ಎಷ್ಟೇ ಆಪ್ತ ಗೆಳತಿಯರಾದರೂ ಅವರೊಂದಿಗೆ ಯಾವ ಹಂತದವರೆಗೂ ಬೆಡ್ ರೂಂ ಸೀಕ್ರೆಟ್ಸ್ ಶೇರ್ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಒಮ್ಮೆ ಯೋಚಿಸಿ…..!
ರಮ್ಯಾಳಿಗೆ ಆಗ ತಾನೇ ಹೊಸದಾಗಿ ಮದುವೆಯಾಗಿತ್ತು. ಇದುವರೆಗೂ ಅವಳ ಜೀವನದಲ್ಲಿ ಸೆಕ್ಸ್ ಗೊತ್ತಿಲ್ಲದ ಒಂದು ಕಾನ್ಸೆಪ್ಟ್. ಮದುವೆಯಾದ ನಂತರ ಒಂದೊಂದೇ ಅನುಭವದಿಂದ ರೋಮಾಂಚನ ಗೊಳ್ಳುತ್ತಿದ್ದಳು. ತನ್ನ ಜೀವನದಲ್ಲಾದ ಈ ಪರಿವರ್ತನೆಯ ಕುರಿತು ಅವಳು ತನ್ನ ಬೆಸ್ಟ್ ಫ್ರೆಂಡ್ಸ್ ಬಳಿ ಹೇಳಿಕೊಂಡು ಸಂಭ್ರಮಿಸಲು ಬಯಸಿದಳು. ತನ್ನಂತೆಯೇ ಅವರಿಗೂ ಆ ಅನುಭವ ಆಗಿದೆಯೇ ಎಂದು ಕೇಳ ಬಯಸಿದಳು.
ಇದೇ ಖುಷಿಯಲ್ಲಿ ಒಂದು ಪಾರ್ಟಿಯಲ್ಲಿ ಭೇಟಿಯಾದ ತನ್ನ ಇಬ್ಬರು ಪ್ರಾಣ ಸ್ನೇಹಿತೆಯರೊಂದಿಗೆ ಅವಳು ತನ್ನಲ್ಲಾ ಬೆಡ್ ರೂಂ ಸೀಕ್ರೆಟ್ಸ್ ಹಂಚಿಕೊಂಡಳು. ಇದಾಗಿ 1 ತಿಂಗಳ ನಂತರ ಇವಳು ಪತಿಯೊಂದಿಗೆ ಗೆಳತಿ ಶ್ವೇತಾಳ ವೆಡ್ಡಿಂಗ್ ಆ್ಯನಿವರ್ಸರಿ ಪಾರ್ಟಿಗೆಂದು ಅವಳ ಮನೆಗೆ ಹೋದಾಗ, ಇವಳ ಗಂಡನ ಮುಂದೆಯೇ ಶ್ವೇತಾ, ಇವರಿಬ್ಬರ ಬಗ್ಗೆ 3ನೇ ಗೆಳತಿಯಿಂದ ಕೇಳಿದ್ದ ಇವರ ಬೆಡ್ ರೂಂ ರೊಮಾನ್ಸ್ ಬಗ್ಗೆ ಚರ್ಚಿಸತೊಡಗಿದಳು.
ಇದರಿಂದ ರಮ್ಯಾಳ ಗಂಡನಿಗೆ, ತಮ್ಮ ಪರ್ಸನಲ್ ವಿಷಯಗಳು ಪತ್ನಿಯ ಬುದ್ಧಿಗೇಡಿತನದಿಂದಾಗಿ ಊರೆಲ್ಲ ಬಹಿರಂಗಗೊಂಡಿದೆ ಎಂಬುದು ತಿಳಿಯಿತು. ಈ ವಿಷಯವಾಗಿ ಬಹಳ ದಿನಗಳ ಕಾಲ ಅವನು ಪತ್ನಿಯ ಮೇಲೆ ಮುನಿಸು ಕಾರುತ್ತಿದ್ದ. ಅತ್ತ ಅವಕಾಶ ಸಿಕ್ಕಾಗೆಲ್ಲ, ಶ್ವೇತಾ ಒಬ್ಬರಿಂದ ಒಬ್ಬರಿಗೆ ರಮ್ಯಾಳ ರೊಮಾನ್ಸ್ ಕುರಿತು ಪ್ರಚಾರ ಮಾಡುತ್ತಾ ಜೋಕ್ ಎಂಬಂತೆ ನಗುತ್ತಿದ್ದಳು. ಇದರಿಂದ ಶ್ವೇತಾ-ರಮ್ಯಾರ ನಡುವಿನ ಗೆಳೆತನ ಮುರಿದು ಬಿತ್ತು.
