ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್ ಸ್ಪೆಷಲ್ ಹೊಸ ಡ್ರೆಸ್ ತೊಟ್ಟು ಸುಂದರವಾಗಿಯೇ ಕಾಣುತ್ತಿದ್ದಾರೆ. ಸ್ವಲ್ಪ ಬೋಲ್ಡ್ ಕೂಡ ಅನ್ನಿಸುತ್ತಿರುವ ಇದಕ್ಕೆ ರೆಟ್ರೋ ಸ್ಪರ್ಶ ನೀಡಲಾಗಿದೆ ಎಂಬ ಫೀಲ್ ಕೂಡ ಬರುತ್ತದೆ.

ಚೈತ್ರಾ ಆಚಾರ್ ಹೊಸ ರೀತಿಯ ಡ್ರೆಸ್ ತೊಟ್ಟಿದ್ದು, ಚಿಕ್ಕ ಹುಡುಗಿಯರು ತೊಡುವ ಬಟ್ಟೆಯಂತಿದೆ. ಆದರೆ, ಚೈತ್ರಾ ಆಚಾರ್ ಅವರಿಗೆ ಇದು ತುಂಬಾನೆ ಚೆನ್ನಾಗಿಯೇ ಒಪ್ಪಿದೆ.

ಬಳುಕುವ ಈ ಬೆಡಗಿಗೆ ಈ ಡ್ರೆಸ್​ ಬಹಳ ಸೂಕ್ತವಾಗಿದೆ. ಅಲ್ಲದೆ ಅವರಿಗೆ ಬಹಳ ಚೆನ್ನಾಗಿಯೇ ಒಪ್ಪುವಂತಿದೆ ಎಂದಿದ್ದಾರೆ ಚೈತ್ರಾ ಫ್ಯಾನ್ಸ್​.

ಚೈತ್ರಾ ಆಚಾರ್ ತೊಟ್ಟಿರೋ ಈ ಕಾಸ್ಟೂಮ್ ಒಂದು ರೀತಿಯಲ್ಲಿ ಡಿಫರೆಟ್ ಆಗಿದ್ದು, ಚೈತ್ರಾ ಇಲ್ಲಿ ಸ್ಕರ್ಟ್‌ ತೊಟ್ಟಿದ್ದಾರೆ. ಇದಕ್ಕೆ ಈಗೀನ ಮಾಡ್ರನ್ ಟಾಪ್ ಹಾಕಿಕೊಂಡಿದ್ದಾರೆ. ಒಂದು ರೀತಿ ಇದು ಹಳೆ ಮತ್ತು ಹೊಸದರ ಸಮ್ಮಿಶ್ರದಂತಿದೆ. ಕೊಂಚ ಬೋಲ್ಡ್ ಕೂಡ ಅನಿಸುತ್ತದೆ. ಆದರೆ, ಚೈತ್ರಾ ಆಚಾರ್ ಅವರಿಗೆ ಇದು ತುಂಬಾನೆ ಚೆನ್ನಾಗಿಯೇ ಕಾಣಿಸುತ್ತಿದೆ.

ಇಲ್ಲಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಅದು ಫೋಟೋ ಶೂಟ್‌ಗೆ ಬಳಸಿದ ಬ್ಯಾಗ್ರೌಂಡ್‌ ಸ್ಥಳ. ಆ ಕಾಲದ ಹಳೆ ಅಂಗಡಿಗಳಿರೋ ಗಲ್ಲಿ ತರವೇ ಇದು ಕಾಣಿಸುತ್ತಿದೆ. ಬಹುಶಃ ಮುಂಜಾನೆಯೇ ಈ ಒಂದು ಫೋಟೋ ಶೂಟ್ ಮಾಡಿದ್ದಾರೆ ಅನಿಸುತ್ತದೆ. ಅಂಗಡಿಗಳೆಲ್ಲ ಮುಚ್ಚಿವೆ. ಮುಚ್ಚಿನ ಅಂಗಡಿಯ ಮುಂದೆ ನಿಂತು ಚೈತ್ರಾ ಸುಂದರವಾಗಿಯೇ ಪೋಸ್ ಕೊಟ್ಟಿದ್ದಾರೆ. ಒಂದೊಂದು ಪೋಸ್ಗಳೂ ಇಲ್ಲಿ ವಿಭಿನ್ನ ಫೀಲ್  ನೀಡುತ್ತವೆ.

