ಫೀಲ್ ಗುಡ್ಅನಿಸಬೇಕು : ಕ್ಯಾಟ್‌ ಕ್ಯಾರೋಲಿನ್‌ ಅದ್ಭುತ ಗಾಯಕಿ. ಇವಳ ಹೊಸ ಆಲ್ಬಂ `ಶುಗರ್‌ ಲಿಪ್ಸ್’ನಲ್ಲಂತೂ ಇಂದಿನ ಆಧುನಿಕ ಯುವಜನತೆಗೆ ಹುಚ್ಚು ಹಿಡಿಸುವಂಥ ಸ್ಟೆಪ್ಸ್ ಹಾಕಿ ಡ್ಯಾನ್ಸ್ ಮಾಡು, ಲವ್ ಎಕ್ಸ್ ಪ್ರೆಸ್‌ ಮಾಡಿಕೊಳ್ಳಲು ಸೂಕ್ತವಾದ ಹಾಗೂ ಹಿತಾನುಭವ ನೀಡುವಂಥ ಹಾಡುಗಳೇ ತುಂಬಿವೆ. ಇದರ ಮತ್ತೊಂದು ಪ್ಲಸ್‌ ಪಾಯಿಂಟ್‌ ಅಂದ್ರೆ, 1980ರ ದಶಕದ ಮೆಲೋಡಿ ಕೇಳಿದಂತೆ ಅನಿಸುತ್ತದೆ, ಒಟ್ಟಾರೆ ಪಾಪ್‌ ಸಾಂಗ್ಸ್ ಗಿಂತ ಡಿಫರೆಂಟ್‌! ಆಡಿಯೋ ಆಲ್ಬಂ ಜೊತೆ ಈಕೆ ವಿಡಿಯೋ ಆಲ್ಬಂ ಸಹ ಲಾಂಚ್‌ ಮಾಡಿದ್ದಾಳೆ. ವಿಡಿಯೋ ಏನು ಹೇಳ್ತಿದೆ ಅಂತ ಈ ಫೋಟೋ ನೋಡಿ!

mike-james-serving-with-rosemar

ಧರ್ಮವೋ…. ಸೇವೆಯೋ? : ಅಮೆರಿಕಾದಲ್ಲಿದ್ದ ಮಾತ್ರಕ್ಕೆ ಎಲ್ಲರಿಗೂ ತಲೆಯ ಮೇಲೊಂದು ಸೂರಿದೆ ಅಂತಲ್ಲ ಅಥವಾ ಪ್ರತಿಯೊಬ್ಬರಿಗೂ 3 ಹೊತ್ತು ಊಟ ಸಿಗುತ್ತೆ ಅಂತಲೂ ಅಲ್ಲ. ಅಲ್ಲಿಯೂ ಸಹ ಲಕ್ಷಾಂತರ (ಕೋಟ್ಯಂತರ ಅಲ್ಲ) ಮಂದಿ ಬೀದಿ ಬದಿ ಮಲಗುತ್ತಾರೆ, ಒಂದು ಹೊತ್ತಿಗೆ ಸಿಕ್ಕಿದ್ದನ್ನು ತಿಂದು ಹೇಗೋ ಜೀವನ ಸಾಗಿಸುತ್ತಾರೆ. ಏಕೆಂದರೆ ಅಲ್ಲೂ ಸಹ ನಿರುದ್ಯೋಗ,  ಡ್ರಗ್ಸ್, ಡೈವೋರ್ಸ್‌, ಕ್ರೈಂ, ರೋಗಗಳು, ಮನೆ ಇಲ್ಲದ ಅಸಹಾಯಕತೆ… ಇತ್ಯಾದಿಗಳು ಮಾಮೂಲಿ. ನಮ್ಮಲ್ಲಿನ ಧರ್ಮಛತ್ರಗಳಂತೆ ಅಲ್ಲಿಯೂ ಸಹ ಊಟ ಸಿಗುತ್ತಿವೆಯಾದರೂ, ಅಲ್ಲಿ ಕರಿಯರ ಸಂಖ್ಯೆ ಹೆಚ್ಚು. ಸಾಮಾನ್ಯ ನಾಗರಿಕರಿಗೆ ಇವರ ಸೇವೆ ಮಾಡುವುದೆಂದರೆ ಖುಷಿ! ಏಕೆಂದರೆ ಮೂಲರೂಪವಾಗಿ ಈ ಮಂದಿ ಕಡಿಮೆ ಕೂಲಿಗೆ ದುಡಿಯುತ್ತಾರೆ. `ಹುಡೀಸ್‌ ಫಾರ್‌ಹೀಲಿಂಗ್‌’ ಸಂಸ್ಥೆಯ ಸದಸ್ಯರಾದ ಈ ದಾನಿಗಳ ಪಟ್ಟಿಯಲ್ಲಿ, ಅಲ್ಲಿನ ಸೆಲೆಬ್‌ ಆದ ಜನಪ್ರಿಯ ಬಾಸ್ಕೆಟ್‌ ಬಾಲ್ ಆಟಗಾರ ಮೈಕಲ್ ಜೇಮ್ಸ್ ಸಹ ಒಬ್ಬರು. ಅಲ್ಲಿನ ಟೆಕ್ಸಾಸ್‌ ಜಿಲ್ಲೆಯ ಹೌಸ್ಟನ್‌ ನಗರದಲ್ಲಿ ಈತ ಧರ್ಮವಲ್ಲ… ಸೇವೆಯೇ ಮುಖ್ಯ ಎಂದು ಈ ಕೆಲಸದಲ್ಲಿ ನಿರತರಾಗಿದ್ದಾರೆ.

