ಇತ್ತೀಚೆಗೆ `ದಿಲ್ ಸೇ’ ಚಿತ್ರದ ಸೂಪರ್ ಹಿಟ್ ಹಾಡು ಚೈಯಾ ಚೈಯಾ ಮತ್ತೆ ಚರ್ಚೆಯಲ್ಲಿದೆ. ಇದು ಮಲೈಕಾಳ ಹೆಚ್ಚಿರುವ ಗ್ಲಾಮರ್ ಕೋಶಂಟ್ ಗಾಗಿ ಅಲ್ಲ, ಬದಲಿಗೆ ರವೀನಾ ಟಂಡನ್ ಅಂದ ಕಾಲತ್ತಿಲೆ ಈ ಹಾಡಿಗೆ ಕುಣಿಯಲಾರೆ ಎಂದು ರಿಜೆಕ್ಟ್ ಮಾಡಿರದ್ದಿದರೆ, ಬಹುಶಃ ಮಲೈಕಾ ಇಂದು ಐಟಂ ಕ್ವೀನ್‌ಪಟ್ಟ ಗಿಟ್ಟಿಸಿರುತ್ತಿರಲಿಲ್ಲವೇ ಏನೋ…. ಈ ವಿಷಯವನ್ನು ಹೊರಗೆಡಹಿದ ರವೀನಾ, ತನಗೆ ಈ ಹಾಡಿಗಾಗಿ ಮೊದಲ ಆಫರ್ ಬಂದಾಗ ಏನೋ ಅಡಚಣೆ ಕಾರಣ ತಾನು ಅದನ್ನು ರಿಜೆಕ್ಟ್ ಮಾಡಿದ್ದೆ ಎಂದು ಸ್ಪಷ್ಟಪಡಿಸಿದಳು. ಅದಾದ ಮೇಲೆಯೇ ಆ ಹಾಡು ಮಲೈಕಾಳ ಪಾಲಾಗಿದ್ದಂತೆ! ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಇದೇ ಸನ್ನಿವೇಶ ಹಿಂದೆ `ನಾಗರಹಾವು’ ಚಿತ್ರದ ಶೂಟಿಂಗ್ ನಲ್ಲಿ ನಿರ್ದೇಶಕ ಪುಟ್ಟಣ್ಣ ಕಲ್ಪನಾರಿಗೆ `ಕನ್ನಡ ನಾಡಿನ ವೀರ ರಮಣಿಯ….’ ಹಾಡಿನ ಓಬ್ವನ ಪಾತ್ರ ಆಫರ್ ಮಾಡಿದಾಗ, ತಾನು ಮಾರ್ಗರೇಟ್ ಪಾತ್ರ ಮಾತ್ರ ಮಾಡುವವಳು ಎಂದು ಆಕೆ ಹಿಂದೆ ಸರಿದಿದ್ದರು. ಅದೇ ಪಾತ್ರದಲ್ಲಿ ಮಿಂಚಿ, ಹಾಡಿನ ಮೂಲಕ ಜಯಂತಿ ವಿಜೃಂಭಿಸಿದ್ದು ಈಗ ಇತಿಹಾಸ.
