ಶರತ್ ಚಂದ್ರ

ಉಪೇಂದ್ರ ,ನಾಗಣ್ಣ ಮತ್ತು ಸೂರಪ್ಪ ಬಾಬು ಕಾಂಬಿನೇಶನ್ ನಲ್ಲಿ ಭಾರ್ಗವ ಎಂಬ ಹೊಸ ಚಿತ್ರ ಅನೌನ್ಸ್ ಆಗಿರೋದು ನಿಮಗೆಲ್ಲ ಗೊತ್ತಿದೆ. ಈ ಚಿತ್ರದ ಮುಹೂರ್ತ ಸದ್ದಿಲ್ಲದೇ ಸರಳವಾಗಿ ಹಲಸೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆದಿದೆ.

ಈ ಹಿಂದೆ ಉಪೇಂದ್ರ ಜೊತೆ ಕುಟುಂಬ, ಗೌರಮ್ಮ ಮತ್ತು ಗೋಕರ್ಣದಂತಹ ಹಿಟ್ ಚಿತ್ರಗಳನ್ನು ನೀಡಿರುವ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. UI ಚಿತ್ರದ ಯಶಸ್ಸಿನ ನಂತರ ಉಪೇಂದ್ರ ನಟಿಸುತ್ತಿರುವ ಭಾರ್ಗವ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪೇಂದ್ರ ಕೂಡ ಭಾಗಿಯಾಗಿದ್ದರು.

1000556641

ಚಿತ್ರದ ನಾಯಕಿಯಾಗಿ, ‘ನಮ್ಮನೆ ಯುವರಾಣಿ’ ಧಾರವಾಹಿ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಹಾಗೂ ಕಳೆದ ವರ್ಷ ಬಿಡುಗಡೆಯಾದ’ ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಮನೋಜ್ಞ ವಾಗಿ ಅಭಿನಯಿಸಿದ,ಅಂಕಿತ ಅಮರ್ ಆಯ್ಕೆಯಾಗಿದ್ದಾರೆ.

1000556647

ನಾಗಣ್ಣ ನಿರ್ದೇಶಿಸಿದ ವಿಷ್ಣುವರ್ಧನ್ ನಾಯಕ ನಟನಾಗಿ ನಟಿಸಿದ್ದ ಸೂರಪ್ಪ ಚಿತ್ರವನ್ನು ಎಂ ಬಿ ಬಾಬು ನಿರ್ಮಿಸಿದ್ದರು. ಆ ಚಿತ್ರದ ನಂತರ ಸೂರಪ್ಪ ಬಾಬು ಎಂದೆ ಜನಪ್ರಿಯವಾಗಿರುವ ಎಂ. ಬಿ.. ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ತಿಂಗಳ 23ರಿಂದ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ಚಿತ್ರತಂಡ ನೀಡಲಿದೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