meri-bebe-head-chef-preparing-a

ವಿದೇಶದಲ್ಲಿ ದೇಶೀ ರುಚಿ : ಈಕೆ ಬಲ್ವಿಂದರ್‌ ಕೌರ್‌. ಅಪ್ಪಟ ಪಂಜಾಬ್‌ ಸರ್ದಾರಿಣಿಯಾದ ಈಕೆ ಇದೀಗ ಬ್ರಿಟಿಶ್‌ ಕೊಲಂಬಿಯಾ, ಕೆನಡಾದಲ್ಲಿ `ಮೇರಿ ವೆಬ್‌ ಟಿಫನ್‌ ಸರ್ವೀಸ್‌’ ಎಂಬ ಖಾನಾವಳಿಯಲ್ಲಿ ಹೆಡ್‌ ಕುಕ್‌ ಆಗಿ ಕೆಲಸ ನಿಭಾಯಿಸುತ್ತಿದ್ದಾರೆ. ಈಕೆಯ ಭಾರತೀಯ ಅಡುಗೆಯ ಕೈರುಚಿ ಅಲ್ಲಿನ ದೇಶ ವಿದೇಶೀಯರನ್ನು ಕೈ ಬೀಸಿ ಕರೆಯುತ್ತಾ, ಸಂಸ್ಥೆಗೆ ನಿವ್ವಳ ಲಾಭ ತಂದಿದೆ. ಸೂಕ್ತ ಹೆಲ್ದಿ ಊಟ, ಅದೂ ಟೇಸ್ಟಿ ಆಗಿರುವಂಥದ್ದನ್ನು ಒದಗಿಸುವುದು ನಿಜಕ್ಕೂ ಸವಾಲೇ ಸರಿ! ನಮ್ಮಲ್ಲಿನ ಉಡುಪಿ ಹೋಟೆಲ್ ತರಹ ಈ ಸಂಸ್ಥೆ ಅಲ್ಲಿ ಬಲು ಜನಪ್ರಿಯ! ಭಾರತೀಯರು ಮಾತ್ರವಲ್ಲದೆ, ಬ್ರಿಟಿಶ್‌ ಮಂದಿ ಸಹ ಇದನ್ನು ದಿನಾ ಹುಡುಕಿ ಬರ್ತಿದ್ದಾರೆ.

first-light-festival-highlights

ರಜಾ ದಿನಗಳ ಮಜಾ  : ಇಂಗ್ಲೆಂಡ್‌ ನ ಲೋಸ್ಟೋಫಟ್‌ ಬೀಚ್‌ ನ ವೈಶಿಷ್ಟ್ಯ ಅಂದ್ರೆ, ಇದು ಇಂಗ್ಲೆಂಡ್ ನ ಪೂರ್ವದ ತುದಿಯಲ್ಲಿದೆ. ಆ ಇಡೀ ದೇಶಕ್ಕೆ ಈ ಪ್ರದೇಶವೇ ಪ್ರತಿದಿನ ಮೊದಲು ಸೂರ್ಯನ ಕಿರಣ ಪಡೆಯುವುದಂತೆ! ಈ ವಿಷಯವನ್ನೇ ಗಮ್ಮತ್ತಾಗಿಸಿಕೊಂಡು ಅಲ್ಲಿನ `ಫಸ್ಟ್ ಲೈಟ್‌ ಕಮ್ಯುನಿಟಿ’ ಸಂಸ್ಥೆ, ಬೇಸಿಗೆಯಲ್ಲಿ ಬೀಚ್‌ ಫೆಸ್ಟಿವ್ ‌ಆಯೋಜಿಸುತ್ತದೆ. ರಜಾ ದಿನಗಳ ಮಜಾ ಪಡೆಯಲು ಬಂದರು, ಇಲ್ಲಿನ ನಿಯಮದಂತೆ ಒಂದಿಷ್ಟು ವ್ಯಾಯಾಮ ಸಹ ಮಾಡಬೇಕಾಗುತ್ತದೆ. ಜೊತೆಗೆ ಇಲ್ಲಿ ಅಡ್ವೆಂಚರ್‌, ಸೀ ಸ್ಪೋರ್ಟ್ಸ್, ಸ್ಪೆಷಲ್ ಸೀ ಫುಡ್‌ ಸವಿಯಬಹುದು.

