ನಿಮ್ಮನ್ನು ಇಷ್ಟಪಡುವ ವ್ಯಕ್ತಿಯ ಮೇಲೆ ಅತಿಯಾದ ನಂಬಿಕೆ ಬೇಡ. ಅದು ನಿಮ್ಮ ಮುಗ್ಧತೆ ಆತ್ಮಗೌರವ ಹಾಗೂ ಪ್ರಾಣಕ್ಕೆ ಕುತ್ತು ತರುವಂತಾಗಬಾರದು.......!

21 ವರ್ಷದ ಪೂರ್ಣಿಮಾ ಕಾಲೇಜೊಂದರ ಪ್ರತಿಭಾವಂತ ವಿದ್ಯಾರ್ಥಿನಿ. ಆಕೆ ಎಂ.ಎಸ್‌.ಸಿ ಜೊತೆಗೆ ಸ್ಪರ್ಧ್ಮಾತ್ಮಕ ಪರೀಕ್ಷೆಯ ತಯಾರಿಯಲ್ಲೂ ತೊಡಗಿದ್ದಳು. ಶ್ರೀಮಂತ ಕುಟುಂಬದ ಈಕೆ, ಇತರೆ ಹುಡುಗಿಯರು ಈ ವಯಸ್ಸಿನಲ್ಲಿ ಮಾಡುವ ತಪ್ಪನ್ನು ಮಾಡಿಬಿಟ್ಟಳು.

ಪ್ರೀತಿ ಮಾಡುವುದು ತಪ್ಪಲ್ಲ. ಆದರೆ ಪ್ರೀತಿಯಲ್ಲಿ ಬಿದ್ದು ಒಳ್ಳೆಯದು ಕೆಟ್ಟದ್ದರ ಅರಿವು ಇಲ್ಲದೆ ಮಾಡಿದ ತಪ್ಪಿಗೆ ತನ್ನ ಜೀವವನ್ನೇ ಬಲಿಕೊಟ್ಟಳು.

ಪೂರ್ಣಿಮಾಗೆ ತನ್ನದೇ ಊರಿನ ಮೊಬೈಲ್ ಅಂಗಡಿಯ ಹುಡುಗ ಚೇತನ್‌ ಜೊತೆ ಪ್ರೀತಿ ಆಗಿತ್ತು. ಅದೊಂದು ಸಲ ತನ್ನ ಮೊಬೈಲ್ ಕೆಟ್ಟು ಹೋದಾಗ, ಅದನ್ನು ಚೇತನನ ಅಂಗಡಿಗೆ ತೆಗೆದುಕೊಂಡು ಹೋಗಿದ್ದಳು. ಅವಳ ಮೊಬೈಲ್ ‌ಏನೋ ಸರಿಹೋಯಿತು. ಆದರೆ ಅವಳು ಅವನ ಬಣ್ಣದ ಮಾತಿಗೆ ಮರುಳಾಗಿಬಿಟ್ಟಳು. ಬಳಿಕ ಇಬ್ಬರೂ ವಾಟ್ಸ್ ಆ್ಯಪ್‌ ನಲ್ಲಿ ಚಾಟಿಂಗ್ ಮಾಡತೊಡಗಿದರು. ಕ್ರಮೇಣ ಅವರು ನಿಕಟವಾಗಿ, ಏಕಾಂತದ ಕ್ಷಣಗಳ ಫೋಟೋ ಬದಲಿಸಿಕೊಂಡರು.

