ತಮಿಳು, ತೆಲುಗು, ಮಲೆಯಾಳಂನಲ್ಲಿ ಮಿಂಚಿದ ಅಮಾ ಪಾಲ್‌, ಅಜಯ್‌ ದೇವ್ ‌ಗನ್‌ ನ `ಭೋಲಾ’ ಚಿತ್ರದಿಂದ ಬಾಲಿವುಡ್‌ ಗೆ ಎಂಟ್ರಿ ಪಡೆಯುತ್ತಿದ್ದಾಳೆ. ಈ ಚಿತ್ರದ ಟ್ರೇಲರ್‌ ನಲ್ಲಿ ಸರಳವಾಗಿರುವ ಅಮಾಯ್ರಾ, ನಿಜ ಜೀನದಲ್ಲಿ ಮಹಾ ಬೋಲ್ಡ್! ಅಂದಹಾಗೆ `ಭೋಲಾ’ ದಕ್ಷಿಣದ `ಕ್ಯಾಥಿ’ ಚಿತ್ರದ ರೀಮೇಕ್‌. ಅಮಾಯ್ರಾಳ ಚಿತ್ರಗಳು OTT ಯಲ್ಲಿ ಸೈ ಎನಿಸಿವೆ. ಇವಳ ಫ್ಯಾನ್ಸ್ ಇವಳ ಚಿತ್ರಗಳಿಗಿಂತ ಇವಳ ಬೋಲ್ಡ್ ನೆಸ್‌ ಗೇ ಹೆಚ್ಚು ಫಿದಾ ಆಗುತ್ತಾರೆ. FB‌ ಮತ್ತಿತರ ಕಡೆ ಇವಳ ಬಿಕಿನಿ ಫೋಟೋ ಮಹಾ ವೈರಲ್ ಆಗಿದ್ದು, ಪಡ್ಡೆಗಳು ನಿದ್ದೆ ಕೆಡಿಸಿಕೊಂಡಿವೆ. ಯಾವ ಚಿತ್ರಕ್ಕೆ ಎಷ್ಟು ಬೋಲ್ಡ್ ನೆಸ್‌ ಬೇಕೋ ಅಷ್ಟನ್ನೇ ಪ್ರದರ್ಶಿಸುವುದು ಇವಳ ಪ್ಲಸ್ ಪಾಯಿಂಟ್‌. ಕೀಪ್‌ ಇಟ್‌ ಅಪ್‌ ಅಮಾಯ್ರಾ!

Figure_Par_Dhyan_De_Rahi_Hain_Ananya

ಫಿಗರ್ನತ್ತ ಕಾಳಜಿ ವಹಿಸುತ್ತಿರುವ ಅನನ್ಯಾ

ತನ್ನ ಚಿತ್ರಗಳಿಗಿಂತ ಅಧಿಕ ತನ್ನ ಫಿಗರ್‌ ಮೇಂಟೆನೆನ್ಸ್ ಕಡೆ ಗಮನ ಹರಿಸುತ್ತಿದ್ದಾಳಾ ಅನನ್ಯಾ ಪಾಂಡೆ? ಈ ಕಾರಣದಿಂದಲೇ ಇತ್ತೀಚೆಗೆ ಇವಳ ಯಾವ ಹೊಸ ಚಿತ್ರಗಳ ಬಗ್ಗೆಯೂ ಕೇಳಿಬರುತ್ತಿಲ್ಲ. ಇವಳದೇ ವಯಸ್ಸಿನವರಾದ ಸಾರಾ ಅಲೀಖಾನ್‌ ಮತ್ತು ಜಾಹ್ನವಿ ಕಪೂರ್‌ ಅಂತೂ ಇಂತೂ ಚಾನ್ಸ್ ಗಿಟ್ಟಿಸುತ್ತಲೇ ಇದ್ದಾರೆ. ಆದರೆ ಅನನ್ಯಾ ಬಹು ದಿನಗಳಿಂದ ಬೆಳ್ಳಿ ಪರದೆಯಿಂದ ಕಾಣೆಯಾಗಿದ್ದಾಳೆ. ಸ್ವಲ್ಪ ಹುಷಾರಾಗಿರಮ್ಮ ಅನನ್ಯಾ, 2-3 ತಿಂಗಳಲ್ಲಿ ಹೇಗೋ ಫಿಗರ್‌ ಸರಿಪಡಿಸಿಕೊಳ್ಳಬಹುದು, ಆದರೆ ಒಮ್ಮೆ ಕೆರಿಯರ್‌ ಹಾಳಾದರೆ ಅದನ್ನು ಸರಿಪಡಿಸಲು ಇಡೀ ಜೀವನ ಹೋರಾಡಬೇಕಾಗುತ್ತದೆ, ಎನ್ನುತ್ತಾರೆ ಹಿತೈಷಿಗಳು.

