ಹಾರಲೇ…. ನಾ ಹಾಡಲೇ…. : ಈಗ ಫ್ಯಾಷನ್ ರಿಟೇಲರ್‌ಈ ಹೇಳುವುದೆಂದರೆ, ಈ ಡ್ರೆಸ್ ಮೆಟಾರ್ಸ್ ನಿಂದ ಪ್ರೇರಿತವಂತೆ! ಇದನ್ನು ಒಪ್ಪಿಕೊಳ್ಳಿ, ಏಕೆಂದರೆ ಮೆಟಾರ್ಸ್ ಡಿಜಿಟಲ್ ಲೋಕದ ಹೊಸ ಕಾನ್ಸೆಪ್ಟ್. ಇದರಲ್ಲಿ ಡಿಜಿಟಲ್ ಲೋಕದ ಎಲ್ಲ ತರಹದ ಅಂಶ ಇದೆಯಂತೆ. ಈ ಡ್ರೆಸ್ ಪರಿಸರಸ್ನೇಹಿ ಅಂತೆ, ಹೌದೋ ಅಲ್ಲವೋ ತಿಳಿಯದು, ಆದರೆ ಅತಿ ಗ್ಲಾಮರಸ್‌ಸೆಕ್ಸೀ ಅಂತೂ ಹೌದು.
ಹುಡುಗಿ ನೋಡೋದೋ ಫ್ಯಾಷನ್ ಗಮನಿಸೋದೋ? : ಆನ್.ಡೆನಿಂ ಒಂದು ಫ್ಯಾಷನ್ ಬ್ರಾಂಡ್. ಇದು ಲಂಡನ್ ನಿಂದ ಕೆನಡಾವರೆಗೂ ಹಬ್ಬಿದೆ. ಇದು ಅಥೆಂಟಿಕ್, ನೆಕ್ಸ್ಟ್ ಜೆನರೇಶನ್ ನ ಕನ್ವೀನಿಯೆಂಟ್ ಪ್ರೈಸ್ ನ ಹೊಸ ಡಿಸೈನ್ಸ್ ಪ್ರಸ್ತುತ ಪಡಿಸುತ್ತಿರುವುದಾಗಿ ಗ್ಯಾರಂಟಿ ನೀಡುತ್ತಿದೆ. ಇದೀಗ ಅಲ್ಲದಿದ್ದರೂ ಭಾರತದ ಮಾರುಕಟ್ಟೆಗೆ ದಾಳಿ ಇಡದೆ ಇರಲಾರದು, ಇಲ್ಲಿನ ಮಧ್ಯಮ ವರ್ಗದವರಿಂದಾಗಿ ಈ ರಾಶಿ ಜನಸಂಖ್ಯೆಗೆ ಅವರು ಅದನ್ನು ಒದಗಿಸದೆ ಇರುತ್ತಾರೆಯೇ? ಇದು ಸೂಪರ್ ಟೈಟಲ್ ಫ್ಯಾಷನ್. ಇದು ಹುಡುಗಿಯರಿಗೆ ಹೊಸ ಸ್ಟೇಟ್ ಮೆಂಟ್‌ಐಡೆಂಟಿಟಿ ನೀಡುತ್ತದಂತೆ. ಮಾಡರ್ನ್ ಅಜ್ಜಿಯರೂ ಒಂದು ಕೈ ನೋಡಬಾರದೇಕೆ?
