ಶರತ್ ಚಂದ್ರ
ಕೆಲವು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕನ್ನಡ ದ ಸುಂದರ ನಟಿಯರು ನಾಯಕಿಯಾರಾಗಿ ಅಭಿನಯಸಿ ಸೈ ಅನಿಸಿಕೊಂಡಿದ್ದಾರೆ. ಆದರೆ ಹೊಸ ಹೊಸ ನಾಯಕಿಯರು ಚಿತ್ರರಂಗ ಕ್ಕೆ ಬರುವುದರಿಂದ ಕೆಲವರಿಗೆ ಅಂತಹ ಅವಕಾಶ ಗಳು ಹರಿದು ಬರುತ್ತಿಲ್ಲ. ಸೌಂದರ್ಯ ಮತ್ತು ಪ್ರತಿಭೆ ಇದ್ದರೂ ಕೂಡ ಅಪರೂಪಕ್ಕೊಮ್ಮೆ ಹೊಸ ಚಿತ್ರಗಳಲ್ಲಿ ಅವಕಾಶ ದೊರೆಯುತ್ತಿದೆ. ಈ ಸಾಲಿಗೆ ಕನ್ನಡದ ಸುಂದರ ನಟಿ ಬೃಂದಾ ಆಚಾರ್ಯ ಕೂಡ ಸೇರುತ್ತಾರೆ.

ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿ ಯಾಗಿ ನಟಿಸಿದ ಕೌಸಲ್ಯಾ ಸುಪ್ರಜಾ ರಾಮ ಚಿತ್ರ ತುಂಬಾ ಯಶಸ್ಸನ್ನು ಕಂಡಿತ್ತು. ಚಿತ್ರದಲ್ಲಿ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿದ್ದರೂ ಕೂಡ
ಬೃಂದಾ ಅಭಿನಯ ಗಮನ ಸೆಳೆದಿತ್ತು.
ಈ ಚಿತ್ರ ಬಿಡುಗಡೆಯಾಗಿ ವರ್ಷಗಳ ನಂತರ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಬೃಂದಾ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಮದುಮಗಳಂತೆ ಕಂಗೊಳಿಸಿದ ಬೃಂದಾ, ಹೊಸ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಜೊತೆ ನಾಯಕಿ ಯಾಗಿ ಅಭಿನಯಿಸುತ್ತಿದ್ದಾರೆ.

ಇಂಜಿನಿಯರಿಂಗ್ ಪದವಿಧರೆ ಯಾಗಿರುವ ಬೃಂದಾ ಆಚಾರ್ಯ ಚಿತ್ರರಂಗ ಕ್ಕೆ ಬರುವ ಮುನ್ನ ಒಂದಷ್ಟು ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ನೆನಪಿರಲಿ ಪ್ರೇಮ್ ಅವರ ‘ಪ್ರೇಮಪೂಜ್ಯಂ ‘ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದರು. ಆ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ವಿ ಯಾಗದಿದ್ದರೂ ಕೂಡ ಬೃಂದಾರಿಗೆ ಜೂಲಿಯಟ್ 2 ಮತ್ತು ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು

ಈಗ ರಂಗಿತರಂಗ ನಿರ್ಮಾಪಕರ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ವಾಪಸ್ ಆಗಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ದಿಯಾ, ಬ್ಲಿಂಕ್ ಖ್ಯಾತಿಯ ದೀಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ಬೃಂದ ನಟಿಸುತ್ತಿದ್ದಾರೆ. ಈ ಕನ್ನಡದ ಚೆಲುವೆಗೆ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗಲಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