ಚೈತ್ರಾ ಆಚಾರ್ ಈ ಒಂದು ಫೋಟೋ ಶೂಟ್‌ನ ಫೋಟೋಗಳನ್ನ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ ಇನ್ನೂ ಒಂದು ಫೋಟೋ ಕೂಡ ಇದೆ. ಆ ಫೋಟೋದಲ್ಲಿ ಒಂದೆರಡು ಲೈನ್ ಇವೆ.

ಚೈತ್ರಾ ಆಚಾರ್ ಹಂಚಿಕೊಂಡ ಆ ಲೈನ್ ಈ ರೀತಿ ಇವೆ. “ಅವಳು ವಿಭಿನ್ನವಾದ ಹೂವು. ಇಡೀ ಕಾಡಿಗೆ ಬೆಂಕಿ ಬಿದ್ದು ಸುಟ್ಟು ಹೋದರೂ ಸರಿಯೇ. ಅವಳು ಇನ್ನೂ ಬೆಳೆಯುತ್ತಲೇ ಇದ್ದಾಳೆ ಅನ್ನೋದೇ ಆಗಿದೆ”.  ಎಂದಿರುವ ಈ ಲೈನ್​ಗಳು ಬಹಳ ಚೆನ್ನಾಗಿವೆ.

ಚೈತ್ರಾ ಆಚಾರ್ ಸಿನಿಮಾ ಜೀವನದಲ್ಲಿ ಎರಡು ತಮಿಳು ಸಿನಿಮಾಗಳೂ ಇವೆ. ಈ ಎರಡೂ ಸಿನಿಮಾಗಳ ಬಹುತೇಕ ಕೆಲಸ ಮುಗಿಸಿದ್ದಾರೆ. ಈ ಚಿತ್ರಗಳಲ್ಲಿ ಒಂದು ಚಿತ್ರದಲ್ಲಿ ಸಿದ್ಧಾರ್ಥ್ ನಾಯಕರಾಗಿದ್ದಾರೆ. ಮತ್ತೊಂದರಲ್ಲಿ ನಟ-ನಿರ್ದೇಶಕ ಶಶಿಕುಮಾರ್ ಹೀರೋ ಆಗಿದ್ದಾರೆ.

ಕನ್ನಡ ಸಿನಿಮಾ ಅಂತ ಬಂದಾಗ ಮಾರ್ನಮಿ ಅನ್ನೋ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೋನು ಗೌಡ ಕೂಡ ಇದ್ದಾರೆ. ಇಷ್ಟೆಲ್ಲ ಸಿನಿಮಾಗಳು ಮತ್ತು ಫೋಟೋ ಶೂಟ್ ಅಂತಲೇ ಚೈತ್ರಾ ಆಚಾರ್ ಬ್ಯುಸಿ ಇರ್ತಾರೆ. ಇದರ ಮಧ್ಯೆ ತಮಗೆ ಇಷ್ಟವಾದ ಹಾಡುಗಳನ್ನ ಹಾಡೋದು ಇದೆ.

ಮೊನ್ನೆ ಶ್ರೀರಾಮ ನವಮಿಯ ದಿನ ರಾಮನ ಹಾಡನ್ನೂ ಹಾಡಿದ್ದರು. ರಾಮನ ಸ್ಮರಣೆ ಮಡಿರೋ ಆ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು. ಹೀಗೆ ಚೈತ್ರಾ ಆಚಾರ್ ತಮ್ಮ ವಿಶೇಷ ಫೋಟೋ ಶೂಟ್, ವಿಶೇಷ ಹಾಡುಗಾರಿಕೆಯಿಂದಲೂ ಗಮನ ಸೆಳೆಯುತ್ತಲೇ ಇರುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