ಧೂಮಪಾನದ ಹೊರತಾಗಿ ಲಂಗ್ಸ್ ಕ್ಯಾನ್ಸರ್ಉಂಟಾಗಲು ಬೇರೆ ಕೆಲವು ಕಾರಣಗಳು ಕೂಡ ಇವೆ. ಲಕ್ಷಣಗಳನ್ನು ರೀತಿ ಗುರುತಿಸಬಹುದು…….!

ಕಳೆದ ಕೆಲವು ವರ್ಷಗಳಿಂದ ಲಂಗ್ಸ್ ಕ್ಯಾನ್ಸರ್‌ ಅಂದರೆ ಶ್ವಾಸಕೋಶದ ಕ್ಯಾನ್ಸರ್‌ ನ ರೋಗಿಗಳಲ್ಲಿ ತೀವ್ರವಾಗಿ ಹೆಚ್ಚಳ ಉಂಟಾಗಿದೆ. ಮೊದಲು ಇದನ್ನು `ಸ್ಮೋಕರ್ಸ್‌ ಡಿಸೀಸ್‌’ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈಗ ಯುವಕರು, ಮಹಿಳೆಯರು ಹಾಗೂ ಧೂಮಪಾನ ಮಾಡದೇ ಇರುವವರು ಕೂಡ ಇದರ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ.

`ಲಂಗ್ಸ್ ಕ್ಯಾನ್ಸರ್‌ ಫೌಂಡೇಶನ್‌’ ಮುಖಾಂತರ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಲಂಗ್ಸ್ ಕ್ಯಾನ್ಸರಿಗೆ ತುತ್ತಾದ ಶೇ.21ರಷ್ಟು ಜನರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವವಲ್ಲಿ ಕೆಲವರ ವಯಸ್ಸಂತೂ 30 ವರ್ಷಕ್ಕಿಂತ ಕಡಿಮೆ ಇದೆ. ಯುವಕರ ಜೊತೆಗೆ ಯುವತಿಯರು ಕೂಡ ಇದರ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ.

ಲಂಗ್ಸ್ ಕ್ಯಾನ್ಸರ್‌ : ಶ್ವಾಸಕೋಶಗಳಲ್ಲಿ ಅಸಾಮಾನ್ಯ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯು ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುತ್ತದೆ. ಈ ಜೀವಕೋಶಗಳು ಶ್ವಾಸಕೋಶದ ಯಾವುದೇ ಭಾಗದಲ್ಲಿ ಇರಬಹುದು ಅಥವಾ ಶ್ವಾಸನಾಳದಲ್ಲಿ ಇರಬಹುದು. ಲಂಗ್ಸ್ ಕ್ಯಾನ್ಸರಿಗೆ ಜೀವಕೋಶಗಳು ಬಹುವೇಗದಲ್ಲಿ ವಿಭಿಜಿತವಾಗುತ್ತಿರುತ್ತವೆ ಹಾಗೂ ಬಹುದೊಡ್ಡ ಟ್ಯೂಮರ್ ಸಿದ್ಧಗೊಳ್ಳುತ್ತದೆ. ಆ ಕಾರಣದಿಂದ ಶ್ವಾಸಕೋಶದ ಕಾರ್ಯ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿವರ್ಷ ವಿಶ್ಯಾದ್ಯಂತ 7-6 ಲಕ್ಷ ಜನರು ಶ್ವಾಸಕೋಶದ ಕ್ಯಾನ್ಸರಿನಿಂದ ಮೃತಪಡುತ್ತಾರೆ. ಅದು ವಿಶ್ವಾದ್ಯಂತದ ಸಾವಿನಲ್ಲಿ 13% ಆಗಿದೆ.

ಮೊದಲು 10 ಪುರುಷರಲ್ಲಿ ಒಬ್ಬ ಮಹಿಳೆಗೆ ಲಂಗ್ಸ್ ಕ್ಯಾನ್ಸರ್‌ ಆಗುತ್ತಿತ್ತು. ಅದು ಈಗ 4 ಮಹಿಳೆಯರನ್ನು ಆರಿಸಿಕೊಳ್ಳುತ್ತಿದೆ. ಇದು ಚಿಂತೆಯ ವಿಷಯವಾಗಿದೆ. ಲಂಗ್ಸ್ ಕ್ಯಾನ್ಸರ್‌ ಮುಖಾಂತರ ಸಾವಿಗೀಡಾಗುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೊರಟಿದೆ. ಯುಟರೈನ್‌ ಕ್ಯಾನ್ಸರ್‌ ಹಾಗೂ ಓವೇರಿಯನ್‌ ಕ್ಯಾನ್ಸರ್‌ ಗೆ ಹೋಲಿಸಿದರೆ ಸ್ತನ ಕ್ಯಾನ್ಸರಿನ ಪ್ರಕರಣಗಳು ಹೆಚ್ಚು.

