ಗರ್ಭಕೋಶದ ಫೈಬ್ರಾಯ್ಡ್ ಬಂಜೆತನಕ್ಕೆ ಹೇಗೆ ಮೂಲ ಎಂದು ತಜ್ಞರಿಂದ ವಿವರವಾಗಿ ತಿಳಿಯೋಣವೇ….?
ಹೆಣ್ಣಿನ ಗರ್ಭಕೋಶದಲ್ಲಿ ಯಾವುದೇ ಬಗೆಯ ಗೆಡ್ಡೆ ಯಾ (ಸಿಸ್ಟ್) ಫೈಬ್ರಾಯ್ಡ್ ಇದ್ದರೆ, ಈ ಸ್ಥಿತಿ ಬಂಜೆತನಕ್ಕೆ ಕಾರಣವಾಗಿ, ಆ ಹೆಣ್ಣು ಬಸಿರಾಗಲು ಸಾಧ್ಯವಿಲ್ಲ. ಇದರ ಹೊರತಾಗಿ ಓವರಿ ಸಿಂಡ್ರೋಂ, ರಕ್ತದ ಕೊರತೆ (ಅನೀಮಿಯಾ) ಮುಂತಾದ ರೋಗಗಳು ಸಹ, ಸಣ್ಣವು ಎಂದು ನಿರ್ಲಕ್ಷಿಸಲ್ಪಡುವುದರಿಂದ, ಮಗು ಹುಟ್ಟದಿರಲು ಇವೇ ದೊಡ್ಡ ಕಾರಣಗಳಾಗಿ ಕಾಡುತ್ತವೆ.
ಗರ್ಭಕೋಶದಲ್ಲಿ ವಿಕಸಿತಗೊಳ್ಳುವ ನಾನ್ ಕ್ಯಾನ್ಸರ್ ಫೈಬ್ರಾಯ್ಡ್, ಹೆಣ್ಣಿನ ಬಂಜೆತನಕ್ಕೆ ಅತಿ ದೊಡ್ಡ ಕಾರಣ ಎನಿಸುತ್ತದೆ. ಇದು ಫೆಲೋಪಿಯನ್ ಟ್ಯೂಬ್ಸ್ ನ್ನು ಬಾಧಿಸುತ್ತದೆ. ನಿಷೇಚಿತ ಅಂಡಾಣುವನ್ನು ಗರ್ಭಕೋಶದಲ್ಲಿ ಪ್ರತ್ಯಾರೋಪಗೊಳ್ಳಲು ಅವಕಾಶ ನೀಡುವುದಿಲ್ಲ, ಇದರಿಂದ ಪ್ರಜನನ ಸಾಮರ್ಥ್ಯ ತಾನಾಗಿ ಕುಗ್ಗುತ್ತದೆ. ಗರ್ಭಕೋಶದಲ್ಲಿ ಜಾಗ ಇಲ್ಲದಿರುವುದರಿಂದ, ದೊಡ್ಡ ಗಾತ್ರದ ಗೆಡ್ಡೆಗಳು ಭ್ರೂಣವನ್ನು ಪೂರ್ಣ ರೂಪದಲ್ಲಿ ವಿಕಸಿತಗೊಳ್ಳಲು ಅಡ್ಡಿಪಡಿಸುತ್ತದೆ.
ಪ್ಲಾಸೆಂಟಾ ತಾನಾಗಿ ಸಿಡಿದು ಗರ್ಭಪಾತ ಆಗಲು, ಇಂಥ ಅಪಾಯಗಳು ಹೆಚ್ಚಲು, ಈ ಗೆಡ್ಡೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಏಕೆಂದರೆ ಪ್ಲಾಸೆಂಟಾ ಫೈಬ್ರಾಯ್ಡ್ ಕಾರಣ ಸಂಪೂರ್ಣ ನಿಷ್ಕ್ರಿಯಗೊಂಡು ಸೋತುಹೋಗುತ್ತದೆ. ಹೀಗಾಗಿ ಅದು ಗರ್ಭಕೋಶದ ಗೋಡೆಗಳಿಂದ ತಾನಾಗಿ ಜರುಗಿಬಿಡುತ್ತದೆ. ಈ ಕಾರಣ ಭ್ರೂಣಕ್ಕೆ ಆಮ್ಲಜನಕ, ಇತರ ಪೋಷಕಾಂಶಗಳು ಸರಿಯಾಗಿ ದೊರಕುವುದೇ ಇಲ್ಲ. ಹೀಗಾಗಿ ಅಕಾಲಿಕ ಹೆರಿಗೆ ಅಥವಾ ಗರ್ಭಪಾತ ಆಗುವ ಸಂಭವ ಹೆಚ್ಚು.
