ನೀವು ಸಹ ಗ್ಲೋಯಿಂಗ್ ಸ್ಕಿನ್ ಜೊತೆ ಬ್ಯೂಟಿಫುಲ್ ಹೇರ್ ಹೊಂದಲು ಬಯಸುವಿರಾದರೆ, ಈ ಮಾಹಿತಿ ನಿಮಗೆ ಹೆಚ್ಚು ಪೂರಕ…..!
ಸಾಮಾನ್ಯವಾಗಿ ಹೆಂಗಸರು ತಮ್ಮ ಚರ್ಮ ಮತ್ತು ಕೂದಲಿನ ಸ್ಥಿತಿಗೆ, ತಮ್ಮ ಜೀವನಶೈಲಿ ಮತ್ತು ಆನುವಂಶಿಕತೆ ಅಷ್ಚೇ ಕಾರಣ ಎಂದು ಭಾವಿಸುತ್ತಾರೆ. ಇವರು ಕೂದಲು ಉದುರುವಿಕೆಗೆ ಹೆಚ್ಚು ಮಹತ್ವ ನೀಡುವುದೂ ಇಲ್ಲ. ದೈನಂದಿನ ಒತ್ತಡಗಳಿಂದಾಗಿ ಇವಕ್ಕೆಲ್ಲ ಆರೈಕೆ ಮಾಡಿಕೊಂಡಿರಲು ಯಾರ ಬಳಿ ಸಮಯವಿದೆ? ಎಂದುಕೊಳ್ಳುತ್ತಾರೆ. ಆದರೆ ದೇಹದಲ್ಲಿನ ನ್ಯೂಟ್ರಿಶನ್ ಲೆವೆಲ್ ಆಧರಿಸಿ ಚರ್ಮ ಮತ್ತು ಕೂದಲಿನ ಆರೋಗ್ಯ ಇರುತ್ತದೆ. ನ್ಯೂಟ್ರಿಶನ್ ಮತ್ತು ವಿಟಮಿನ್ ಲೆವೆಲ್ ಎರಡೂ ಚರ್ಮವನ್ನು ಸ್ವಸ್ಥವಾಗಿರಿಸಿ, ಮೃದುಗೊಳಿಸುತ್ತದೆ. ಕೂದಲನ್ನು ದಟ್ಟ, ಸಶಕ್ತ, ಒತ್ತಾಗಿಸಲು ಪ್ರಧಾನ ಪಾತ್ರ ವಹಿಸುತ್ತದೆ.
ಡಯೆಟ್ ಮತ್ತು ಜೀರ್ಣಶಕ್ತಿ ಕೆಡುವುದರಿಂದ, ಪೋಷಣೆಯಲ್ಲಿ ಕೊರತೆ ಕಾಡುತ್ತದೆ. ಇದರಿಂದ ಚರ್ಮಕ್ಕೆ ಹಲವು ಸಮಸ್ಯೆಗಳು ಕಾಡುತ್ತವೆ, ಅದರ ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಆಗುತ್ತದೆ. ಎಷ್ಟೋ ಸಲ ಆಹಾರದಲ್ಲಿ ಏನೂ ಕೊರತೆ ಇರುವುದಿಲ್ಲವಾದರೂ, ಮುಂದೆ ಫುಡ್ ಸೆನ್ಸಿಟಿವಿಟಿ ಮತ್ತು ಅಲರ್ಜಿ ಚರ್ಮದ ರೋಗಕ್ಕೆ ಕಾರಣ ಆಗುತ್ತದೆ.
ಆಧುನಿಕ ಅಧ್ಯಯನಗಳ ಪ್ರಕಾರ ಆ್ಯಂಟಿ ಆಕ್ಸಿಡೆಂಟ್ ಗಳ ಫೋಟೋ ಪ್ರೊಟೆಕ್ಟಿವ್ ಸಾಮರ್ಥ್ಯ ಚರ್ಮದ ಪ್ರತಿರಕ್ಷಣಾ ತಂತ್ರದ ಮೇಲೆ, ಸೂಕ್ಷ್ಮ ಪೋಷಕಾಂಶಗಳ ಪೂರೈಕೆಯಿಂದ ಪ್ರಭಾವಿತಗೊಳ್ಳುತ್ತದೆ. ವಿಟಮಿನ್ ಕೊರತೆಯಿಂದ ಚರ್ಮ ಕೂದಲಿನ ಮೇಲಾಗುವ ಪ್ರಭಾವಗಳ ಬಗ್ಗೆ ತಿಳಿಯೋಣ.