ಜೀವನ ಜೀವಿಸುವ ಕಲೆ : ಸೆಕ್ಸ್ ಮ್ಯೂಸಿಕ್ ಆಸ್ಟ್ರೇಲಿಯಾದ ವೇದಿಕೆ ಏರಿ, ಹೆಂಗಸರ ಅಪಾರ ಪ್ರತಿಭೆ ಪ್ರದರ್ಶಿಸುತ್ತಿದೆ. ಇದರಲ್ಲಿ ಇಂಗ್ಲಿಷ್ ಕಿಂಗ್ ಹೆನ್ರಿ ಆ್ಯಥ್ ಳ ಡ್ಯಾನ್ಸ್ ಇದ್ದು, ಅಲ್ಲಿನ ಹೆಂಗಸರ ಅಭಿರುಚಿಗೆ ತಕ್ಕಂತೆ ರೂಪಿಸಲಾಗಿದೆ. ತಮ್ಮ ಹಳೆಯ ರಾಜರ ಇತಿಹಾಸದ ಪುಟ ಬಚ್ಚಿಡುವಲ್ಲಿ ಈ ತಂಡ ಸಾಕಷ್ಟು ಯಶಸ್ಸು ಕಂಡಿದೆ. ಇದನ್ನು ನೋಡಿದಾಗ ನಿಮಗೂ ಖಾತ್ರಿ ಆಗಬಹುದು. ನಮ್ಮಲ್ಲಿ ಮಾತ್ರ ಎಲ್ಲಾ ಉಲ್ಟಾ ಆಗುತ್ತಿದೆ. ಇತಿಹಾಸದ ಹೆಸರಿನಲ್ಲಿ ಪ್ರಾಚೀನರ ಗುಣಗಾನ ಮಾಡುತ್ತಾ, ಅಂದಿನ ಕಾಲ ಸುವರ್ಣಯುಗ ಎಂಬಂತೆ ಬಿಂಬಿಸಲಾಗುತ್ತಿದೆ. ಇತಿಹಾಸವನ್ನು ಆಯುಧ ಆಗಿಸಿಕೊಂಡು ಇಂದಿನ ದಿನ ಸರಿ ಇಲ್ಲ ಎಂಬಂತೆ, ಆತ್ಮಗೌರವ ದರ್ಶಿಸಲಾಗುತ್ತಿದೆ.
ನಷ್ಟ ಏನಿದ್ದರೂ ಹೆಂಗಸರದೇ : ವೆನೆಝುವೆಲಾ ದ. ಅಮೆರಿಕಾದ ಒಂದು ಹಿಂದುಳಿದ ದೇಶ. ಆಗಾಗ ಬದಲಾಗುವ ಸರ್ಕಾರಗಳ ಶಿಕಾರಿಗೆ ಗುರಿಯಾಗುತ್ತಿದೆ. ಹಿಂದೆ ಅಲ್ಲಿ ಸೈನಿಕರ ದುರಾಡಳಿತ ಇತ್ತು, ನಂತರ ಕಮ್ಯುನಿಸ್ಟ್ ರ ದುರಾಡಳಿತ. ಪ್ರತಿ ಸಂಘರ್ಷ ಹಾಗೂ ಹಿಂಸಕ ಕ್ರಾಂತಿಯಲ್ಲಿ ನಷ್ಟ ಹೆಂಗಸರ ಪಾಲು, ಅವರು ಯಾರ ಪರ ಆಗಿದ್ದರೂ ಸರಿ. ಇಲ್ಲಿ ಆಗಿದ್ದೂ ಅದೇ! ಇಲ್ಲಿನ ಮೆರಿಯೆನೆಲಾ ಮಾಲ್ ಡಿಯೊನಾಡೊ ಚಿತ್ರ ನಿರ್ಮಾಪಕಿ ಹಾಗೂ ನಿರ್ದೇಶಕಿ. ಈಗ ಈಕೆ ತನ್ನ ದೇಶದ ಹುಡುಗಿಯರಿಗಾಗಿ, ಯೌವನದಲ್ಲಿ ಕಾಲಿಟ್ಟಾಗ ಎದುರಿಸಬೇಕಾದ ಸಂಘರ್ಷಗಳ ಕುರಿತು ತನ್ನ ಚಿತ್ರಗಳಲ್ಲಿ ಹೇಳಿಕೊಳ್ಳುತ್ತಿದ್ದಾಳೆ. ಇವಳು ಎಷ್ಟು ಆಶಾವಾದಿ ಎಂದರೆ, ಇನ್ನಾದರೂ ಬೇರೆ ದೇಶಗಳ ಗಮನ ಸರ್ಕಾರಗಳ ಬದಲಿಗೆ, ಈ ಮುಗ್ಧ ಹುಡುಗಿಯರ ಸಂಘರ್ಷದ ಕಡೆ ತಿರುಗಲಿ ಅಂತ.