Offscreen_sab_off_hai

ಆಫ್ಸ್ಕ್ರೀನ್ಎಲ್ಲ ಆಫ್ನಾಜರುದ್ದೀನ್

ಸಿದ್ಧಿಕಿಯ ಖಾಸಗಿ ಜೀವನದಲ್ಲಿ ಇತ್ತೀಚೆಗೆ ಮನಃಕ್ಲೇಶ ಬಹಳ ಹೆಚ್ಚಾಗಿದೆ. ಪತ್ನಿ ಆಲಿಯಾ ಜೊತೆ ದಿನೇದಿನೇ ಹೊಸ ವಿವಾದಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಆಕೆ ಹೇಳಿದ್ದು ಎಂದರೆ, ನಾಜರ್ ನ ಮ್ಯಾನೇಜರ್‌ ತನ್ನ ಮಗಳ ಜೊತೆ ಬೇಕೆಂದೇ ಕುಚೇಷ್ಟೆ ಮಾಡುತ್ತಾನಂತೆ, ನಾಜರ್ ಅದಕ್ಕೆ ಆಕ್ಷೇಪಿಸುವುದಿಲ್ಲ ಅಂತ. ಅತ್ತ ನಾಜರ್ ನೀಡುವ ಸ್ಪಷ್ಟೀಕರಣ ಅಂದ್ರೆ, ಬೇಕೆಂದೇ ತನ್ನಿಂದ ಹೆಚ್ಚಿನ ಹಣ ಪೀಕಲು ಆಲಿಯಾ ಹೀಗೆ ಮಾಡ್ತಿದ್ದಾಳೆ ಅಂತ. ಇದರಲ್ಲಿ ಯಾರದು ನಿಜ, ಯಾರದು ಸುಳ್ಳು ಅಂತ ಈಗಲೇ ಹೇಳಲಿಕ್ಕಾಗದು. ಒಂದಂತೂ ಸ್ಪಷ್ಟ, ವೈವಾಹಿಕ ಜೀವನದಲ್ಲಿ ಹುಳಿ ತೇಲಿದಾಗ, ಎಚ್ಚೆತ್ತು ಪರಸ್ಪರ ಚರ್ಚಿಸಿ ನೇರ ದಾರಿಗೆ ಮುಂದಿನ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹೀಗೆ ಎಲ್ಲರ ಮುಂದೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.

Flop_Filmo_Ka_Adda_Netflix

ಫ್ಲಾಪ್ಚಿತ್ರಗಳ ಅಡ್ಡಾ ಆಗುತ್ತಿದೆಯೇ ನೆಟ್ಫ್ಲಿಕ್ಸ್?

