ನೀವು ಸಹ ನಿಮ್ಮ ಆತ್ಮವಿಶ್ವಾಸವನ್ನು ಜಾಗರೂಕಗೊಳಿಸಿ, ಕನಸುಗಳ ಬೆನ್ನೇರಿ ಹೊರಡಲು ಬಯಸುವಿರಾ? ಹಾಗಾದರೆ ಇಲ್ಲಿನ ತಾಯಂದಿರ ಬಗ್ಗೆ ತಿಳಿದುಕೊಳ್ಳಿ, ತಮ್ಮ ಸ್ವಪ್ರಯತ್ನದಿಂದ ಇವರುಗಳು ಧೈರ್ಯದ ಮುನ್ನಡೆ ಇಟ್ಟಿದ್ದು ಹೇಗೆ ಅಂತ......!

ಜುಲೈ 2019ರ ಘಟನೆ. ಚಿಕ್ಕಮಗಳೂರಿನ ಕಾಫಿ ಕೆಫೆ ಡೇಯಂಥ ದೊಡ್ಡ ಕಂಪನಿಯ ಮಾಲೀಕರಾದ ವಿ.ಜಿ. ಸಿದ್ಧಾರ್ಥ್‌, ಬಿಸ್‌ನೆಸ್ ನಲ್ಲಿ ದೊಡ್ಡ ಲಾಸ್‌ ಆಯ್ತೆಂದು, ಅತಿ ದೊಡ್ಡ ಸಾಲ ಮಾಡಿಕೊಂಡಿದ್ದ ಅವರು ಆತ್ಮಹತ್ಯೆಗೆ ಶರಣಾದರು. ಅವರು ಬರೆದಿದ್ದ ಸುಯಿಸೈಡ್‌ ನೋಟಲ್ಲಿ, ತಮ್ಮ ಅಪಯಶಸ್ಸಿನಿಂದಾಗಿ ಹೀಗೆ ಮಾಡಿದೆನೆಂದು ಹೇಳಿದ್ದರು. ಪ್ರೈವೇಟ್‌ ಈಕ್ವಿಟಿ ಹೋಲ್ಡರ್ಸ್‌, ಆದಾಯ ತೆರಿಗೆ ವಿಭಾಗ ಹಾಗೂ ಇತರ ವಾಣಿಜ್ಯೋದ್ಯಮಿಗಳ ಅತಿ ಒತ್ತಡದಿಂದಾಗಿ ಅವರು ಹೀಗೆ ಮಾಡಿಕೊಂಡಿದ್ದರು.

ಸಿದ್ದಾರ್ಥ್‌ ರ ಈ ಆಕಸ್ಮಿಕ ಸಾವಿನ ನಂತರ ಇವರ ಪತ್ನಿ ಮಾಳವಿಕಾ ಸಂಪೂರ್ಣ ಕುಸಿದುಹೋಗಿದ್ದರು. ಅವರ ಸಂತಸದ ದಿನಗಳು ಇನ್ನಿಲ್ಲವಾಗಿತ್ತು. ಒಂದು ಕಡೆ ಪತಿಯ ದುರ್ಮರಣ, ಮತ್ತೊಂದೆಡೆ ಕೋಟ್ಯಂತರ ರೂ.ಗಳ ಸಾಲದಡಿ ಕಂಪನಿ! ಜೊತೆಗೆ ಇಬ್ಬರು ಗಂಡು ಮಕ್ಕಳ ಭವಿಷ್ಯದ ಚಿಂತೆ.... ಇಷ್ಟೆಲ್ಲ ಕಷ್ಟಗಳ ನಡುವೆಯೂ ಮಾಳವಿಕಾ ಹೆಗಡೆ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಧೈರ್ಯವಾಗಿ ಮುನ್ನಡೆದರು. ಕಂಪನಿಯ ಚುಕ್ಕಾಣಿ ತಾವೇ ಹಿಡಿದರು, ಎಲ್ಲವನ್ನೂ ಒಂದು ಕಡೆಯಿಂದ ಸರಿಪಡಿಸುತ್ತಾ ಬಂದರು. ಇದರ ಪರಿಶ್ರಮ ಫಲ ನೀಡಿತು, ಎರಡೇ ವರ್ಷಗಳಲ್ಲಿ ಕಂಪನಿ ಮತ್ತೆ ತಲೆ ಎತ್ತಿ ನಿಂತಿತು!

