2025 ಡಕಾರ್‌ ರ್‍ಯಾಲಿಯಲ್ಲಿ ಕೈ ಮುರಿದುಕೊಂಡು ಸ್ಪರ್ಧೆಯಿಂದ ಹೊರಗುಳಿದಿದ್ದ ಭಾರತದ ಅಗ್ರಸ್ಥಾನದಲ್ಲಿರುವ ರ್‍ಯಾಲಿ ರೈಡರ್ ಹರಿತ್ ನೋಹ್ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ.

2024ರ ಡಕಾರ್‌ ರ್‍ಯಾಲಿ ರೇಸ್ ಅನ್ನು ಗೆದ್ದಿದ್ದ ಹರಿತ್ ಇದೀಗ ದಕ್ಷಿಣ ಆಫ್ರಿಕಾದ ಸಫಾರಿ ರ್‍ಯಾಲಿಯಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ.

ಎಫ್‌ಐಎ ಎಫ್‌ಐಎಂ ವರ್ಲ್ಡ್ ರ್‍ಯಾಲಿ-ರೇಡ್ ಚಾಂಪಿಯನ್‌ಶಿಪ್ (W2RC) 2025ರ ಮೂರನೇ ಸುತ್ತಾಗಿ ನಡೆಯುವ ದಕ್ಷಿಣ ಆಫ್ರಿಕಾದ ಸಫಾರಿ ರ್‍ಯಾಲಿಯಲ್ಲಿ, ಭಾರತದ ಹರಿತ್ ನೋಹ್ ಸ್ಪರ್ಧಿಸುತ್ತಿದ್ದಾರೆ. ಮೇ 18 ರಿಂದ 24 ರವರೆಗೆ ಸನ್ ಸಿಟಿ ರೆಸಾರ್ಟ್‌ನಿಂದ ರ್‍ಯಾಲಿ ಆರಂಭವಾಗಲಿದೆ.ಶೆರ್ಕೋ ಟಿವಿಎಸ್ ರ್‍ಯಾಲಿ ಫ್ಯಾಕ್ಟರಿ ತಂಡದ ಸದಸ್ಯರಾದ ಹರಿತ್, ಡಕಾರ್ 2025ರ ಪ್ರೊಲೋಗ್ ಹಂತದಲ್ಲಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದರು, ಆ ಹಂತವನ್ನು ಪೂರ್ಣಗೊಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹರಿತ್ ಈಗ, ನಾಲ್ಕು ತಿಂಗಳ ಚಿಕಿತ್ಸೆಯ ನಂತರ ಮತ್ತೆ ಸ್ಪರ್ಧೆಗೆ ಮರಳಿದ್ದು, 2026ರ ಡಕಾರ್ ರ್‍ಯಾಲಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ.

ಈ ಬಗ್ಗೆ ಮಾತನಾಡಿದ ಹರಿತ್ 'ಡಕಾರ್‌ನ ನಂತರ ನಾನೊಂದು ವಿಶ್ರಾಂತಿ ತೆಗೆದುಕೊಂಡೆ. ಆದರೆ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಮತ್ತು ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಈ ರೇಸ್ ನನ್ನ ಪುನಃಪ್ರವೇಶ, ಆದ್ದರಿಂದ ಸ್ವಲ್ಪ ಆತಂಕ ಇದ್ದೇ ಇರುತ್ತದೆ. ದಕ್ಷಿಣ ಆಫ್ರಿಕಾದ ಸಫಾರಿ ರ್‍ಯಾಲಿ ಎಲ್ಲರಿಗೂ ಹೊಸದು. ಮಾರ್ಗವು ಎಲ್ಲರಿಗೂ ಅಪರಿಚಿತ. ಪ್ರತಿಯೊಂದು ಕಿಲೋಮೀಟರ್ ಅನ್ನು ಗಮನದಿಂದ ತೆಗೆದುಕೊಳ್ಳುವುದು ನನ್ನ ತಂತ್ರ' ಎಂದು ಹೇಳಿದ್ದಾರೆ.

ಹರಿತ್ ನೋಹ್ ಅವರ ಈ ಮರಳಿಕೆಯು ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ಭಾರತೀಯ ಮೋಟಾರ್‌ಸ್ಪೋರ್ಟಿಗೂ ಮಹತ್ವದ್ದಾಗಿದೆ. ಇಂತಹ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಪಾಲ್ಗೊಳ್ಳುವುದು, ದೇಶದ ರ್‍ಯಾಲಿ-ರೇಡ್ ಸ್ಪರ್ಧೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