ಚರ್ಮದ ಆರೈಕೆಗೆ ಪೋಷಕಾಂಶಗಳ ಪಾತ್ರ
ವಿಟಮಿನ್, B, Bಗಳ ಪ್ರಾಮುಖ್ಯತೆ : ಇಡೀ ಮಾನವ ದೇಹ, ಅದರಲ್ಲೂ ವಿಶೇಷವಾಗಿ ಚರ್ಮದ ಪೋಷಣೆಯಲ್ಲಿ ವಿಟಮಿನ್ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದಾಗಿ ಬೆವರು ಗ್ರಂಥಿಗಳಲ್ಲಿ ಅಡಚಣೆ, ತೈಲಗ್ರಂಥಿಗಳಲ್ಲಿ ಕೊರತೆ, ಫ್ರೈನೋಡರ್ಮಾ, ಸೋರಿಯಾಸಿಸ್, ಚರ್ಮದಲ್ಲಿ ಸುಕ್ಕು ಇತ್ಯಾದಿ ಮಾಮೂಲಿ ಆಗುತ್ತವೆ.
ಸಾಮಾನ್ಯಾಗಿ ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ಈ ಸಮಸ್ಯೆಯನ್ನು ಬೇಗ ಗುರುತಿಸಬಹುದು. ವಿಟಮಿನ್‌ಕೊರತೆಯ ಕಾರಣ ಮೊಣಕೈ, ಮೊಣಕಾಲು, ನಿತಂಬಗಳ ಬಳಿಯ ಚರ್ಮ ಬೇಗ ದಟ್ಟ ಕಪ್ಪು ಬಣ್ಣಕ್ಕೆ ತಿರುಗತ್ತದೆ.
ವಿಟಮಿನ್ B ಕೊರತೆಯ ಕಾರಣ ಕುತ್ತಿಗೆಯಂಥ ಸದಾ ತೆರೆದ ಅಂಗಗಳ ಮೇಲೆ ಫೋಟೋ ಸೆನ್ಸಿಟಿವಿಟಿ, ರಾಶೆಸ್ ನಂಥ ಸನ್ ಬರ್ನ್ಸ್ ಆಗುತ್ತವೆ. ಇದೇ ತರಹ ಕೈಕಾಲುಗಳಲ್ಲಿ ಒಡೆತ ಮಾಮೂಲಿ ಆಗುತ್ತದೆ. ಇದರಿಂದಾಗಿ ಚರ್ಮ ಬೇಗ ಬೇಗ ಬಿರುಕುಬಿಟ್ಟು, ಒಮ್ಮೊಮ್ಮೆ ರಕ್ತ ಸಹ ಜಿನುಗಬಹುದು. ಹೆಂಗಸರು ಸಾಮಾನ್ಯವಾಗಿ ಇದನ್ನು ನಗಣ್ಯ ಎಂದು ನಿರ್ಲಕ್ಷಿಸುತ್ತಾರೆ, ಮುಂದೆ ಇದು ಗಂಭೀರ ರೋಗ ಆಗಬಹುದು.
ಪ್ರತಿದಿನ ಜೋಳ ಮಾತ್ರ ಸೇವಿಸುವವರನ್ನು ವಿಟಮಿನ್ Bನ ಕೊರತೆ ಕಾಡುತ್ತದೆ. ಹೆಂಡ ಕುಡಿಯುವವರಿಗೂ ಇದು ತಪ್ಪಿದ್ದಲ್ಲ. ಇದರಿಂದಾಗಿ ಚರ್ಮದಲ್ಲಿ ಹೈಪರ್ ಪಿಗ್ಮೆಂಟೇಶನ್, ಚರ್ಮದ ಊತ, ಸೋಂಕು, ಡಾರ್ಕ್ ಸರ್ಕಲ್ಸ್ ಇತ್ಯಾದಿ ಸಹ ಕಾಡಬಹುದು. ಸಕಾಲಕ್ಕೆ ಇದರ ಚಿಕಿತ್ಸೆ ಪಡೆಯದಿದ್ದರೆ ಮುಂದೆ ಪ್ರಾಣ ಘಾತಕ ಆದೀತು.ಹಾಲು, ಪನೀರ್, ಮೊಸರು, ಮೊಟ್ಟೆ, ಬಾಳೇಹಣ್ಣು, ಸ್ಟ್ರಾಬೆರಿ, ಟೂನಾ ಫಿಶ್, ಚಿಕನ್ ಇತ್ಯಾದಿಗಳಲ್ಲಿ ವಿಟಮಿನ್ B ಧಾರಾಳ ತುಂಬಿರುತ್ತದೆ. ಈ ಪದಾರ್ಥಗಳ ಸೇವನೆ ನಿಲ್ಲಿಸಬಾರದು. ದೇಹದಲ್ಲಿ B ಮಟ್ಟ ಹೆಚ್ಚಿಸಲು ನಿಮ್ಮ ಮನೆ ವೈದ್ಯರನ್ನು ಸಂಪರ್ಕಿಸಿ.