ಭೂಮಿಕಾ ಮದುವೆಯಾದಾಗ, ಅವಳ ಬೆಸ್ಟ್ ಫ್ರೆಂಡ್ ಮುಕ್ತಾ ಇವಳ ಸೆಕ್ಸ್ ಗುರುವಾದಳು. ಅತಿ ಮುಗ್ಧತೆಯಿಂದ ಭೂಮಿಕಾ ತನ್ನ ಬೆಡ್ ರೂಮಿನ ಪ್ರತಿ ಸಣ್ಣಪುಟ್ಟ ವಿಷಯವನ್ನೂ ಇವಳ ಮುಂದೆ ಬಂದು ಹಂಚಿಕೊಳ್ಳುತ್ತಿದ್ದಳು. ತನ್ನ ಪತಿಯೊಂದಿಗೆ ಸಂತೃಪ್ತ ದಾಂಪತ್ಯ ಜೀವನ ನಡೆಸಲಾರದ ಮುಕ್ತಾ, ಭೂಮಿಕಾಳ ಮಾತು ಕೇಳುತ್ತಾ, ಕ್ರಮೇಣ ಅವಳ ಪತಿ ಶಶಾಂಕ್ ನತ್ತ ಆಕರ್ಷಿತಳಾದಳು. ಅವಕಾಶ ಸಿಕ್ಕಾಗ ಮುಕ್ತಾ, ಭೂಮಿಕಾಳ ಪತಿ ಶಶಾಂಕ್ ನನ್ನು ತನ್ನ ಹಾವಭಾವಗಳಿಂದ ಬಲೆಗೆ ಕೆಡವಿಕೊಂಡು, ಗೆಳತಿಗೆ ವಿಶ್ವಾಸದ್ರೋಹ ಬಗೆದಳು. ಇವಳ ಬಯಕೆಯ ಹುಚ್ಚಿನಲ್ಲಿ ಮತ್ತನಾದ ಅವನು, ಚಿನ್ನದಂಥ ತನ್ನ ಸಂಸಾರ ಕೆಡಿಸಿಕೊಂಡು ಅಡ್ಡದಾರಿ ಹಿಡಿದಿದ್ದ. ಭೂಮಿಕಾ ಈಗ ಅವನೊಂದಿಗೆ ವಿಚ್ಛೇದನದ ಹಂತಕ್ಕೆ ತಲುಪಿದ್ದಾಳೆ. ಯಾಕಾದರೂ ತಾನು ಮುಕ್ತಾಳ ಬಳಿ ಬೆಡ್ ರೂಂ ಸೀಕ್ರೆಟ್ಸ್ ಹೇಳಿಕೊಂಡೆನೋ ಎಂದು ಈಗ ಅವಳು ಪರಿತಪಿಸುತ್ತಿದ್ದಾಳೆ.