ಭಿಕಾರಿಗೆ ಹಣ ನೀಡದ ಕಂಜೂಸಿ ಪ್ರೀತಿ ಝಿಂಟಾ
ಇತ್ತೀಚೆಗೆ FB ನಲ್ಲಿ ಒಂದು ವಿಡಿಯೋ ವೈರಲ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಇದರಲ್ಲಿ ಒಬ್ಬ ಭಿಕಾರಿ ತನ್ನ ವೀಲ್ ಚೇರ್ ಮೂಲಕ ಪ್ರೀತಿ ಝಿಂಟಾಳ ಕಾರ್ ಹಿಂಬಾಲಿಸುತ್ತಿದ್ದ. ಈ ವಿಡಿಯೋ ವೈರಲ್ ಆದದ್ದೇ ಪ್ರೀತಿ ಟ್ರೋಲಿಗರ ಆಕ್ರೋಶಕ್ಕೆ ಗುರಿಯಾದಳು. ಸಾಕಷ್ಟು ಬೈಸಿಕೊಂಡ ನಂತರ ಪ್ರೀತಿ ಮೌನ ಮುರಿದಳು. ಅವಳು ಏರ್ ಪೋರ್ಟ್ ಕಡೆ ಹೊರಟಿದ್ದಳಂತೆ. ಈಗಾಗಲೇ ತಡವಾಯ್ತು ಎಂದು ಅವನಿಗೆ ಹಣ ಹಾಕಿರಲಿಲ್ಲವಂತೆ, ಕ್ಯಾಶ್ ಪರ್ಸ್ ಮರೆತು ಬೇರೆ ಬಂದಿದ್ದಳಂತೆ. ಎಂದಿನಂತೆ ಈ ಸಲ ಭಿಕಾರಿ ಹಣಕ್ಕಾಗಿ ಬೇಡಿದಾಗ, ಪ್ರೀತಿ ಜೊತೆಯಲ್ಲಿದ್ದ ಹೆಂಗಸಿನ ಬಳಿಯಿಂದ ಒಂದು ನೋಟು ಪಡೆದು ಕೊಟ್ಟಳಂತೆ. ಭಿಕಾರಿಗೆ ಆ ಹಣ ಕಡಿಮೆ ಎನಿಸಿ ಇಂಥ ಮಹಾನ್ ಸ್ಟಾರ್ ಇನ್ನಷ್ಟು ಕೊಡಬಾರದೇ ಎಂದು ತನ್ನ ವೀಲ್ ಚೇರಿನಲ್ಲೇ ಜೋರಾಗಿ ಫಾಲೋ ಮಾಡತೊಡಗಿದ. ಈ ಮಧ್ಯೆ ಪ್ರೀತಿ ಯಾವಾಗ ವಿಡಿಯೋ ಶೂಟ್ ಗೆ ತುತ್ತಾದಳೋ ಗೊತ್ತಿಲ್ಲ. ಧಾವಂತದಲ್ಲಿ ಅಂತೂ ಅವಳು ಏರ್ ಪೋರ್ಟ್ ತಲುಪಿದಳು. ಅದು FBಗೆ ಪೋಸ್ಟ್ ಆದಾಗ ಇಷ್ಟೆಲ್ಲ ಹಗರಣ ಆಯ್ತು. ಯಾವುದು ನಿಜವೋ…. ಯಾವುದು ಸುಳ್ಳೋ? ಇದರಿಂದ ಬೇರೆ ಸೆಲೆಬ್ರಿಟಿಗಳಂತೂ ಪಾಠ ಕಲಿಯುವಂತಾಯ್ತು!
ಮತ್ತೆ ಬೆಳ್ಳಿ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ನ `ಖಾನ್’ದ್ವಯರು
ಹೇಗಾದರೂ ಮಾಡಿ ದಕ್ಷಿಣದವರ ಬಾಯಿ ಬಡಿಯಲೇಬೇಕೆಂದು ಬಾಲಿವುಡ್ ನ ನಿರ್ಮಾಪಕರು ಏನೇನೋ ಹರಸಾಹಸ ಮಾಡುತ್ತಲೇ ಇರ್ತಾರೆ. ಇದಕ್ಕಾಗಿ ಬಾಲಿವುಡ್ ಮಂದಿ ಎಲ್ಲರೂ ನಾಯಿಪಾಡಿಗೆ ಶರಣಾಗುತ್ತಾರೆ ಎಂದರೂ ಅತಿಶಯೋಕ್ತಿಯಲ್ಲ. ಯಶ್ ರಾಜ್ ಫಿಲಮ್ಸ್ ಮತ್ತೊಂದು ಹೆಜ್ಜೆ ಮುಂದಿಟ್ಟು ಈ ಸಲ ತಮ್ಮ ಮುಂದಿನ ಚಿತ್ರದಲ್ಲಿ ಶಾರೂಖ್ ಸಲ್ಮಾನ್ ಇಬ್ಬರೂ ಇರುತ್ತಾರೆಂದು ಸಾರಿದೆ! ಇತ್ತೀಚೆಗೆ ತೆರೆಕಂಡ `ಪಠಾಣ್’ ಚಿತ್ರದಲ್ಲೂ ಈ ಜೋಡಿ 10 ನಿಮಿಷ ಒಟ್ಟಿಗೇ ದುಡಿದಿತ್ತು. ಈ ಚಿತ್ರ ವಿಶ್ವವಿಡೀ ಒಟ್ಟು 1,000 ಕೋಟಿ ಕಮಾಯಿಸಿತು! ಹೀಗಾಗಿ ಈ ತಂಡ ಇವರಿಬ್ಬರನ್ನೂ ಕೂಡಿಸಿ ಆ ಸಂಖ್ಯೆ ಪಕ್ಕ ಮತ್ತೊಂದು ಸೊನ್ನೆ ಸೇರಿಸುವ ಅತಿ ಆಸೆಯಲ್ಲಿ ಈ ಪ್ರಯತ್ನಕ್ಕೆ ದುಮುಕಿದೆ.
