ನೀವು ಹೊಸ ಡ್ರೆಸ್ಗಳ ಡಿಸೈನಿಂಗ್ಮಾಡುವಲ್ಲಿ ವಿಶೇಷ ಪ್ರತಿಭೆ ಉಳ್ಳವರಾದರೆ, ಬುಟಿಕ್ಬಿಸ್ನೆಸ್ಆರಂಭಿಸಿ ಉತ್ತಮ ಆದಾಯ ಗಳಿಸಬಹುದು. ಹೇಗೆ…..?

ದೊಡ್ಡ ಪಾರ್ಟಿಗಾಗಿ ನೀವು ಕೇವಲ 5 ಸಾವಿರ ಬಜೆಟ್‌ ನಲ್ಲಿ ನಿಮ್ಮನ್ನು ನೀವು ರೆಡಿ ಮಾಡಿಕೊಳ್ಳಬಲ್ಲಿರಾ? ನಿಮ್ಮ ಉತ್ತರ ಹ್ಞೂಂ ಅಂದ್ರೆ ನೀವು ಕ್ರಿಯೇಟಿವ್ ‌ಅಂತ. ಫ್ಯಾಷನ್ನಿನ ಅರ್ಥ ನೀವು ಡ್ರೆಸ್‌ ನ್ನು ಎಷ್ಟು ದುಬಾರಿ ಆಗಿ ರೆಡಿ ಮಾಡಿದಿರಿ ಅಂತಲ್ಲ. ಸರಿಯಾದ ಅರ್ಥದಲ್ಲಿ ಡಿಸೈನಿಂಗ್‌ ಅಂದ್ರೆ ನಿಮ್ಮ ಕ್ರಿಯೇಟಿವಿಟಿಯಿಂದ, ಕಡಿಮೆ ಬಜೆಟ್‌ ನಲ್ಲಿ ಎಂಥ ಆಕರ್ಷಕ ಡ್ರೆಸ್‌ ರೆಡಿ ಮಾಡಬಹುದು ಅಂತ.ಹೀಗಾಗಿ ಬುಟಿಕ್‌ ಬಿಸ್‌ ನೆಸ್‌ ಗೆ ಬರುವ ಮೊದಲು ನಿಮ್ಮ ಮೇಲೆಯೇ ಈ ಪ್ರಯೋಗ ಮಾಡಿಕೊಳ್ಳಿ. ಉದಾ : ನಿಮ್ಮ  ಹಳೆ ಸೀರೆಯಿಂದ ಹೊಸ ಡಿಸೈನರ್‌ ಸೂಟ್‌ ಮಾಡಬಹುದು. ಸಾಮಾನ್ಯವಾಗಿ ಹೆಂಗಸರು ತಮ್ಮ ದುಬಾರಿ ಬ್ರೈಡಲ್ ಡ್ರೆಸ್‌ ನ್ನು ಅತಿ ಕಡಿಮೆ ಬಳಸುತ್ತಾ ಜೀವಮಾನವಿಡೀ ಹಾಗೇ ಇಟ್ಟುಕೊಳ್ಳುತ್ತಾರೆ. ನಿಮ್ಮ ಕ್ರಿಯೇಟಿವಿಟಿಯಿಂದ ಇದನ್ನು ಆಕರ್ಷಕ ಡ್ರೆಸ್‌ ಆಗಿಸಬಹುದು. ಇದರ ಜೊತೆಯಲ್ಲೇ ಬಿಸ್‌ ನೆಸ್‌ ಆರಂಭಿಸುವ ಮುನ್ನ ಎಕ್ಸ್ ಪರ್ಟ್ಸ್ ನೀಡಿರುವ ಸಲಹೆ ಗಮನಿಸಿ:

