ಪ್ರ : ನನ್ನ ಸ್ಕಿನ್ ಆಯ್ಲಿ ಆಗಿರುತ್ತದೆ. ಬೇಸಿಗೆಯಲ್ಲಿ ಅದು ಇನ್ನಷ್ಟು ಆಯ್ಲಿ ಆಗುತ್ತದೆ. ಜೊತೆಗೆ ಮುಖದ ಪೋರ್ಸ್ ದೊಡ್ಡದಾಗುತ್ತದೆ. ನನಗೆ ಹೋಮ್ ಮೇಡ್ ಸ್ಕಿನ್ ಟೋನರ್ ಬಗ್ಗೆ ಮಾಹಿತಿ ಕೊಡಿ.
ಉ : ಟೊಮೇಟೊ ಹಾಗೂ ಜೇನುತುಪ್ಪದ ಮುಖಾಂತರ ಹೋಮ್ ಮೇಡ್ ಸ್ಕಿನ್ ಟೋನರ್ ಸಿದ್ಧಪಡಿಸಿಕೊಳ್ಳಬಹುದು. ತಾಜಾ ಟೊಮೇಟೊ ರಸ ತೆಗೆದುಕೊಂಡು ಅದರಲ್ಲಿ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿಕೊಂಡು ದಟ್ಟ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖದ ಮೇಲೆ ಲೇಪಿಸಿಕೊಂಡು 20 ನಿಮಿಷಗಳ ಬಳಿಕ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಈ ಹೋಮ್ ಮೇಡ್ ಸ್ಕಿನ್ ಟೋನರ್ ನಿಮ್ಮ ಆಯ್ಲಿ ಸ್ಕಿನ್ ಗೆ ವರದಾನವಾಗಿ ಪರಿಣಮಿಸುತ್ತದೆ. ಇದು ಮೊಡವೆ, ಬೊಕ್ಕೆಗಳನ್ನು ಕಡಿಮೆ ಮಾಡಲು ಕೂಡ ನೆರವಾಗುತ್ತದೆ. ವಾರದಲ್ಲಿ 2-3 ಬಾರಿ ಈ ಪ್ರಯೋಗ ಮಾಡಿ.
ಪ್ರ : ನನ್ನ ಮುಖದ ಚರ್ಮಕ್ಕೆ ಹೋಲಿಸಿದರೆ ನನ್ನ ಕತ್ತಿನ ಬಣ್ಣ ಹೆಚ್ಚು ಡಾರ್ಕ್ ಆಗಿರುವಂತೆ ಕಂಡುಬರುತ್ತದೆ. ಇದನ್ನು ಸರಿಪಡಿಸಲು ಯಾವುದಾದರೂ ಉಪಾಯ ಸೂಚಿಸಿ.
ಉ : ಕುತ್ತಿಗೆಯ ಕಪ್ಪು ಛಾಯೆ ಮುಖದ ಸೌಂದರ್ಯವನ್ನು ಹಾಳುಗೆಡಹುತ್ತದೆ. ಹೀಗೇಕಾಗುತ್ತದೆ ಎಂದರೆ, ನೀವು ಮುಖದ ಬಗೆಗಷ್ಟೇ ಹೆಚ್ಚು ಗಮನಕೊಟ್ಟು ಕುತ್ತಿಗೆಯನ್ನು ಮರೆತುಬಿಡುತ್ತೀರಿ. ಕುತ್ತಿಗೆಯ ಚರ್ಮಕ್ಕೆ ಹೊಳಪು ಕೊಡಲು ಓಟ್ ಸ್ಕ್ರಬ್ ಲೇಪಿಸಿ. 3-4 ಚಮಚ ಓಟ್ಸ್ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅತ್ಯುತ್ತಮ ಪರಿಣಾಮಕ್ಕಾಗಿ ಅದರಲ್ಲಿ 2 ಚಮಚ ಟೊಮೇಟೊ ತಿರುಳು ಸೇರಿಸಿ. ಈ ಪೇಸ್ಟ್ ನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕುತ್ತಿಗೆಯ ಮೇಲೆ ಲೇಪಿಸಿ. 1 ವಾರದಲ್ಲಿ 2-3 ಸಲ ಈ ಪೇಸ್ಟ್ ಲೇಪಿಸಿದರೆ ವ್ಯತ್ಯಾಸ ನಿಮಗೇ ಗೋಚರಿಸುತ್ತದೆ.
