ಹೆಂಗಸರು ಹಣಕಾಸಿನ ನಿಟ್ಟಿನಲ್ಲಿ, ಸ್ವತಂತ್ರ ಹಾಗೂ ಸುರಕ್ಷಿತರಾಗಿರುವುದು ಎಷ್ಟು ಅಗತ್ಯ ಎಂದು ಈ ಮೂಲಕ ತಿಳಿಯೋಣವೇ……?
ಭಾರತದಲ್ಲಿ ಕೋಟ್ಯಂತರ ಹೆಂಗಸರು ಅತಿ ಉತ್ತಮ ಗೃಹಿಣಿಯರಾಗಿ, ಆದರ್ಶ ತಾಯಂದಿರಾಗಿದ್ದಾರೆ. ಆದರೆ ಈ ಸಾಂಸಾರಿಕ ಜಂಜಾಟದಲ್ಲಿ ಇವರು ತಮ್ಮ ಕೆರಿಯರ್ ನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡುತ್ತಾರೆ. ಇದರ ವೇದನೆಯನ್ನು ಅವರು ಜೀವಮಾನವಿಡೀ ಮನದಲ್ಲೇ ಒತ್ತರಿಸಿಕೊಂಡಿರುತ್ತಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣು ಅಥವಾ ಗಂಡೇ ಇರಲಿ, ಅರ್ಥಿಕವಾಗಿ ಸದೃಢರಾಗಿರಬೇಕಾದುದು ಅತಿ ಅವಶ್ಯಕ ಎಂಬುದನ್ನು ಎಲ್ಲರೂ ಅರಿತಿರಬೇಕು. ಇದರಿಂದ ನೀವು ಆರ್ಥಿಕವಾಗಿ ಸ್ವಾವಲಂಬಿಗಳಾಗುವಿರಿ, ನಿಮ್ಮ ಜೀವನಶೈಲಿ ಎಷ್ಟೋ ಸುಧಾರಿಸುತ್ತದೆ, ಕೊನೆಯ ಹಾಗೂ ಮುಖ್ಯವಾದುದೆಂದರೆ ಮುಂದೆ ಜೀವನದಲ್ಲಿ ಎಂಥ ತಿರುವು ಬಂದರೂ ಅದನ್ನು ನಿಭಾಯಿಸಲು ನೀವು ತಯಾರಾಗಿರುತ್ತೀರಿ. ಹೀಗಾಗಿ ಮದರ್ಸ್ ಫೈನಾನ್ಶಿಯಲ್ ಪ್ಲಾನಿಂಗ್ ಏಕೆ ಮುಖ್ಯ ಎಂಬುದನ್ನು ವಿವರವಾಗಿ ತಿಳಿಯೋಣ.
ಹೆಚ್ಚುತ್ತಿರುವ ಖರ್ಚು ವೆಚ್ಚ
ದಿನೇ ದಿನೇ ಬೆಲೆಗಳು ಗಗನಕ್ಕೇರುತ್ತಿವೆ. ಅದು ಮನೆ ಬಾಡಿಗೆ, ರೇಶನ್, ಹಣ್ಣು ತರಕಾರಿ, ಮಕ್ಕಳ ಶಿಕ್ಷಣ, ಮನೆ ಮಂದಿಯ ಆರೋಗ್ಯ ಆರೈಕೆ….. ಈ ಪಟ್ಟಿಗೆ ಕೊನೆ ಇಲ್ಲ. ಇವೆಲ್ಲವನ್ನೂ ನಿಭಾಯಿಸಲು ಕುಟುಂಬದ ಒಬ್ಬನೇ ್ಯಕ್ತಿಯ ಆದಾಯ ಇಂದಿನ ಕಾಲಕ್ಕಂತೂ ಏನೇನೂ ಸಾಲದು ಎಂಬಂತಾಗಿದೆ.ಹೀಗಾಗಿ ನೀ ಆರ್ಥಿಕಾಗಿ ಸಶಕ್ತರಾಗಿ ಮುಂದುರಿದರೆ, ನೀ ಸಂಗಾತಿಗೆ ನಿಜ ಅರ್ಥದಲ್ಲಿ ಹೆಗಲು ನೀಡುರಾಗುತ್ತೀರಿ. ನಿಮ್ಮ ಜೀನಶೈಲಿ ಖಂಡಿತಾ ಸುಧಾರಿಸುತ್ತದೆ, ಉಳಿತಾಯದ ಕುರಿತಾಗಿ ಭರಸೆ ಇಡಬಹುದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲೂ ಧೈರ್ಯ ವಹಿಸಬಹುದು. ಮುಂದೆ ಅವರ ಭವಿಷ್ಯ, ಮದುವೆ ಖರ್ಚಿಗೆ ಖಂಡಿತಾ ಮೊದಲಿನಿಂದಲೇ ಪ್ಲಾನಿಂಗ್ ಮಾಡಬೇಕಾಗುತ್ತದೆ.