mural-headshot-silvia-lopez

ಪ್ರಶಂಸನೀಯ ಪ್ರಯತ್ನ : ಸಿಲುವಾ ಲೋಪೇಜ್‌ಶೆ ವಾಜ್‌ ಅಮೆರಿಕಾದ ಮ್ಯೂರ್‌ ಆರ್ಟಿಸ್ಟ್. ಈಕೆಯ ಹವ್ಯಾಸ ಅಂದಿರಾ? ಸಮುದ್ರದ ಪರಿಸರ ಮಾಲಿನ್ಯ ತಡೆಗಟ್ಟಿ, ಸಾಗರದಲ್ಲಿ ದುಡಿಯುವ ನಾವಿಕರು, ಬೆಸ್ತರು, ದೋಣಿ ತಯಾರಕರಿಗೆ ಸಹಾಯ ಮಾಡುತ್ತಾ, ಅದನ್ನೇ ಥೀಮ್ ಆಗಿಸಿಕೊಂಡು ವಿಶ್ವವಿಡೀ ಕಲಾವಿದರನ್ನು ಒಂದೆಡೆ ಜಮಾಯಿಸಿ, ಈ ಕುರಿತು ಜಾಗೃತಿ ಮೂಡಿಸುತ್ತಾರೆ. ಅಲ್ಲಿನ ದಾನಿಗಳು ಇಂಥ ಕೆಲಸಕ್ಕೆ ಉದಾರವಾಗಿ ದೇಣಿಗೆ ಕೊಡುತ್ತಾರೆ.

beme-the-cupshe-birthday-colle

ನನ್ನಿಷ್ಟ…. ನನ್ನ ಸ್ಟೈಲ್ ‌: ಬೇಸಿಗೆ ಅಥವಾ ಚಳಿಗಾಲದ ಸ್ವಿಮ್ ವೇರ್‌ ಇರಲಿ, ಇದೀಗ ಎಲ್ಲಾ ಹುಡುಗಿಯರ ವಾರ್ಡ್‌ ರೋಬ್‌ ಗೂ ಇದು ಅತಿ ಮುಖ್ಯ. ಈ ಸಮಾಜ ಕವಿದ ಸಂಕೋಲೆಗಳಿಂದ ಹೆಣ್ಣು ಹೊರಬರುತ್ತಿದ್ದಂತೆ, ತೊಡುವ ಬಟ್ಟೆ ಕನಿಷ್ಠವಾಗುತ್ತಾ, ಬಳುಕುವ ಮೈಮಾಟ ಹೆಚ್ಚತೊಡಗಿತು. ಒಂದು ವಿಧದಲ್ಲಿ ಇದು ಇಸ್ಲಾಮಿ ದೇಶಗಳ ಮುಖಕ್ಕೆ ಹೊಡೆದಂತಿದೆ. ಅವರು ಎಷ್ಟೇ ಬುರ್ಕಾ, ಹಿಜಾಬ್‌ ತೊಡಿಸಲಿ, ಹುಡುಗಿಯರು ತಮ್ಮಿಷ್ಟ ಬಿಟ್ಟುಕೊಡುವುದಿಲ್ಲ. ಧರ್ಮದ ಹೆಸರಲ್ಲಿ ಹೆಣ್ಣಿಗೆ ಹೊರೆ ಬಟ್ಟೆ ಹೊದಿಸುವುದು ಮಾನವತೆಗೆ ಅವಮಾನ ಮಾಡಿದಂತೆ. ಹೀಗಾಗಿ ಸ್ವಿಮ್ ವೇರ್‌ ಇದರ ವಿರುದ್ಧದ ಕ್ರಾಂತಿಯ ಸಂಕೇತ. ಇದನ್ನು ಕೂಡದು ಎನ್ನುವರು, ಕಂದಾಚಾರದ ಹೆಸರಲ್ಲಿ ಹೆಣ್ಣನ್ನು ಅತಿ ಕೀಳಾಗಿ ಶೋಷಿಸುತ್ತಾರೆ. ನಮ್ಮಲ್ಲಿ ಭಾಜಪಾದ ಬೃಜ್‌ ಭೂಷಣ್‌ಸಿಂಗ್‌ ವಿರುದ್ಧ ಮಹಿಳಾ ಕುಸ್ತಿ ಪಟುಗಳು ಧರಣಿ ಹೂಡಿದಂತೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