ದೇಶದ ಹಾಗೆಯೇ ವೇಷ : ಕಬಾಯಾ ಎಂಬುದು ಸೌತ್ ಈಸ್ಟ್ ಏಷ್ಯಾದ ಮಲಯ ಹೆಂಗಸರ ಫೇವರಿಟ್‌ಬ್ಲೌಸ್ ಎನಿಸಿದೆ, ಈಗ ಇದಕ್ಕೆ ವರ್ಲ್ಡ್ ಹೆರಿಟೇಜ್ ನ ದರ್ಜೆ ನೀಡಿ ಮಲೇಷಿಯಾ, ಸಿಂಗಾಪುರ್ ಇತ್ಯಾದಿ ಸರ್ಕಾರಗಳ ಸಾಂಸ್ಕೃತಿಕ ಇಲಾಖೆಗಳಿಗೆ ಜೋಡಿಸಲಾಗಿದೆ. ನಮ್ಮಲ್ಲೂ ಸಹ ಪಟೋಲಾ ಸೀರೆ ಹಾಗೂ ಪ್ಕಾರಿ ಕಸೂತಿಗಾಗಿ ಇಂಥ ಪ್ರಯತ್ನ ನಡೆಯುತ್ತಿರುತ್ತದೆ. ಕಬಾಯಾ ಇದೀಗ ಕೇವಲ ಮಲಯ ಹೆಂಗಸರದ್ದು ಮಾತ್ರವಲ್ಲ, ಇಡೀ ಸೌತ್ ಈಸ್ಟ್ ಏಷ್ಯಾದ ಹೆಂಗಸರ ಸಾಂಪ್ರದಾಯಿಕ ಉಡುಗೆ ಆಗಲಿದೆ. ನಮ್ಮಲ್ಲಿನ ಪಂಜಾಬಿ ಸಲ್ವಾರ್ ಸೂಟ್ ಇಡೀ ದೇಶ ಹರಡಿದಂತೆ.
ಅರ್ಥಹೀನ ವಿವಾದ : ಮರಿಯಂ ಬಿನ್ ಮೊಹಮ್ಮದ್ ಸಯೀದ್ ಅಲ್ಮೆಹರಿ ವ್ಯತ್ಯಯ `ಮಿನಿಸ್ಟರ್ ಆಫ್ ಎನ್ ವಾರ್ಯ್ ನ ಮೆಂಟ್‌ಕ್ಲೈಮೆಟ್ ಚೇಂಜ್ ‘ನ ಮಂತ್ರಿಯಾಗಿದ್ದು, ಪ್ಯಾರಿಸ್ ನ ಒಂದು ಕಾನ್ಛರೆನ್ಸ್ ಅಟೆಂಡ್ ಮಾಡಲು ಹೋದಾಗ, ಆಕೆಯ ಉಡುಗೆಯಲ್ಲಿ ಅತ್ತ ಹಿಜಾಬ್ ಇರಲಿಲ್ಲ, ಇತ್ತ ಅರಬ್ಬಿ ಡ್ರೆಸ್ ಸಹ! ನಮ್ಮಲ್ಲಾದರೋ ಮುಸಲ್ಮಾನ ಹುಡುಗಿಯರಿಗೆ ಹಿಜಾಬ್ ಧರಿಸಿಯೇ ಕಾಲೇಜಿಗೆ ಕಳುಹಿಸಬೇಕು ಎಂಬ ಕಂದಾಚಾರ ಆಳವಾಗಿದೆ. ಇದು ಸರಿಯೇ? ವ್ಯತ್ಯಯ ಪ್ರಗತಿ ಗಮನಿಸಿದರೆ, ಪೆಟ್ರೋಲ್ ಇಲ್ಲದೆಯೂ ಈ ದೇಶ ತನ್ನ ಪ್ರತಿಷ್ಠೆ ಮೇರು ಮಟ್ಟದಲ್ಲಿ ಉಳಿಸಿಕೊಂಡಿದೆ. ಅಲ್ಲಿನ ಮರುಳುಗಾಡುಗಳಲ್ಲೂ ಮನೆ, ಮಹಲು, ಮಾಲ್ ಎಬ್ಬಿಸಿದ್ದಾರೆ. ಇನ್ನಾದರೂ ನಮ್ಮವರು ಈ ಹಿಜಾಬ್ ರಗಳೆ ಬಿಟ್ಟು, ಈ ಅರ್ಥಹೀನ ವಿವಾದಕ್ಕೆ ತೆರೆ ಎಳೆದರೆ ಲೇಸು. ಹೆಣ್ಣುಮಕ್ಕಳನ್ನು ಧರ್ಮದ ಆಯುಧ ಆಗಿಸಿಕೊಳ್ಳುವ ಅಗತ್ಯವಾದರೂ ಏನು?