ಕಷ್ಟಕಾಲ ಎದುರಾದಾಗ
ನಮ್ಮ ಜೀವನದಲ್ಲಿ ಯಾವಾಗ ಏನು ಕಷ್ಟಕಾಲ ಬರಲಿದೆಯೋ ಹೇಳಲಾಗದ್ದು. ಅದು ಸಂಗಾತಿಯ ಅಗಲಿಕೆ, ದಿಢೀರ್ ಕೆಲಸ ಹೋಗುವುದೇ ಇರಬಹುದು, ಇನ್ನಾವುದೇ ಅಪಾಯದ ಸನ್ನಿವೇಶ ಎದುರಾಗಬಹುದು…. ಒಂದು ಸಮೀಕ್ಷೆ ಪ್ರಕಾರ ಕೊರೋನಾದ ಎರಡನೇ ಅಲೆಯಲ್ಲಿ ಎಷ್ಟೋ ಕೋಟ್ಯಂತರ ಭಾರತೀಯರು ತಮ್ಮ ಕೆಲಸ ಕಳೆದುಕೊಂಡರು. ಇದರಿಂದ ಅವರ ಫ್ಯೂಚರ್ ಪ್ಲಾನಿಂಗ್ ಪೂರ್ತಿ ಹಾಳಾಗಿರುತ್ತದೆ. ಹೀಗಾಗಿ ಕುಟುಂಬದ ಏಕೈಕ ಸಂಪಾದಿಸುವ ವ್ಯಕ್ತಿ ಸತ್ತರೆ ಅಥವಾ ಕೆಲಸ ಕಳೆದುಕೊಂಡರೆ, ಆ ಕುಟುಂಬಕ್ಕೆ ದೊಡ್ಡ ಕಾಲದ ಹೊರೆ ಎದುರಾಗುತ್ತದೆ. ಇಂಥ ಪರಿಸ್ಥಿತಿ ಎದುರಿಸಲು ಹೆಂಗಸರು ತಾವೇ ಗಳಿಸುವವರಾಗಿರಬೇಕು.
ಇಂಥ ಪರಿಸ್ಥಿತಿಯಲ್ಲಿ ನೀವು ಸ್ವಾವಲಂಬಿಗಳಾಗಿದ್ದರೆ, ಹೇಗಿದ್ದರೂ ಕಷ್ಟ ಎದುರಿಸುವುದು ತಪ್ಪಲ್ಲ, ಆದರೆ ಗಳಿಕೆಯ ಜೊತೆ ಇದೆ ಎಂಬ ಸಮಾಧಾನವಾದರೂ ಇರುತ್ತದೆ. ನೀವು ಚೇತರಿಸಿಕೊಂಡು ನಿಮ್ಮ ಕುಟುಂಬವನ್ನೂ ಸಂಭಾಳಿಸಬಹುದು.
