– ರಾಘವೇಂದ್ರ ಅಡಿಗ ಎಚ್ಚೆನ್.

ಆದಿತ್ಯ ಬಿರ್ಲಾ ಗ್ರೂಪ್‌ನ ಅಂಗಸಂಸ್ಥೆಯಾದ ಗ್ರಾಸಿಂ ಇಂಡಸ್ಟ್ರೀಸ್‌ನ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಕಂಪನಿ ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ನೂತನ ಎಕ್ಸ್ಪೀರಿಯನ್ಸ್ ಸೆಂಟರ್ (ಪೇಂಟ್ ಸ್ಟುಡಿಯೊ) ಅನ್ನು ಅಧಿಕೃತವಾಗಿ ಉದ್ಘಾಟಿಸಿತು. ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಇಂತಹ ಕೇಂದ್ರಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವ ಬಿರ್ಲಾ ಓಪಸ್ ಪೇಂಟ್ಸ್, ಈ ಮೂಲಕ ಪೇಂಟ್ ಮತ್ತು ಅಲಂಕರಣ ಕ್ಷೇತ್ರದಲ್ಲಿ ತನ್ನ ಜಾಲವನ್ನು ದಕ್ಷಿಣ ಭಾರತದಲ್ಲೂ ವಿಸ್ತರಿಸಿದೆ.

ಈ ಎಕ್ಸ್ಪೀರಿಯನ್ಸ್ ಸೆಂಟರ್‌ನ್ನು ಗ್ರಾಹಕರ ಸಾಮಾನ್ಯ ಖರೀದಿ ಅನುಭವವನ್ನು ಆಧುನಿಕ, ತಾಂತ್ರಿಕ ಹಾಗೂ ತಲ್ಲೀನಗೊಳಿಸುವ ರೀತಿಯಲ್ಲಿ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ. ಬಣ್ಣಗಳ ಆಯ್ಕೆ, ವಿನ್ಯಾಸ ತಂತ್ರಗಳು, ವಿಶೇಷ ಫಿನಿಷ್‌ಗಳು, ವಾಲ್ ಪೇಪರ್‌ಗಳು ಸೇರಿದಂತೆ ಸುಮಾರು 170 ಕ್ಕೂ ಹೆಚ್ಚು ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ನೈಜ ತಜ್ಞರ ಮಾರ್ಗದರ್ಶನವೂ ದೊರೆಯುತ್ತದೆ.

image

ಪರಿಪೂರ್ಣ ಗ್ರಾಹಕ ಅನುಭವಕ್ಕೆ ಒತ್ತು ನೀಡಿದ ಈ ಕೇಂದ್ರವು ಸುಧಾರಿತ ವಿಶುಯಲೈಸೇಷನ್ ಸಾಧನಗಳ ಮೂಲಕ ಬಣ್ಣಗಳ ಅಂತಿಮ ಫಲಿತಾಂಶವನ್ನು ಮನೆ ಅಥವಾ ಆಫೀಸ್‌ನ ನೈಜ ಪರಿಸರದಲ್ಲಿ ಕಣ್ತುಂಬಿಕೊಳ್ಳುವ ಅನುಕೂಲವನ್ನೂ ನೀಡುತ್ತದೆ. ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಗಳಿಂದ ಸ್ಫೂರ್ತಿ ಪಡೆದ ವಿನ್ಯಾಸಗಳೂ ಇಲ್ಲಿ ಮುಖ್ಯ ಆಕರ್ಷಣೆಯಾಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ ಹೇಳಿದರು, “ಇದು ಬಿರ್ಲಾ ಓಪಸ್ ಪೇಂಟ್ಸ್ ಕಂಪನಿಗೆ ಮಹತ್ವದ ಮೈಲಿಗಲ್ಲಾಗಿದೆ. ಬೆಂಗಳೂರು ಕೇಂದ್ರದಿಂದ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ, ಉತ್ಪನ್ನ ಹಾಗೂ ವಿಶಿಷ್ಟ ಅನುಭವ ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಸ್ಟುಡಿಯೊ ಕೇವಲ ಮಳಿಗೆ ಅಲ್ಲ, ಇದು ಕ್ರಿಯಾತ್ಮಕ ಚಿಂತನೆ, ವಿನ್ಯಾಸ ಮತ್ತು ಅನುಭವಗಳ ಸಂಕಲನವಾಗಿದೆ,” ಎಂದು ಹೇಳಿದರು.

ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕಾರರಿಗೂ ಈ ಸ್ಟುಡಿಯೊ ಉಪಯುಕ್ತವಾಗಿದೆ. ತಜ್ಞರ ಬೆಂಬಲ, ನವೀನ ತಂತ್ರಜ್ಞಾನಗಳು ಮತ್ತು ಆಯ್ಕೆಗಲ ಪಾಲು ಇದನ್ನು ವೃತ್ತಿಪರರ ಕಾರ್ಯತಾಣವಾಗಿಯೂ ಮಾಡುತ್ತದೆ.

image (1)

ಪಡೆಯಬಹುದಾದ ವಿಳಾಸ:

ಅರ್ಬನ್ ವಾಲ್, ಗ್ರೌಂಡ್ ಫ್ಲೋರ್, ನಂ.732, ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆ, ಸ್ಟಾರ್ಬಕ್ಸ್ ಎದುರು, ಇಂದಿರಾನಗರ, ಹಂತ 1, ಬೆಂಗಳೂರು – 560038.

ಕಂಪನಿಯು ಮುಂದಿನ ಹಂತದಲ್ಲಿ ದೆಹಲಿ, ಹೈದರಾಬಾದ್, ಕೊಲ್ಕತ್ತಾ, ಜೈಪುರ, ಅಹಮದಾಬಾದ್ ಮತ್ತು ಸೂರತ್ ಸೇರಿದಂತೆ ಹಲವು ನಗರಗಳಲ್ಲಿ ಇಂತಹ ಎಕ್ಸ್ಪೀರಿಯನ್ಸ್ ಸೆಂಟರ್‌ಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