ಶರತ್ ಚಂದ್ರ

ಕಿರುತೆರೆಯಲಿ ಸುಮಾರು ವರ್ಷಗಳಿಂದ ರಿಯಾಲಿಟಿ ಶೋಗಳು ನಡೆದುಕೊಂಡು ಬಂದಿವೆ..ಎಷ್ಟೋ ರಿಯಾಲಿಟಿ ಶೋ ಗಳಲ್ಲಿ ಪರ್ಫಾರ್ಮೆನ್ಸ್ ನೀಡುವಾಗ ತೀರ್ಪುಗಾರರು ಪ್ರತಿಭೆಯನ್ನು ಹಾಡಿ ಹೊಗಳಿದ್ದು ಬಿಟ್ಟರೆ, ಅಂತವರಿಗೆ ಅವಕಾಶ ನೀಡುವ ಕೆಲಸವನ್ನು ಮಾಡುತ್ತಿರಲಿಲ್ಲ. ಚಾನಲ್ ಗಳು ಕೂಡ ತಮ್ಮ ಟಿ ಆರ್ ಪಿ ಗೋಸ್ಕರ ಇಂಥಹ ಶೋಗಳನ್ನು ನಡೆಸಿಕೊಂಡು ಬರುತ್ತಿದ್ದರು.

1000594342 (1)

ಆದರೆ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪದಲ್ಲಿ ಸ್ಪರ್ಧಿಸಿದ ಎಷ್ಟೋ  ಗಾಯಕ ಗಾಯಕಿಯರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಿ ಬೆಳೆಸುತ್ತಿದ್ದಾರೆ. ಇದೇ ವಾಹಿನಿಯ ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋಗಳಿಂದ ಒಂದಷ್ಟು ಪ್ರತಿಭೆಗಳು ಈಗಾಗಲೇ ಸ್ಯಾಂಡಲ್ ವಡ್ ನಲ್ಲಿ ಮಿಂಚುತ್ತಿದ್ದಾರೆ.

1000594340 (1)

ಈಗ ಜೀ ಕನ್ನಡ ವಾಹಿನಿಯ  ಇನ್ನೊಂದು ಜನಪ್ರಿಯ  ರಿಯಾಲಿಟಿ ಶೋ ‘ಮಹಾ ನಟಿ’ಯಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ ಒಂದಷ್ಟು ನಟಿಯರು ಕಿರುತೆರೆ ಮತ್ತು ಸಿಲ್ವರ್ ಸ್ಕ್ರೀನ್ ನಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.

1000594330

ಕಾರ್ಯಕ್ರಮದ ಪ್ರಮುಖ ಜಡ್ಜ್ ಆಗಿರುವ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಈ ವೇದಿಕೆ ಯಲ್ಲಿ ಒಳ್ಳೆಯ ಪ್ರತಿಭೆಗಳನ್ನು ತೆರೆದ ಕಣ್ಣಿನಿಂದ ಹುಡುಕುತ್ತಿದ್ದಾರೆ.

ಹೀಗೆ ಅವರ ಕಣ್ಣಿಗೆ ಬಿದ್ದ  ಅದೃಷ್ಟವಂತ ಹುಡುಗಿ,ಕಳೆದ ಮಹಾನಟಿ ಸೀಸನ್ ನ ವಿನ್ನರ್ ಮೈಸೂರಿನ ಹುಡುಗಿ ಪ್ರಿಯಾಂಕ ಆಚಾರ್.

ತರುಣ್ ಸುಧೀರ್ ನಿರ್ಮಾಣದ ಹಾಗೂ ಪುನೀತ್ ರಂಗಸ್ವಾಮಿ ನಿರ್ದೇಶನದ ಹೊಸ ಚಿತ್ರದಲ್ಲಿ ನಾಯಕ ರಾಣಾಗೆ ಪ್ರಿಯಾಂಕಾ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಬಹುತೇಕ ಚಿತ್ರಿಕರಣ ಮುಗಿದಿದೆ. ನೈಜ ಘಟನೆಯನ್ನು ಆಧರಿಸಿ ಹೆಣೆದಿರುವ ಈ ಚಿತ್ರಕ್ಕೆ ‘ಏಳುಮಳೆ’ ಎಂದು ಹೆಸರಿಟ್ಟಿದ್ದು, ಪ್ರಿಯಾಂಕಾ ಗೆ ಮುಗ್ದ ಹುಡುಗಿಯ ಪಾತ್ರದಲ್ಲಿ ನಟನೆಗೆ ಅವಕಾಶವಿರುವ ಒಳ್ಳೆಯ ಪಾತ್ರ ಸಿಕ್ಕಿದೆ.

ಈಗಾಗಲೇ ರಂಗಭೂಮಿಯಲ್ಲಿ ನಟಿಸಿ ಅನುಭವವಿರುವ ಪ್ರಿಯಾಂಕ ಆಚಾರ್,  ‘ ಮಹಾ ನಟಿ’ ರಿಯಾಲಿಟಿ ಶೋ ಮೂಲಕ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

1000594328

ಸೌಂದರ್ಯ ಮತ್ತು ಪ್ರತಿಭೆ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಪ್ರಿಯಾಂಕ ಮುಂದಿನ ದಿನಗಳಲ್ಲಿ ಉತ್ತಮ ಪಾತ್ರಗಳನ್ನು ಮಾಡುವ ಮೂಲಕ ಸ್ಯಾಂಡಲ್ ವುಡ್ನಲ್ಲಿ ಮಿಂಚಲಿ ಎಂದು ನಮ್ಮ ಆಶಯ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