ವಿಟಮಿನ್ B ಯ ಮಹತ್ವ
ಕೊಲೋಜೆನ್ ತಯಾರಿಗೆ ವಿಟಮಿನ್ Bಯ ಅತ್ಯಗತ್ಯ, ಚರ್ಮದ ಟೈಟ್ ನಿಂಗ್ ಮತ್ತು ಅದು ಸದಾ ಯಂಗ್ ಆಗಿರಲು ಇದು ಬಲು ಮಹತ್ವಪೂರ್ಣ. ಇದರ ಪ್ರತಿದಿನದ ಸೇವನೆಯಿಂದ ಚರ್ಮದ ಸುಕ್ಕುಗಳಲ್ಲಿ ಸುಧಾರಣೆ ಆಗುತ್ತದೆ, ಚರ್ಮದ ಒಟ್ಟಾರೆ ಟೆಕ್ಸ್ ಚರ್ ಸುಧಾರಿಸಲಿಕ್ಕೂ ಇದು ಬೇಕು. ವಿಟಮಿನ್ Bಯ ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧ, ಇದು ಉತ್ತಮ ಚರ್ಮಕ್ಕೂ ಬೇಕೇಬೇಕು.
ವಿಟಮಿನ್ Bಯ ಕೊರತೆಯಿಂದ ಚರ್ಮ ಶುಷ್ಕ ಮತ್ತು ನಿರ್ಜೀವ ಆಗಬಹುದು. ಚರ್ಮ ತಂತಾನೇ ಗಾಯ ವಾಸಿ ಮಾಡಿಕೊಳ್ಳುವ ಸಾಮರ್ಥ್ಯ ತಗ್ಗುತ್ತದೆ. ಇದರ ಕೊರತೆಯಿಂದ ಸ್ಕರ್ವಿ ರೋಗ ಸಹ ಕಾಡಬಹುದು. ಸ್ಕರ್ವಿಯ ಲಕ್ಷಣವೆಂದರೆ, ಚರ್ಮದ ಮೇಲೆ ಕಾಣುವ ಗುಂಡಗಿನ ಕೆಂಪು ಗಾಯಗಳು ಹಾಗೂ ರಕ್ತಸ್ರಾವದ ಕಾರಣ ಚರ್ಮದ ಬಣ್ಣ ಬಿಳಚಿಕೊಳ್ಳುತ್ತಾ ಹೋಗುತ್ತದೆ. ಸ್ವಾನ್ ನೆಕ್ ಹೇರ್ ಕಾಟ ಹೆಚ್ಚುತ್ತದೆ.
ಝಿಂಕ್ ನ ಮಹತ್ವ
ಝಿಂಕ್ ಪೋಷಕಾಂಶದ ಕೊರತೆಯಿಂದ ಚರ್ಮದಲ್ಲಿ ಬಿರುಕು, ಶುಷ್ಕತೆ, ರಾಶೆಸ್ ಕಾಣಬಹುದು. ಝಿಂಕ್ ಕೊರತೆಯಿಂದ ಮೊಡವೆ, ಆ್ಯಕ್ನೆ, ಚರ್ಮದ ಸೋಂಕು ಸಹ ಆಗಬಹುದು. ಇದರಿಂದ ಚರ್ಮಕ್ಕೆ ಗಾಯವಾದರೆ ಬೇಗ ವಾಸಿ ಆಗದು. ಎಷ್ಟೋ ಮಂದಿಗೆ ಮುಖ, ನಿತಂಬಗಳ ಬಳಿ ಚರ್ಮದಲ್ಲಿ ಹೊಪ್ಪಳ ಏಳುತ್ತವೆ.