ಲಂಗ್ಸ್ ಕ್ಯಾನ್ಸರಿಗೆ ಮೂಲ

ಲಂಗ್ಸ್ ಕ್ಯಾನ್ಸರಿನ 10ರ 5 ಪ್ರಕರಣಗಳಲ್ಲಿ ಎಲ್ಲಕ್ಕೂ ಮುಖ್ಯ ಕಾರಣವೆಂದರೆ, ತಂಬಾಕು ಸೇವನೆಯಾಗಿರುತ್ತದೆ. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಆದರೆ ಈಗ ಲಂಗ್ಸ್ ಕ್ಯಾನ್ಸರಿನ ಪ್ರಕರಣಗಳು ಧೂಮಪಾನ ಮಾಡದೇ ಇರುವವರಲ್ಲೂ ತೀವ್ರವಾಗಿ ಹೆಚ್ಚುತ್ತಿದೆ.

ಯಾರು ಧೂಮಪಾನ ಮಾಡುವವರ ಜೊತೆಗಿರುತ್ತಾರೊ, ಪ್ಯಾಸೀವ್ ‌ಸ್ಮೋಕಿಂಗ್‌ ನ ಕಾರಣದಿಂದ ಅವರಲ್ಲೂ ಲಂಗ್ಸ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ 24% ತನಕ ಹೆಚ್ಚುತ್ತದೆ.

ಸಿಓಪಿಡಿಗೆ ತುತ್ತಾಗಿರುವವರಲ್ಲಿ ಲಂಗ್ಸ್ ಕ್ಯಾನ್ಸರ್‌ ನ ಅಪಾಯ 4-6 ಪಟ್ಟು ಹೆಚ್ಚುತ್ತದೆ.

ಲಂಗ್ಸ್ ಕ್ಯಾನ್ಸರ್‌ ನ ಒಂದು ಕಾರಣ ಆನುವಂಶಿಕತೆಯೂ ಇರುತ್ತದೆ.

ವಾಯು ಮಾಲಿನ್ಯದ ಕಾರಣದಿಂದಲೂ ಶ್ವಾಸ ಕ್ಯಾನ್ಸರ್‌ ನ ಪ್ರಕರಣಗಳು ಹೆಚ್ಚುತ್ತವೆ.

ಲಂಗ್ಸ್ ಕ್ಯಾನ್ಸರ್ ಕಾರಣಗಳು

ನಿರಂತರವಾಗಿ ಕೆಮ್ಮು ಬರುವುದು

ಕಫದಲ್ಲಿ ರಕ್ತ ಬರುವುದು

ಉಸಿರು ತೆಗೆದುಕೊಳ್ಳಲು ಹಾಗೂ ಏನಾದರೂ ನುಂಗಲು ತೊಂದರೆಯಾಗುವುದು

ಧ್ವನಿ ಕರ್ಕಶವಾಗುವುದು

ನಿಮೋನಿಯಾ ಉಂಟಾಗುವಿಕೆ ಮುಂತಾದವು

ನಿರಂತರವಾಗಿ ಕೆಮ್ಮು ಇರುವಿಕೆ ಮತ್ತು ಕೆಮ್ಮಿನ ಜೊತೆಗೆ ರಕ್ತ ಬರುವುದು ಶ್ವಾಸಕೋಶ ಕ್ಯಾನ್ಸರ್‌ ನ ಮುಖ್ಯ ಲಕ್ಷಣವಾಗಿದೆ. ಅದು ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಉಂಟಾಗುತ್ತದೆ. ಉಳಿದ ಲಕ್ಷಣಗಳು ಹೇಗಿವೆಯೆಂದರೆ, ಅವು ಬೇರೆ ಮೂಲಗಳಿಂದಲೂ ಉಂಟಾಗಬಹುದು. ಯಾವುದೇ ಲಕ್ಷಣಗಳು ಕಂಡುಬಂದಾಗ ಚಿಕಿತ್ಸೆ ಪಡೆಯುವುದು ಅತ್ಯಂತ ಅವಶ್ಯಕ.

