ಎಷ್ಟೇ ಆಪ್ತ ಗೆಳತಿಯರಾದರೂ ಅವರೊಂದಿಗೆ ಯಾವ ಹಂತದವರೆಗೂ ಬೆಡ್ರೂಂ ಸೀಕ್ರೆಟ್ಸ್ ಶೇರ್ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಒಮ್ಮೆ ಯೋಚಿಸಿ.....!

ರಮ್ಯಾಳಿಗೆ ಆಗ ತಾನೇ ಹೊಸದಾಗಿ ಮದುವೆಯಾಗಿತ್ತು. ಇದುವರೆಗೂ ಅವಳ ಜೀವನದಲ್ಲಿ ಸೆಕ್ಸ್ ಗೊತ್ತಿಲ್ಲದ ಒಂದು ಕಾನ್ಸೆಪ್ಟ್. ಮದುವೆಯಾದ ನಂತರ ಒಂದೊಂದೇ ಅನುಭವದಿಂದ ರೋಮಾಂಚನ ಗೊಳ್ಳುತ್ತಿದ್ದಳು. ತನ್ನ ಜೀವನದಲ್ಲಾದ ಈ ಪರಿವರ್ತನೆಯ ಕುರಿತು ಅವಳು ತನ್ನ ಬೆಸ್ಟ್ ಫ್ರೆಂಡ್ಸ್ ಬಳಿ ಹೇಳಿಕೊಂಡು ಸಂಭ್ರಮಿಸಲು ಬಯಸಿದಳು. ತನ್ನಂತೆಯೇ ಅವರಿಗೂ ಆ ಅನುಭವ ಆಗಿದೆಯೇ ಎಂದು ಕೇಳ ಬಯಸಿದಳು.

ಇದೇ ಖುಷಿಯಲ್ಲಿ ಒಂದು ಪಾರ್ಟಿಯಲ್ಲಿ ಭೇಟಿಯಾದ ತನ್ನ ಇಬ್ಬರು ಪ್ರಾಣ ಸ್ನೇಹಿತೆಯರೊಂದಿಗೆ ಅವಳು ತನ್ನಲ್ಲಾ ಬೆಡ್‌ ರೂಂ ಸೀಕ್ರೆಟ್ಸ್ ಹಂಚಿಕೊಂಡಳು. ಇದಾಗಿ 1 ತಿಂಗಳ ನಂತರ ಇವಳು ಪತಿಯೊಂದಿಗೆ ಗೆಳತಿ ಶ್ವೇತಾಳ ವೆಡ್ಡಿಂಗ್‌ ಆ್ಯನಿವರ್ಸರಿ ಪಾರ್ಟಿಗೆಂದು ಅವಳ ಮನೆಗೆ ಹೋದಾಗ, ಇವಳ ಗಂಡನ ಮುಂದೆಯೇ ಶ್ವೇತಾ, ಇವರಿಬ್ಬರ ಬಗ್ಗೆ 3ನೇ ಗೆಳತಿಯಿಂದ ಕೇಳಿದ್ದ ಇವರ ಬೆಡ್‌ ರೂಂ ರೊಮಾನ್ಸ್ ಬಗ್ಗೆ ಚರ್ಚಿಸತೊಡಗಿದಳು.

ಇದರಿಂದ ರಮ್ಯಾಳ ಗಂಡನಿಗೆ, ತಮ್ಮ ಪರ್ಸನಲ್ ವಿಷಯಗಳು ಪತ್ನಿಯ ಬುದ್ಧಿಗೇಡಿತನದಿಂದಾಗಿ ಊರೆಲ್ಲ ಬಹಿರಂಗಗೊಂಡಿದೆ ಎಂಬುದು ತಿಳಿಯಿತು. ಈ ವಿಷಯವಾಗಿ ಬಹಳ ದಿನಗಳ ಕಾಲ ಅವನು ಪತ್ನಿಯ ಮೇಲೆ ಮುನಿಸು ಕಾರುತ್ತಿದ್ದ. ಅತ್ತ ಅವಕಾಶ ಸಿಕ್ಕಾಗೆಲ್ಲ, ಶ್ವೇತಾ ಒಬ್ಬರಿಂದ ಒಬ್ಬರಿಗೆ ರಮ್ಯಾಳ ರೊಮಾನ್ಸ್ ಕುರಿತು ಪ್ರಚಾರ ಮಾಡುತ್ತಾ ಜೋಕ್‌ ಎಂಬಂತೆ ನಗುತ್ತಿದ್ದಳು. ಇದರಿಂದ ಶ್ವೇತಾ-ರಮ್ಯಾರ ನಡುವಿನ ಗೆಳೆತನ ಮುರಿದು ಬಿತ್ತು.