OTT ಪ್ಲಾಟ್‌ ಫಾರ್ಮ್ಸ್ ನ ಸ್ಥಿತಿ ಕಳೆದ ಕೆಲವು ದಿನಗಳಿಂದ ಕುಂಟುತ್ತಾ ಸಾಗಿದೆ. ಕೊರೋನಾ ಕಾಲದಲ್ಲಿ ಆಹಾ ಓಹೋ ಎಂದು ಮಿಂಚುತ್ತಿದ್ದ OTT ಯಿಂದ ವೀಕ್ಷಕರು ಈಗ ದೂರ ಸರಿಯುವಂತಾಗಿದೆ. ಇದಕ್ಕೆ ಕಾರಣ ಇಲ್ಲಿನ ಚಿತ್ರಗಳು ಬರೀ ಜೊಳ್ಳಾಗಿರುವುದು. ಈ ನಿಟ್ಟಿನಲ್ಲಿ ನೆಟ್‌ ಫ್ಲಿಕ್ಸ್ ನಂ.1 ಡಸ್ಟ್ ಬಿನ್ ಎನಿಸಿದೆ. ಇಲ್ಲಿ ಬರುವುದೆಲ್ಲ ಡಬ್ಬಾ ಫ್ಲಾಪ್‌ ಚಿತ್ರಗಳು ಎಂದಾಗಿದೆ. ಕಂಟೆಂಟ್‌ ನಲ್ಲಿ ವೆರೈಟಿ ಇರಲಿ ಎಂಬ ದೃಷ್ಟಿಯಲ್ಲಿ ನೆಟ್‌ ಫ್ಲಿಕ್ಸ್ ಇದೀಗ ಒಂದೇ ಸಲ 2 ದೋಣಿಯಲ್ಲಲ್ಲ, ಹಲವಾರು ದೋಣಿಗಳಲ್ಲಿ ಏಕಕಾಲಕ್ಕೆ ಪಾದ ಊರುವ ಹುನ್ನಾರ ನಡೆಸಿದೆ. ಇದರ ಮೇಲಿನ ಒತ್ತಡವೇ ಹಾಗಿದೆ. ಸಬ್‌ ಸ್ಕ್ರಿಪ್ಶನ್‌ ಹೆಸರಲ್ಲಿ ಇರುವ ವೀಕ್ಷಕರಿಂದ ದೊಡ್ಡ ಮೊತ್ತ ಕೀಳುತ್ತಿದ್ದಾರೆ, ಬದಲಿಗೆ ಕೆಲವೊಂದಿಷ್ಟು ವೆಬ್‌ ಸೀರೀಸ್‌ ಬಿಟ್ಟರೆ ಹೇಳಿಕೊಳ್ಳುವಂಥದ್ದೇನೂ ಇಲ್ಲ. ನಿಧಾನವಾಗಿ ಈ ಪ್ಲಾಟ್‌ ಫಾರ್ವ್‌ ಡಾಕ್ಯುಮೆಂಟರಿ, ಕ್ರೈಂ ಶೋಸ್‌, ಲೈಫ್‌ ಇತ್ಯಾದಿಗಳ ಖಿಚಡಿ ಆಗಿ ಕೂತಿದೆ. ಇದರ ಜೊತೆ ಡಬ್ಬಾ ಫ್ಲಾಪ್‌ ಚಿತ್ರಗಳ ಸುರಿಮಳೆ ಬೇರೆ! ಇದರ ದೋಣಿ ಮುಳುಗಿದಂತೆಯೇ ಸರಿ. ಇಷ್ಟೆಲ್ಲ ಆದಮೇಲೆ ಇದು ಯಾವಾಗ ಎತ್ತಂಗಡಿ ಆದೀತೋ ಹೇಳಲಾಗದು.

Shahnaz_Ka_bold_Look-(1)

ಶಹನಾಜ್ ಬೋಲ್ಡ್ ಲುಕ್ಸ್

`ಬಿಗ್‌ ಬಾಸ್‌’ನಿಂದ ಬಿಗ್‌ ಫೇಮ್ ಗಿಟ್ಟಿಸಿದ ಶಹನಾಜ್‌ ಗಿಲ್‌, ಮೊದಲೆಲ್ಲ ತನ್ನ ಕ್ಯೂಟ್‌ ನೆಸ್‌ ನಿಂದಾಗಿ ಶೈನ್‌ ಆಗುತ್ತಿದ್ದಳು. ಆದರೆ ಇತ್ತೀಚೆಗೆ ಈಕೆ ತನ್ನ ಅತಿ ಬೋಲ್ಡ್ ಫೋಟೋಗಳನ್ನು FB ‌ನಲ್ಲಿ ಹಂಚಿಕೊಳ್ಳ ತೊಡಗಿದಾಗ, ಎಲ್ಲರೂ ಇದೇನಪ್ಪ ಎಂದು ಹುಬ್ಬೇರಿಸಿದರು. ಇದೇನಮ್ಮ ಶಹನಾಜ್‌, ಸಲ್ಲುವ ನಿನ್ನ ಜೊತೆ ಒಂದು ಚಿತ್ರ ಮಾಡುವ ತಯಾರಿಯಲ್ಲಿದ್ದಾನೆ ಎಂಬ ವದಂತಿಯನ್ನು ನಿಜವಾಗಿಸಲು ಹೀಗೆಲ್ಲ ಆಡ್ತಿದ್ದೀಯಾ ಎನ್ನುತ್ತಾರೆ ಹಿತೈಷಿಗಳು. ಕೈಗೆಟುಕದ ದ್ರಾಕ್ಷಿ ಬಲು ಹುಳಿ, ಎಂದು ಇವಳು ಘೋಷಿಸಲು ಇಂಥ ಏನೋ ಒಂದು ಪ್ರಯತ್ನ ಮಾಡುತ್ತಿರಬೇಕಲ್ಲವೇ……?