ಶ್ವಾಸಕೋಶದ ಕ್ಯಾನ್ಸರ್ಗೆ ಚಿಕಿತ್ಸೆ : ಕ್ಯಾನ್ಸರ್‌ ನ ಪ್ರಕಾರ ಯಾವುದು ಅದು ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಕ್ಯಾನ್ಸರ್ ನ ಚಿಕಿತ್ಸೆ ಅವಲಂಬಿಸಿರುತ್ತದೆ. ಲಂಗ್ಸ್ ಕ್ಯಾನ್ಸರ್‌ ನ ಹಲವು ವಿಧಾನಗಳಿವೆ. ಸರ್ಜರಿ, ಕೀಮೋಥೆರಪಿ, ಟಾರ್ಗೆಟ್‌ ಥೆರಪಿ,  ರೇಡಿಯೇಶನ್‌ ಥೆರಪಿ ಹಾಗೂ ಇಮ್ಯೂನ್‌ ಥೆರಪಿ.

ಸರ್ಜರಿ : ಮೊದಲು ಹಾಗೂ ಎರಡನೇ ಹಂತದಲ್ಲಿ ಶಸ್ತ್ರಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ. ಏಕೆಂದರೆ ಅಲ್ಲಿಯವರೆಗೆ ರೋಗ ಶ್ವಾಸಕೋಶದ ತನಕ ಸೀಮಿತವಾಗಿರುತ್ತದೆ. ಥರ್ಡ್‌ ಸ್ಟೇಜ್‌ ನಲ್ಲೂ ಸರ್ಜರಿ ಮಾಡಬಹುದು. ಆದರೆ ಆಗ ಕ್ಯಾನ್ಸರ್ ಶ್ವಾಸಕೋಶದ ಹೊರಗೆ ಎದೆಯ ಗೂಡಿನಿಂದ ಹೊರಗೆ ಬಂದು ಬೇರೆ ಅಂಗಗಳಿಗೂ ಪಸರಿಸುತ್ತದೆ. ಆಗ ಶಸ್ತ್ರಚಿಕಿತ್ಸೆಯಿಂದ ಇದನ್ನು ಸರಿಪಡಿಸಲಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಕೀಮೋಥೆರಪಿ, ಟಾರ್ಗೆಟ್‌ ಥೆರಪಿ ಹಾಗೂ ರೇಡಿಯೇಶನ್‌ ಥೆರಪಿಯ ನೆರವು ಪಡೆದುಕೊಳ್ಳಬಹುದಾಗಿದೆ.

ಕೀಮೋಥೆರಪಿ : ಈ ಚಿಕಿತ್ಸೆಯಲ್ಲಿ ಸೈಟೊಟಾಕ್ಸಿಕ್‌ ಔಷಧಿಯನ್ನು ನರಗಳಲ್ಲಿ ಇಂಜೆಕ್ಷನ್‌ ಮುಖಾಂತರ ದೇಹದೊಳಗೆ ತಲುಪಿಸಲಾಗುತ್ತದೆ. ಅದು ಜೀವಕೋಶಗಳಿಗೆ ಅಪಾಯಕಾರಿ. ಅದರಿಂದ ಅನಿಯಂತ್ರಿತ ರೀತಿಯಲ್ಲಿ ಹೆಚ್ಚುತ್ತಿರುವ ಜೀವಕೋಶಗಳು ನಾಶವಾಗುತ್ತವೆ. ಅದರಿಂದಾಗಿ ಕೆಲವು ಆರೋಗ್ಯಕರ ಜೀವಕೋಶಗಳಿಗೂ ಹಾನಿಯಾಗುತ್ತದೆ.

ಟಾರ್ಗೆಟ್ಥೆರಪಿ : ಕೀಮೋಥೆರಪಿಯ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಟಾರ್ಗೆಟ್‌ ಥೆರಪಿಯನ್ನು ವಿಕಸಿತಗೊಳಿಸಲಾಯಿತು. ಇದರ ಮುಖಾಂತರ ಸಾಮಾನ್ಯ ಜೀವಕೋಶಗಳಿಗೆ ಹಾನಿ ಉಂಟು ಮಾಡದೇ ಕ್ಯಾನ್ಸರ್‌ ಗ್ರಸ್ತ ಜೀವಕೋಶಗಳನ್ನಷ್ಟೇ ನಾಶಗೊಳಿಸಲಾಗುತ್ತದೆ. ಇದರಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ.