ಎಷ್ಟೇ ಆಧುನಿಕ ಕಾಲವಾದರೂ, ಇಂದೂ ಸಹ ಅನೇಕ ಯುವಜೋಡಿ, ಮದುವೆಗೆ ಮುಂಚೆ ಸೆಕ್ಸ್ ಬಗ್ಗೆ ತಿಳಿಯದವರೇ ಆಗಿರುತ್ತಾರೆ. ಹೀಗಾಗಿ ಮದುವೆಯಾದ ನಂತರದ ಈ ಹೊಸ ಲೋಕದ ಪರಿಚಯವನ್ನು ಯಾರಲ್ಲಾದರೂ ಆತ್ಮೀಯರ ಬಳಿ ತೋಡಿಕೊಳ್ಳಲೇಬೇಕು ಎನಿಸುತ್ತದೆ. ಎಷ್ಟೋ ಮುಗ್ಧ ಜೋಡಿಗಳು ತಮಗಿದ್ದ ಅನುಭವವನ್ನು ಯಾರಲ್ಲಿ ಹಂಚಿಕೊಂಡು, ತಾವು ದಾಂಪತ್ಯದಲ್ಲಿ ಮತ್ತಷ್ಟು ಯಶಸ್ವಿಯಾಗಬೇಕು ಎಂಬ ಬಯಕೆಯಲ್ಲಿ, ತಮ್ಮ ಹಿತೈಷಿಗಳೋ ಅಲ್ಲವೋ ಗುರುತಿಸಲಾಗದೆ, ಅನಗತ್ಯವಾಗಿ ಇತರರ ಬಳಿ ಅದನ್ನು ಹಂಚಿಕೊಳ್ಳುತ್ತಾರೆ. ಈ ರೀತಿ ಅಂತರಂಗ ರಹಸ್ಯವನ್ನು ನಿಮ್ಮ ಪರಮ ಆಪ್ತರ ಬಳಿ ಹೇಳಿಕೊಳ್ಳುವುದರಿಂದ ಎಷ್ಟೋ ಸಲ ಲಾಭ ಆಗುತ್ತದಾದರೂ, ಅದಕ್ಕೆ ಅವರು ಎಷ್ಟು ಪಾತ್ರರು ಎಂಬುದನ್ನು ನೀವು ಮೊದಲೇ ಸೂಕ್ಷ್ಮವಾಗಿ ಗುರುತಿಸಿರಬೇಕು.
ಮೋಹಿನಿಗೆ ತಾನು ಪತಿಗೆ ಸರಿಯಾಗಿ ದೈಹಿಕ ಸುಖ ನೀಡಲಾಗುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಇತ್ತು. ಈ ಕುರಿತಾಗಿ ಅವಳು ತನ್ನ ಬೆಸ್ಟ್ ಫ್ರೆಂಡ್ ಉಷಾ ಬಳಿ ಚರ್ಚಿಸಿದಾಗ, ತಾನು ಅನಗತ್ಯವಾಗಿ ಈ ವಿಷಯದ ಕುರಿತು ಹೆಚ್ಚು ಸ್ಟ್ರೆಸ್ ಆಗುತ್ತಿದ್ದೇನೆ ಎಂಬುದನ್ನು ಮನಗಂಡು, ಅದನ್ನು ತಿದ್ದಿಕೊಂಡಳು.
ಹುಡುಗಿಯರು ತಮ್ಮ ಈ ಅಂತರಂಗದ ವಿಷಯವನ್ನು ಆಪ್ತ ಸ್ನೇಹಿತೆ ಬಳಿ ಚರ್ಚಿಸುವುದು ಮಾತ್ರ ಕ್ಷೇಮ ಎಂದು ಭಾವಿಸುತ್ತಾರೆ. ಆದರೆ ಅವರ ಬಳಿ ಯಾವ ಪ್ರಮಾಣದಲ್ಲಿ, ಎಷ್ಟು ವಿಷಯ ಶೇರ್ ಮಾಡಬಹುದು ಎಂಬುದು ನಿಜಕ್ಕೂ ಕ್ಲಿಷ್ಟಕರ ಪ್ರಶ್ನೆಯೇ ಸರಿ. ನೀವು ಈ ರೀತಿ ನಿಮ್ಮ ಬೆಡ್ ರೂಂ ಸೀಕ್ರೆಟ್ಸ್ ನ್ನು ಫ್ರೆಂಡ್ ಬಳಿ ಹೇಳಿಕೊಳ್ಳುತ್ತಿರುವಂತೆ, ನಿಮ್ಮ ಪತಿಯೂ ತಮ್ಮ ಫ್ರೆಂಡ್ ಬಳಿ ಚರ್ಚಿಸಿದರೆ ನಿಮ್ಮ ಆಕ್ಷೇಪಣೆ ಇಲ್ಲ ತಾನೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಏನೇ ಆದರೂ `ಸಂಸಾರದ ಗುಟ್ಟು ವ್ಯಾಧಿ ರಟ್ಟು’ ಎಂಬುದನ್ನು ಮನದಲ್ಲಿ ದೃಢಪಡಿಸಿಕೊಂಡು, ಎಷ್ಟನ್ನು ಯಾರಿಗೆ, ಹೇಗೆ ಹೇಳಬಹುದು ಎಂಬುದನ್ನು ಮತ್ತೆ ಮತ್ತೆ ಆಲೋಚಿಸಿ.