ಮಾರ್ಚ್‌ 2019ರ ಅಂಕಿ ಅಂಶಗಳ ಪ್ರಕಾರ ಕಂಪನಿಗೆ ಸುಮಾರು 7 ಸಾವಿರ ಕೋಟಿಗಳ ಸಾಲವಿತ್ತು. ಡಿಸೆಂಬರ್‌ 2020ರ ಹೊತ್ತಿಗೆ ಮಾಳವಿಕಾ ಹೆಗಡೆ ಈ ಕಂಪನಿಯ CEO ಆದರು. ಇವರು ಈ ಉದ್ಯಮದ ರಣರಂಗ ಎದುರಿಸುವ ಹೊತ್ತಿಗೆ, ಇವರ ಮುಂದೆ 3 ಸವಾಲುಗಳಿದ್ದವು ಪತಿಯ ದುರ್ಮರಣದಿಂದ ಹೊರಬಂದು ಕುಟುಂಬ ಸಂಭಾಳಿಸುವುದು, ಕಂಪನಿಯನ್ನು ಸಾಲ ಮುಕ್ತಗೊಳಿಸುವುದು, ಸಾವಿರಾರು ಸಿಬ್ಬಂದಿಯ ವೇತನ ಸಂಭಾಳಿಸುವುದು! ಇಂಥ ಹುಚ್ಚು ಹೊಳೆಯ ಎದುರು ಪ್ರವಾಹದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುತ್ತಾ ಒಬ್ಬ ಮಹಿಳೆ ಏಕಾಂಗಿಯಾಗಿ ಗೆದ್ದು ನಿಲ್ಲುವುದು, ಖಂಡಿತಾ ಸಣ್ಣ ವಿಷಯವಲ್ಲ! ಒಬ್ಬ ತಾಯಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂದು ಈಕೆ ಸಾಧಿಸಿ ತೋರಿಸಿದರು.

ಹೇಳಿದ್ದನ್ನು ಮಾಡಿ ತೋರಿಸಿದರು

ಒಂದು ವರದಿಯ ಪ್ರಕಾರ ಮಾರ್ಚ್‌ 2021ರ ಹೊತ್ತಿಗೆ ಕಂಪನಿ ಇನ್ನೂ 1,779 ಕೋಟಿ ರೂ.ಗಳ ಸಾಲ ಭರಿಸಬೇಕಿತ್ತು. ಇದರಲ್ಲಿ 1,263  ಕೋಟಿ ಲಾಂಗ್‌ ಟರ್ಮ್ ಲೋನ್‌ ಹಾಗೂ 5,16 ಕೋಟಿ ಶಾರ್ಟ್‌ ಟರ್ಮ್ ಲೋನ್‌ ಆಗಿತ್ತು. ಆ ಸಂದರ್ಭದಲ್ಲಿ ಈ ಕಂಪನಿ ಭಾರತದ 165 ನಗರಗಳಲ್ಲಿ 572 ಕೆಫೆಗಳನ್ನು ನಡೆಸುತ್ತಿತ್ತು. 36,326 ವೆಂಡಿಂಗ್‌ ಮೆಶೀನುಗಳ ಜೊತೆ ಇದು ರಾಷ್ಟ್ರದ ಅತಿ ಉನ್ನತ ಕಾಫಿ ಸರ್ವೀಸ್‌ ಬ್ರಾಂಡ್‌ ಗಳಲ್ಲಿ ಒಂದೆನಿಸಿದೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಲೇಶ ಮಾತ್ರ ಹಿಮ್ಮೆಟ್ಟದೆ, ಮಾಳವಿಕಾ ಇಡೀ ಪರಿಸ್ಥಿತಿಯನ್ನು ಅತಿ ಯಶಸ್ವಿಯಾಗಿ ಸಂಭಾಳಿಸಿದ್ದು ಭಾರತೀಯ ನಾರಿಯ ಧೀಶಕ್ತಿಗೆ ಒಂದು ಆದರ್ಶ ಉದಾಹರಣೆಯೇ ಹೌದು!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