Mere_Pet_Par_Laat_Kyo_Maar_Rahe

ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿರುವವರು ಯಾರು

`ತೂ ಝೂಠಿ ಮೈ ಮಕ್ಕಾರ್‌’ ಚಿತ್ರದ ಪ್ರಮೋಶನ್‌ ನಲ್ಲಿ ಬಿಝಿ ಆಗಿರುವ ನಟ ರಣಬೀರ್‌ ಕಪೂರ್‌ ನನ್ನು ಇತ್ತೀಚಿನ ಬಾಯ್‌ ಕಾಟ್ ಟ್ರೆಂಡ್‌ ಬಗ್ಗೆ ವಿಚಾರಿಸಿದಾಗ, ಆತ ಅತಿ ಗಂಭೀರವಾಗಿ ತನ್ನ ಭಾವನೆ ತೋಡಿಕೊಂಡಿದ್ದು ಹೀಗೆ. ಹೀಗೆ ಕಮೆಂಟ್‌ ಮಾಡುವ ಮಂದಿ ಕೇವಲ ಒಂದಿಬ್ಬರು ನಟರನ್ನು ಮಾತ್ರ ಟಾರ್ಗೆಟ್‌ ಮಾಡಿಕೊಳ್ಳದೆ, ಆಯಾ ಚಿತ್ರಗಳನ್ನು ಪೂರೈಸಲು ಹಗಲೂ ರಾತ್ರಿ ದುಡಿಯುವ ಟೆಕ್ನಿಕ್‌ ತಂಡದವರ ಬಗ್ಗೆಯೂ ಯೋಚಿಸಬೇಕು. ದಿನಗೂಲಿ ಪಡೆಯುವ ಇಂಥ ನೌಕರರ ಹೊಟ್ಟೆ ಮೇಲೆ ಹೊಡೆಯುವುದು ಸರಿಯೇ? ಎನ್ನುತ್ತಾನೆ. ಬಾಯ್‌ ಕಾಟ್‌ ಆರ್ಮಿ ಲಂಗುಲಗಾಮಿಲ್ಲದೆ ಸವಾರಿ ಹೊರಟಿದೆ, ಅದನ್ನು ನಿಯಂತ್ರಿಸುತ್ತಿರುವವರು ಯಾರು ಎಂಬುದೂ ತಿಳಿಯುತ್ತಿಲ್ಲ ಎಂದು ಬಹುಶಃ ಈತನಿಗೆ  ತಿಳಿಯದು. ಕಂಟ್ರೋಲ್ ಅಲ್ಲ ಸರ್ವಾಧಿಕಾರಿ ಧೋರಣೆ ಎಂದೇ ಹೇಳಬೇಕು. ದೇಶ, ಸಂಸ್ಕೃತಿ ಹೆಸರಿನಲ್ಲಿ ಈ ಕಾಣದ ಕೈಗಳು ಎಲ್ಲಿ ಬೇಕಾದರೂ ಬಾಲ ಆಡಿಸುವುದು ತಮ್ಮ ಹಕ್ಕು ಎಂದೇ ತಿಳಿದಂತಿದೆ.

Kya_Chamkega_Vinali_Ka_Sitara

ವಿನಾಲಿಯ ಅದೃಷ್ಟ ಮುಂದೆ ಬೆಳಗಲಿದೆಯೇ?