ಪೂರ್ಣಿಮಾ ಆಕಸ್ಮಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ, ಘಟನೆ ನಡೆಯುವ ಒಂದು ದಿನ ಮೊದಲು ಚೇತನ್ ಅವಳ ಒಂದು ಫೋಟೋವನ್ನೂ ವೈರಲ್ ಮಾಡುವ ಬೆದರಿಕೆ ಹಾಕಿದನಂತೆ. ಚಾಟಿಂಗ್‌ ನಲ್ಲಿ ಅವಳು ತನ್ನ ಫೋಟೊವನ್ನು ವೈರಲ್ ಮಾಡಬೇಡ ಎಂದು ಎಷ್ಟೋ ಸಲ ಗೋಗರೆದಿದ್ದಳು. ಇಲ್ಲದಿದ್ದರೆ ನಾನು ಸತ್ತೇ ಹೋಗ್ತೀನಿ ಎಂದು ಹೇಳಿದ್ದಳು, ``ನೀನು  ನನ್ನನ್ನು ಹೊಡೆದು ಸಾಯಿಸು. ಆದರೆ ಆ ಫೋಟೋವನ್ನು ಮಾತ್ರ ವೈರಲ್ ಮಾಡಬೇಡ,'' ಎಂದೂ  ವಿನಂತಿಸಿ ಕೊಂಡಿದ್ದಳು. ಆದರೆ ಚೇತನ್‌ ಅವಳ ಮಾತಿಗೆ ಒಪ್ಪದಿದ್ದಾಗ ತನ್ನ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಳು. ಆ ಬಳಿಕವೇ ಅವಳ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಗೊತ್ತಾಯಿತು. ಚೇತನ್‌ ಅಷ್ಟರಲ್ಲಾಗಲೇ ಕಾಲು ಕಿತ್ತಿದ್ದ.

ಇಂತಹ ತಪ್ಪು ಮಾಡಬೇಡಿ

ಪೂರ್ಣಿಮಾ ಮಾಡಿದ ತಪ್ಪನ್ನೇ ರಜನಿ ಕೂಡ ಮಾಡಿದಳು. ಅವಳು ಅನಿಲ್ ‌ನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಪ್ರೀತಿಯ ಜ್ವರ ಅಷ್ಟೇ ಬೇಗನೇ ಇಳಿದುಹೋಯಿತು. ಆದರೆ ರಜನಿಗೆ ಸಂಬಂಧಪಟ್ಟ ಕೆಲವು ವೈಯಕ್ತಿಕ ಫೋಟೋಗಳು ಅವನ ಮೊಬೈಲ್ ‌ನಲ್ಲಿ ಉಳಿದಿದ್ದವು. ಅವೇನಾದರೂ ಜಗತ್ತಿನೆದುರು ಬಂದಿದ್ದರೆ ಅವಳ ಸ್ಥಿತಿ ಅಯೋಮಯವಾಗುತ್ತಿತ್ತು. ಬ್ರೇಕ್‌ ಅಪ್‌ ನ ಬಳಿಕ ಅನಿಲ್ ರಜನಿಯನ್ನು ಬ್ಲ್ಯಾಕ್‌ ಮೇಲ್ ಮಾಡತೊಡಗಿದ. ಅದನ್ನವಳು ಹೇಗೊ ಸಹಿಸಿಕೊಂಡಳು. ಆದರೆ ಅವಳ ಮದುವೆ ನಿಶ್ಚಿತವಾದಾಗ ಅವಳು ಇಕ್ಕಟ್ಟಿಗೆ ಸಿಲುಕಿ ಕೊಂಡಳು. ಅವಳ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುವುದಾಗಿ ಅನಿಲ್ ‌ಬೆದರಿಕೆ ಹಾಕತೊಡಗಿದಾಗ ಅವಳ ಧೈರ್ಯ ಕುಸಿದುಹೋಯಿತು. ಆ ಫೋಟೋಗಳೇನಾದರೂ ವೈರಲ್ ಆಗಿದ್ದಿದ್ದರೆ ಅವಳ  ಮದುವೆ ಮುರಿದು ಬೀಳುತ್ತಿತ್ತು. ಅವಳ ಕುಟುಂಬದ ಮಾನ ಹರಾಜಾಗುತ್ತಿತ್ತು. ರಜನಿ ಮೌನದಿಂದಿರುವುದನ್ನು ನೋಡಿ ಅನಿಲ್ ಗೆ ಇನ್ನಷ್ಟು ಧೈರ್ಯ ಬಂತು. ಅವನು ಅವಳ ಫೋಟೋಗಳನ್ನು ಅವಳ ಅಣ್ಣ ಮತ್ತು ಅಪ್ಪನಿಗೆ ಕಳಿಸಿಬಿಟ್ಟ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