ಬಾಯ್ ಫ್ರೆಂಡ್ ಬ್ಯಾಗ್ ಎತ್ತಿಕೊಂಡಾಗ, ಜನರಿಗೆ ಸಹಿಸಲು ಆಗಲಿಲ್ಲ!
ತನ್ನ ಲವ್ ಲೈಫ್ ಕುರಿತಾಗಿ ಸದಾ ಬಿಂದಾಸ್ ಆಗಿರುವ ಸುಶ್ಮಿತಾ ಸೇನ್, ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾಳೆ. ಕೆಲವು ದಿನಗಳ ಹಿಂದೆ ಇವಳಿಗಾದ ಹಾರ್ಟ್ ಅಟ್ಯಾಕ್ ದೊಡ್ಡ ಸುದ್ದಿ ಆಗಿತ್ತು. ಜನ FBನಲ್ಲಿ ಭರಪೂರ ಇವಳಿಗೆ ಆರೋಗ್ಯ ಮರಳಲೆಂದು ಹಾರೈಸಿದ್ದೂ ಹಾರೈಸಿದ್ದೇ! ಅಷ್ಟರಲ್ಲಿ ಏನಾಯಿತೋ ಏನೋ…. ಈಕೆ ಟ್ರೋಲಿಗರ ಕೆಂಗಣ್ಣಿಗೆ ಸಿಕ್ಕಿಬಿದ್ದಳು. ಆದದ್ದಿಷ್ಟೆ, ಈಕೆ ತನ್ನ ತಥಾಕಥಿತ ಬಾಯ್ ಫ್ರೆಂಡ್ ರೋಹಮನ್ ಜೊತೆ ಶಾಪಿಂಗ್ ಮಾಡುತ್ತಾ, ತನ್ನೆಲ್ಲ ಭಾರದ ಬ್ಯಾಗುಗಳನ್ನೂ ಅವನ ಕೈಲೇ ಹೊರಿಸಿ, ವ್ಯಾನಿಟಿ ಮಾತ್ರ ಆಡಿಸುತ್ತಾ, ಹಂಸದ ನಡಿಗೆಯಲ್ಲಿದ್ದಳಂತೆ! ಈ FB ಮಹಿಮೆಗೆ ಏನು ಹೇಳೋಣ? ತಮ್ಮ ಮೆಚ್ಚಿನ ಸೆಲೆಬ್ರಿಟೀಸ್ ತುಸು ಸೀನಿ, ಕೆಮ್ಮಲಿಕ್ಕಿಲ್ಲ…. ಅವರಿಗೆ ಹಾರೈಕೆಗಳ ಸುರಿಮಳೆ!
ಗರ್ಲ್ ಫ್ರೆಂಡ್ ಕಡೆ ಇರಲಿ ಎಂಬ ಆಣತಿ, ಅವಳಿಗಾಗಿ ಬಾಯ್ ಫ್ರೆಂಡ್ ಬ್ಯಾಗ್ ಹೊತ್ತರೆ ಅದಕ್ಕೂ ಆಕ್ಷೇಪಣೆ…. ಒಟ್ಟಾರೆ ಇವರು ಮೆಚ್ಚು ವಸ್ತು ಇಲ್ಲಿಲ್ಲ ಜೋಕೆ!
ಮಾತಿನ ಮಲ್ಲಿ ಕಂಗನಾ ಯಾಮಿಯನ್ನು ಸುಖಾಸುಮ್ಮನೆ ಹೊಗಳಿದ್ದಾದರೂ ಏಕೆ?
