ಇತ್ತೀಚೆಗೆ `ದಿಲ್ ‌ಸೇ' ಚಿತ್ರದ ಸೂಪರ್‌ ಹಿಟ್‌ ಹಾಡು ಚೈಯಾ ಚೈಯಾ ಮತ್ತೆ ಚರ್ಚೆಯಲ್ಲಿದೆ. ಇದು ಮಲೈಕಾಳ ಹೆಚ್ಚಿರುವ ಗ್ಲಾಮರ್‌ ಕೋಶಂಟ್‌ ಗಾಗಿ ಅಲ್ಲ, ಬದಲಿಗೆ ರವೀನಾ ಟಂಡನ್‌ ಅಂದ ಕಾಲತ್ತಿಲೆ ಈ ಹಾಡಿಗೆ ಕುಣಿಯಲಾರೆ ಎಂದು ರಿಜೆಕ್ಟ್ ಮಾಡಿರದ್ದಿದರೆ, ಬಹುಶಃ ಮಲೈಕಾ ಇಂದು ಐಟಂ ಕ್ವೀನ್‌ಪಟ್ಟ ಗಿಟ್ಟಿಸಿರುತ್ತಿರಲಿಲ್ಲವೇ ಏನೋ.... ಈ ವಿಷಯವನ್ನು ಹೊರಗೆಡಹಿದ ರವೀನಾ, ತನಗೆ ಈ ಹಾಡಿಗಾಗಿ  ಮೊದಲ ಆಫರ್‌ ಬಂದಾಗ ಏನೋ ಅಡಚಣೆ ಕಾರಣ ತಾನು ಅದನ್ನು ರಿಜೆಕ್ಟ್ ಮಾಡಿದ್ದೆ ಎಂದು ಸ್ಪಷ್ಟಪಡಿಸಿದಳು. ಅದಾದ ಮೇಲೆಯೇ ಆ ಹಾಡು ಮಲೈಕಾಳ ಪಾಲಾಗಿದ್ದಂತೆ! ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಇದೇ ಸನ್ನಿವೇಶ ಹಿಂದೆ `ನಾಗರಹಾವು' ಚಿತ್ರದ ಶೂಟಿಂಗ್‌ ನಲ್ಲಿ ನಿರ್ದೇಶಕ ಪುಟ್ಟಣ್ಣ ಕಲ್ಪನಾರಿಗೆ `ಕನ್ನಡ ನಾಡಿನ ವೀರ ರಮಣಿಯ....' ಹಾಡಿನ ಓಬ್ವನ ಪಾತ್ರ ಆಫರ್‌ ಮಾಡಿದಾಗ, ತಾನು ಮಾರ್ಗರೇಟ್‌ ಪಾತ್ರ ಮಾತ್ರ ಮಾಡುವವಳು ಎಂದು ಆಕೆ ಹಿಂದೆ ಸರಿದಿದ್ದರು. ಅದೇ ಪಾತ್ರದಲ್ಲಿ ಮಿಂಚಿ, ಹಾಡಿನ ಮೂಲಕ ಜಯಂತಿ ವಿಜೃಂಭಿಸಿದ್ದು ಈಗ ಇತಿಹಾಸ.