ಭೂಮಿಕಾ ಮದುವೆಯಾದಾಗ, ಅವಳ ಬೆಸ್ಟ್ ಫ್ರೆಂಡ್‌ ಮುಕ್ತಾ ಇವಳ ಸೆಕ್ಸ್ ಗುರುವಾದಳು. ಅತಿ ಮುಗ್ಧತೆಯಿಂದ ಭೂಮಿಕಾ ತನ್ನ ಬೆಡ್‌ ರೂಮಿನ ಪ್ರತಿ ಸಣ್ಣಪುಟ್ಟ ವಿಷಯವನ್ನೂ ಇವಳ ಮುಂದೆ ಬಂದು ಹಂಚಿಕೊಳ್ಳುತ್ತಿದ್ದಳು. ತನ್ನ ಪತಿಯೊಂದಿಗೆ ಸಂತೃಪ್ತ ದಾಂಪತ್ಯ ಜೀವನ ನಡೆಸಲಾರದ ಮುಕ್ತಾ, ಭೂಮಿಕಾಳ ಮಾತು ಕೇಳುತ್ತಾ, ಕ್ರಮೇಣ ಅವಳ ಪತಿ ಶಶಾಂಕ್‌ ನತ್ತ ಆಕರ್ಷಿತಳಾದಳು. ಅವಕಾಶ ಸಿಕ್ಕಾಗ ಮುಕ್ತಾ, ಭೂಮಿಕಾಳ ಪತಿ ಶಶಾಂಕ್‌ ನನ್ನು ತನ್ನ ಹಾವಭಾವಗಳಿಂದ ಬಲೆಗೆ ಕೆಡವಿಕೊಂಡು, ಗೆಳತಿಗೆ ವಿಶ್ವಾಸದ್ರೋಹ ಬಗೆದಳು. ಇವಳ ಬಯಕೆಯ ಹುಚ್ಚಿನಲ್ಲಿ ಮತ್ತನಾದ ಅವನು, ಚಿನ್ನದಂಥ ತನ್ನ ಸಂಸಾರ ಕೆಡಿಸಿಕೊಂಡು ಅಡ್ಡದಾರಿ ಹಿಡಿದಿದ್ದ. ಭೂಮಿಕಾ ಈಗ ಅವನೊಂದಿಗೆ ವಿಚ್ಛೇದನದ ಹಂತಕ್ಕೆ ತಲುಪಿದ್ದಾಳೆ. ಯಾಕಾದರೂ ತಾನು ಮುಕ್ತಾಳ ಬಳಿ ಬೆಡ್‌ ರೂಂ ಸೀಕ್ರೆಟ್ಸ್ ಹೇಳಿಕೊಂಡೆನೋ ಎಂದು ಈಗ ಅವಳು ಪರಿತಪಿಸುತ್ತಿದ್ದಾಳೆ.

ಎಷ್ಟೇ ಆಧುನಿಕ ಕಾಲವಾದರೂ, ಇಂದೂ ಸಹ ಅನೇಕ ಯುವಜೋಡಿ, ಮದುವೆಗೆ ಮುಂಚೆ ಸೆಕ್ಸ್ ಬಗ್ಗೆ ತಿಳಿಯದವರೇ ಆಗಿರುತ್ತಾರೆ. ಹೀಗಾಗಿ ಮದುವೆಯಾದ ನಂತರದ ಈ ಹೊಸ ಲೋಕದ ಪರಿಚಯವನ್ನು ಯಾರಲ್ಲಾದರೂ ಆತ್ಮೀಯರ ಬಳಿ ತೋಡಿಕೊಳ್ಳಲೇಬೇಕು ಎನಿಸುತ್ತದೆ. ಎಷ್ಟೋ ಮುಗ್ಧ ಜೋಡಿಗಳು ತಮಗಿದ್ದ ಅನುಭವವನ್ನು ಯಾರಲ್ಲಿ ಹಂಚಿಕೊಂಡು, ತಾವು ದಾಂಪತ್ಯದಲ್ಲಿ ಮತ್ತಷ್ಟು ಯಶಸ್ವಿಯಾಗಬೇಕು ಎಂಬ ಬಯಕೆಯಲ್ಲಿ, ತಮ್ಮ ಹಿತೈಷಿಗಳೋ ಅಲ್ಲವೋ ಗುರುತಿಸಲಾಗದೆ, ಅನಗತ್ಯವಾಗಿ ಇತರರ ಬಳಿ ಅದನ್ನು ಹಂಚಿಕೊಳ್ಳುತ್ತಾರೆ. ಈ ರೀತಿ ಅಂತರಂಗ ರಹಸ್ಯವನ್ನು ನಿಮ್ಮ ಪರಮ ಆಪ್ತರ ಬಳಿ ಹೇಳಿಕೊಳ್ಳುವುದರಿಂದ ಎಷ್ಟೋ ಸಲ ಲಾಭ ಆಗುತ್ತದಾದರೂ, ಅದಕ್ಕೆ ಅವರು ಎಷ್ಟು ಪಾತ್ರರು ಎಂಬುದನ್ನು ನೀವು ಮೊದಲೇ ಸೂಕ್ಷ್ಮವಾಗಿ ಗುರುತಿಸಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