FB ಇತ್ಯಾದಿಗಳಲ್ಲಿ ತನ್ನ ವ್ಯಂಗ್ಯದ ಮಾತುಗಳಿಂದ ಸದಾ ಚರ್ಚೆಯಲ್ಲಿರುವ ನಟಿ ಕಂಗನಾ, ಇತ್ತೀಚೆಗೆ ಅದೇನಾಯ್ತೋ ಏನೋ…. ಯಾಮಿ ಗೌತಮ್ ಳ ಹೊಸ `ಚೋರ್ ನಿಕ್ ಕರ್ ಭಾಗಾ‘ ಚಿತ್ರವನ್ನು ಮುಕ್ತ ಕಂಠದಲ್ಲಿ ಹಾಡಿ ಹೊಗಳಿದ್ದಾಳೆ! ಅವಳು ಯಾಮಿಯ ಒಂದು ಪೋಸ್ಟ್ ನ್ನು ತನ್ನ ಇನ್ ಸ್ಟಾದಲ್ಲಿ ಶೇರ್ ಮಾಡುತ್ತಾ, `ಯಾಮಿ ಈಸ್ ಡೂಯಿಂಗ್ ಗ್ರೇಟ್! ಸತತ ಹಿಟ್‌ಮೇಲೆ ಹಿಟ್ ನೀಡುತ್ತಾ ಇತರರಂತೆ ಅಬ್ಬರ ಮಾಡದೆ ಮೌನ ವಹಿಸಿದ್ದಾಳೆ. ತುಂಬಿದ ಕೊಡ ಇವಳು, ಈ ಇಡೀ ಚಿತ್ರ ತಂಡಕ್ಕೆ ಕಂಗ್ರಾಟ್ಸ್!’ ಇದು ನಿಜಕ್ಕೂ ಯಾಮಿಯನ್ನು ಹೊಗಳಬೇಕೆಂಬ ಆಶಯೋ ಅಥವಾ ಅವಳು ಸ್ಟಾರ್ ಕಿಡ್, ಹಾಗಾಗಿ ದೊಡ್ಡ ಬ್ಯಾನರ್ಸ್ ಇಂಥವರನ್ನೇ ಆರಿಸುವುದೆಂಬ ವ್ಯಂಗ್ಯವೋ….ಕಂಗನಾ ಮಾತ್ರ ಬಲ್ಲಳು. ಅಂದಹಾಗೆ ಯಾಮಿ ತಂದೆ ಮುಖೇಶ್ ಗೌತಮ್ ಪಂಜಾಬಿ ಚಿತ್ರಗಳ ಖ್ಯಾತ ನಿರ್ದೇಶಕರು, ಇವಳ ತಂಗಿ ಸುರೀಲಿ ಸಹ ಈಗ ನಟಿ!
ದುಶ್ಮನ್ ಆಗಿದ್ದ ರಾಖಿ ಮೀಕಾ ಇಂದು ದೋಸ್ತಿಗಳಾಗಿದ್ದು ಹೇಗೆ?
2006ರಲ್ಲಿ ಪಂಜಾಬಿ ಗಾಯಕ ಮೀಕಾ ಸಿಂಗ್, ಮಹಾ ಜಗಳಗಂಟಿ ರಾಖಿ ಸಾವಂತ್ ಳನ್ನು ವೇದಿಕೆ ಮೇಲೆ ಕಿಸ್ ಮಾಡಿ ಕೋಲಾಹಲ ಮೂಡಿಸಿದ್ದ. ತನ್ನ ಬರ್ತ್ ಡೇ ದಿನ ನಡೆದ ಈ ಗಲಾಟೆಯನ್ನೇ ಮೀಕಾ ಒಂದು ಹಾಡಾಗಿ ಪರಿವರ್ತಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿ, ತಪ್ಪೆಲ್ಲ ರಾಖಿಯದೇ ಎಂದು ಕೈ ತೊಳೆದುಕೊಂಡಿದ್ದ. ಇದೀಗ ಕಾಲ ಬದಲಾಗಿದೆ. ಹೀಗಾಗಿ ಅಂದು ಠೂ ಬಿಟ್ಟ ಈ ಜೋಡಿ ಈಗ ಸೇ ಅಂತಿದೆ! ಅವನ ವಿರುದ್ಧ ಕೋರ್ಟಿನ ಮೆಟ್ಟಿಲೇರಿದ್ದ ರಾಖಿಯನ್ನು ವಿನಂತಿಸುತ್ತಾ, ಈತ ಅದನ್ನು ರದ್ದು ಮಾಡಿಸುವಂತೆ ಬಾಂಬೆ ಹೈ ಕೋರ್ಟಿಗೆ ಅರ್ಜಿ ನೀಡಿದ್ದ. ಇಬ್ಬರ ಮಧ್ಯೆ ಹೇಗೆ ಸಂಧಾನ ನಡೆಯಿತೋ ಏನೋ ರಾಖಿ ಕೇಸ್ ವಾಪಸ್ಸು ಪಡೆದಿದ್ದಾಳೆ! ಇದೀಗ ಇಬ್ಬರೂ ಹಾಯಾಗಿ ಫ್ರೆಂಡ್ ಶಿಪ್ ಮುಂದುವರಿಸಿದ್ದಾರೆ.