ಮೂಲಭೂತ ಅಗತ್ಯಗಳು : ಬುಟಿಕ್‌ ಆರಂಭಿಸುವ ಮೊದಲು, ಕೆಲವು ಮಹತ್ವಪೂರ್ಣ ಅಗತ್ಯಗಳನ್ನು ಪೂರೈಸುವುದು ಅವಶ್ಯಕ. ಇದರ ಮೊದಲ ಹಂತವೇ ಬುಟಿಕ್‌ ಗಾಗಿ ಜಾಗ. ಆರಂಭದಲ್ಲಿ ಇದು ಚಿಕ್ಕ ಜಾಗವಾದರೂ ನಡೆಯುತ್ತದೆ. ಪಾರ್ಲರ್‌ ಜೊತೆ, ಮನೆಯ ಕೋಣೆ, ಗ್ಯಾರೇಜ್‌….. ಒಟ್ಟಿನಲ್ಲಿ ಲುಕ್ಸ್ ಆಕರ್ಷಕ ಆಗಿರಲಿ. ಸಣ್ಣ ಅಂಗಡಿ ಬಾಡಿಗೆಗೆ ಹಿಡಿದು, ಇದನ್ನು ಆರಂಭಿಸಬಹುದು.

ಬುಟಿಕ್‌ ಗಾಗಿ ಅತಿ ಎಚ್ಚರಿಕೆಯಿಂದ ಟೇಲರ್‌ ಮಾಸ್ಟರ್‌ ಆಯ್ಕೆ ಮಾಡಬೇಕು, ನೀವೇ ಮಾಡುವುದಾದರೆ ಆಗ ಜವಾಬ್ದಾರಿ ಹೆಚ್ಚುತ್ತದೆ. ಟೆಕ್ನಿಕಲಿ ಅವರು ಎಲ್ಲಾ ವಿಭಾಗ ನಿಭಾಯಿಸುವಂತಿರಬೇಕು, ಅಂದ್ರೆ ಗುಂಡಿ ಖಾಜಾ ಇತ್ಯಾದಿ. ಇಲ್ಲದಿದ್ದರೆ ಇನ್ನೊಬ್ಬರ ನೆರವು ಬೇಕಾದೀತು. ನಿಮ್ಮ ಬುಟಿಕ್‌ ನಲ್ಲಿ ಓವರ್‌ ಲಾಕ್‌ ಇರುವಂಥ ಉತ್ತಮ ಕಂಪನಿಯ ಹೊಲಿಗೆ ಮೆಶೀನ್‌ ಇರಲಿ. ಇದಕ್ಕಾಗಿ ನೀವೇ ಬಂಡವಾಳ ಹೂಡಬೇಕಾಗಿ ಬರಬಹುದು. ಹಾಗೆಯೇ ಉತ್ತಮ ಗುಣಮಟ್ಟದ ಅಳತೆಯ ಟೇಪ್‌, ಕತ್ತರಿ, ಟ್ರೇಸಿಂಗ್‌ ವೀಲ್‌, ಸೂಜಿ, ಪ್ಯಾಟರ್ನ್‌ ಮೇಕಿಂಗ್‌ ಟೂಲ್ಸ್‌, ಕಟಿಂಗ್‌ ಪ್ಯಾಡ್‌/ ಟೇಬಲ್, ಬುಟಿಕ್‌ ಗಾಗಿ ಉತ್ತಮ ಬೆಳಕಿನ ವ್ಯವಸ್ಥೆ…. ಇತ್ಯಾದಿ ಎಲ್ಲವನ್ನೂ ಗಮನಿಸಿಕೊಳ್ಳಬೇಕು.