ನಿಮ್ಮನ್ನು ದುರ್ಬಲರೆಂದು ತಿಳಿಯಬೇಡಿ
ಒಂದು ಸಮೀಕ್ಷೆ ಪ್ರಕಾರ, ಪ್ಯಾಂಡಮಿಕ್ (ಕೊರೋನಾ)ಗೆ ಮೊದಲು, ಭಾರತದಲ್ಲಿ 30% ಗಿಂತಲೂ ಹೆಚ್ಚಿನ ಹೆಂಗಸರು ಡೊಮೆಸ್ಟಿಕ್ ವೈಲೆನ್ಸ್ ಗೆ ಗುರಿಯಾಗುತ್ತಿದ್ದರು. ಆದರೆ ಈಗ ಈ ಸಂಖ್ಯೆ ಹೆಚ್ಚುತ್ತಿದೆಯಂತೆ! ನಿಮಗೆ ಮತ್ತೊಂದು ವಿಷಯ ಗೊತ್ತೇ? ಹಣಕಾಸಿಗಾಗಿ ನೀವು ಪತಿಯನ್ನೇ ಅವಲಂಬಿಸಿದ್ದರೆ, ಆ ಕಾರಣಕ್ಕಾಗಿ ಸಂಗಾತಿಯ ಎಲ್ಲಾ ಶೋಷಣೆಗಳನ್ನೂ ತೆಪ್ಪಗೆ ಸಹಿಸಬೇಕಾಗುತ್ತದೆ. ಹಣಕಾಸಿನ ವಿಷಯವಾಗಿ ತನ್ನ ಕೈ ನಡೆಯದು ಎಂಬ ಕಾರಣಕ್ಕಾಗಿ ಹೆಣ್ಣು ತನ್ನನ್ನು ದುರ್ಬಲಳು, ಅಬಲೆ ಎಂದು ತಿಳಿಯುತ್ತಾಳೆ.
ಹೀಗಿರುವಾಗ ಹೆಂಗಸರು ಆರ್ಥಿಕ ರೂಪದಲ್ಲಿ ಸ್ವಾವಲಂಬಿಗಳಾದರೆ, ಯಾರ ತುಳಿತಕ್ಕೂ ಒಳಗಾಗಬೇಕಾದ ಅಗತ್ಯವಿಲ್ಲ. ಇಂಥ ಸಂಗಾತಿಯನ್ನು ತೊರೆದು ಬಾಳಲಿಕ್ಕೂ ಅವರು ಹಿಂಜರಿಯುವುದಿಲ್ಲ. ಹೀಗಾಗಿ ಆರ್ಥಿಕ ಸಬಲೀಕರಣ ಹೆಂಗಸರನ್ನು ಸ್ವಾವಲಂಬಿ ಆಗಿಸಿ, ಕ್ರೈಂ ರೇಟ್ ತಗ್ಗಿಸುತ್ತದೆ.
ಯಾರನ್ನೂ ಅವಲಂಬಿಸಬೇಡಿ
ಹೆಂಗಸರು ಪರರ ಮೇಲೆ ಅವಲಂಬಿತರಾಗಿದ್ದರೆ, ಅವರು ಅತ್ತ ಸ್ವತಂತ್ರರಾಗಿರಲು ಸಾಧ್ಯವಿಲ್ಲ, ಸಮಾಜದಲ್ಲೂ ಅವರಿಗೆ ಸಿಗಬೇಕಾದ ಮನ್ನಣೆ ಸಿಗುವುದಿಲ್ಲ. ಇವರು ಆರ್ಥಿಕ ರೂಪದಲ್ಲಿ ಸಂಪನ್ನರಾದರೆ, ಆಗ ಅವರು ಯಾರಿಗೂ ಹೊರೆ ಆಗುವುದಿಲ್ಲ. ಜೊತೆಗೆ ಇವರು ಎಲ್ಲರ ಮುಂದೆ ಬಂದು ಸ್ವತಂತ್ರರಾಗಿ ತಮ್ಮ ಆಲೋಚನೆ, ಅಭಿಪ್ರಾಯ ಮಂಡಿಸಬಹುದು. ಈಕೆ ಸ್ವತಃ ಗಳಿಸುವವಳಾದರೆ ಜನ ಅವರ ಮಾತಿಗೆ ಹೆಚ್ಚಿನ ಮನ್ನಣೆ ನೀಡುತ್ತಾರೆ. ಇದು ಕುಟುಂಬ ಮತ್ತು ಸಮಾಜ ಎರಡಕ್ಕೂ ಅನ್ವಯಿಸುತ್ತದೆ.