ರೇಡಿಯೇಶನ್ಥೆರಪಿ : ಈ ಥೆರಪಿಯಲ್ಲೂ ಕ್ಯಾನ್ಸರ್‌ ಗ್ರಸ್ತ ಜೀವಕೋಶಗಳನ್ನು ನಿವಾರಿಸಲು ಅತ್ಯಂತ ಶಕ್ತಿಶಾಲಿ ಕಿರಣಗಳನ್ನು ಉಪಯೋಗಿಸಲಾಗುತ್ತದೆ. ಹಲವು ಕಾರಣಗಳಿಂದ ಈ ಥೆರಪಿ ಅನುಸರಿಸಲಾಗುತ್ತದೆ. ಎಷ್ಟೋ ಸಲ ಶಸ್ತ್ರಚಿಕಿತ್ಸೆಯ ಬಳಿಕ ಉಳಿದುಕೊಂಡ ಕ್ಯಾನ್ಸರ್‌ ಗ್ರಸ್ತ ಜೀವಕೋಶಗಳನ್ನು ನಿವಾರಿಸಲು ಬಳಸಲಾಗುತ್ತದೆ. ಮತ್ತೆ ಎಷ್ಟೋ ಸಲ ಶಸ್ತ್ರಚಿಕಿತ್ಸೆಗೂ ಮುನ್ನ ಕೀಮೋಥೆರಪಿಯ ಜೊತೆಗೆ ಇದನ್ನು ಬಳಸಲಾಗುತ್ತದೆ. ಏಕೆಂದರೆ ಶಸ್ತ್ರಚಿಕಿತ್ಸೆಯ ಮುಖಾಂತರ ತೆಗೆದು ಹಾಕಲಿರುವ ಟ್ಯೂಮರ್‌ ನ ಆಕಾರವನ್ನು ಕಿರಿದುಗೊಳಿಸಲು ಇದನ್ನು ಉಪಯೋಗಿಸಲಾಗುತ್ತದೆ.

ಇಮ್ಯುನೊಥೆರಪಿ : ಬಯಾಲಜಿಕಲ್ ಚಿಕಿತ್ಸೆಯ ಅನುಸಾರ ಕ್ಯಾನ್ಸರ್‌ ಪೀಡಿತ ಜೀವಕೋಶಗಳನ್ನು ಹೊಡೆದು ಹಾಕಲು ಇಮ್ಯೂನ್ ವ್ಯವಸ್ಥೆಯನ್ನು ಸ್ಟಿಮ್ಯುಲೇಟ್‌ ಮಾಡಲಾಗುತ್ತದೆ.

ಇತ್ತೀಚೆಗಿನ 3-4 ರ್ಷಗಳಲ್ಲಿ ಈ ವಿಧಾನವನ್ನು ಅನುಸರಿಸಲಾಗುತ್ತಿದೆ. ಎಷ್ಟೋ ರೋಗಿಗಳಲ್ಲಿ ಇದನ್ನು ಮೂಲ ಚಿಕಿತ್ಸೆಯ ರೂಪದಲ್ಲಿ ಬಳಸಲಾಗುತ್ತಿದೆ.

ಶ್ವಾಸಕೋಶದ ಕ್ಯಾನ್ಸರ್ನಿಂದ ರಕ್ಷಣೆ

ಧೂಮಪಾನ ಹಾಗೂ ತಂಬಾಕು ಸೇವನೆ ಮಾಡುವುದರಿಂದ ದೂರ ಇರಿ.

ಮಾಲಿನ್ಯ ಇರುವ ಸ್ಥಳದಲ್ಲಿ ಉಸಿರಾಡಬೇಡಿ.

ವಿಷಕಾರಿ ಪದಾರ್ಥಗಳ ಸಂಪರ್ಕದಿಂದ ದೂರ ಇರಿ. ಕಲ್ಲಿದ್ದಲು ಹಾಗೂ ಮಾರ್ಬಲ್ ಘಟಕಗಳ ಹತ್ತಿರ ಸುಳಿಯಬೇಡಿ.

ತಂದೆ ತಾಯಿ ಅಥವಾ ಕುಟುಂಬದ ಯಾರಿಗಾದರೂ ಲಂಗ್ಸ್ ಕ್ಯಾನ್ಸರ್‌ ಇದ್ದರೆ, ವಿವರವಾದ ಪರೀಕ್ಷೆ ಮಾಡಿಸಿ.

ಮನೆಯಲ್ಲಿ ಗಾಳಿ ಶುದ್ಧಗೊಳಿಸುವ ಸಸ್ಯಗಳಾದ ಏರಿಕಾಪಾಮ್, ಆ್ಯಲೋವೇರಾ, ಸ್ನೇಕ್‌ ಪ್ಲಾಂಟ್‌, ಸ್ಪೈಡರ್‌ ಪ್ಲಾಂಟ್‌ಮುಂತಾದವುಗಳನ್ನು ಇರಿಸಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