ಈ ಫೈಬ್ರಾಯ್ಡ್ ಗರ್ಭಾಶಯದ ಮಾಂಸಖಂಡಗಳ ಗೆಡ್ಡೆಗಳಿಂದಾಗುವ ಬಿನೈನ್ (ನಾನ್ ಕ್ಯಾನ್ಸರ್ ಮೂಲದ) ಟ್ಯೂಮರ್ ಎನಿಸಿದೆ. ಗರ್ಭಕೋಶದ ಒಳಗೋಡೆ ಕೆಲವು ಜೀವಕೋಶಗಳು ಒಂದಾಗಿ ಸಾಂದ್ರಗೊಂಡು ಅನಗತ್ಯವಾಗಿ ಹಿಗ್ಗುತ್ತವೆ. ಹೀಗೆ ನಾನ್‌ಕ್ಯಾನ್ಸರ್ ಮೂಲದ ಟ್ಯೂಮರ್ ಆಗಿ ಪರಿವರ್ತಿತಗೊಂಡು ಫೈಬ್ರಾಯ್ಡ್ ಎನಿಸುತ್ತದೆ.
ಇದು ಸಣ್ಣ ಬಟಾಣಿ ಗಾತ್ರದಿಂದ ಹಿಡಿದು ಮಧ್ಯಮ ಆಲೂ ಗಾತ್ರದವರೆಗೂ ಬೆಳೆಯಬಲ್ಲದು. ಇದು ಗರ್ಭಕೋಶವನ್ನು ದೊಡ್ಡದಾಗಿಸಿ ವಿಕಾರಗೊಳಿಸುತ್ತದೆ. ಇದು ಎಲ್ಲಿದೆ ಎಂಬುದರ ಸ್ಥಾನ, ಆಕಾರ, ಸಂಖ್ಯೆಗಳಿಂದಾಗಿ ಇದು ಅಂಥದೇ ಲಕ್ಷಣವೇ ಅಥವಾ ಚಿಕಿತ್ಸೆ ಸಾಧ್ಯವೋ ಎಂಬುದನ್ನು ತಿಳಿಸುತ್ತದೆ. ತನ್ನ ಸ್ಥಾನದ ಕಾರಣ ಈ ಫೈಬ್ರಾಯ್ಡ್ಸ್ 3 ರೀತಿಯಾಗಿ ವರ್ಗೀಕೃತಗೊಂಡಿದೆ :
ಸಬ್ ಸೆರೋಸ್ ಫೈಬ್ರಾಯ್ಡ್ : ಇದು ಗರ್ಭಕೋಶದ ಗೋಡೆಗಳ ಹೊರ ಭಾಗದಿಂದ ವಿಕಸಿತಗೊಳ್ಳುತ್ತದೆ. ಇಂಥ ಫೈಬ್ರಾಯ್ಡ್ ಟ್ಯೂಮರ್ ಹೊರ ಭಾಗದಿಂದಲೇ ಮುಖ್ಯವಾಗಿ ಬೆಳೆಯತೊಡಗುತ್ತವೆ, ಆಕಾರದಲ್ಲಿ ನಿಧಾನವಾಗಿ ದೊಡ್ಡದಾಗುತ್ತಾ ಹೋಗುತ್ತದೆ. ಈ ಟ್ಯೂಮರ್ ಅಕ್ಕಪಕ್ಕದ ಅಂಗಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ಈ ಕಾರಣ ಪೆಲ್ವಿಕ್ ನೋವು ಇದರ ಲಕ್ಷಣವಾಗಿ ಗುರುತಿಸಲ್ಪಡುತ್ತದೆ.
ಇಂಟ್ರಾಮ್ಯೂರ್ ಫೈಬ್ರಾಯ್ಡ್ : ಇದು ಗರ್ಭಕೋಶದ ಗೋಡೆಗಳ ಒಳಪದರದಲ್ಲಿ ವಿಕಸಿತಗೊಳ್ಳುತ್ತವೆ, ಅಲ್ಲೇ ದೊಡ್ಡದಾಗುತ್ತದೆ. ಇದರ ಆಕಾರ ದೊಡ್ಡದಾಗ ತೊಡಗಿದಂತೆ, ಆ ಕಾರಣದಿಂದ ಗರ್ಭಕೋಶದ ಆಕಾರ ಸಾಮಾನ್ಯಕ್ಕಿಂತ ದೊಡ್ಡದಾಗಿ ವಿಕಾರ ಆಗುತ್ತದೆ. ಇದರ ಆಕಾರ ಹಿಗ್ಗುತ್ತಿದ್ದಂತೆ, ಮುಟ್ಟಿನ ತೊಂದರೆ ಹೆಚ್ಚಿ, ಏರುಪೇರು ಉಂಟಾಗಿ, ಹೆಚ್ಚಿನ ಸ್ರಾವ, ನೋವಿಗೆ ಮೂಲವಾಗುತ್ತದೆ. ಪೆಲ್ವಿಕ್ ತೊಂದರೆ ಹೆಚ್ಚಾಗಿ, ಮತ್ತೆ ಮತ್ತೆ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ.