ಇತ್ತೀಚೆಗೆ ಡೈವೋರ್ಸ್ ಪ್ರಕರಣ ಕ್ರಮೇಣ ಹೆಚ್ಚುತ್ತಿದೆ. ಇದು ಕೇವಲ ಸಾಮಾನ್ಯ ವರ್ಗದ ಜನರಿಗೆ ಮಾತ್ರನಲ್ಲ, ದೊಡ್ಡ ಸೆಲೆಬ್ಸ್ ಸಹ ಇದನ್ನು ಎದುರಿಸಬೇಕು.
ಹೀಗಿರುವಾಗ ಯಾವುದೋ ಕಾರಣಕ್ಕೆ ಹೆಣ್ಣು ಸಂಗಾತಿಯನ್ನು ಅಗಲಿದ್ದಾಳೆಂದರೆ, ತನ್ನನ್ನು ತಾನು ಸಶಕ್ತಳಾಗಿಸಿಕೊಳ್ಳಲು ಅವಳು ಯಾರನ್ನೂ ಅವಲಂಬಿಸಬೇಕಿಲ್ಲ ಅಥವಾ ಅವಳು ತನ್ನ ಕನಸನ್ನು ನನಸಾಗಿಸಿಕೊಳ್ಳಲು ಯಾರ ಹಂಗಿಗೂ ಒಳಗಾಗಬೇಕಿಲ್ಲ. ಮನಸ್ಸು ಬಂದಾಗ ಅವಳು ತನಗಾಗಿ ಅಥವಾ ತನ್ನವರಿಗಾಗಿ ಬೇಕಾದ್ದನ್ನು ಕೊಳ್ಳಬಹುದು, ಪ್ರವಾಸಕ್ಕೆ ಹೊರಡಬಹುದು, ತನ್ನ ಪ್ರೊಫೆಶನ್ ಕೆರಿಯರ್ ನ್ನು ಉತ್ತಮ ಪಡಿಸಲು ಬೇಕಾದ ಕಡೆ ಟ್ರಾನ್ಸ್ ಫರ್ ಆಗಿ ಹೋಗಬಹುದು, ಉನ್ನತ ಶಿಕ್ಷಣ ಮುಂದುವರಿಸಬಹುದು.
ಇತರರಿಗೆ ಪ್ರೇರಣಾದಾಯಕ
ಈ ರೀತಿ ಹೆಂಗಸರು ತಾವೇ ತಮ್ಮ ಕಾಲ ಮೇಲೆ ನಿಲ್ಲುವಂತಾದಾಗ, ಅವರ ಆತ್ಮವಿಶ್ವಾಸ ತಂತಾನೇ ಹೆಚ್ಚುತ್ತದೆ. ಜೊತೆಗೆ ಆಕೆ ಬೇರೆ ಹೆಂಗಸರಿಗೂ ಆದರ್ಶಪ್ರಾಯ, ಅನುಕರಣೀಯ, ಪ್ರೇರಣಾದಾಯಿ ಆಗುತ್ತಾಳೆ. ಎಲ್ಲರೂ ಈಕೆಯನ್ನು ನೋಡಿ, ಇವಳದೇ ಉದಾ ಕೊಡುತ್ತಾರೆ. ಮನೆಯ ಒಳಗೆ, ಹೊರಗೆ ಎರಡೂ ಕಡೆ ಚೆನ್ನಾಗಿ ಮ್ಯಾನೇಜ್ ಮಾಡುತ್ತಿದ್ದಾಳೆ ಎಂದು ಹೊಗಳುತ್ತಾರೆ. ಆದ್ದರಿಂದ ನೀವು ಸದಾ ಇತರರಿಗೆ ರೋಲ್ ಮಾಡೆಲ್ ಆಗಿರಿ, ಸದಾ ಫೈನಾನ್ಶಿಯಲ್ ಇಂಡಿಪೆಂಡೆಂಟ್ ಆಗಿರುವುದು ಬಲು ಮುಖ್ಯ.
