ತಮಿಳು, ತೆಲುಗು, ಮಲೆಯಾಳಂನಲ್ಲಿ ಮಿಂಚಿದ ಅಮಾ ಪಾಲ್, ಅಜಯ್ ದೇವ್ ಗನ್ ನ `ಭೋಲಾ' ಚಿತ್ರದಿಂದ ಬಾಲಿವುಡ್ ಗೆ ಎಂಟ್ರಿ ಪಡೆಯುತ್ತಿದ್ದಾಳೆ. ಈ ಚಿತ್ರದ ಟ್ರೇಲರ್ ನಲ್ಲಿ ಸರಳವಾಗಿರುವ ಅಮಾಯ್ರಾ, ನಿಜ ಜೀನದಲ್ಲಿ ಮಹಾ ಬೋಲ್ಡ್! ಅಂದಹಾಗೆ `ಭೋಲಾ' ದಕ್ಷಿಣದ `ಕ್ಯಾಥಿ' ಚಿತ್ರದ ರೀಮೇಕ್. ಅಮಾಯ್ರಾಳ ಚಿತ್ರಗಳು OTT ಯಲ್ಲಿ ಸೈ ಎನಿಸಿವೆ. ಇವಳ ಫ್ಯಾನ್ಸ್ ಇವಳ ಚಿತ್ರಗಳಿಗಿಂತ ಇವಳ ಬೋಲ್ಡ್ ನೆಸ್ ಗೇ ಹೆಚ್ಚು ಫಿದಾ ಆಗುತ್ತಾರೆ. FB ಮತ್ತಿತರ ಕಡೆ ಇವಳ ಬಿಕಿನಿ ಫೋಟೋ ಮಹಾ ವೈರಲ್ ಆಗಿದ್ದು, ಪಡ್ಡೆಗಳು ನಿದ್ದೆ ಕೆಡಿಸಿಕೊಂಡಿವೆ. ಯಾವ ಚಿತ್ರಕ್ಕೆ ಎಷ್ಟು ಬೋಲ್ಡ್ ನೆಸ್ ಬೇಕೋ ಅಷ್ಟನ್ನೇ ಪ್ರದರ್ಶಿಸುವುದು ಇವಳ ಪ್ಲಸ್ ಪಾಯಿಂಟ್. ಕೀಪ್ ಇಟ್ ಅಪ್ ಅಮಾಯ್ರಾ!
ಫಿಗರ್ ನತ್ತ ಕಾಳಜಿ ವಹಿಸುತ್ತಿರುವ ಅನನ್ಯಾ
ತನ್ನ ಚಿತ್ರಗಳಿಗಿಂತ ಅಧಿಕ ತನ್ನ ಫಿಗರ್ ಮೇಂಟೆನೆನ್ಸ್ ಕಡೆ ಗಮನ ಹರಿಸುತ್ತಿದ್ದಾಳಾ ಅನನ್ಯಾ ಪಾಂಡೆ? ಈ ಕಾರಣದಿಂದಲೇ ಇತ್ತೀಚೆಗೆ ಇವಳ ಯಾವ ಹೊಸ ಚಿತ್ರಗಳ ಬಗ್ಗೆಯೂ ಕೇಳಿಬರುತ್ತಿಲ್ಲ. ಇವಳದೇ ವಯಸ್ಸಿನವರಾದ ಸಾರಾ ಅಲೀಖಾನ್ ಮತ್ತು ಜಾಹ್ನವಿ ಕಪೂರ್ ಅಂತೂ ಇಂತೂ ಚಾನ್ಸ್ ಗಿಟ್ಟಿಸುತ್ತಲೇ ಇದ್ದಾರೆ. ಆದರೆ ಅನನ್ಯಾ ಬಹು ದಿನಗಳಿಂದ ಬೆಳ್ಳಿ ಪರದೆಯಿಂದ ಕಾಣೆಯಾಗಿದ್ದಾಳೆ. ಸ್ವಲ್ಪ ಹುಷಾರಾಗಿರಮ್ಮ ಅನನ್ಯಾ, 2-3 ತಿಂಗಳಲ್ಲಿ ಹೇಗೋ ಫಿಗರ್ ಸರಿಪಡಿಸಿಕೊಳ್ಳಬಹುದು, ಆದರೆ ಒಮ್ಮೆ ಕೆರಿಯರ್ ಹಾಳಾದರೆ ಅದನ್ನು ಸರಿಪಡಿಸಲು ಇಡೀ ಜೀವನ ಹೋರಾಡಬೇಕಾಗುತ್ತದೆ, ಎನ್ನುತ್ತಾರೆ ಹಿತೈಷಿಗಳು.
