ಭಾರತ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿ 2025 ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಕಲೆ, ಶಿಕ್ಷಣ, ಸಮಾಜ ಸೇವೆ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಪಡೆದ ಗಣ್ಯರನ್ನು ದೆಹಲಿಗೆ ಕರೆಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಜನವರಿಯಲ್ಲಿ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಆ ಪ್ರಶಸ್ತಿಯನ್ನು ಸೋಮವಾರ ರಾಷ್ಟ್ರಪತಿ ಭವನದಲ್ಲಿ ನೀಡಿ ಗೌರವಿಸಲಾಯಿತು.
ಈ ವೇಳೆ ಚಿತ್ರರಂಗ, ಕ್ರೀಡಾ ಲೋಕ ಸೇರಿದಂತೆ ಪ್ರಶಸ್ತಿ ವಿಜೇತ ಗಣ್ಯರು ಗಮನ ಸೆಳೆದರು. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್, ತೆಲುಗಿನ ದಿಗ್ಗಜ ಬಾಲಕೃಷ್ಣ, ಕ್ರೀಡಾ ಕ್ಷೇತ್ರದಿಂದ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಜಿತ್ ಕುಮಾರ್ ಕಪ್ಪು ಬಣ್ಣದ ಸೂಟ್ ಧರಿಸಿ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದರೆ, ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಸಂಪ್ರದಾಯಿಕ ಉಡುಗೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ದಶಕಗಳಿಂದ ಸಾಧನೆ ಹಾಗೂ ಸೇವೆ ಮಾಡಿದವರಿಗೆ ಈ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ತಮಿಳು ನಟ ಅಜಿತ್ ಕುಮಾರ್, ತೆಲುಗು ನಟ ಬಾಲಕೃಷ್ಣ ಜೊತೆಗೆ ಸಿನಿಮಾದಲ್ಲಿದಲ್ಲಿ ಶೇಖರ್ ಕಪೂರ್, ಶೋಭನಾ ಅವರಿಗೂ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಹಾಗೇ ಬಾಲಿವುಡ್ ಗಜಲ್ ಗಾಯಕ ದಿವಂಗತ ಪಂಕಜ್ ಉದಾಸ್ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪ್ರಶಸ್ತಿಯನ್ನು ಅವರ ಪತ್ನಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದರು.
ಪದ್ಮಭೂಷಣದ ಜೊತೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಗಾಯಕ ಅರಿಜಿತ್ ಸಿಂಗ್ ಹಾಗೂ ರಿಕ್ಕಿ ಕೇಜ್ ಸ್ವೀಕರಿಸಿದರು. ಕೇವಲ ಕಲೆಯಷ್ಟೇ ಅಲ್ಲದೆ, ಕ್ರೀಡೆ, ವೈದ್ಯಕೀಯ, ಉದ್ಯಮ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರದ ಗಣ್ಯರನ್ನು ಈ ಪ್ರಶಸ್ತಿ ಸಮಾರಂಭದಲ್ಲಿ ಗೌರವಿಸಲಾಯಿತು.
ಜನವರಿಯಲ್ಲಿ 139 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 28ರಂದು ಮೊದಲ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಇದರಲ್ಲಿ 71 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಳಿದ ಸಾಧಕರಿಗೆ ಎರಡನೇ ಹಂತದ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ.
