ನಿರೂಪಕಿ ಅನುಶ್ರೀ ಅವರ ಮದುವೆ ವಿಚಾರ ಈಗಾಗಲೇ ಕರ್ನಾಟಕದ ಹಾಟ್ ವಿಷಯವಾಗಿದ್ದು, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ತಾನು ಈ ವರ್ಷವೇ ಮದುವೆ ಆಗುವುದಾಗಿ ಅನುಶ್ರೀ ಹೇಳಿಕೊಂಡಿದ್ದರು. ಈ ಬೆನ್ನಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಿನುಗುವ ನಗು ಮಾಯಾವಿ ನೀನು….ಈ ಜನಸಾಗರದಲ್ಲಿ ಎಲ್ಲರಿಗೂ ಸಿಗದ ನಗು ನೀನು !!!!! ಎನ್ನುತ್ತಾ ತಮ್ಮ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಅದ್ಭುತ ನಿರೂಪಣೆ ಮೂಲಕ ಕನ್ನಡಿಗರ ಮನ ಗೆದ್ದಿರುವ ಅನುಶ್ರೀ ಅವರ ಮದುವೆ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಕೆಲ ಕಾರ್ಯಕ್ರಮಗಳಲ್ಲಂತೂ ಅನುಶ್ರೀ ಮದುವೆ ಯಾವಾಗ? ಕೈಹಿಡಿಯುವ ಹುಡುಗ ಯಾರು ಎಂಬ ಪ್ರಶ್ನೆ ಆಗಾಗ ತೇಲಿ ಬರುತ್ತಲೇ ಇರುತ್ತದೆ. ಆಗಾಗ ಲಕ್ಷಣವಾಗಿ ಸೀರೆಯುಟ್ಟು ಕಂಗೊಳಿಸುವ ಈ ಚೆಲುವೆ ಫೋಡೊ ಶೂಟ್ ಮಾಡಿಸಿ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಈಗಷ್ಟೇ ಮುದ್ದು ಮುದ್ದಾದ ನಗುವಿನಲ್ಲಿ ಅಂದ ಚೆಂದವಾದ ಬಟ್ಟೆ ತೊಟ್ಟು ಫೋಟೊ ಶೂಟ್ ಮಾಡಿಸಿರುವ ಅನುಶ್ರೀ, ಮಿನುಗುವ ನಗು ಮಾಯಾವಿ ನೀನು, ಈ ಜನಸಾಗರದಲ್ಲಿ ಎಲ್ಲರಿಗೂ ಸಿಗದ ನಗು ನೀನು!!!! ಎಂಬ ಶೀರ್ಷಿಕೆ ಕೊಟ್ಟು ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಜುಮ್ಕಿ, ಮೂಗುತಿ, ಕೈಬಳೆ ಜೊತೆ ಸಂಪ್ರದಾಯಿಕ ಉಡುಗೆ ತೊಟ್ಟಿರುವ ಅನುಶ್ರೀ ಅವರ ಅಂದ ಚೆಂದದ ಫೋಟೊಗಳನ್ನು ನೋಡಿ ಅಭಿಮಾನಿಗಳು, ಇವಳೇ ನಮ್ಮ ಕನ್ನಡತಿ ಎಂದು ಖುಷಿಪಟ್ಟಿದ್ದಾರೆ. ಈ ಚೆಲುವೆಗೆ ವಯಸ್ಸೇ ಆಗೋದಿಲ್ವೇ ಅಂತ ಕೆಲವರು ಪ್ರಶ್ನೆ ಕೇಳಿದ್ದಾರೆ.
ಉದ್ಯಾನವೊಂದರಲ್ಲಿ ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿರುವ ಅನು, ತಮ್ಮ ಫೋಟೋಗೆ ತಾವೇ ವಾವ್ ವಾವ್ ಅನು ಎಂದು ಬರೆದುಕೊಂಡಿದ್ದಾರೆ. ಕೆಲವರು ಗಾರ್ಜಿಯಸ್ ಎಂದರೆ, ಮತ್ತೆ ಕೆಲವರು ಬ್ಯೂಟಿ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ “ಅಮರ ಶಿಲ್ಪಿ ಜಕ್ಕಣ ಇವಳ ನೋಡಿ ಬೆರಗಾದ, ಕುಂಚ ರಾಜ ರವಿವರ್ಮ ಮೈಮರೆತು ಶರಣಾದ” ಅಂತ ಕಮೆಂಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಅನುಶ್ರೀಗೆ ವಿದ್ಯಾಪತಿ ಸಿನಿಮಾದ ನಾಯಕ ನಾಗಭೂಷಣ್ ಹಾಗೂ ನಾಯಕಿ ಮಲೈಕಾ ವಸುಪಾಲ್ ಪ್ರಶ್ನೆ ಕೇಳಿದ್ದರು. ನಿಮ್ಮನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ ಅನುಶ್ರೀ “ಫಸ್ಟ್ ಆಫ್ ಆಲ್ ಅವನು ತುಂಬಾ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ. ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿರಬೇಕು. ಅಷ್ಟೇ ಸಾಕು ನಂಗೆ” ಎಂದಿದ್ದರು.
ಇದೇ ಸಂದರ್ಭದಲ್ಲಿ ಈ ವರ್ಷ ಮುಗಿಯೋದರಲ್ಲಿ ನನ್ನ ಮದುವೆ ಫಿಕ್ಸ್ ಅನ್ನೋ ವಿಷಯ ಕೂಡಾ ಹಂಚಿಕೊಂಡಿದ್ದರು. ಅನುಶ್ರೀ ಹೇಳಿದಂತೆ ಈ ವರ್ಷವೇ ಅವರ ಮದುವೆಯಾಗುತ್ತಾ, ಅವರ ಮೆಚ್ಚಿನ ಹುಡುಗ ಯಾರಾಗಿರಬಹುದು ಎಂಬುದನ್ನು ಅನುಶ್ರೀ ಅವರೇ ತಿಳಿಸಬೇಕು.