ದಬಂಗ್‌ ಖಾನ್‌ ನ ಮುಂದಿನ ಚಿತ್ರ `ಕಿಸೀ ಕಾ ಭಾಯಿ ಕಿಸೀ ಕಾ ಜಾನ್‌’ನಿಂದ ವಿನಾಲಿ ಭಟ್ನಾಗರ್‌ ಬಾಲಿವುಡ್‌ ಗೆ ವಾಪಸ್ಸು ಮರಳುತ್ತಿದ್ದಾಳೆ. ಈಗಾಗಲೇ ಈಕೆ ಬಾಲಿವುಡ್‌ ಗೆ ಬಂದು ಹೋದಳು. ಸರಿಯಾದ ಅರ್ಥದಲ್ಲಿ ಅವಳಿಗೆ ಉತ್ತಮ ಬ್ರೇಕ್‌ ಸಿಕ್ಕಿದ್ದೇ ಈ ಚಿತ್ರದಿಂದ. ಇದಾದ ಮೇಲೆ ಮತ್ತೆ ಇವಳು ಬೆಳ್ಳಿ ತೆರೆಯಿಂದ ಬ್ರೇಕ್‌ ಪಡೆಯುವಂತೆ ಆಗಬಾರದು. ಹಿಂದೆಯೂ ಸಹ ಈ ಬ್ಯಾಡ್‌ ಬಾಯ್‌ ಜೊತೆ ಮುಖ್ಯ ಪಾತ್ರ ಹಂಚಿಕೊಂಡ ಮೊದಲಿಗರು ಹೇಳ ಹೆಸರಿಲ್ಲದೆ ಹೋಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ವಿನಾಲಿ, ಸ್ವಲ್ಪ ಹುಷಾರಾಗಿರಮ್ಮ ಎಂದು ಹಿತೈಷಿಗಳು ಹಾರೈಸುತ್ತಾರೆ. ಮುಖ್ಯವಾಗಿ ಯಾವುದೇ ಕ್ಯಾಂಪಿನ ಭಾಗ ಆಗಬಾರದು, ಇಲ್ಲದಿದ್ದರೆ, ಬಂದ ದಾರಿಗೆ ಸುಂಕವಿಲ್ಲ ಎನ್ನಬೇಕಾದೀತು.

Hasane_Ke_Lie_Jhooth_Kyo

ನಗಿಸಲು ಸುಳ್ಳಿನ ಆಸರೆ ಏಕೆ?

`ಬ್ರಹ್ಮಾಸ್ತ್ರ’ ಚಿತ್ರದಿಂದ ರಣಬೀರ್‌ ಕಪೂರ್‌ ನ ಸಹನಟನಾಗಿ ಮಿಂಚಿದ ಸೌರ್‌ ಗುರ್ಜಾರ್‌, ಕಪಿಲ್ ಶರ್ಮ ತಂಡದ ಮೇಲೆ ಆರೋಪದ ಗೂಬೆ ಕೂರಿಸಿದ್ದಾನೆ. ಕಮೆಂಟ್‌ ಸೆಕ್ಷನ್‌ ನಲ್ಲಿ ಈ ತಂಡ ಜನರನ್ನು ನಗಿಸಲೆಂದೇ, ಸೆಲೆಬ್ರಿಟೀಸ್‌ ಪೋಸ್ಟ್ ಗೆ ಬೇಕೆಂದೇ ಸುಳ್ಳು ಸುಳ್ಳೇ ಕಮೆಂಟ್‌ ತೋರಿಸಿ ಚಪ್ಪಾಳೆ ಗಿಟ್ಟಿಸುವುದು ಯಾಕೆ ಎಂದು ವ್ಯಂಗ್ಯವಾಡಿದ್ದಾನೆ. ಕಪಿಲ್ ‌ತಂಡ ಈವರೆಗೂ ಇದಕ್ಕೇನೂ ಉತ್ತರಿಸಿಲ್ಲ. ಒಂದು ಪಕ್ಷ ಇದು ನಿಜ ಆಗಿದ್ದರೆ, ಅದು ಈ ಶೋದ ಕ್ರೆಡಿಬಿಲಿಟಿ ಕುರಿತು ಸಂದೇಹ ಮೂಡಿಸುತ್ತದೆ. ಒಟ್ಟಾರೆ ಕಪಿಲ್ ‌ನನ್ನು ವಿವಾದಗಳು ಎಂದೂ ಬೆನ್ನು ಬಿಡಲಾರ ಎಂದು ಮತ್ತೆ ಸಾಬೀತಾಗಿದೆ. ಒಮ್ಮೆ ಅವನ ತಂಡದ ಸದಸ್ಯರು ಇವನ ಸಹಾಸವೇ ಬೇಡ ಎಂದು ಬಿಟ್ಟು ಹೊರಟರೆ, ಮತ್ತೊಮ್ಮೆ ಈತ ಅಂಥವರ ಮೇಲೆ ಕೈ ಮಾಡಿ ಕೆಟ್ಟ ಹೆಸರು ಪಡೆಯುತ್ತಾನೆ. ಯಾಕೋ ಈತನ ಟೈಂ ಚೆನ್ನಾಗಿಲ್ಲ!