ಡಬಲ್ ಇನ್ ಕಂ ಸಪೋರ್ಟ್
ಪ್ರತಿದಿನದ ಅಗತ್ಯಗಳನ್ನು ಪೂರೈಸಲು, ಯಾರಿಗೂ ಸಂಬಳ ಸಾಕಾಗುವುದಿಲ್ಲ ಎಂಬುದು ಗೊತ್ತಿರುವ ವಿಷಯ. ಅಂಥದ್ದರಲ್ಲಿ ತಿಂಗಳ ಕೊನೆಯಲ್ಲಿ ಏನಾದರೂ ದಿಢೀರ್ ಖರ್ಚು ಎದುರಾದರೆ, ಆ ಕಷ್ಟ ಎದುರಿಸುವುದು ಎಂಥ ಶತ್ರುವಿಗೂ ಬೇಡ ಅನಿಸುತ್ತದೆ. ಹೀಗಾಗಿ ಪತಿ ಪತ್ನಿ ಇಬ್ಬರೂ ಗಳಿಸುತ್ತಿದ್ದರೆ, ಕಷ್ಟಕಾಲದಲ್ಲಿ ಪರಸ್ಪರ ಸಹಾಯ ಮಾಡಬಹುದು. ಇಂಥ ಫೈನಾನ್ಶಿಯಲ್ ಸಪೋರ್ಟ್ ಇಂದಿನ ಅತಿ ದೊಡ್ಡ ಅನಿವಾರ್ಯತೆ ಎನ್ನಬಹುದು. ಇದು ಪರಸ್ಪರ ಗೌರವಾದರ ಹೆಚ್ಚಿಸುತ್ತದೆ, ಇಬ್ಬರ ಗಳಿಕೆ ಎಷ್ಟು ಅತ್ಯವಶ್ಯಕ ಎಂಬುದನ್ನು ಎತ್ತಿಹಿಡಿಯುತ್ತದೆ.
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ
ಎಷ್ಟೋ ಕುಟುಂಬಗಳಲ್ಲಿ ಕಂಡುಬರುವ ದೃಶ್ಯ, ಪತಿ ಕೆಲಸದ ನಿಮಿತ್ತ ಹೆಚ್ಚು ಕಾಲ ಫೀಲ್ಡ್ ವರ್ಕ್, ಟೂರಿಂಗ್ ಎಂದು ಹೊರಗೇ ಇದ್ದುಬಿಟ್ಟರೆ, ಅಥವಾ ಪತ್ನಿಯಿಂದ ಸಿಗದ ಸಂತೋಷವನ್ನು ಹೊರಗಿನ ಜಗತ್ತಿನಲ್ಲಿ ಹುಡುಕೋಣ ಎಂದು ಹೊರಟರೆ, ಕ್ರಮೇಣ ಮಕ್ಕಳ ಕಡೆಗಿನ ಅವನ ಪ್ರೀತಿ ವಾತ್ಸಲ್ಯ ಸಹ ತಗ್ಗಿಹೋಗುತ್ತದೆ. ಮಕ್ಕಳು ದೂರ ಇದ್ದಾರೆ ಅಥವಾ ಮಕ್ಕಳ ಸಣ್ಣಪುಟ್ಟ ಅಗತ್ಯಗಳ ಕಡೆಗೂ ಅವನಿಗೆ ಗಮನ ಹರಿಸಬೇಕು ಎನಿಸುವುದಿಲ್ಲ. ಇದರಿಂದ ಮಕ್ಕಳು ಸಹ ಬಹಳ ನೊಂದುಕೊಳ್ಳುತ್ತಾರೆ.