ಪ್ರ : ನಾನು ಒಂದು ವರ್ಷ ಮೊದಲು ಹೇರ್ ಬಾಂಡಿಂಗ್ ಮಾಡಿಸಿದೆ. ಈಗ ನನ್ನ ಕೂದಲು ಪುನಃ ಡ್ರೖೈ ಆಗಲು ಶುರುವಾಗಿದೆ. ಎಷ್ಟು ಸಲ ಹೇರ್ ರೀಬಾಂಡಿಂಗ್ ಮಾಡಿಸಬಹುದು ತಿಳಿಸಿ.
ಉ : ಇತ್ತೀಚೆಗೆ ಜಪಾನಿ ಥರ್ಮಲ್ ಪ್ರಕ್ರಿಯೆ ಸ್ರೇಟ್ ನಿಂಗ್ ಕೂದಲುಗಳನ್ನು ಬಿಡಿಸುವ ಎಲ್ಲಕ್ಕೂ ಸುಲಭ ವಿಧಾನ. ಅದನ್ನು ರೀಬಾಂಡಿಂಗ್ ಎಂದು ಕರೆಯಲಾಗುತ್ತದೆ. ಪರಿಪೂರ್ಣ ರೀಬಾಂಡಿಂಗ್ ಪ್ರಕ್ರಿಯೆಯ ಪ್ರಭಾವ 1 ವರ್ಷದ ತನಕ ಇರುತ್ತದೆ. ಅದರ ಪ್ರಭಾವವನ್ನು ಹೊಸದಾಗಿ ಬೆಳೆದ ಕೂದಲಿನ ಮೇಲೂ ಕಾಣಬಹುದಾಗಿದೆ. ಇದು ಕೂದಲನ್ನು ಸುಧಾರಿಸುವ ಪರಿಣಾಮಕಾರಿ ವಿಧಾನವಾಗಿದೆ.
ಪ್ರ : ನನ್ನ ವಯಸ್ಸು 26. ನನ್ನದು ಗೋಧಿ ಬಣ್ಣ. ನನ್ನ ಮುಖದಲ್ಲಿ ಮೊಡವೆಗಳ ಕಪ್ಪು ಗುರುತುಗಳಿವೆ. ಅವನ್ನು ಹೋಗಲಾಡಿಸಲು ಮನೆ ಉಪಾಯ ತಿಳಿಸಿ.
ಉ : ನಿಮ್ಮ ಕಲೆಗಳು ಗಂಭೀರ, ಹಳೆಯ ಹಾಗೂ ಬಹಳ ಆಳವಾಗಿದ್ದರೆ, ಅವನ್ನು ನಿವಾರಿಸಲು ನೀವು ಯಾರಾದರೂ ತಜ್ಞರ ಸಲಹೆ ಪಡೆಯಿರಿ. ಮುಖದ ಕಲೆಗಳನ್ನು ನಿವಾರಿಸಲು 1 ಚಮಚ ಆ್ಯಪಲ್ ವಿನಿಗರ್, 2 ಚಮಚ ಜೇನುತುಪ್ಪ ಅವಶ್ಯಕತೆಗನುಸಾರ ನೀರು ಮಿಶ್ರಣ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಅದನ್ನು ಉಪಯೋಗಿಸಿ. ಆ್ಯಪಲ್ ವಿನಿಗರ್ ನಲ್ಲಿ ಆ್ಯಂಟಿ ಮೈಕ್ರೋಬಿಯಲ್ ಗುಣವಿರುತ್ತದೆ. ಈ ಮಿಶ್ರಣವನ್ನು ಹತ್ತಿಯ ತುಂಡಿನಿಂದ ಮೊಡವೆ ಹಾಗೂ ಕಲೆಗಳ ಮೇಲೆ ಲೇಪಿಸಿ 15 ನಿಮಿಷಗಳ ಬಳಿಕ ಮುಖ ತೊಳೆದುಕೊಳ್ಳಿ.