ಪ್ರೌಢಳಾದ ತಾಯಿಗೆ ಮುಂದೆ ಸಂತಾನದ ಆಸರೆಯ ಅಗತ್ಯ ಖಂಡಿತಾ ಬೇಕಾಗುತ್ತದೆ. ನೀವು ಒಬ್ಬಳೇ ಮಗಳಾದರೆ ಇದನ್ನು ಹೇಗೆ ನಿಭಾಯಿಸುವಿರಿ......?
ಇತ್ತೀಚೆಗೆ ಜನರ ಸರಾಸರಿ ಆಯುಸ್ಸು ಹೆಚ್ಚಿದೆ ಎಂದೇ ಹೇಳಬೇಕು. ನಮ್ಮ ದೇಶದಲ್ಲಿ ವೃದ್ಧರ ಸಂಖ್ಯೆ 1911 ರಿಂದ ಸತತ ಏರುತ್ತಲೇ ಇದೆ. 2023ರ ಹೊತ್ತಿಗೆ ಇವರ ಜನಸಂಖ್ಯೆ 14.1 ಕೋಟಿಗೆ ಹತ್ತಿರವಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ 20.23 ಕೋಟಿ ದಾಟಿದರೆ ಆಶ್ಚರ್ಯವಿಲ್ಲ! `ನ್ಯಾಶನಲ್ ಸ್ಟಾಟಿಕ್ಸ್ ಆಫೀಸ್'ನ ಒಂದು ಸಂಶೋಧನೆ ಇದನ್ನು ದೃಢಪಡಿಸಿದೆ. ಇದರಿಂದ ಹೆಚ್ಚು ಸಮಸ್ಯೆಗಳಾ ನೀವು ಗಮನಿಸಿದರೆ ಈಗೆಲ್ಲ ಎಲ್ಲರ ಮನೆಯಲ್ಲೂ ಒಂದೇ ಸಂತಾನ ಮಗನೋ ಮಗಳೋ ಇರುತ್ತಾರೆ. 2-3 ಮಕ್ಕಳಾದರೆ ಅವರ ಪಾಲನೆ ಪೋಷಣೆ, ವ್ಯಾಸಂಗ ಇತ್ಯಾದಿಗಳ ಟೆನ್ಶನ್ ನಿಂದಾಗಿ ಎಲ್ಲರೂ ಒಂದೇ ಮಗು ಸಾಕು ಎಂದುಕೊಳ್ಳುತ್ತಾರೆ.
ಇಷ್ಟು ಮಾತ್ರವಲ್ಲ, ಗೃಹಿಣಿ ಉದ್ಯೊಗಸ್ಥೆ ಹಾಗೂ ವಿಭಕ್ತ ಕುಟುಂಬ ಆಗಿರುವುದರಿಂದಲೂ ದಂಪತಿಗಳು ಒಂದೇ ಸಂತಾನ ಸಾಕು ಎಂದು ನಿರ್ಧರಿಸುತ್ತಾರೆ. ಅದೇ ಮಗ/ಮಗಳು ದೊಡ್ಡವರಾಗಿ ಇವರು ಪ್ರೌಢರಾದಂತೆ ಸಮಸ್ಯೆ ಬೇರೊಂದು ತಿರುವು ಪಡೆಯುತ್ತದೆ.
ತಮ್ಮ ಈ ಪ್ರೌಢಾವಸ್ಥೆಯಲ್ಲಿ ಮಕ್ಕಳ ಆಸರೆ ಬೇಕೆಂದು ಅವರು ಅಪೇಕ್ಷಿಸುವುದು ಅತಿ ಸಹಜ. ಆದರೆ ಈ ಹಿರಿಯರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರಾದರೂ ಉಳಿದಿದ್ದರೆ ತಾನೇ? ಮಗ ಇಂಗ್ಲೆಂಡ್, ಮಗಳು ಅಮೆರಿಕಾ, ಆಸ್ಟ್ರೇಲಿಯಾ ಎಂದು ಸೆಟಲ್ ಆಗಿರುವ ಕುಟುಂಬಗಳೇ ಇಂದು ಎಲ್ಲೆಲ್ಲೂ ಹೆಚ್ಚಾಗಿ ಕಂಡುಬರುತ್ತವೆ. ಮಗಳು ಮದುವೆಯಾಗಿ ಹೋದ ಮೇಲೆ ಅವಳಿಗೆ ಅತ್ತೆ ಮನೆ, ತನ್ನ ಪರಿವಾರದ ಜಂಜಾಟವೇ ಸಾಕಾಗಿರುತ್ತದೆ. ಇವನ್ನು ತಾಯಿ ತಂದೆಯರನ್ನು ಹೇಗೆ ನೋಡಿಕೊಂಡಾಳು? ಮಗನಂತೂ ಕೇಳುವುದೇ ಬೇಡ, ಮದುವೆಯಾದ ಮರು ತಿಂಗಳೇ ಇದ್ದೂರಲ್ಲಿ ಅಥವಾ ಬೇರೆ ನಗರದಲ್ಲಿ ಹೊಸ ಮನೆ ಹೂಡಿದರೆ ಮುಗಿಯಿತು, ಈ ಮುದಿ ತಾಯಿ ತಂದೆಯರ ಜವಾಬ್ದಾರಿ ಯಾಕೆ ಬೇಕಾದೀತು? ವೃದ್ಧ ದಂಪತಿ ಇಬ್ಬರೂ ಜೊತೆ ಜೊತೆಗಿದ್ದಾಗ, ಹೇಗೋ ಕಾಲ ದಾಟಿ ಹೋಗುತ್ತದೆ. ಅದರಲ್ಲಿ ಒಬ್ಬರು ತೀರಿಕೊಂಡಾಗ ಇನ್ನೊಬ್ಬರಿಗೆ ಸಮಸ್ಯೆಗಳು ಹೆದ್ದೆರೆಗಳಂತೆ ಅಪ್ಪಳಿಸುತ್ತವೆ.