ಇಂಥವನ್ನು ಖಂಡಿತಾ ಹಂಚಿಕೊಳ್ಳದಿರಿ
ಸೆಕ್ಷುಯೆಲ್ ಫ್ಯಾಂಟೆಸಿ : ನಿಮ್ಮ ಸಂಗಾತಿಗೆ ಯಾವುದೇ ಸೆಕ್ಷುಯೆಲ್ ಫ್ಯಾಂಟೆಸಿ ಇರಬಹುದು, ಅದು ಕೇವಲ ನಿಮ್ಮಿಬ್ಬರ ದಾಂಪತ್ಯಕ್ಕೆ ಸಂಬಂಧಿಸಿದ ಗುಟ್ಟು. ನಂಬಿಕೆಯ ತಳಹದಿ ಮೇಲೆ ಆತ ಅದನ್ನು ನಿಮ್ಮೊಂದಿಗೆ ಹಂಚಿಕೊಂಡ ಮಾತ್ರಕ್ಕೆ, ನೀವು ಫ್ರೆಂಡ್ ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನೆಲ್ಲ ಹೇಳಬೇಕೆಂದಿಲ್ಲ. ನಂತರ ಈ ವಿಷಯ ನಿಮ್ಮ ಪತಿಗೆ ತಿಳಿದದ್ದೇ ಆದರೆ, ಆತ ಮುಂದೆಂದೂ ನಿಮ್ಮ ಬಳಿ ತನ್ನ ಮನದಾಳದ ಮಾತು ಹಂಚಿಕೊಳ್ಳಲಾರ. ನೀವು `ಯಾರ ಮುಂದೆ ಏನನ್ನು ಹೇಳಿಬಿಡುತ್ತೀರೋ,’ ಎಂಬ ಆತಂಕ ಆತನನ್ನು ನಿರಂತರ ಕಾಡುತ್ತಿರುತ್ತದೆ.
ಸೈರ್ ಡಿಸ್ಕಶನ್ : ನಿಮ್ಮ ಸಂಗಾತಿಯ ಗುಪ್ತಾಂಗದ ಬಗ್ಗೆ ಗೆಳತಿ ಬಳಿ ಮಾತನಾಡಿಕೊಳ್ಳುವುದು ಖಂಡಿತಾ ಸರಿಯಲ್ಲ. ಅದೇ ತರಹ ಆತ ನಿಮ್ಮ ಸ್ತನದ ಗಾತ್ರದ ಬಗ್ಗೆ ತನ್ನ ಫ್ರೆಂಡ್ ಬಳಿ ಮಾತನಾಡುತ್ತಿದ್ದರೆ ನಿಮಗೆ ಹೇಗೆ ಅನಿಸಬಹುದು? ನಿಮ್ಮದು ಅತಿರಂಜಿತ ಉತ್ಪ್ರೇಕ್ಷೆಯಾದರೆ, ನಿಮ್ಮ ಗೆಳತಿ ಮುಂದೆ ಸವತಿಯಾಗಿ ಕಾಡಿದರೂ ಆಶ್ಚರ್ಯವಿಲ್ಲ. ಏನೇ ಆಗಲಿ, ಇದರ ಪಾಸಿಟಿವ್ ಅಥವಾ ನೆಗೆಟಿವ್ ಎಫೆಕ್ಟ್ ಗೆ ನೀವೇ ಕಾರಣರಾಗುತ್ತೀರಿ.
