ಹೆಂಗಸರು ಹಣಕಾಸಿನ ನಿಟ್ಟಿನಲ್ಲಿ, ಸ್ವತಂತ್ರ ಹಾಗೂ ಸುರಕ್ಷಿತರಾಗಿರುವುದು ಎಷ್ಟು ಅಗತ್ಯ ಎಂದು ಮೂಲಕ ತಿಳಿಯೋಣವೇ......?

ಭಾರತದಲ್ಲಿ ಕೋಟ್ಯಂತರ ಹೆಂಗಸರು ಅತಿ ಉತ್ತಮ ಗೃಹಿಣಿಯರಾಗಿ, ಆದರ್ಶ ತಾಯಂದಿರಾಗಿದ್ದಾರೆ. ಆದರೆ ಈ ಸಾಂಸಾರಿಕ ಜಂಜಾಟದಲ್ಲಿ ಇವರು ತಮ್ಮ ಕೆರಿಯರ್‌ ನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡುತ್ತಾರೆ. ಇದರ ವೇದನೆಯನ್ನು ಅವರು ಜೀವಮಾನವಿಡೀ ಮನದಲ್ಲೇ ಒತ್ತರಿಸಿಕೊಂಡಿರುತ್ತಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣು ಅಥವಾ ಗಂಡೇ ಇರಲಿ, ಅರ್ಥಿಕವಾಗಿ ಸದೃಢರಾಗಿರಬೇಕಾದುದು ಅತಿ ಅವಶ್ಯಕ ಎಂಬುದನ್ನು ಎಲ್ಲರೂ ಅರಿತಿರಬೇಕು. ಇದರಿಂದ ನೀವು ಆರ್ಥಿಕವಾಗಿ ಸ್ವಾವಲಂಬಿಗಳಾಗುವಿರಿ, ನಿಮ್ಮ ಜೀವನಶೈಲಿ ಎಷ್ಟೋ ಸುಧಾರಿಸುತ್ತದೆ, ಕೊನೆಯ ಹಾಗೂ ಮುಖ್ಯವಾದುದೆಂದರೆ ಮುಂದೆ  ಜೀವನದಲ್ಲಿ ಎಂಥ ತಿರುವು ಬಂದರೂ ಅದನ್ನು ನಿಭಾಯಿಸಲು ನೀವು ತಯಾರಾಗಿರುತ್ತೀರಿ. ಹೀಗಾಗಿ ಮದರ್ಸ್‌ ಫೈನಾನ್ಶಿಯಲ್ ಪ್ಲಾನಿಂಗ್‌ ಏಕೆ ಮುಖ್ಯ ಎಂಬುದನ್ನು ವಿವರವಾಗಿ ತಿಳಿಯೋಣ.

ಹೆಚ್ಚುತ್ತಿರುವ ಖರ್ಚು ವೆಚ್ಚ

ದಿನೇ ದಿನೇ ಬೆಲೆಗಳು ಗಗನಕ್ಕೇರುತ್ತಿವೆ. ಅದು ಮನೆ ಬಾಡಿಗೆ, ರೇಶನ್‌, ಹಣ್ಣು ತರಕಾರಿ, ಮಕ್ಕಳ ಶಿಕ್ಷಣ, ಮನೆ ಮಂದಿಯ ಆರೋಗ್ಯ ಆರೈಕೆ..... ಈ ಪಟ್ಟಿಗೆ ಕೊನೆ ಇಲ್ಲ. ಇವೆಲ್ಲವನ್ನೂ ನಿಭಾಯಿಸಲು ಕುಟುಂಬದ ಒಬ್ಬನೇ ್ಯಕ್ತಿಯ ಆದಾಯ ಇಂದಿನ ಕಾಲಕ್ಕಂತೂ ಏನೇನೂ ಸಾಲದು ಎಂಬಂತಾಗಿದೆ.ಹೀಗಾಗಿ ನೀ ಆರ್ಥಿಕಾಗಿ ಸಶಕ್ತರಾಗಿ ಮುಂದುರಿದರೆ, ನೀ ಸಂಗಾತಿಗೆ ನಿಜ ಅರ್ಥದಲ್ಲಿ ಹೆಗಲು ನೀಡುರಾಗುತ್ತೀರಿ. ನಿಮ್ಮ ಜೀನಶೈಲಿ ಖಂಡಿತಾ ಸುಧಾರಿಸುತ್ತದೆ, ಉಳಿತಾಯದ ಕುರಿತಾಗಿ ಭರಸೆ ಇಡಬಹುದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲೂ ಧೈರ್ಯ ವಹಿಸಬಹುದು. ಮುಂದೆ ಅವರ ಭವಿಷ್ಯ, ಮದುವೆ ಖರ್ಚಿಗೆ ಖಂಡಿತಾ ಮೊದಲಿನಿಂದಲೇ ಪ್ಲಾನಿಂಗ್‌ ಮಾಡಬೇಕಾಗುತ್ತದೆ.