Corona_Kaal_Me_Le_Jaegi_Ye_Bheed

ಕೊರೋನಾ ಕಾಲಕ್ಕೆ ಕೊಂಡೊಯ್ಯಲಿರುವ ಭೀಡ್

ರಾಜ್‌ ಕುಮಾರ್‌ ರಾವ್‌, ಪಂಕಜ್‌ ಕಪೂರ್‌, ಭೂಮೀ ಪೆಡ್ನೇಕರ್‌ ರಂಥ ಘಟಾನುಘಟಿಗಳ ತಂಡವಿರುವ ಚಿತ್ರವೇ `ಭೀಡ್‌.’ ಈ ಚಿತ್ರ ಕೊರೋನಾ ಕಾಲದ ಲಾಕ್‌ ಡೌನ್‌ ನ ಅಷ್ಟಕಷ್ಟಗಳ ಕುರಿತು ಹೇಳುತ್ತದೆ. ಅಂಥವರ ನೋವು ನಿವಾರಿಸುವ ಒಬ್ಬ ಹೀರೋ ಸುತ್ತಾ ಈ ಚಿತ್ರ ಓಡುತ್ತದೆ. ಟ್ರೇಲರ್‌ ನಲ್ಲಿ ಆ ಸಮಯದಲ್ಲಿ ಇದ್ದಂಥ ಬಾರ್ಡರ್ಸ್‌ ಮಿತಿ ಎದ್ದು ಕಾಣುತ್ತದೆ. ಜನ ಹೇಗೆ ಧರ್ಮ, ಜಾತಿ ವಿಷಯವಾಗಿ ಹಂಚಿಹೋಗಿದ್ದರು ಮುಂತಾದ ಎಲ್ಲಾ ಸಮಸ್ಯೆಗಳೂ ಮೇಳೈಸಿ ಈ ಚಿತ್ರ ವೀಕ್ಷಕರ ಮೇಲೆ ಉತ್ತಮ ಪ್ರಭಾವ ಬೀರಲಿದೆ. ಆ ಕಾಲದಲ್ಲಿ ಸರ್ಕಾರ ಹೇಗೆ ನಿಸ್ಸಹಾಯಕವಾಗಿತ್ತು ಎಂದೂ ತೋರಿಸಲಾಗಿದೆ. ಚಿತ್ರ ಆರಂಭವಾಗುವುದೇ ಪ್ರಧಾನಿಯ ಲಾಕ್‌ ಡೌನ್‌ ಘೋಷಣೆಯಿಂದ. ಈ ಚಿತ್ರಕ್ಕೆ ಬಿಜೆಪಿ ಭಂಟರ ವಕ್ರನೋಟ ತಗುಲದಿದ್ದರೆ ಸರಿ.

Shanaya_ka_Bedhadak_Debue

ಶನಾಯಾಳ ಗ್ರಾಂಡ್ಗ್ಲಾಮ್ ಎಂಟ್ರಿ ಯಾವಾಗ?

