ನಿಮ್ಮ ಆದಾಯ ಹಾಗೂ ಅಗತ್ಯಕ್ಕೆ ಅನುಸಾರ ಯಾವ ರೀತಿಯ ಫಂಡ್ನಲ್ಲಿ ಹೂಡಿಕೆ ಸರಿ ಎಂಬುದರ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ……..!

ಇಂದಿನ ದಿನಗಳಲ್ಲಿ ಮ್ಯೂಚ್ಯುವಲ್ ಫಂಡ್‌ ಹೂಡಿಕೆಯು ಒಂದು ವಿಧಾನವಾಗುತ್ತಿದೆ. ಮ್ಯೂಚ್ಯುವಲ್ ‌ಫಂಡ್‌ ಗೆ ನಾವು `ಪರಸ್ಪರ ನಿಧಿ' ಎಂದು ಅರ್ಥ ಕೊಡಬಹುದು. ಆದರೆ ಅದು `ಮ್ಯೂಚ್ಯುವಲ್ ಫಂಡ್‌' ಎಂಬ ಹೆಸರಿನಿಂದ ಹೆಚ್ಚು ಜನಜನಿತವಾಗಿದೆ. ಮ್ಯೂಚ್ಯುವಲ್ ‌ಫಂಡ್‌ ಒಂದು ರೀತಿಯ ಸಾಮೂಹಿಕ ಹೂಡಿಕೆಯಾಗಿದೆ. ಹೂಡಿಕೆದಾರರ ಸಮೂಹ ಸೇರಿಕೊಂಡು ಸ್ಟಾಕ್‌, ಅಲ್ಪಾವಧಿಯ ಹೂಡಿಕೆ ಅಥವಾ ಇತರೆ ಸೆಕ್ಯೂರಿಟೀಸ್‌ ಗಳಲ್ಲಿ ಹೂಡಿಕೆ ಮಾಡುತ್ತದೆ.

ಯುಟಿಐ ಎಎಂಪಿ ಭಾರತದ ಅತ್ಯಂತ ಹಳೆಯ ಮ್ಯೂಚ್ಯುವಲ್ ಫಂಡ್‌ ಕಂಪನಿಯಾಗಿದೆ. ಮ್ಯೂಚ್ಯುವಲ್ ‌ಫಂಡ್‌ ನಲ್ಲಿ ಒಬ್ಬರು ಫಂಡ್‌ ಮ್ಯಾನೇಜರ್‌ ಇರುತ್ತಾರೆ. ಅವರು ಫಂಡ್‌ ನ ಹೂಡಿಕೆದಾರರನ್ನು ನಿರ್ಧರಿಸುತ್ತಾರೆ. ಅಷ್ಟೇ ಅಲ್ಲ, ಲಾಭ ಹಾಗೂ ಹಾನಿಯ ಲೆಕ್ಕಪತ್ರ ಇಡುತ್ತಾರೆ. ಈ ರೀತಿಯಲ್ಲಿ ಆದ ಲಾಭ ಹಾಗೂ ಹಾನಿಯನ್ನು ಹೂಡಿಕೆದಾರರಲ್ಲಿ ಹಂಚಿಕೆ ಮಾಡುತ್ತಾರೆ.

ಮ್ಯೂಚ್ಯುವಲ್ ‌ಫಂಡ್‌ ನ ಮುಖಾಂತರ ಕೇವಲ ಈಕ್ವಿಟಿ ಅಥವಾ ಷೇರು ಮಾರುಕಟ್ಟೆಯಲ್ಲಷ್ಟೇ ಅಲ್ಲ ಡೇಟ್‌, ಗೋಲ್ಡ್ ಹಾಗೂ  ಕಮಾಡಿಟಿಯಲ್ಲೂ ಹೂಡಿಕೆ ಮಾಡುತ್ತಾರೆ. ನಿಮಗೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇರದಿದ್ದರೆ ಅಥವಾ ಅದರಲ್ಲಿ ಹೂಡಿಕೆ ಮಾಡಿದ ಹಣದ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದಲ್ಲಿ, ಮ್ಯೂಚ್ಯುವಲ್ ‌ಫಂಡ್‌ ನಿಶ್ಚಿತವಾಗಿಯೂ ನಿಮಗೆ ಒಂದು ಉತ್ತಮ ವೇದಿಕೆಯಾಗಿದೆ.