ಮೊದಲ ಹಂತದಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದವರೆಂದರೆ;
ಡಾ. ಎಲ್. ಸುಬ್ರಮಣಿಯಂ – ಕರ್ನಾಟಕ- ಆರ್ಟ್
ಎಂ. ಟಿ. ವಾಸುದೇವನ್ ನಾಯರ್ (ಮರಣೋತ್ತರ) – ಕೇರಳ – ಸಾಹಿತ್ಯ & ಸಿನಿಮಾ
ನಂದಮೂರಿ ಬಾಲಕೃಷ್ಣ – ಆಂಧ್ರ ಪ್ರದೇಶ – ಸಿನಿಮಾ
ಅಜಿತ್ ಕುಮಾರ್ – ತಮಿಳುನಾಡು- ಸಿನಿಮಾ
ಶೇಖರ್ ಕಪೂರ್ – ಮಹಾರಾಷ್ಟ್ರ- ಸಿನಿಮಾ
ಒಸಾಮು ಸುಜುಕಿ (ಮರಣೋತ್ತರ) – ಜಪಾನ್ – ಉದ್ಯಮ & ಕೈಗಾರಿಕೆ
ಡಾ. ಡಿ. ನಾಗೇಶ್ವರ ರೆಡ್ಡಿ- ತೆಲಂಗಾಣ – ವೈದ್ಯಕೀಯ
ಪಂಕಜ್ ಆರ್. ಪಟೇಲ್ – ಗುಜರಾತ್- ಉದ್ಯಮ & ಕೈಗಾರಿಕೆ
ಡಾ. ಎ. ಎ. ಸೂರ್ಯ ಪ್ರಕಾಶ್ – ಕರ್ನಾಟಕ- ಸಾಹಿತ್ಯ & ಶಿಕ್ಷಣ
ವಿನೋದ್ ಕುಮಾರ್ ಧಾಮ್ – ಅಮೆರಿಕ – ವಿಜ್ಞಾನ & ಎಂಜಿನಿಯರಿಂಗ್
ಡಾ. ಜೋಸ್ ಚಾಕೊ ಪೆರಿಯಪ್ಪುರಂ – ಕೇರಳ – ಮೆಡಿಸಿನ್
ಶ್ರೀಜೇಶ್ ಪಿ.ಆರ್ – ಕೇರಳ- ಕ್ರೀಡೆ
ಸುಶೀಲ್ ಕುಮಾರ್ ಮೋದಿ (ಮರಣೋತ್ತರ) – ಬಿಹಾರ – ಸಾರ್ವಜನಿಕ ವ್ಯವಹಾರಗಳು
ಪಂಕಜ್ ಕೇಶುಭಾಯಿ ಉದಾಸ್ (ಮರಣೋತ್ತರ) – ಮಹಾರಾಷ್ಟ್ರ- ಸಂಗೀತ
ಪದ್ಮಶ್ರೀ ಪ್ರಶಸ್ತಿ
ಹಾಸನ ರಘು -ಕರ್ನಾಟಕ
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ -ಕರ್ನಾಟಕ
ಗೋಕುಲ್ ಚಂದ್ರ ದಾಸ್ -ಪಶ್ಚಿಮ ಬಂಗಾಳ
ನಿರ್ಮಲಾ ದೇವಿ -ಬಿಹಾರ
ಅದ್ವೈತ ಚರಣ್ ಗಡನಾಯಕ್-ಒಡಿಶಾ
ಪ್ರೊ. ಭರತ್ ಗುಪ್ತ್-ದೆಹಲಿ
ನರೇನ್ ಗುರುಂಗ್ -ಸಿಕ್ಕಿಂ
ಡಾ. ಶ್ಯಾಮ್ ಬಿಹಾರಿ ಅಗರವಾಲ್ -ಉತ್ತರ ಪ್ರದೇಶ
ಡಾ. ಕೆ. ಓಮನಕುಟ್ಟಿ ಅಮ್ಮ-ಕೇರಳ
ಮಿರಿಯಾಲ ಅಪ್ಪರಾವ್ (ಮರಣೋತ್ತರ) -ಆಂಧ್ರ ಪ್ರದೇಶ
ಜೋಯ್ನಾಚರಣ್ ಬತಾರಿ -ಅಸ್ಸಾಂ
ಬೇಗಂ ಬಟೂಲ್ -ರಾಜಸ್ಥಾನ
ಭೇರು ಸಿಂಗ್ ಚೌಹಾಣ್ -ಮಧ್ಯಪ್ರದೇಶ
ವಾಸುದೇವ ತಾರಾನಾಥ್ ಕಾಮತ್-ಮಹಾರಾಷ್ಟ್ರ
ಡಾ. ಜಸ್ಪಿಂದರ್ ನರುಲಾ ಕೌಲ್ -ಮಹಾರಾಷ್ಟ್ರ
ಪಂ. ರೋನು ಮಜುಂದಾರ್ -ಮಹಾರಾಷ್ಟ್ರ
ಪಂ. ತೇಜೇಂದ್ರ ನಾರಾಯಣ ಮಜುಂದಾರ್-ಪಶ್ಚಿಮ ಬಂಗಾಳ
ಡಾ. ಮಡುಗುಲ ನಾಗಫಣಿ ಶರ್ಮ -ಆಂಧ್ರ ಪ್ರದೇಶ