ಇರೆಕ್ಷನ್ ಪ್ರಾಬ್ಲಂ : ನಿಮ್ಮ ಸಂಗಾತಿಯ ಗುಪ್ತಾಂಗದ ನಿಮಿರುವಿಕೆ ಕುರಿತು ಗೆಳತಿ ಬಳಿ ಚರ್ಚಿಸುವುದು ಸಹ ಬಲು ಸಂವೇದನಾಶೀಲ ವಿಷಯವಾಗಿದೆ. ನಿಮಗೆ ಆ ನಿಟ್ಟಿನಲ್ಲಿ ಸಹಾಯ ಬೇಕಿದ್ದರೆ, ನೇರ ವೈದ್ಯರ ಸಲಹೆ ಪಡೆಯಿರಿ. ಹೀಗಾಗಿ ಇಂಥ ಸೂಕ್ಷ್ಮ ವಿಷಯಗಳನ್ನು ಗೆಳೆತಿಯರ ಬಳಿ ಚರ್ಚಿಸಲೇ ಬಾರದು. ಯಾವಾಗ ನಿಮ್ಮ ಗೆಳತಿ ನಿಮ್ಮ ಈ ಪ್ರೈವೇಟ್ ವಿಷಯನ್ನು ಪಬ್ಲಿಕ್ ಮಾಡಿಬಿಟ್ಟಾಳೋ ಹೇಳಲಾಗದು. ಬೇಕೆಂದೇ ಕೆಲವು ಸ್ವಾರ್ಥಿಗಳು ಇಂಥ ವಿಷಯಗಳಿಂದ ನಿಮ್ಮನ್ನು ಬ್ಲ್ಯಾಕ್ ಮೇಲ್ ಸಹ ಮಾಡಬಹುದು. ಇದು ನಿಮ್ಮ ವೈವಾಹಿಕ ಜೀವನದ ನೆಮ್ಮದಿ ಹಾಳು ಮಾಡಬಲ್ಲದು.
ಲೈಂಗಿಕ ಚರ್ಚೆ ನಿಮ್ಮ ಖಾಸಗಿ ವಿಷಯ : ನೀವು ನಿಮ್ಮ ಸಂಗಾತಿ ಜೊತೆ ನಡೆಸುವ ಲೈಂಗಿಕ ಮದುವೆಯ ಬಗ್ಗೆ ಗೆಳತಿಯರ ಬಳಿ ಚರ್ಚಿಸುವ ಅಗತ್ಯವಿಲ್ಲ. ನಿಮ್ಮ ಬೆಡ್ ರೂಂ ಲೈಫ್ ನಿಮ್ಮಿಬ್ಬರ ಬದುಕಿನ ಅತ್ಯಂತ ಖಾಸಗಿ ಕ್ಷಣಗಳು. ಇದನ್ನೆಲ್ಲ ಗೆಳೆತಿಯರ ಬಳಿ ಚರ್ಚಿಸುವ ಪ್ರಶ್ನೆಯೇ ಇಲ್ಲ. ಈ ರೀತಿ ಮಾಡಲು ಹೋಗಿ ನೀವು ಗೆಳತಿಯ ಮುಂದೆ ತೆರೆದ ಪುಸ್ತಕವಾದರೆ, ಅವಳು ಅದನ್ನು ಅಪಹಾಸ್ಯದ ವಿಷಯ ಮಾಡಬಾರದು.