ಮ್ಯೂಚ್ಯುವಲ್ ಫಂಡ್‌ ನ ಸಂಚಾಲಕರು ಎಲ್ಲ ಹೂಡಿಕೆದಾರರ ಹಂಚಿಕೆ ಮೊತ್ತವನ್ನು ಒಟ್ಟುಗೂಡಿಸುತ್ತಾರೆ ಹಾಗೂ ಅವರಿಂದ ಒಂದಿಷ್ಟು ಸೇವಾ ಶುಲ್ಕ ಪಡೆಯುತ್ತಾರೆ. ಬಳಿಕ ಅವರ ಮೊತ್ತವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಅವುಗಳಲ್ಲಿ ಹೂಡಿಕೆ ಮಾಡುವುದರ ಲಾಭ ಏನಾಗುತ್ತದೆ? ಹೂಡಿಕೆದಾರರು ಅದರ ಬಗ್ಗೆ ಚಿಂತೆ ಮಾಡುವ ಅಗತ್ಯ ಉಂಟಾಗುವುದಿಲ್ಲ. ಯಾವಾಗ ಷೇರು ಖರೀದಿಸಬೇಕು? ಯಾವಾಗ ಮಾರಾಟ ಮಾಡಬೇಕು ಎನ್ನುವುದನ್ನು ಫಂಡ್‌ ಮ್ಯಾನೇಜರ್‌ ನಿರ್ಧರಿಸುತ್ತಾರೆ.

ಇದರ ಒಂದು ಲಾಭ ಏನೆಂದರೆ, ಚಿಕ್ಕ ಹೂಡಿಕೆದಾರರು ಅತ್ಯಂತ ಕಡಿಮೆ ಮೊತ್ತ ಅಂದರೆ ಪ್ರತಿ ತಿಂಗಳಿಗೆ 100 ಯೂನಿಟ್ ಹೂಡಿಕೆ ಮಾಡಬಹುದು. ಇಂತಹದರಲ್ಲಿ ಅವರು ಸಿಸ್ಟಮ್ಯಾಟಿಕ್‌ ಇನ್‌ ವೆಸ್ಟ್ ಮೆಂಟ್‌ ಪ್ಲಾನ್‌ ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲಿ ಬ್ಯಾಂಕ್‌ ನಿಂದ ಈ ಮೊತ್ತ ಪ್ರತಿ ತಿಂಗಳು ಫಂಡ್‌ ಗೆ ವರ್ಗಾವಣೆ ಆಗುತ್ತಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹೂಡಿಕೆ ಧ್ಯೇಯಗಳಿರುತ್ತವೆ. ಉದಾಹರಣೆಗೆ ನಿವೃತ್ತಿ, ಮಕ್ಕಳ ಮದುವೆ, ರಜೆಗಳಲ್ಲಿ ಪ್ರವಾಸ, ಸ್ವಂತ ಮನೆ ಖರೀದಿ, ಕಾರು ಖರೀದಿ, ತಮ್ಮದೇ ಆದ ವ್ಯಾಪಾರ ಆರಂಭಿಸುವುದು ಈ ಎಲ್ಲ ಗುರಿಗಳನ್ನು ಪೂರ್ತಿಗೊಳಿಸಲು ಹಣ ಹಾಗೂ ಸಮಯ ಬೇಕು. ಅದಕ್ಕಾಗಿ ನೀವು 5-10 ವರ್ಷ ಸಮಯ ಕೊಟ್ಟರೆ, ಅವು ನಿಮಗೆ ಖಂಡಿತವಾಗಿಯೂ ಲಾಭ ಕೊಡುತ್ತವೆ. ನಿಮ್ಮ ಪ್ರತಿಯೊಂದು ಧ್ಯೇಯ ಈಡೇರಿಸಿಕೊಳ್ಳಲು ನೀವು ಬೇರೆ ಬೇರೆ ಮ್ಯೂಚ್ಯುವಲ್ ಫಂಡ್‌ ಗಳಲ್ಲಿ ಹೂಡಿಕೆ ಮಾಡಬೇಕಾದ ಅವಶ್ಯಕತೆ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