ದುರ್ಗಾ ಚರಣ್ ರಣಬೀರ್ -ಒಡಿಶಾ
ಅರಿಜಿತ್ ಸಿಂಗ್ -ಪಶ್ಚಿಮ ಬಂಗಾಳ
ಭಾಯಿ ಹರ್ಜಿಂದರ್ ಸಿಂಗ್ ಜಿ -ಪಂಜಾಬ್
ರಾಧಾಕೃಷ್ಣನ್ ದೇವಸೇನಾಪತಿ ಸ್ಥಪತಿ -ತಮಿಳುನಾಡು
ಪ್ರೊ. ರತನ್ ಕುಮಾರ್ ಪರಿಮೂ -ಗುಜರಾತ್
ಡಾ. ಲಕ್ಷ್ಮೀಪತಿ ರಾಮಸುಬ್ಬಯ್ಯರ್ -ತಮಿಳುನಾಡು
ಪ್ರೊ. ಅರುಣೋದಯ ಸಹಾ -ತ್ರಿಪುರ
ಡಾ. ಪ್ರತಿವಾ ಸತ್ಪತಿ -ಒಡಿಶಾ
ಪ್ರೊ. (ಡಾ.) ಚಂದ್ರಕಾಂತ್ ತ್ರಿಕಮಲಾಲ್ ಶೇಟ್ (ಮರಣೋತ್ತರ) -ಗುಜರಾತ್
ತುಷಾರ್ ದುರ್ಗೇಶಭಾಯ್ ಶುಕ್ಲಾ-ಗುಜರಾತ್
ಪ್ರೊ. ಡೇವಿಡ್ ಆರ್. ಸಿಯೆಮ್ಲೀಹ್-ಮೇಘಾಲಯ
ಪ್ರೊ. ಅನಿಲ್ ಕುಮಾರ್ ಬೊರೊ-ಅಸ್ಸಾಂ
ಮಾರುತಿ ಭುಜಂಗರಾವ್ ಚಿಟಂಪಲ್ಲಿ -ಮಹಾರಾಷ್ಟ್ರ
ಹೃದಯ ನಾರಾಯಣ ದೀಕ್ಷಿತ್ -ಉತ್ತರ ಪ್ರದೇಶ
ಗಣೇಶ್ವರ ಶಾಸ್ತ್ರಿ ದ್ರಾವಿಡ್ -ಉತ್ತರ ಪ್ರದೇಶ
ಸ್ಟೀಫನ್ ನ್ಯಾಪ್ -ಅಮೆರಿಕ
ಶೀನ್ ಕಾಫ್ ನಿಜಾಮ್ -ರಾಜಸ್ಥಾನ
ಪ್ರೊ. ನಿತಿನ್ ನೊಹ್ರಿಯಾ – ಅಮೆರಿಕ
ಅರುಂಧತಿ ಭಟ್ಟಾಚಾರ್ಯ, ಆರ್.ಜಿ. ಚಂದ್ರಮೊಗನ್, ಪವನ್ ಗೋಯೆಂಕಾ -ವ್ಯಾಪಾರ & ಕೈಗಾರಿಕೆ
ರವಿಚಂದ್ರನ್ ಅಶ್ವಿನ್ (ಕ್ರಿಕೆಟ್), ಡಾ.ಸತ್ಯಪಾಲ್ ಸಿಂಗ್ (ಪ್ಯಾರಾ ಅಥ್ಲೆಟಿಕ್ ಕೋಚ್) -ಕ್ರೀಡೆ
ಲಿಬಿಯಾ ಲೋಬೋ ಸರ್ದೇಸಾಯಿ, ವಿನಾಯಕ್ ಲೋಹಾನಿ -ಸೋಶಿಯಲ್ ವರ್ಕ್ ಸಿ.ಎಸ್.ವೈದ್ಯನಾಥನ್-ಸಾರ್ವಜನಿಕ ವ್ಯವಹಾರ
ಡಾ.ವಿಜಯಲಕ್ಷ್ಮಿ ದೇಶಮಾನೆ, ಡಾ.ಎ.ಕೆ.ಮಹಾಪಾತ್ರ – ಮೆಡಿಸಿನ್
ಡಾ. ಕೆ. ದಾಮೋದರನ್, ಶೈಖಾ ಅಲಿ ಜಬರ್ ಅಲ್-ಸಬಾ- ಇತರೆ
2025ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಯನ್ನು ಅನಂತ್‌ನಾಗ್ ಅವರಿಗೂ ಘೋಷಣೆ ಮಾಡಲಾಗಿದೆ. ಆದರೆ, ಮೊದಲನೇ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅನಂತ್‌ನಾಗ್ ಕಾಣಿಸಿಕೊಂಡಿಲ್ಲ. ಎರಡನೇ ಹಂತದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅನಂತ್‌ನಾಗ್ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಕನ್ನಡದ ಹಿರಿಯ ನಟನಿಗೆ ಪದ್ಮಭೂಷಣ ಘೋಷಣೆಯಾಗಿತ್ತು.