ಸಂಜಯ್‌ ಕಪೂರ್‌ ನ ಮಗಳಾದ ಶನಾಯಾ ಕಪೂರ್‌ ಯಾವಾಗ ಬೆಳ್ಳಿ ತೆರೆಗೆ ಗ್ರಾಂಡ್‌ ಗ್ಲಾಮ್ ಎಂಟ್ರಿ ನೀಡಲಿದ್ದಾಳೆ ಎಂದು ಅವಳ ಪಡ್ಡೆ ಫ್ಯಾನ್ಸ್ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈಕೆ ಯಾವಾಗ ತನ್ನ `ಬೇಧ ಡಕ್‌’ (ನಿರ್ಭಿಡೆ) ಡೆಬ್ಯು ಕೊಡಲಿದ್ದಾಳೋ ಯಾರಿಗೂ ಗೊತ್ತಿಲ್ಲ. `ಬೇಧ ಡಕ್‌’ ಚಿತ್ರದ ಶೂಟಿಂಗ್‌ ಇನ್ನೂ ಶುರುವಾಗಿಲ್ಲ, ಆದರೆ ಶನಾಯಾ ಈಗಾಗಲೇ ಸ್ಟಾರ್‌ ಗಿರಿ ಗಿಟ್ಟಿಸಿದ್ದಾಳೆ. ಒಮ್ಮೆ ಅವಳ ಸ್ಟಾರ್‌ ಲುಕ್ಸ್ ಗ್ಲಾಮರಸ್‌ ಆಗಿ ಮಿಂಚಿದರೆ, ಮತ್ತೊಮ್ಮೆ ಬಿಕಿನಿಧಾರಿಯಾಗಿ ಎಲ್ಲೆಲ್ಲೂ ಮೆರೆಯುತ್ತಿದ್ದಾಳೆ. ಇವಳ ಗೆಳತಿಯರಾದ ಜಾಹ್ನವಿ, ಅನನ್ಯಾ ಪಾಂಡೆ ಈಗಾಗಲೇ ಸ್ಟಾರ್‌ ಗಳಾಗಿದ್ದಾರೆ. ಇದೀಗ ಈ ಸ್ಟಾರ್ ಪುತ್ರಿಯ ಭವಿಷ್ಯ ಹೇಗೋ ಏನೋ…. ಈ ಚಿತ್ರದ ಬಿಡುಗಡೆ ನಂತರವೇ ಅದು ತಿಳಿಯಬೇಕು.

Kya_Khatm_Hua_Khiladi_Ka_Khel

ಖಿಲಾಡಿಯ ಕಿಲಾಡಿತನ ಮುಗಿದು ಹೋಯ್ತೆ?

ಮೊದಲು ಖಾನ್ಸ್, ನಂತರ ಕುಮಾರ್ಸ್…… ಎಲ್ಲರ ಚಿತ್ರಗಳೂ ಬಾಕ್ಸ್ ಆಫೀಸಿನಲ್ಲಿ ಸಾಲು ಸಾಲಾಗಿ ನೆಲಕಚ್ಚುತ್ತಿವೆ. ಖಿಲಾಡಿ ಕುಮಾರ್‌ ಎಂದೇ ಖ್ಯಾತಿವೆತ್ತ ಅಕ್ಷಯ್‌ ಕುಮಾರ್‌ ನ 7-8 ಚಿತ್ರಗಳು ಸತತ ತೋಪಾದವು. ಇತ್ತೀಚೆಗೆ ಬಂದ `ಸೆಲ್ಛಿ’ ಚಿತ್ರ, ಕೇಳುವವರಿಲ್ಲದೆ ಮಖಾಡೆ ಮಲಗಿತು. ಈ ಚಿತ್ರದಿಂದ ಅಕ್ಷಯ್‌ ಹೆಸರಿನಲ್ಲಿ ತನ್ನ ಕೆರಿಯರ್‌ ಉನ್ನತಿಗೇರಬಹುದು ಎಂದು ಭ್ರಮಿಸಿದ್ದ ಇಮ್ರಾನ್‌ ಹಶ್ಮಿ, ಆಕಾಶ ನೋಡುತ್ತಾ ತಲೆ ಮೇಲೆ ಕೈ ಹೊತ್ತಿದ್ದಾನೆ. ಒಂದೇ ಸಲಕ್ಕೆ 3-4 ಚಿತ್ರಗಳಲ್ಲಿ ನಟಿಸುತ್ತಾ, ಕೈ ತುಂಬಾ ಹಣ ಬಾಚಬೇಕು ಎಂಬ ದುರಾಸೆಯ ಅಕ್ಷಯ್‌ ಇನ್ನಾದರೂ ಒಂದೇ ಪ್ರಾಜೆಕ್ಟ್ ಕುರಿತು ಗಂಭೀರವಾಗಿ ಗಮನ ಹರಿಸುವುದು ಲೇಸು. ಖಿಲಾಡಿ ಕುಮಾರ್‌, ನಿನ್ನ ಕಿಲಾಡಿತನ ಎಲ್ಲಿಗೆ ಹೋಯ್ತು ಎಂದು ಎಲ್ಲರೂ ಈಗ ವ್ಯಂಗ್ಯವಾಡುತ್ತಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