ಬೆಳೆಯುತ್ತಿರುವ ಮಕ್ಕಳ ಕಾರಣ, ಎಷ್ಟೋ ಸಲ ಪತ್ನಿ ಇಂಥ ಬೇಜವಾಬ್ದಾರಿಯ ಪತಿಯಿಂದ ದೂರ ಆಗಲು ಬಯಸುವುದಿಲ್ಲ. ಆದರೆ ಆರ್ಥಿಕವಾಗಿ ಅವಳು ಸ್ವತಂತ್ರ ಆಗಿದ್ದರೆ, ಇಂಥ ಜಂಜಾಟದ ಸ್ಥಿತಿಯಲ್ಲಿ ಗಂಭೀರವಾಗಿ ತಾನೇ ಒಂದು ನಿರ್ಧಾರಕ್ಕೆ ಬರಬಹುದಾಗಿತ್ತು. ಮಕ್ಕಳ ಅಗತ್ಯಗಳನ್ನು ತಾನೇ ಪೂರೈಸುವ ಹೊಣೆ ಹೊರಬಹುದಾಗಿತ್ತು. ಮಕ್ಕಳು ತಮಗಾಗಿ ಇಷ್ಟೆಲ್ಲ ದುಡಿಯುವ ತಾಯಿಯನ್ನೂ ಕಂಡು ಹೆಚ್ಟಿನ ಗೌರವಾದರ ತೋರುತ್ತಾರಲ್ಲದೆ, ದೊಡ್ಡವರಾದ ನಂತರ ತಾವು ತಾಯಿಯಂತೆಯೇ ಶ್ರಮಜೀವಿ ಆಗಲು ನಿರ್ಧರಿಸುತ್ತಾರೆ. ಪ್ರತಿಯೊಂದು ಸಣ್ಣಪುಟ್ಟ ಖರ್ಚಿಗೂ ಪತ್ನಿ ಪತಿ ಮುಂದೆ ಕೈ ಒಡ್ಡುವ ಅಗತ್ಯ ಇರುವುದಿಲ್ಲ.
ವಿವಿಧ ಅವಕಾಶಗಳು
ಮೊದಲು ಕೆಲಸದಲ್ಲಿದ್ದರೂ, ಮಕ್ಕಳ ಕಾರಣ ಅವರು ದೊಡ್ಡವರಾಗಲಿ ಎಂದು ತಾಯಂದಿರು ಕೆಲಸ ಬಿಟ್ಟಿರುತ್ತಾರೆ. ಮತ್ತೆ ಜಾಬ್ ಮುಂದುವರಿಸಲು ಅವರು ಸ್ವಲ್ಪ ಹಿಂಜರಿಯುತ್ತಾರೆ. ತಾವು ತೆಗೆದುಕೊಂಡ ಬ್ರೇಕ್ ಕೇವಲ ಟೆಂಪರರಿ ಎಂಬುದನ್ನು ಮರೆತು ಅದನ್ನು ಪರ್ಮನೆಂಟ್ ಎಂದು ಭಾವಿಸುತ್ತಾರೆ. ಈಗ ಅವರಲ್ಲಿ ಹಿಂದಿನ ಆತ್ಮವಿಶ್ವಾಸ, ಉತ್ಸಾಹ, ಸ್ಛೂರ್ತಿ ಏನೂ ಇಲ್ಲದೆ, ಇದ್ದಬದ್ದ ಅನುಭವವನ್ನೂ ಬಹುತೇಕ ಮರೆತಿರುತ್ತಾರೆ. ಹೀಗಿರುವಾಗ ಅವರು ಮುಂದುವರಿಯ ಬಯಸಿದರೂ, ಹೆದರಿ ಹಿಮ್ಮೆಟ್ಟುತ್ತಾರೆ. ಆದರೆ ಕೇವಲ ಹೆದರಿಕೆಯಿಂದ ಏಳಿಗೆ ಸಾಧ್ಯವಿಲ್ಲ, ಏನೇ ಇರಲಿ, ಧೈರ್ಯವಾಗಿ ಮುನ್ನುಗ್ಗಬೇಕು.