ದಿಶಾಳ ಮೋಡಿಗೆ ದಂಗಾದ ಫ್ಯಾನ್ಸ್
ಇತ್ತೀಚೆಗೆ FB ನಲ್ಲಿ ತನ್ನ ಗ್ಲಾಮರಸ್ ಫೋಟೋದಿಂದ ಮೆರೆಯುತ್ತಿರುವ ದಿಶಾ ಪಟಾನಿ, ಇಂಥ ಸಿಲ್ವರ್ ಸ್ಲಿಪ್ ಡ್ರೆಸ್ ನ ಅವತಾರದಲ್ಲಿ ಪಡ್ಡೆಗಳ ತಲೆ ಕೆಡಿಸಿದ್ದಾಳೆ. ಈ ಡ್ರೆಸ್ ಬ್ಯೂಟಿಫುಲ್ ಆಗಿದ್ದು, ಇವಳ ಮೈಕಟ್ಟಿಗೆ ಪರ್ಫೆಕ್ಟ್ ಫಿಟ್ ಎನಿಸಿದೆ, ಇತರ ನಟಿಯರ ಹೊಟ್ಟೆಗೆ ಹುಣಿಸೆ ಕಿವುಚಿದೆ! ಆದರೆ ಟ್ರೋಲಿಗರು ಅಷ್ಟಕ್ಕೇ ತೆಪ್ಪಗಾಗುತ್ತಾರಾ? ಇವಳು ಶೂಟಿಂಗ್ ನಲ್ಲಿದ್ದಾಗ, ದಿಶಾಳ ಈ ಪೋಸ್ ಕುರಿತು, ಸುಮಾರು ಜನ ಟೀಕೆ ಮಾಡುತ್ತಾ, ತಕ್ಷಣ ಅದನ್ನು ಡೆಲಿಟ್ ಮಾಡಲು ಒತ್ತಾಯಿಸಿದರು. ಇಂಥ ಟೈಟ್ ಡ್ರೆಸ್ ಧರಿಸಿ ಸೊಂಟ ಮುರಿಸಿಕೊಂಡೀಯ ಎಂದೂ ಹಂಗಿಸಿದ್ದಾರೆ. ಇರಲಿ, ಇಂಥ ಬಿಚ್ಚಮ್ಮಂದಿರ ಪೋಸ್ ಗಳು ಈಗಿನ ಕಾಲಕ್ಕೆ ಹೊಸತೇನಲ್ಲ, ಫ್ಯಾಷನ್ ಎನಿಸಿದೆ. ಯಾರು ಎಷ್ಟು ಕನಿಷ್ಠ ಬಟ್ಟೆ ಧರಿಸಿ ಹೀಗೆ ಪೋಸ್ ನೀಡುತ್ತಾರೋ, ಅವರು ಅಷ್ಟೇ ಖ್ಯಾತಿ ಗಳಿಸುತ್ತಾರೆ! ಹಿಂದೆ ಒಂದು ಕಾಲ ಇತ್ತಂತೆ, ಅಲ್ಲಿ ಮುಖದ ಮುಗುಳ್ನಗೆಗೆ ಮಾತ್ರ ಮಣೆ ಹಾಕುತ್ತಿದ್ದರಂತೆ!
ಸಲ್ಮಾನ್ ನ ಆ್ಯಬ್ಸ್ ಅಂದ್ರೆ ಕೊಡುಗೆಯೇ?