ಆರಂಭದ ಹಂತ : ನಿಮ್ಮ ವ್ಯಾಪಾರದ ಆರಂಭದಲ್ಲಿ ಮಾರುಕಟ್ಟೆಯಿಂದ ಕಡಿಮೆ ಬೆಲೆಯ ಡ್ರೆಸ್‌ ಮೆಟೀರಿಯಲ್ಸ್ ನ್ನೇ ಕೊಳ್ಳಿರಿ. ಜೊತೆಗೆ ಬುಟಿಕ್‌ ಜನಪ್ರಿಯಗೊಳ್ಳಲು, ತುಸು ಅಗ್ಗದ ಉಪಾಯಗಳನ್ನೇ ಅನುಸರಿಸಿ. ಉದಾ : ಬ್ಯಾಗ್ಸ್ ಮೇಲೆ ನಿಮ್ಮ ಬುಟಿಕ್ ಹೆಸರು, ಬುಟಿಕ್‌ ಗೆ ಉತ್ತಮ `ಲೋಗೋ’ ಇರಲಿ, ಇದನ್ನು ನೀವೇ ಡಿಸೈನ್‌ ಮಾಡಿ. ವಿಸಿಟಿಂಗ್‌ ಕಾರ್ಡ್ಸ್ ಪ್ರಿಂಟ್‌ ಹಾಕಿಸಿ, ನಿಮ್ಮ ಲೋಕಲ್ ನ್ಯೂಸ್‌ ಪೇಪರ್‌ ನಲ್ಲಿ ಸಣ್ಣದಾಗಿ ಜಾಹೀರಾತು ಕೊಡಿ. ಬುಟಿಕ್‌ ಹೆಸರಲ್ಲಿ ಪಾಂಪ್ಲೆಟ್ಸ್ ಮುದ್ರಿಸಿ, ಪೇಪರ್‌ ಜೊತೆ ಅದು ಎಲ್ಲರಿಗೂ ಸಿಗುವಂತೆ ಹಂಚಿಸಿ. ಅಲ್ಲಲ್ಲಿ ಬ್ಯಾನರ್‌ ಹಾಕಿಸಿ. ನಿಮ್ಮ ಗ್ರಾಹಕರ ಡಿಮ್ಯಾಂಡ್‌, ಬುಟಿಕ್‌ ಜಾಗ, ಬಜೆಟ್‌ನೋಡಿ ಅದಕ್ಕೆ ತಕ್ಕಂತೆ ಹೊಲಿಗೆ, ಬೆಲೆ ನಿರ್ಧರಿಸಿ. ವಾಟ್ಸ್ ಆ್ಯಪ್‌ ಮೆಸೇಜ್‌, FB‌, ಟ್ವಿಟರ್‌, ಇನ್‌ ಸ್ಟಾಗ್ರಾಂ ಇತ್ಯಾದಿಗಳ ಮೂಲಕ ಹೆಚ್ಚು ಗ್ರಾಹಕರನ್ನು ಸಂಪರ್ಕಿಸಲು ಯತ್ನಿಸಿ. ಅಲ್ಲೆಲ್ಲ ನಿಮ್ಮ ಡಿಸೈನಿಂಗ್‌ ಫೋಟೋ ರಾರಾಜಿಸಲಿ.

ಡಿಸೈನಿಂಗ್ಫೀಲ್ಡ್ ಮಾಹಿತಿ : ಬುಟಿಕ್‌ ಸ್ಟಾರ್ಟ್‌ ಮಾಡುವ ಮುನ್ನ, ಇದರ ಬೇಸಿಕ್‌ ಕೋರ್ಸ್‌ ಮಾಡಿಕೊಂಡಿದ್ದರೆ ಉತ್ತಮ. ಬಾಕಿ ಮಾಹಿತಿಗಳು ನಿಮ್ಮ ಅನುಭವದಿಂದಲೇ ತಿಳಿಯುತ್ತದೆ. ನಿಮ್ಮ ಕೆಲಸ ಮುಂದುವರಿದಂತೆ, ನೀವು ನಿಮ್ಮ ಬಿಸ್‌ ನೆಸ್‌ ನಲ್ಲಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವಿರಿ. ಹೊಸ ಹೊಸ ಜಾಗಗಳ ವೇಷಭೂಷಣಗಳ ಮಾಹಿತಿ ಪಡೆಯಿರಿ, ಅದನ್ನು ಪೇಪರ್‌ ಮೇಲೆ ಡ್ರೆಸ್ ಡಿಸೈನಿಂಗ್‌ ಮಾಡುತ್ತಿರಿ. ಇಂಟರ್‌ ನೆಟ್‌ ನಿಂದ ಕೇವಲ ಡಿಸೈನಿನ ಅಂದಾಜು ಪಡೆಯಬಹುದು, ಆದರೆ ನಿಮ್ಮ ಪ್ರತಿಭೆಯನ್ನು ಮೌಲಿಕ ರೂಪದಲ್ಲಿ ಈ ತರಹ ಮೊದಲು ಪೇಪರ್‌ ಮೇಲೆ ಮೂಡಿಸಿ, ರಫ್‌ ಆಗಿ ಟ್ರೈ ಮಾಡಿ, ನಂತರ ಫೈನಲ್ ಡಿಸೈನ್‌ ಕಟ್‌ಮಾಡಿ!