ಆದರೆ ಒಂದು ಮಾತು ನೆನಪಿಡಿ, ಹಿಂಜರಿಕೆಯಿಂದ ಏನೂ ಲಾಭವಿಲ್ಲ. ನೀವು ಧೈರ್ಯವಾಗಿ ಮುಂದುವರಿದಾಗ ಮಾತ್ರ ನಿಮ್ಮ ಹಣ, ಪ್ರತಿಷ್ಠೆ, ಆತ್ಮವಿಶ್ವಾಸ ಹೆಚ್ಚಲು ಸಾಧ್ಯ. ಇದಕ್ಕಾಗಿ ನೀವು ನಿಮ್ಮ ಹಳೆಯ ಪ್ರೊಫೆಶನ್ ಗೆ ಹಿಂತಿರುಗಬಹುದು, ಅಥವಾ ಮನೆಯಿಂದಲೇ ನಡೆಸಬಹುದಾದ ಹೊಸ ವೃತ್ತಿಗಳಾದ ಟ್ಯೂಷನ್, ಬೇಕಿಂಗ್, ಕುಕಿಂಗ್ ಕ್ಲಾಸ್, ಜ್ಯೂವೆಲರಿ ಮೇಕಿಂಗ್, ಫ್ರಿಲ್ಯಾನ್ಸ್ ರೈಟಿಂಗ್, ಆನ್ ಲೈನ್ ಡ್ಯಾನ್ಸ್ ಕ್ಲಾಸ್ ಇತ್ಯಾದಿ ಏನಾದರೂ ಮಾಡಬಹುದು. ಇದರಿಂದ ಉತ್ತಮ ಆದಾಯ ಸಿಗುತ್ತದೆ. ಇದರ ಹೊರತಾಗಿಯೂ ಇನ್ನೂ ಅನೇಕ ವಿವಿಧ ಬಗೆಯ ಆಯ್ಕೆಗಳಿವೆ. ನಿಮಗೆ ಯಾವುದರಲ್ಲಿ ಆಸಕ್ತಿ ಎಂಬುದನ್ನು ಅದು ಅವಲಂಬಿಸಿದೆ. ಏನೇ ಇರಲಿ, ಗಳಿಕೆ ಮುಂದುವರಿಸಿ!
– ಪಾರ್ವತಿ ಭಟ್
ಸಿಂಗಲ್ ಮಾಮ್, ಆದರೂ ಎದುಗುಂದಲಿಲ್ಲ
ಸಿನಿ ತಾರೆಯರ ಜೀವನ ಹೊರಗಿನಿಂದ ಎಷ್ಟು ಗ್ಲಾಮರಸ್ ಆಗಿ ಹೊಳೆಯುತ್ತಿರುತ್ತದೋ, ಅವರ ಖಾಸಗಿ ಜೀವನ ಅಷ್ಟೇ ಕಷ್ಟಕರ ಆಗಿರುತ್ತದೆ. ಇದರಿಂದ ಅವರಗಳೂ ಬಹಳ ಕುಗ್ಗಿಹೋಗಿ, ಕೆಲವೊಮ್ಮೆ ಅತ್ಯಧಿಕ ಡಿಪ್ರೆಶನ್ ಗೆ ಜಾರಿ, ಆತ್ಮಹತ್ಯೆಯಲ್ಲಿ ಕೊನೆಗೊಳ್ಳುವುದೂ ಉಂಟು. ಆದರೂ ಹಿಮ್ಮೆಟ್ಟದೆ ತಮ್ಮವರಿಗಾಗಿ ಜೀವನ ಸಂಘರ್ಷ ಎದುರಿಸುತ್ತಾರೆ. ಈ ಸೆಲೆಬ್ರಿಟೀಸ್ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ :
ಅಮೃತಾ ಸಿಂಗ್‌ಸೈಫ್ ಅಲಿಖಾನ್ ಡೈವೋರ್ಸ್ ಪಡೆದು 18-19 ವರ್ಷಗಳಾಯ್ತು. ಇವರಿಗೆ ಇಬ್ಬರು ಮಕ್ಕಳು. ಈಕೆ ಆ ಮಕ್ಕಳನ್ನು ತನ್ನ ಬಳಿಯೇ ಇರಿಸಿಕೊಂಡು, ಒಬ್ಬಂಟಿಯಾಗಿ ಹೋರಾಡುತ್ತಿದ್ದಾಳೆ.