ಸಬ್ ಮ್ಯೂಕೋಸ್ ಫೈಬ್ರಾಯ್ಡ್ : ಇವು ಗರ್ಭಕೋಶದ ಪದರದ ಅಡಿ ಭಾಗದಲ್ಲಿ ರೂಪುಗೊಳ್ಳುತ್ತವೆ. ದೊಡ್ಡ ಆಕಾರದ ಕಾರಣ ಇವು ಗರ್ಭಾಶಯ ಹಿಗ್ಗಿರುವಂತೆ ಮಾಡಬಲ್ಲವು, ಈ ಕಾರಣ ಫೆಲೋಪಿಯನ್ ಟ್ಯೂಬ್ಸ್ ನ ಸಾಮರ್ಥ್ಯ ತಗ್ಗುತ್ತದೆ. ಇದರಿಂದಾಗಿ ಹೆರಿಗೆ ಸುಸೂತ್ರವಾಗದೆ, ಮುಂದೆ ಗರ್ಭಪಾತಕ್ಕೆ ಕಾರಣವಾಗುತ್ತದೆ. ಮುಟ್ಟಿನಲ್ಲಿ ಏರುಪೇರು, ಅತಿ ಹೆಚ್ಚಿನ ರಕ್ತಸ್ರಾವ, ಬಹು ಹೊತ್ತಿನವರೆಗೂ ಸ್ರಾವ ಜಿನುಗುವಿಕೆ ಇದರ ಮುಖ್ಯ ಲಕ್ಷಣ.
ಗುರುತಿಸುವುದು ಹೇಗೆ? : ಪೆಲ್ವಿಕ್ ನ ತಪಾಸಣೆ, ಲ್ಯಾಬ್ ಟೆಸ್ಟ್, ಇಮೇಜಿಂಗ್ ಟೆಸ್ಟ್ ಗಳ ಮುಖಾಂತರ ಫೈಬ್ರಾಯ್ಡ್ ಇರುವಿಕೆ ಬಗ್ಗೆ ಪತ್ತೆಹಚ್ಚುತ್ತಾರೆ. ಮುಖ್ಯವಾಗಿ ಇಮೇಜಿಂಗ್ ಟೆಸ್ಟ್, ಗರ್ಭಕೋಶದ ಒಳಪದರಗಳ ನಡುವಿನ ಅಸಾಮಾನ್ಯತೆಗಳನ್ನು ತೋರಿಸಿಕೊಡುತ್ತದೆ. ಇದರಲ್ಲಿ ಕಿಬ್ಬೊಟ್ಟೆ, ಯೋನಿಯ ಅಲ್ಟ್ರಾಸೌಂಡ್, ಹಿಸ್ಟೆರೋಸ್ಕೋಪಿ ಸಹ ಶಾಮೀಲಾಗುತ್ತವೆ. ಹಿಸ್ಟೆರೋಸ್ಕೋಪಿ ಮಾಡಲಿಕ್ಕಾಗಿ, ಹಿಸ್ಟೆರೋಸ್ಕೋಪ್ ಎಂಬ ಒಂದು ಸಣ್ಣ ಹಗುರವಾದ ದುರ್ಬೀನನ್ನು ಸರ್ವಿಕ್ಸ್ ಮೂಲಕ ಗರ್ಭಕೋಶದ ಒಳಗೆ ಅವಳಡಿಸಲಾಗುತ್ತದೆ.
ಸೈನ್ ಇಂಜೆಕ್ಷನ್ ನಂತರ, ಗರ್ಭಕೋಶ ತಾನಾಗಿ ಹರಡಿಕೊಳ್ಳುತ್ತದೆ. ಇದರಿಂದಾಗಿ ಸ್ತ್ರೀರೋಗ ತಜ್ಞರು, ಗರ್ಭಕೋಶದ ಒಳಗೋಡೆ, ಫೆಲೋಪಿಯನ್ ಟ್ಯೂಬಿನ ಪರೀಕ್ಷೆ ಮಾಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಸ್ಕ್ಯಾನಿಂಗ್ ಕೂಡ ಅನಿವಾರ್ಯ ಆಗುತ್ತದೆ.
– ಡಾ. ಶೋಭಾ