ಆದರೆ ಕೇವಲ ಅಪ್ಲಿಕೇಶನ್ ಮತ್ತು ಕ್ರೀಮ್ಸ್ ಮಾಯಿಶ್ಚರೈಸರ್ ನಿಂದ ಇದರ ಕೊರತೆಯ ನಿವಾರಣೆ ಆಗದು. ಆರೈಕೆಗೆ ಸೂಕ್ತ ಔಷಧಿ ಮತ್ತು ಉತ್ತಮ ಪೌಷ್ಟಿಕ ಆಹಾರದ ಅಗತ್ಯವಿದೆ. ದೇಹದಲ್ಲಿ ಝಿಂಕ್ ಲೆವೆಲ್ ಎಷ್ಟಿದೆ ಎಂದು ಖಾತ್ರಿಪಡಿಸಿಕೊಂಡು ವೈದ್ಯರು ಆ ಪ್ರಕಾರ ಸಪ್ಲಿಮೆಂಟ್ಸ್ ನ ಸಲಹೆ ನೀಡುತ್ತಾರೆ.
ಕಬ್ಬಿಣಾಂಶದ ಮಹತ್ವ
ದೇಹದಲ್ಲಿ ಕಬ್ಬಿಣಾಂಶದ ಕೊರತೆಯ ಕಾರಣ ಚರ್ಮ ತೀರಾ ಶುಷ್ಕ, ನಿರ್ಜೀವ, ಕಪ್ಪು ಗೆರೆಗಳು, ಉಗುರಿನ ಮುರಿತ ಇತ್ಯಾದಿ ಸಮಸ್ಯೆ ಕಾಡುತ್ತದೆ. ಕೆಲವು ಮಂದಿಗೆ ನಾಲಿಗೆ ಮೇಲೆ ಗುಳ್ಳೆ, ಸಣ್ಣ ಊತ, ಆ್ಯಂಗ್ಯುಲರ್ ಜಿಲೈಟಿಸ್ ರೋಗ ಸಹ ಕಾಡಬಹುದು. ಇಷ್ಟು ಮಾತ್ರವಲ್ಲದೆ, ಚರ್ಮಲ್ಲಿ ಅಧಿಕ ನವೆ, ತುರಿಕೆ, ಹೊಪ್ಪಳ ಏಳುವ ಸಮಸ್ಯೆ ಕಾಡಬಹುದು. ಕಬ್ಬಿಣಾಂಶದ ಕೊರತೆಯಿಂದಾಗಿ ಕಾಡುವ ರಾಶೆಸ್, ಚರ್ಮದ ಕೆಳಪದರದಲ್ಲಿ ಕೆಂಪು ಅಥವಾ ಬದನೆ ಬಣ್ಣದ ಕಲೆ ಮೂಡಿಸಬಹುದು.
ನೀರಿನಲ್ಲಿ ಸುಲಭವಾಗಿ ಕರಗಬಲ್ಲಂಥ ವಿಟಮಿನ್ B ಮೂಲದ ಸ್ರೋತ ಬಯೋಟಿನ್. ಇದು ಫ್ಯಾಟ್‌ಕಾರ್ಬೋಹೈಡ್ರೇಟ್ ಗಳ ಚಯಾಪಚಯೆಯಲ್ಲಿ ಕೋಎಂಝೈಮ್ ಗಳಾಗಿ ಸಕ್ರಿಯ ಕೆಲಸ ಮಾಡುತ್ತವೆ. ಇದರ ಕೊರತೆ ಅಪರೂಪದ ಸಮಸ್ಯೆಯೇ ಸರಿ.
ಇದರ ಕೊರತೆಯ ಲಕ್ಷಣ ಎಂದರೆ ಚರ್ಮದಲ್ಲಿ ಪ್ಯಾಚಿ ರೆಡ್ ರಾಶೆಶ್. ಸಾಮಾನ್ಯವಾಗಿ ಇದು ಬಾಯಿ, ಸೇಬೋರ್ ಹೈಕ್ ಡರ್ಮಟೈಟಿಸ್ ಹಾಗೂ ಚರ್ಮದ ಫಂಗಸ್, ಉಗುರಿನ ಇನ್ ಫೆಕ್ಷನ್ ಇತ್ಯಾದಿಗಳೂ ಕೂಡಿವೆ.