ಕರಿಶ್ಮಾ ಕಪೂರ್‌ಸಂಜಯ್ ಕಪೂರ್ ವಿಚ್ಛೇದನ ಪಡೆದ ನಂತರ, ಆಕೆ ತಾನೇ ಮಕ್ಕಳ ಜವಾಬ್ದಾರಿ ಹೊತ್ತಿದ್ದಾಳೆ. ಈ ನಿಟ್ಟಿನಲ್ಲಿ ಅತಿ ಹೆಮ್ಮೆಯಿಂದ ಮುಂದುವರಿದ ಕರಿಶ್ಮಾ, ಮರುವಿವಾಹ ಆಗದೆ ಜೀವನ ಎದುರಿಸುತ್ತಿದ್ದಾಳೆ.
ಬಾಲಿವುಡ್ ನಟಿ ಕೊಂಕಣ ಸೇನ್, ಮಾಜಿ ಪತಿ ರಣವೀರ್ ಶೌರಿಯಿಂದ ಬೇರಾದ ನಂತರ, ಬಾಲಿವುಡ್ ನಲ್ಲಿ ಹೆಚ್ಚಿನ ಹೆಸರು ಗಳಿಸಿದ್ದಲ್ಲದೆ, ಸಿಂಗಲ್ ಪೇರೆಂಟ್ ಆಗಿ, ಮಕ್ಕಳಿಗೆ ಉತ್ತಮ ಭವಿಷ್ಯ ಒದಗಿಸಿ, ಅವರ ಸಂಪೂರ್ಣ ಹೊಣೆ ಹೊತ್ತು ಇತರ ಹೆಂಗಸರಿಗೆ ಮಾದರಿಯಾಗಿದ್ದಾಳೆ.
ಈ ತರಹ ನಮ್ಮ ದೇಶಾದ್ಯಂತ ಇನ್ನೆಷ್ಟು ಸೆಲೆಬ್ರಿಟೀಸ್ ಅಥವಾ ಸಾಮಾನ್ಯ ಹೆಂಗಸರಿದ್ದಾರೋ ತಿಳಿಯದು, ಇವರುಗಳು ಹಿಂಜರಿಕೆಯಿಂದ ಕುಗ್ಗದೆ, ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದ್ದಾರೆ. ಈಗಿನ ಆಧುನಿಕ ಕಾಲದಲ್ಲಿ ಸಿಂಗಲ್ ಪೇರೆಂಟ್ ಆಗಿ ಮಕ್ಕಳ ಜವಾಬ್ದಾರಿ ನಿಭಾಯಿಸುವುದು ಎಷ್ಟು ಕಠಿಣಕರ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ಇಂದಿನ ಹೆಂಗಸರು ಅನಿವಾರ್ಯ ಕಾರಣಗಳಿಂದ ಸಿಂಗಲ್ ಪೇರೆಂಟ್ ಆಗಬೇಕಾಗಿ ಬಂದಾಗ, ಹೇಗಾದರೂ ಸರಿ, ತಮ್ಮ ಆರ್ಥಿಕ ಪರಿಸ್ಥಿತಿ ಸದೃಢಪಡಿಸಿಕೊಂಡು, ಯಾರನ್ನೂ ಅವಲಂಬಿಸದೆ, ಸ್ವಾವಲಂಬಿಗಳಾಗಿ ಮಕ್ಕಳ ಎದುರು ಆದರ್ಶವಾಗಿ ನಿಲ್ಲಬೇಕಾಗುತ್ತದೆ.