ಸಲ್ಮಾನ್ ನ ಹೊಸ ಚಿತ್ರ `ಕಿಸೀ ಕಾ ಭಾಯಿ ಕಿಸೀ ಕೀ ಜಾನ್’ನ ಟ್ರೇಲರ್ ಅಭಿಮಾನಿಗಳಿಗೆ ಬಲು ಪಸಂದೆನಿಸಿದೆ. ಆದರೆ ಈ ಟ್ರೇಲರ್ ನಲ್ಲಿ ಕಂಡುಬಂದ ಸಲ್ಲೂನ 6 ಪ್ಯಾಕ್ ಆ್ಯಬ್ಸ್ ಕುರಿತು ಟ್ರೋಲಿಗರು ಇವನನ್ನು ಬೆಂಡೆತ್ತಿದ್ದಾರೆ. ಸೋಶಿಯಲ್ ಮಡಿಯಾದಲ್ಲಂತೂ ಈ ಕುರಿತಾಗಿ ಹಲವು ವ್ಯಂಗ್ಯ ವ್ಯೂವ್ಸ್ ಹರಿದಾಡುತ್ತಿವೆ. ಇಲ್ಲಿ ಇವನನ್ನು ಬಾಹುಬಲಿಯ ಅಪರಾವತಾರ, ಎಲ್ಲವೂ ಮಹಿಮೆ ಎಂದು ಕಿಚಾಯಿಸುತ್ತಿದ್ದಾರೆ. ಆದರೆ ಬಾಲಿವುಡ್ ನ ಈ ದಬಂಗ್ ಖಾನ್ ಇದನ್ನು ಸುಮ್ಮನೇ ಸ್ವೀಕರಿಸುವನೇ? ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು, ಟ್ರೇಲರ್ ಲಾಂಚ್‌ಇವೆಂಟ್ ಮಧ್ಯೆ ತನ್ನ ಶರ್ಟ್ ಕಳಚಿ, ಮೀಡಿಯಾದವರನ್ನು ಇದು ಮೋಡಿಯೇ ಅಥವಾ ನನ್ನ ಬಾಡಿಯೇ ಎಂದನಂತೆ!
ಡೆಬ್ಯುಗೆ ಮೊದಲೇ ಬಿಗ್ ಬ್ರಾಂಡ್ ನ ಮುಖವಾಣಿ ಆದಳು ಶಾರೂಖ್ ನ ಮಗಳು
ತನ್ನ ಮೊದಲ ಚಿತ್ರದ ಬಿಡುಗಡೆಗೆ ಮುಂಚೆಯೇ ಶಾರೂಖ್ ನ ಮಗಳು ಸುಹಾನಾ ಖಾನ್, ಇದೀಗ ಕಿರುತೆರೆಯಲ್ಲಿ ಮಿಂಚಲಿದ್ದಾಳೆ. ಈಕೆಯ ಮೊದಲ ಚಿತ್ರದ ಬಿಡುಗಡೆಗೆ ಮುಂಚೆಯೇ, ಅಂತಾರಾಷ್ಟ್ರೀಯ ಬ್ಯೂಟಿ ಬ್ರಾಂಡ್ ಮೆಬೆಲೀನ್ ಇವಳ ಕೈಗೆ ಸಿಕ್ಕಿದೆ! ಇವಳೀಗ ಅದರ ಅಂಬಾಸಿಡರ್. ಇತ್ತೀಚೆಗೆ ಮೆಬೆಲೀನ್ ಇವೆಂಟ್ ನಲ್ಲಿ ಕಾಣಿಸಿಕೊಂಡ ಇವಳು, ಆಲ್ ರೆಡ್ ಲುಕ್ಸ್ ಹೊಂದಿ ಮಿಂಚುತ್ತಿದ್ದಳು, ಎಲ್ಲರೂ ಅದನ್ನು ಹೊಗಳಿದ್ದೇ ಹೊಗಳಿದ್ದು! ಅಂಥ ತಂದೆಯ ಮಗಳಾದ್ದರಿಂದ, ಇವಳ ಚಿತ್ರ ಮುಂದೆ ಓಡದಿದ್ದರೂ, ಕೆರಿಯರ್ ಅಂತೂ ಸುಸೂತ್ರ.