ಗುಣಮಟ್ಟದ ಜೊತೆ ಕಾಂಪ್ರಮೈಸ್ಆಗಬೇಡಿ : ಬುಟಿಕ್‌ ಹೊಸತು ಅಥವಾ ನಂತರ ಹಳತೇ ಆಗಲಿ,  ಗುಣಮಟ್ಟ ಉಳಿಸಿಕೊಳ್ಳುವುದು ಮುಖ್ಯ. ಉತ್ತಮ ಗುಣಮಟ್ಟದ ಫ್ಯಾಬ್ರಿಕ್‌ ಬಳಸಿಕೊಳ್ಳಿ, ಹಾಗೆಯೇ ಪರ್ಫೆಕ್ಟ್ ಸ್ಟಿಚಿಂಗ್‌ ಇರಲಿ. ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಪ್ರಾಮಾಣಿಕತೆ ಬೆಳೆಸಿಕೊಳ್ಳಿ, ನಿಮ್ಮ ಗ್ರಾಹಕರ ಬೆಂಬಲ ಮಜಬೂತಾಗುತ್ತದೆ. ಮಾರ್ಕೆಟ್‌ ನಲ್ಲಿ ನಿಮ್ಮ ಬುಟಿಕ್‌ ನ ಲೆವೆಲ್ ‌ಒಂದು ಸ್ಟಾಂಡರ್ಡ್‌ ಆಗಿರಲಿ, ಇದರಿಂದ ಗ್ರಾಹಕರು ಹೆಚ್ಚಿನ ಚೌಕಾಶಿಗೆ ಇಳಿಯುವುದಿಲ್ಲ.

ನಿಮ್ಮ ವ್ಯವಹಾರ : ಗ್ರಾಹಕರ ಕುರಿತಾಗಿ ನಿಮ್ಮ ವ್ಯವಹಾರ ಅತಿ ಶಿಷ್ಟಾಚಾರದಿಂದ ಕೂಡಿರಲಿ. ಇದರಿಂದ ಬುಟಿಕ್‌ ಗೆ ಆದಷ್ಟು ಬೇಗ ಉತ್ತಮ ಹೆಸರು ಕೂಡುತ್ತದೆ, ಹೆಚ್ಚಿನ ಲಾಭ ಬರುತ್ತದೆ. ಅವರ ಮೇಲೆ ನಿಮ್ಮ ಇಷ್ಟಾನಿಷ್ಟಗಳ ಹೊರೆ ಹೊರಿಸಬೇಡಿ ಅಥವಾ ನಿಮ್ಮ ಗ್ರಾಹಕರ ದೈಹಿಕ ಕುಂದುಕೊರತೆಗಳ ಬಗ್ಗೆ ಎಲ್ಲೂ ಆಕ್ಷೇಪದ ಮಾತು ಬೇಡ. ಬದಲಿಗೆ ಅದನ್ನು ಕವರ್‌ ಮಾಡುವಂಥ ಡಿಸೈನ್‌, ಅವರ ಬಜೆಟ್‌ ನೊಳಗೆ ಬರುವಂತೆ ಮಾಡಿ.

ನಿಮ್ಮ ಕೆಲಸ : ನಿಮ್ಮ ಕೆಲಸದಲ್ಲಿ 100% ವಿಶ್ವಾಸ ತುಂಬಿ ತುಳುಕುತ್ತಿರಲಿ. ಗಡಿಬಿಡಿಯಲ್ಲಿ ಗ್ರಾಹಕರು ಕೇಳಿದ ಎಲ್ಲವನ್ನೂ ಮಾಡಿಬಿಡುತ್ತೇನೆಂದು ಧಾವಿಸದಿರಿ. ಹಾಗೆಯೇ ಅವರು ಕೇಳಿದ ದಿನಾಂಕಕ್ಕೆ ಸರಿಯಾಗಿ ನೀವು ಡ್ರೆಸ್‌ ರೆಡಿ ಮಾಡಿ ಕೊಡಿ. ಒಬ್ಬರಿಗೆ ಒಂದು ಡೇಟ್‌ ಕೊಟ್ಟ ಮೇಲೆ, ನಿಮ್ಮದು ಎಷ್ಟೇ ಬಿಝಿ ಶೆಡ್ಯೂಲ್ ‌ಇರಲಿ, ಆ ಡೇಟಿಗೆ ತಕ್ಕಂತೆ ಅವರಿಗೆ ಡ್ರೆಸ್‌ ಒದಗಿಸಿ.

