆ ಇವಳು `ಜಬ್  ವಿ ಮೆಟ್‌' ಚಿತ್ರದಲ್ಲಿ `ಸಿಖ್ನಿ ಹ್ಞೂಂ ಮೈ ಭಟಿಂಡಾ ಕೀ' ಅಂತ ಡೈಲಾಗ್‌ ಹೊಡೆದೊಡನೆ, ದಕ್ಷಿಣದ ನಟಿ ಪಾಯಲ್ ರಾಜಪೂತ್‌ ಳ ಜೀವನವೇ ಬದಲಾಗಿ ಹೋಯಿತು! ಇದನ್ನು ಒಂದು ಸಂದರ್ಶನದಲ್ಲಿ ಖುದ್ದಾಗಿ ಇವಳೇ ಹೇಳಿಕೊಂಡಿದ್ದಾಳೆ. ನಡೆದ ವಿಚಾರ ಇಷ್ಟೇ, ಎಷ್ಟೋ ಸಂದರ್ಶನಗಳಲ್ಲಿ ಮೂಲತಃ ಪಂಜಾಬಿಯಾದ ಈ ಪಾಯಲ್, ಇದೇ ಡೈಲಾಗ್‌ ಹೊಡೆದು ಎಲ್ಲರಿಂದ ಶಭಾಶ್‌ ಗಿರಿ ಗಿಟ್ಟಿಸಿದ್ದಾಳೆ. ಈ ಕ್ರೆಡಿಟ್‌ ನ್ನು ಇವಳು ಪ್ರಾಮಾಣಿಕವಾಗಿ ಬೇಬೋಗೆ ಸಲ್ಲಿಸುತ್ತಾಳೆ. ಕರೀನಾ ಕಾರಣದಿಂದ ತನ್ನ ಜೀವನ ಬದಲಾಗಿ ಸೌತ್‌ ಸಿನಿಮಾ ನಟಿ ಆದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಇತ್ತೀಚೆಗೆ ಬಿಡುಗಡೆಯಾದ ಇವಳ `ಜಿನ್ನಾ' ಚಿತ್ರ ಎಂಥ ಮೋಡಿ ಮಾಡಲಿದೆ.... ಕಾದು ನೋಡೋಣ!

Tiger_ne_mangi_fees

ಟೈಗರ್ಡಿಮ್ಯಾಂಡ್ಮಾಡಿದ ಸಂಭಾವನೆ

ಶಶಾಂಕ್‌ ಖೇತಾನ್‌ ನಿರ್ದೇಶನದಲ್ಲಿ ಮೂಡಿಬಂದ `ಸ್ಕ್ರೂ ಡೀವಾ' ಚಿತ್ರದ ಟ್ರೇಲರ್‌ ಅಭಿಮಾನಿಗಳಲ್ಲಿ ಹೊಸ ಹುಚ್ಚೆಬ್ಬಿಸಿದೆ. ಆದರೆ ಏನಾಯ್ತೋ ಏನೋ, ದಿಢೀರ್‌ ಎಂದು ಈ ಚಿತ್ರ ಬಜೆಟ್‌ ಸಮಸ್ಯೆಯಿಂದಾಗಿ ಬಂದ್‌ ಆಗಲಿದೆ, ಚಿತ್ರೀಕರಣಕ್ಕೆ ಫುಲ್ ಸ್ಟಾಪ್‌ ಎನ್ನುತ್ತಿದ್ದಾರೆ ಸುದ್ದಿಗಾರರು. ಆದರೆ ನಿರ್ಮಾಪಕರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಸದ್ಯಕ್ಕೆ ತುಸು ಬ್ರೇಕ್‌, ಮುಂದಿನ ವರ್ಷದ ಆರಂಭದಲ್ಲೇ ಇದರ ಶೂಟಿಂಗ್‌ ಮುಂದವರಿಯಲಿದೆ ಎನ್ನುತ್ತಾರೆ. ಅಸಲಿ ವಿಷಯ ಏನು? ಇದರ ನಾಯಕನಟ ಟೈಗರ್ ಶ್ರಾಫ್‌ ತನ್ನ ಸಂಭಾವನೆಯನ್ನು 30 ಕೋಟಿಗೆ ಏರಿಸಿಕೊಂಡಿದ್ದಾನಂತೆ! ಅರ್ಧಂಬರ್ಧ ಚಿತ್ರೀಕರಣ ಮುಗಿಸಿ ಈಗಾಗಲೇ ಕೈ ಸುಟ್ಟುಕೊಂಡಿರುವ ನಿರ್ಮಾಪಕರು ಇಂಥ ಭಾರಿ ಸಂಭಾವನೆಯನ್ನು ತೆರಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮುಂದೆ ಏನಾಗಲಿದೆ? ಟೈಗರ್‌ ಅಭಿಮಾನಿಗಳಿಗೆ ನಿರಾಸೆ ಆಗುತ್ತಾ? ಕಾಲವೇ ನಿರ್ಣಯಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