ಬಹು ದೊಡ್ಡ ಜವಾಬ್ದಾರಿ
ಅದರಲ್ಲೂ ಒಬ್ಬಳೇ ಮಗಳಾಗಿರುವ ಮನೆಗಳಲ್ಲಿ ಈ ಸಮಸ್ಯೆ ಇನ್ನಷ್ಟು ಕಷ್ಟಕರ ಎಂದೇ ಹೇಳಬೇಕು. ಅವಳಿಗೆ ತನ್ನ ಕೆರಿಯರ್ ಬಹಳ ಮುಖ್ಯ, ಅದರ ನಡುವೆ ಪೇರೆಂಟ್ಸ್ ಜವಾಬ್ದಾರಿ ದೊಡ್ಡ ಹೊರೆ ಎಂದೇ ಭಾವಿಸುತ್ತಾಳೆ. ಇದರಿಂದಾಗಿ ಅವಳು ಎಷ್ಟೋ ಸಲ ಕಾಂಪ್ರಮೈಸ್ ಆಗಲೇ ಬೇಕಾಗುತ್ತದೆ, ಏಕೆಂದರೆ ಒಬ್ಬಳೇ ಮಗಳಾದ್ದರಿಂದ ಇವಳ ಹೊರತು ಈ ವೃದ್ಧರನ್ನು ಈ ಕಾಲದಲ್ಲಿ ಗಮನಿಸುವವರಾದರೂ ಯಾರು? ಈ ಪೇರೆಂಟ್ಸ್ ತಮ್ಮೆಲ್ಲ ಆಸ್ತಿಪಾಸ್ತಿ, ಗಳಿಕೆ, ಪ್ರೀತಿ ವಾತ್ಸಲ್ಯ ಎಲ್ಲವನ್ನೂ ಈ ಒಬ್ಬಳೇ ಸಂತಾನಕ್ಕಾಗಿ ಧಾರೆ ಎರೆದಿರುತ್ತಾರೆ. ಇಂಥ ಪರಿಸ್ಥಿತಿಗಳಲ್ಲಿ ತಾಯಿಯನ್ನು ಗಮನಿಸಿಕೊಳ್ಳುವುದು ಹೇಗೆ?
ಮುಖ್ಯವಾಗಿ ಒಬ್ಬಳೇ ಮಗಳಾದಾಗ
29ರ ಹರೆಯದ ದಿವ್ಯಾ ತನ್ನ ಹೆತ್ತವರ ಒಬ್ಬಳೇ ಮಗಳು. ಅವಳಿಗೆ ಇಬ್ಬರು ಮಕ್ಕಳು. ಆಕೆ ಒಂದು ಖಾಸಗಿ ಶಾಲೆಯಲ್ಲಿ ಟೀಚರ್. ಪತಿ ವಿಶಾಲ್ ಇವಳನ್ನು ಬಹಳ ಪ್ರೇಮಿಸುತ್ತಾನೆ, ಎಲ್ಲಾ ಸಹಾಯ ಮಾಡುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ ದಿವ್ಯಾಳಿಗೆ ಸದಾ ತನ್ನ ತಾಯಿ ತಂದೆಯರದೇ ಚಿಂತೆ. ವಿಶಾಲ್ ಹೆಚ್ಚು ಮಾವನ ಮನೆಗೆ ಹೋಗುವವನಲ್ಲ.