Bhikhari_Ko_Paise_Priety

ಭಿಕಾರಿಗೆ ಹಣ ನೀಡದ ಕಂಜೂಸಿ ಪ್ರೀತಿ ಝಿಂಟಾ

ಇತ್ತೀಚೆಗೆ FB ‌ನಲ್ಲಿ ಒಂದು ವಿಡಿಯೋ ವೈರಲ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಇದರಲ್ಲಿ ಒಬ್ಬ ಭಿಕಾರಿ ತನ್ನ ವೀಲ್ ‌ಚೇರ್ ಮೂಲಕ ಪ್ರೀತಿ ಝಿಂಟಾಳ ಕಾರ್‌ ಹಿಂಬಾಲಿಸುತ್ತಿದ್ದ. ಈ ವಿಡಿಯೋ ವೈರಲ್ ಆದದ್ದೇ ಪ್ರೀತಿ ಟ್ರೋಲಿಗರ ಆಕ್ರೋಶಕ್ಕೆ ಗುರಿಯಾದಳು. ಸಾಕಷ್ಟು ಬೈಸಿಕೊಂಡ ನಂತರ ಪ್ರೀತಿ ಮೌನ ಮುರಿದಳು. ಅವಳು ಏರ್‌ ಪೋರ್ಟ್‌ ಕಡೆ ಹೊರಟಿದ್ದಳಂತೆ. ಈಗಾಗಲೇ ತಡವಾಯ್ತು ಎಂದು ಅವನಿಗೆ ಹಣ ಹಾಕಿರಲಿಲ್ಲವಂತೆ, ಕ್ಯಾಶ್‌ ಪರ್ಸ್‌ ಮರೆತು ಬೇರೆ ಬಂದಿದ್ದಳಂತೆ. ಎಂದಿನಂತೆ ಈ ಸಲ ಭಿಕಾರಿ ಹಣಕ್ಕಾಗಿ ಬೇಡಿದಾಗ, ಪ್ರೀತಿ ಜೊತೆಯಲ್ಲಿದ್ದ ಹೆಂಗಸಿನ ಬಳಿಯಿಂದ ಒಂದು ನೋಟು ಪಡೆದು ಕೊಟ್ಟಳಂತೆ. ಭಿಕಾರಿಗೆ ಆ ಹಣ ಕಡಿಮೆ ಎನಿಸಿ ಇಂಥ ಮಹಾನ್‌ ಸ್ಟಾರ್‌ ಇನ್ನಷ್ಟು ಕೊಡಬಾರದೇ ಎಂದು ತನ್ನ ವೀಲ್ ‌ಚೇರಿನಲ್ಲೇ ಜೋರಾಗಿ ಫಾಲೋ ಮಾಡತೊಡಗಿದ. ಈ ಮಧ್ಯೆ ಪ್ರೀತಿ ಯಾವಾಗ ವಿಡಿಯೋ ಶೂಟ್‌ ಗೆ ತುತ್ತಾದಳೋ ಗೊತ್ತಿಲ್ಲ. ಧಾವಂತದಲ್ಲಿ ಅಂತೂ ಅವಳು ಏರ್‌ ಪೋರ್ಟ್‌ ತಲುಪಿದಳು. ಅದು FBಗೆ ಪೋಸ್ಟ್ ಆದಾಗ ಇಷ್ಟೆಲ್ಲ ಹಗರಣ ಆಯ್ತು. ಯಾವುದು ನಿಜವೋ.... ಯಾವುದು ಸುಳ್ಳೋ? ಇದರಿಂದ ಬೇರೆ ಸೆಲೆಬ್ರಿಟಿಗಳಂತೂ ಪಾಠ ಕಲಿಯುವಂತಾಯ್ತು!

Fir_Screen_Share_Karenge

ಮತ್ತೆ ಬೆಳ್ಳಿ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್ `ಖಾನ್‌'ದ್ವಯರು

ಹೇಗಾದರೂ ಮಾಡಿ ದಕ್ಷಿಣದವರ ಬಾಯಿ ಬಡಿಯಲೇಬೇಕೆಂದು ಬಾಲಿವುಡ್‌ ನ ನಿರ್ಮಾಪಕರು ಏನೇನೋ ಹರಸಾಹಸ ಮಾಡುತ್ತಲೇ ಇರ್ತಾರೆ. ಇದಕ್ಕಾಗಿ ಬಾಲಿವುಡ್‌ ಮಂದಿ ಎಲ್ಲರೂ ನಾಯಿಪಾಡಿಗೆ ಶರಣಾಗುತ್ತಾರೆ ಎಂದರೂ ಅತಿಶಯೋಕ್ತಿಯಲ್ಲ. ಯಶ್‌ ರಾಜ್‌ ಫಿಲಮ್ಸ್ ಮತ್ತೊಂದು ಹೆಜ್ಜೆ ಮುಂದಿಟ್ಟು ಈ ಸಲ ತಮ್ಮ ಮುಂದಿನ ಚಿತ್ರದಲ್ಲಿ ಶಾರೂಖ್‌ ಸಲ್ಮಾನ್‌ ಇಬ್ಬರೂ ಇರುತ್ತಾರೆಂದು ಸಾರಿದೆ! ಇತ್ತೀಚೆಗೆ ತೆರೆಕಂಡ `ಪಠಾಣ್‌' ಚಿತ್ರದಲ್ಲೂ ಈ ಜೋಡಿ 10 ನಿಮಿಷ ಒಟ್ಟಿಗೇ ದುಡಿದಿತ್ತು. ಈ ಚಿತ್ರ ವಿಶ್ವವಿಡೀ ಒಟ್ಟು 1,000 ಕೋಟಿ ಕಮಾಯಿಸಿತು! ಹೀಗಾಗಿ ಈ ತಂಡ ಇವರಿಬ್ಬರನ್ನೂ ಕೂಡಿಸಿ ಆ ಸಂಖ್ಯೆ ಪಕ್ಕ ಮತ್ತೊಂದು ಸೊನ್ನೆ ಸೇರಿಸುವ ಅತಿ ಆಸೆಯಲ್ಲಿ ಈ ಪ್ರಯತ್ನಕ್ಕೆ ದುಮುಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