ಕೂದಲಿನ ಪೋಷಣೆಗಾಗಿ
ಕಬ್ಬಿಣಾಂಶ ಮತ್ತು ವಿಟಮಿನ್ Bಗಳ ಮಹತ್ವ : ಅಕಾಲ ನೆರೆ ಕೂದಲಿನ ದೊಡ್ಡ ಸಮಸ್ಯೆ, ಇದು ಆನುವಂಶಿಕ ಹೌದು. ಕಬ್ಬಿಣಾಂಶ, ವಿಟಮಿನ್ C, B, ಫಾಲೆಟ್, ಸೆಲೆನಿಯಂ ಮುಂತಾದ ಖನಿಜಾಂಶಗಳ ಕೊರತೆಯಿಂದ ಬಾಲ್ಯ, ಪ್ರಾಯದ ಆರಂಭದ ದಿನಗಳಲ್ಲೇ ಕೂದಲು ಬೆಳ್ಳಗಾಗ ತೊಡಗುತ್ತದೆ. ಈ ಸೂಕ್ಷ್ಮ ಪೋಷಕಾಂಶಗಳ ಕೊರತೆಯ ನಿವಾರಣೆಯಿಂದ ಈ ಅಕಾಲಿಕ ನೆರೆಗೂದಲಿನ ಬಾಧೆ ತಪ್ಪಿಸಬಹುದು.
ವಿಟಮಿನ್ B ಕೊರತೆಯಿಂದ ಕೂದಲು ಉದುರ ತೊಡಗುತ್ತದೆ, ಶುಷ್ಕ, ನಿರ್ಜೀವ ಆಗುತ್ತದೆ. ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ನಿರ್ಮಾಣಕ್ಕೆ ಈ ವಿಟಮಿನ್ ಬೇಕೇ ಬೇಕು. ಇದು ದೇಹದ ಎಲ್ಲಾ ಭಾಗಕ್ಕೂ ಆಮ್ಲಜನಕ ರವಾನಿಸುತ್ತದೆ. ಯಾರಿಗೆ ಇದರ ಕೊರತೆ ಇದೋ, ಸ್ಕಾಲ್ಪ್ ತನ್ನ ರೋಮರಂಧ್ರದಿಂದ ಹೊಸ ಕೂದಲು ಮೂಡಿಸಲು ಈ ಆಕ್ಸಿಜನ್ ಸಪ್ಲೈ ಕಡಿಮೆ ಆಗಿಹೋಗುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿ ಕ್ರಮೇಣ ಬಾಲ್ಡ್ ಆಗಬಹುದು.
ಕೂದಲ ಮೇಲೆ ಕಬ್ಬಿಣಾಂಶದ ಕೊರತೆ
ವಿಟಮಿನ್ B ಕೊರತೆಯ ತರಹವೇ ಸ್ವಸ್ಥ ಕೂದಲಿಗಾಗಿ ನಮ್ಮ ಆಹಾರದಲ್ಲಿ ಕಬ್ಬಿಣಾಂಶದ ಸೇವನೆ ಅತ್ಯಗತ್ಯ ಆಗುತ್ತಿರಬೇಕು. ಇದು ಅತಿ ಮಹತ್ವಪೂರ್ಣ ಖನಿಜವಾಗಿದ್ದು, ಮಾನವರ ರಕ್ತದಲ್ಲಿ ಕೆಂಪು ರಕ್ತಕಣಗಳ ನಿರ್ಮಾಣಕ್ಕೆ ಪೂರಕ. ಇದರ ಕೊರತೆ ಆದಾಗ, ಆಕ್ಸಿಜನ್ ಸ್ಕಾಲ್ಪ್ ನ ಕೂದಲಿನ ರೋಮರಂಧ್ರ ತಲುಪಲಾಗದು.
B ಯಲ್ಲಿ ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ಇದ್ದು, ಇದು ರಕ್ತವನ್ನು ಸರಾಗವಾಗಿ ದೇಹದ ನಾನಾ ಅಂಗಾಂಶಗಳಿಗೆ ತಲುಪಿಸುತ್ತದೆ. ಕೂದಲಿನ ಆದರ್ಶ ವಿಕಾಸಕ್ಕೆ ನೆರವಾಗುವ ಜೀವಕೋಶಗಳನ್ನು ರಿಪೇರಿ ಮಾಡುವಲ್ಲಿ ಹಿಮೋಗ್ಲೋಬಿನ್ ಪ್ರಧಾನ ಪಾತ್ರ ವಹಿಸುತ್ತದೆ.