ಆಫ್ ಸ್ಕ್ರೀನ್ ಎಲ್ಲ ಆಫ್ ನಾಜರುದ್ದೀನ್
ಸಿದ್ಧಿಕಿಯ ಖಾಸಗಿ ಜೀವನದಲ್ಲಿ ಇತ್ತೀಚೆಗೆ ಮನಃಕ್ಲೇಶ ಬಹಳ ಹೆಚ್ಚಾಗಿದೆ. ಪತ್ನಿ ಆಲಿಯಾ ಜೊತೆ ದಿನೇದಿನೇ ಹೊಸ ವಿವಾದಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಆಕೆ ಹೇಳಿದ್ದು ಎಂದರೆ, ನಾಜರ್ ನ ಮ್ಯಾನೇಜರ್ ತನ್ನ ಮಗಳ ಜೊತೆ ಬೇಕೆಂದೇ ಕುಚೇಷ್ಟೆ ಮಾಡುತ್ತಾನಂತೆ, ನಾಜರ್ ಅದಕ್ಕೆ ಆಕ್ಷೇಪಿಸುವುದಿಲ್ಲ ಅಂತ. ಅತ್ತ ನಾಜರ್ ನೀಡುವ ಸ್ಪಷ್ಟೀಕರಣ ಅಂದ್ರೆ, ಬೇಕೆಂದೇ ತನ್ನಿಂದ ಹೆಚ್ಚಿನ ಹಣ ಪೀಕಲು ಆಲಿಯಾ ಹೀಗೆ ಮಾಡ್ತಿದ್ದಾಳೆ ಅಂತ. ಇದರಲ್ಲಿ ಯಾರದು ನಿಜ, ಯಾರದು ಸುಳ್ಳು ಅಂತ ಈಗಲೇ ಹೇಳಲಿಕ್ಕಾಗದು. ಒಂದಂತೂ ಸ್ಪಷ್ಟ, ವೈವಾಹಿಕ ಜೀವನದಲ್ಲಿ ಹುಳಿ ತೇಲಿದಾಗ, ಎಚ್ಚೆತ್ತು ಪರಸ್ಪರ ಚರ್ಚಿಸಿ ನೇರ ದಾರಿಗೆ ಮುಂದಿನ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹೀಗೆ ಎಲ್ಲರ ಮುಂದೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.
ಫ್ಲಾಪ್ ಚಿತ್ರಗಳ ಅಡ್ಡಾ ಆಗುತ್ತಿದೆಯೇ ನೆಟ್ ಫ್ಲಿಕ್ಸ್?
OTT ಪ್ಲಾಟ್ ಫಾರ್ಮ್ಸ್ ನ ಸ್ಥಿತಿ ಕಳೆದ ಕೆಲವು ದಿನಗಳಿಂದ ಕುಂಟುತ್ತಾ ಸಾಗಿದೆ. ಕೊರೋನಾ ಕಾಲದಲ್ಲಿ ಆಹಾ ಓಹೋ ಎಂದು ಮಿಂಚುತ್ತಿದ್ದ OTT ಯಿಂದ ವೀಕ್ಷಕರು ಈಗ ದೂರ ಸರಿಯುವಂತಾಗಿದೆ. ಇದಕ್ಕೆ ಕಾರಣ ಇಲ್ಲಿನ ಚಿತ್ರಗಳು ಬರೀ ಜೊಳ್ಳಾಗಿರುವುದು. ಈ ನಿಟ್ಟಿನಲ್ಲಿ ನೆಟ್ ಫ್ಲಿಕ್ಸ್ ನಂ.1 ಡಸ್ಟ್ ಬಿನ್ ಎನಿಸಿದೆ. ಇಲ್ಲಿ ಬರುವುದೆಲ್ಲ ಡಬ್ಬಾ ಫ್ಲಾಪ್ ಚಿತ್ರಗಳು ಎಂದಾಗಿದೆ. ಕಂಟೆಂಟ್ ನಲ್ಲಿ ವೆರೈಟಿ ಇರಲಿ ಎಂಬ ದೃಷ್ಟಿಯಲ್ಲಿ ನೆಟ್ ಫ್ಲಿಕ್ಸ್ ಇದೀಗ ಒಂದೇ ಸಲ 2 ದೋಣಿಯಲ್ಲಲ್ಲ, ಹಲವಾರು ದೋಣಿಗಳಲ್ಲಿ ಏಕಕಾಲಕ್ಕೆ ಪಾದ ಊರುವ ಹುನ್ನಾರ ನಡೆಸಿದೆ. ಇದರ ಮೇಲಿನ ಒತ್ತಡವೇ ಹಾಗಿದೆ. ಸಬ್ ಸ್ಕ್ರಿಪ್ಶನ್ ಹೆಸರಲ್ಲಿ ಇರುವ ವೀಕ್ಷಕರಿಂದ ದೊಡ್ಡ ಮೊತ್ತ ಕೀಳುತ್ತಿದ್ದಾರೆ, ಬದಲಿಗೆ ಕೆಲವೊಂದಿಷ್ಟು ವೆಬ್ ಸೀರೀಸ್ ಬಿಟ್ಟರೆ ಹೇಳಿಕೊಳ್ಳುವಂಥದ್ದೇನೂ ಇಲ್ಲ. ನಿಧಾನವಾಗಿ ಈ ಪ್ಲಾಟ್ ಫಾರ್ವ್ ಡಾಕ್ಯುಮೆಂಟರಿ, ಕ್ರೈಂ ಶೋಸ್, ಲೈಫ್ ಇತ್ಯಾದಿಗಳ ಖಿಚಡಿ ಆಗಿ ಕೂತಿದೆ. ಇದರ ಜೊತೆ ಡಬ್ಬಾ ಫ್ಲಾಪ್ ಚಿತ್ರಗಳ ಸುರಿಮಳೆ ಬೇರೆ! ಇದರ ದೋಣಿ ಮುಳುಗಿದಂತೆಯೇ ಸರಿ. ಇಷ್ಟೆಲ್ಲ ಆದಮೇಲೆ ಇದು ಯಾವಾಗ ಎತ್ತಂಗಡಿ ಆದೀತೋ ಹೇಳಲಾಗದು.