ಹೆಚ್ಚಿನ ಲಾಭ ಗಳಿಸುವುದು ಹೇಗೆ? : ನಿಮ್ಮ ಬುಟಿಕ್‌ ನಲ್ಲಿ ಶಾಲೆಯ ಸಮವಸ್ತ್ರಗಳನ್ನು ಹೊಲಿದು ಕೊಡಿ. ಇದರಿಂದ ಖಂಡಿತಾ ಹೆಚ್ಚುವರಿ ಲಾಭ ಗಳಿಸಬಹುದು. ಇದರ ಜೊತೆಗೆ ಒಂದಷ್ಟು ರೆಡಿಮೇಡ್‌ ಶಾಪ್‌ ಗಳವರನ್ನು ಪರಿಚಯಿಸಿಕೊಂಡು, ನಿಮ್ಮ ಡ್ರೆಸ್ ಸಪ್ಲೈ ಮಾಡುತ್ತಿರಿ. ಯಾವುದೇ ಬ್ರಾಂಡ್‌ ನೊಂದಿಗೆ ಕೈ ಜೋಡಿಸಿ, ಅವರಿಗೆ ಬೇಕಾದಂತೆ ಡ್ರೆಸ್‌ ರೆಡಿ ಮಾಡಿ, ಅಧಿಕ ಲಾಭ ಗಳಿಸಿರಿ.

ಗ್ರಾಹಕರೊಂದಿಗೆ ಸ್ನೇಹಮಯ ವರ್ತನೆ : ಯಾವ ಗ್ರಾಹಕರೇ ಇರಲಿ, ಒಂದೆರಡು ಭೇಟಿಗಳ ನಂತರ, ಅವರ ಇಡೀ ಬಾಡಿಯ ಒಂದು ಅಂದಾಜು ರೂಪುರೇಖೆ ನಿಮಗೆ ಖಚಿತ ಆಗಿರಬೇಕು. ನಿಮ್ಮ ಪ್ರೆಸೆಂಟೇಶನ್‌ ಹೇಗಿರಬೇಕು ಎಂದರೆ, ಬಂದಿರುವ ಮಹಿಳಾ ಗ್ರಾಹಕರು, ಸಂಕೋಚವಿಲ್ಲದೆ, ನಿಮ್ಮ ಬಳಿ ಮೈ ಮುಟ್ಟಿಸಿಕೊಂಡು ಅಳತೆ ತೆಗೆಸಿಕೊಳ್ಳುವಂತೆಯೂ, ನಿಮ್ಮೊಂದಿಗೆ ಪೂರ್ತಿ ಸಹಕರಿಸುವಂತೆಯೂ ಇರಬೇಕು. ಆದಷ್ಟು ಅವರಿಗೆ ಧಾರ್ಮಿಕ ಸಲಹೆ ಕೊಡಬೇಡಿ. `ಕಸ್ಟಮರ್‌ ಈಸ್‌ ಆಲ್ವೇಸ್‌ ದಿ ಕಿಂಗ್‌!’ ಎಂಬ ಆಂಗ್ಲ ನಾಣ್ಣುಡಿಯಂತೆ, ಅವರ ಬೇಡಿಕೆಗಷ್ಟೇ ಮಹತ್ವ ಕೊಡಿ. ಎಲ್ಲಾ ವರ್ಗದ ಮಹಿಳೆಯರನ್ನೂ ಆಕರ್ಷಿಸುವಂಥ ಡ್ರೆಸ್ ಡಿಸೈನಿಂಗ್‌ ಮಾಡುತ್ತಿರಿ.

ಓದು : ಈ ಬಿಸ್‌ ನೆಸ್‌ ನಲ್ಲಿ ಯಶಸ್ವಿಯಾಗಲು ನೀವು ಫ್ಯಾಷನ್‌ ಕುರಿತ ಪತ್ರಿಕೆ ಓದುತ್ತಿರಿ, ಟಿವಿ ಶೋ ಗಮನಿಸುತ್ತಿರಿ. ಹಾಗೆಯೇ ಗ್ರಾಹಕರೂ ನಿಮ್ಮ ಬುಟಿಕ್‌ ನಲ್ಲಿ ಫ್ಯಾಷನ್‌ ಪತ್ರಿಕೆ ಗಮನಿಸುವಂತೆ ಮಾಡಿ.

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