ಹಾಗೆಂದ ಮಾತ್ರಕ್ಕೆ ನಿಮ್ಮ ಬೆಡ್ ರೂಂ ವಿಷಯಗಳನ್ನು ಯಾರ ಮುಂದೂ ಮಾತನಾಡಬಾರದು, ಅದರಿಂದ ಸದಾ ಹಾನಿಯೇ ಆಗುತ್ತದೆ ಅಂತೇನಲ್ಲ. ನಿಮ್ಮ ವಿಶ್ವಾಸಕ್ಕೆ 100% ಪಾತ್ರಳಾದಂಥ ಗೆಳತಿಯ ಬಳಿ ಇಂಥ ಸೂಕ್ಷ್ಮ ವಿಷಯ ಚರ್ಚಿಸುವುದರಿಂದ ಕೆಲವು ಲಾಭಗಳೂ ಇವೆ.
ಬೆಡ್ ರೂಂ ಲೈಫ್ ಸ್ಪೈಸಿ ಆಗಲು ಸಹಕಾರಿ : ಗೆಳತಿ ಬಳಿ ಮಾತನಾಡಿದಾಗ, ಯಾವುದೋ ಗುಂಗಿನಲ್ಲಿ, ಅವಳಾಡುವ ಮಾತುಗಳಿಂದ ನಿಮ್ಮ ಬೆಡ್ ರೂಂ ಲೈಫ್ ನ್ನು ಮತ್ತಷ್ಟು ಸ್ಪೈಸಿ ಮಾಡಿಕೊಳ್ಳಲು ಒಂದಿಷ್ಟು ಸಲಹೆ ಸಿಗುತ್ತದೆ ಎಂಬುದೂ ನಿಜ. ಯಾವ ತರಹದ ಒಳವಸ್ತ್ರ ಸಂಗಾತಿಯನ್ನು ಆಕರ್ಷಿಸುತ್ತದೆ, ಯಾವ ಬಗೆಯ ಪರ್ಫ್ಯೂಮ್ ಸೆಕ್ಸ್ ಲೈಫ್ ನ್ನು ಬ್ರೈಟ್ ಗೊಳಿಸಬಲ್ಲದು, ಇತ್ಯಾದಿ ವಿಷಯಗಳನ್ನು ಜನರಲ್ ಆಗಿ ಚರ್ಚಿಸಬಹುದು.
ಫೋರ್ ಪ್ಲೇ ಕುರಿತ ಹೊಸ ಮಾಹಿತಿ : ಫೋರ್ ಪ್ಲೇ ಎಂಬುದು ಸೆಕ್ಸ್ ಡ್ರೈವ್ ನ್ನು ಇನ್ನಷ್ಟು ರೋಮಾಂಚನ ಗೊಳಿಸಬಲ್ಲದು. ಇದಕ್ಕೆ ಹೀಗೆ ಅಂತ ಸಿದ್ಧ ಸೂತ್ರಗಳಿಲ್ಲ. ಪ್ರತಿಯೊಬ್ಬರ ಫೋರ್ ಪ್ಲೇ ಅವರವರ ಭಾವಕ್ಕೆ ತೋಚಿದಂತಿರುತ್ತದೆ. ಇಂಥ ಮಾಮೂಲಿ ವಿಷಯಗಳನ್ನು ಗೆಳತಿ ಬಳಿ ಚರ್ಚಿಸಿ, ವಿಚಾರ ವಿನಿಮಯ ಮಾಡಿಕೊಳ್ಳಬಹುದು. ಒಂದು ವಿಷಯ ನೆನಪಿಡಿ, ಇದು ಸಾಮಾನ್ಯ ಚರ್ಚೆಗೆ ಸಂಬಂಧಿಸಿರಬೇಕೇ ಹೊರತು ನಿಮ್ಮ ವೈಯಕ್ತಿಕ ಬದುಕಿನದ್ದಲ್ಲ.