ಕಷ್ಟಕಾಲ ಎದುರಾದಾಗ

ನಮ್ಮ ಜೀವನದಲ್ಲಿ ಯಾವಾಗ ಏನು ಕಷ್ಟಕಾಲ ಬರಲಿದೆಯೋ ಹೇಳಲಾಗದ್ದು. ಅದು ಸಂಗಾತಿಯ ಅಗಲಿಕೆ, ದಿಢೀರ್‌ ಕೆಲಸ ಹೋಗುವುದೇ ಇರಬಹುದು, ಇನ್ನಾವುದೇ ಅಪಾಯದ ಸನ್ನಿವೇಶ ಎದುರಾಗಬಹುದು.... ಒಂದು ಸಮೀಕ್ಷೆ ಪ್ರಕಾರ ಕೊರೋನಾದ ಎರಡನೇ ಅಲೆಯಲ್ಲಿ ಎಷ್ಟೋ ಕೋಟ್ಯಂತರ ಭಾರತೀಯರು ತಮ್ಮ ಕೆಲಸ ಕಳೆದುಕೊಂಡರು. ಇದರಿಂದ ಅವರ ಫ್ಯೂಚರ್ ಪ್ಲಾನಿಂಗ್‌ ಪೂರ್ತಿ ಹಾಳಾಗಿರುತ್ತದೆ. ಹೀಗಾಗಿ ಕುಟುಂಬದ ಏಕೈಕ ಸಂಪಾದಿಸುವ ವ್ಯಕ್ತಿ ಸತ್ತರೆ ಅಥವಾ ಕೆಲಸ ಕಳೆದುಕೊಂಡರೆ, ಆ ಕುಟುಂಬಕ್ಕೆ ದೊಡ್ಡ ಕಾಲದ ಹೊರೆ ಎದುರಾಗುತ್ತದೆ. ಇಂಥ ಪರಿಸ್ಥಿತಿ ಎದುರಿಸಲು ಹೆಂಗಸರು ತಾವೇ ಗಳಿಸುವವರಾಗಿರಬೇಕು.

ಇಂಥ ಪರಿಸ್ಥಿತಿಯಲ್ಲಿ ನೀವು ಸ್ವಾವಲಂಬಿಗಳಾಗಿದ್ದರೆ, ಹೇಗಿದ್ದರೂ ಕಷ್ಟ ಎದುರಿಸುವುದು ತಪ್ಪಲ್ಲ, ಆದರೆ ಗಳಿಕೆಯ ಜೊತೆ ಇದೆ ಎಂಬ ಸಮಾಧಾನವಾದರೂ ಇರುತ್ತದೆ. ನೀವು ಚೇತರಿಸಿಕೊಂಡು ನಿಮ್ಮ ಕುಟುಂಬವನ್ನೂ ಸಂಭಾಳಿಸಬಹುದು.

ನಿಮ್ಮನ್ನು ದುರ್ಬಲರೆಂದು ತಿಳಿಯಬೇಡಿ

ಒಂದು ಸಮೀಕ್ಷೆ ಪ್ರಕಾರ, ಪ್ಯಾಂಡಮಿಕ್‌ (ಕೊರೋನಾ)ಗೆ ಮೊದಲು, ಭಾರತದಲ್ಲಿ 30% ಗಿಂತಲೂ ಹೆಚ್ಚಿನ ಹೆಂಗಸರು ಡೊಮೆಸ್ಟಿಕ್‌ ವೈಲೆನ್ಸ್ ಗೆ ಗುರಿಯಾಗುತ್ತಿದ್ದರು. ಆದರೆ ಈಗ ಈ ಸಂಖ್ಯೆ ಹೆಚ್ಚುತ್ತಿದೆಯಂತೆ! ನಿಮಗೆ ಮತ್ತೊಂದು ವಿಷಯ ಗೊತ್ತೇ? ಹಣಕಾಸಿಗಾಗಿ ನೀವು ಪತಿಯನ್ನೇ ಅವಲಂಬಿಸಿದ್ದರೆ, ಆ ಕಾರಣಕ್ಕಾಗಿ ಸಂಗಾತಿಯ ಎಲ್ಲಾ ಶೋಷಣೆಗಳನ್ನೂ ತೆಪ್ಪಗೆ ಸಹಿಸಬೇಕಾಗುತ್ತದೆ. ಹಣಕಾಸಿನ ವಿಷಯವಾಗಿ ತನ್ನ ಕೈ ನಡೆಯದು ಎಂಬ ಕಾರಣಕ್ಕಾಗಿ ಹೆಣ್ಣು ತನ್ನನ್ನು ದುರ್ಬಲಳು, ಅಬಲೆ ಎಂದು ತಿಳಿಯುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