ಕಬ್ಬಿಣಾಂಶದ ಕೊರತೆಯಿಂದಾಗಿ ಕೂದಲು ಉದುರುವಿಕೆ ಹೆಚ್ಚಾಗಿ, ಕೂದಲು ಬೆಳೆಯುವಿಕೆ ನಿಂತೇಹೋಗುತ್ತದೆ. ಇದರಿಂದ ಗಂಡಸು ಹೆಂಗಸರಿಗೆ ಬಾಲ್ಡ್ ನೆಸ್ ಬಲು ಬೇಗ ಆವರಿಸಿ, ಹೆಚ್ಚುತ್ತದೆ. ದೇಹದಲ್ಲಿ ಕಬ್ಬಿಣಾಂಶದ ಲೆವೆಲ್ ಕಾಪಾಡಿಕೊಳ್ಳಲು ಹಸಿರು ತರಕಾರಿ, ಸೊಪ್ಪು, ಬ್ಲೋಕ್ಲಿ, ಗೋಡಂಬಿ, ದ್ರಾಕ್ಷಿ, ಬೇಳೆಕಾಳುಗಳನ್ನು ನಿಯಮಿತವಾಗಿ ಸೇವಿಸಬೇಕು. ನಿಮ್ಮ ದೇಹದಲ್ಲಿ ಇದರ ಲೆವೆವ್ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಕುಟುಂಬ ವೈದ್ಯರನ್ನು ಆಗಾಗ ಸಂಪರ್ಕಿಸಿ.
ಕೂದಲಿಗೆ ಝಿಂಕ್ ಕೊರತೆ
ಝಿಂಕ್ ನ ಕೊರತೆಯಿಂದ ಕೂದಲಿನ ರೋಮರಂಧ್ರಗಳ ಪ್ರೋಟೀನ್ ಸಂರಚನೆ ಪ್ರಭಾವಿತಗೊಳ್ಳುತ್ತದೆ, ಇದು ಕೂದಲನ್ನು ಸಶಕ್ತಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ಹಾರ್ಮೋನ್ ಬ್ಯಾಲೆನ್ಸ್ ಗೂ ಪೂರಕ, ಹಾರ್ಮೋನ್ ಇಂಬ್ಯಾಲೆನ್ಸ್ ಆದಾಗ, ಕೂದಲು ಉದುರುವಿಕೆ ಮಾಮೂಲಿ ಸಮಸ್ಯೆ ಆಗುತ್ತದೆ.
ವಿಟಮಿನ್ Bಯ ಕೊರತೆ
ಇದರ ಕೊರತೆಯಿಂದಾಗಿ ಕೂದಲು ಸೀಳುತುದಿ ಸಮಸ್ಯೆಗೆ ಈಡಾಗುತ್ತದೆ, ತೀರಾ ಶುಷ್ಕವಾಗುತ್ತದೆ. ದೇಹದಲ್ಲಿ ವಿಟಮಿನ್ Bಯ ಇದ್ದಾಗ ಮಾತ್ರ ಕಬ್ಬಿಣಾಂಶವನ್ನು ದೇಹ ಗ್ರಹಿಸಲು ಸಾಧ್ಯ. ಹೀಗಾಗಿ ಇದರ ಕೊರತೆ ಆದಾಗ, ಸಹಜವಾಗಿ ಕಬ್ಬಿಣಾಂಶ ಕಡಿಮೆ ಆಗುತ್ತದೆ. ಇದರಿಂದಾಗಿ ಕೂದಲು ತುಂಡರಿಸುವುದು, ಉದುರುವುದು ಆಗುತ್ತದೆ.
ನಮ್ಮ ಆಹಾರದಲ್ಲಿ ವಿಟಮಿನ್, ಐರನ್, ಝಿಂಕ್ ಗಳ ಕೊರತೆಯಿಂದಾಗಿ ಅಕ್ಯೂಟ್ ಟೆಲೋಜೆನ್ ಆ್ಯಪ್ಲವಿಯಂ ಮತ್ತು ಬೇಗ ಬಿಳಿಗೂದಲ ಕಾಟ ಹೆಚ್ಚುತ್ತದೆ. ಕೂದಲನ್ನು ತೊಳೆದಾಗ, ಬಾಚಿದಾಗ ಅದಾಗಿ ಅದು ಉದುರ ತೊಡಗುತ್ತದೆ. ಇದೇ ಮೇಲಿನ ರೋಗದ ಸಂಕೇತ. ಹೀಗಾಗಿ ಕಾಂತಿಯುತ ಚರ್ಮ ಮತ್ತು ಸ್ವಸ್ಥ ಕೂದಲಿಗಾಗಿ ಸದಾ ಪೌಷ್ಟಿಕ ಆಹಾರವನ್ನೇ ಸೇವಿಸುತ್ತಿರಬೇಕು.
– ಡಾ. ಮೀರಾ ನಾಯಕ್