ಆರ್ಗಸಂ ಕುರಿತ ಕುತೂಹಲ : ಪರಮ ತೃಪ್ತಿ ಅಥಲ ಆರ್ಗಸಂ ಕೇಲಲ ಗಂಡಸರ ಸ್ವತ್ತಲ್ಲ. ಹೆಂಗಸರಿಗೂ ಈ ಬಗ್ಗೆ ಹಕ್ಕು ಇದ್ದೇ ಇದೆ. ಹೊಸದಾಗಿ ಮದುಲಂಯಾದ ಎಷ್ಟೋ ಹುಡುಗಿಯರು ಈ ಬಗ್ಗೆ ಅರಿತಿರುವುದೇ ಇಲ್ಲ. ನಿಮ್ಮ ಗೆಳತಿ ಯಾವುದೋ ಸ್ಪೆಷಲ್ ಪೊಸಿಷನ್ ಬಗ್ಗೆ ಮಾತನಾಡಿದರೆ, ಅದರಿಂದ ಅವಳಿಗೆ ಆರ್ಗಸಂ ದೊರಕಿರುವುದೇ ಆದರೆ, ನೀವು ಸಹ ಮುಂದೆ ಅದನ್ನು ಟ್ರೈ ಮಾಡಿ ನೋಡಿ.
ಗೊಂದಲದಿಂದ ಬಿಡುಗಡೆಗೆ ಮಾತುಕಥೆ ಅಗತ್ಯ : ಎಷ್ಟೋ ಸಲ ದಾಂಪತ್ಯದ ರಹಸ್ಯಗಳು, ಎಷ್ಟೋ ನಾರ್ಮಲ್ ವಿಷಯಗಳು ನಮಗೆ ತಿಳಿದೇ ಇರುವುದಿಲ್ಲ. ಹೊಸದಾಗಿ ಮದುವೆಯಾದವರಿಗೆ ಇದು ವಿಚಿತ್ರ ಅನಿಸಬಹುದು. ಪರ್ಸನಲ್ ಹೈಜೀನ್ ನಿಂದ ಹಿಡಿದು ಸೆಕ್ಸ್ ಟಾಯ್ಸ್ ವರೆಗಿನ ಮಾಹಿತಿ ನಮ್ಮನ್ನು ಗೊಂದಲಕ್ಕೆ ಕೆಡುವುತ್ತವೆ. ಇದನ್ನು ಗೆಳತಿಯರ ಬಳಿ ಮುಕ್ತವಾಗಿ ಚರ್ಚಿಸಿದಾಗ ಮಾತ್ರ ಗೊಂದಲ ದೂರವಾದೀತು.
ಬೆಟರ್ ಸೆಕ್ಸ್ ಲೈಫ್ ನಿಮ್ಮದಾಗಬೇಕೇ? : ಸೆಕ್ಸ್ ಲೈಫ್ ನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು, ಎಷ್ಟೋ ಸಲ ಗೆಳತಿಯರ ಬಳಿ ನೀವು ಮುಕ್ತವಾಗಿ ಚರ್ಚಿಸಿದಾಗ ಮಾತ್ರ ವಿಷಯದ ಆವಳ ಅರಿವಾಗುತ್ತದೆ. ಈ ಕುರಿತಾಗಿ 2 ವಿಷಯಗಳನ್ನು ಸದಾ ಗಮನದಲ್ಲಿಟ್ಟುಕೊಳ್ಳಿ. ಕೇವಲ ನಿಮ್ಮ ಬೆಸ್ಟ್ ಫ್ರೆಂಡ್ ಒಬ್ಬಳೇ ಇರುವಾಗ ಮಾತ್ರ ಇಂಥ ವಿಷಯ ಗುಟ್ಟಾಗಿ ಮಾತನಾಡಬೇಕೇ ಹೊರತು, ಹೊರಗೆ ಅಲ್ಲವೇ ಅಲ್ಲ. ನಿಮ್ಮ ಮಾತು ಜನರಲ್ ಆಗಿರಬೇಕೇ ವಿನಾ, ನಿಮ್ಮ ಸಂಗಾತಿ ಕುರಿತು ದೂರು ಹೇಳುತ್ತಿದ್ದೀರಿ ಎಂದು ಅವಳಿಗೆ ಅನಿಸಬಾರದು. ಇವನ್ನು ಅರ್ಥ ಮಾಡಿಕೊಂಡು ಚರ್ಚಿಸಿ.
– ಪ್ರತಿನಿಧಿ