ತುಮಕೂರಿನಂಥ ಅಚ್ಚಗನ್ನಡದ ನೆಲದಲ್ಲಿ ಪ್ರಗತಿ ಟಿವಿ ಚಾನೆಲ್ ಗೆ ಸಿಇಓ ಆಗಿ, ಅಪಾರ ಸಾಧನೆಗೈದು, ಪ್ರಗತಿಪರ ಕಾರ್ಯ ಸಾಧಿಸಿರುವ ಟಿ.ಎನ್‌. ಶಿಲ್ಪಶ್ರೀ ತಮ್ಮ ಮಾಧ್ಯಮದ ಕುರಿತು ನಮ್ಮ ಓದುಗರಿಗೆ ಹೀಗೆ ವಿವರಿಸುತ್ತಾರೆ.......!

ಮಹಿಳೆ ಇಂದಿನ ದಿನಗಳಲ್ಲಿ ಮಾಡದ ಸಾಧನೆಗಳಿಲ್ಲ, ತೋರದ ಸಾಹಸವಿಲ್ಲ ಎಂದರೆ ಅದು ಅತಿಶಯೋಕ್ತಿಯಂತೂ ಅಲ್ಲ. ಒಂದು ಕಾಲದಲ್ಲಿ ಮನೆ ನಡೆಸಿಕೊಂಡು ಹೋಗುತ್ತಿದ್ದ ಮಹಿಳೆ ಇಂದು ಒಂದಿಡೀ ಸಂಸ್ಥೆಯನ್ನು ಅಷ್ಟೇಕೆ ಒಂದು ದೇಶವನ್ನೇ ನಿಭಾಯಿಸಬಲ್ಲಳು. ಅಂತಹವರ ನಡುವೆ ನಮ್ಮ ರಾಜ್ಯದವರಾದ ಶಿಲ್ಪಶ್ರೀ ಟಿ.ಎನ್‌. ಸಹ ಒಬ್ಬರು. ಇವರು ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾಗಿರುವ `ಪ್ರಗತಿ ಟಿವಿ' ವಾಹಿನಿಯ ಸಿಇಓ. ಇವರು ಪ್ರಗತಿ ಟಿವಿ ಚಾನೆಲ್ ‌ನ ಸಿಇಓ ಆಗಿ ಚಾನೆಲ್ ‌ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2015ರಲ್ಲಿ ಚಾನೆಲ್ ‌ಪ್ರಾರಂಭ ಆದಾಗಿನಿಂದ ಚಾನೆಲ್ ‌ಇನ್ನೂ ದಿನದಿನಕ್ಕೆ ಹೆಚ್ಚು ಜನಪ್ರಿಯ ಗೊಳಿಸಿಕೊಂಡು ಬಂದಿದ್ದಾರೆ. ಇಂತಹ ಸಾಧಕಿಯೊಬ್ಬರ ಕಿರು ಪರಿಚಯ ನಿಮ್ಮ ಮುಂದೆ.....

ವ್ಯಾಸಂಗ ಹಿನ್ನೆಲೆ

ಶಿಲ್ಪಶ್ರೀ ತುಮಕೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಾಕಷ್ಟು ಹೆಸರಾಗಿರುವ `ಪ್ರಜಾ ಪ್ರಗತಿ' ದಿನಪತ್ರಿಕೆ ಸಂಪಾದಕರು, ಹಿರಿಯ ಪತ್ರಿಕೋದ್ಯಮಿಯಾದ ಎಸ್‌. ನಾಗಣ್ಣ ಮತ್ತು ಸಿ.ಎನ್‌. ಶಾರದಾರವರ ಪುತ್ರಿ. ವಿದ್ಯಾನಿಕೇತನದಲ್ಲಿ ಬ್ಯಾಚುಲರ್‌ ಆಫ್ ಕಂಪ್ಯೂಟರ್‌ ಅಪ್ಲಿಕೇಶನ್‌, ಕಂಪ್ಯೂಟರ್‌ ಸೈನ್ಸ್ ಪದವಿ ವ್ಯಾಸಂಗ ಮಾಡಿರುವ ಇವರು ಬಿ.ಸಿ. ಸಂಜಯ್‌ ರನ್ನು ವಿವಾಹವಾಗಿದ್ದಾರೆ. ಇಶಿತಾ ಮತ್ತು ಇಶಾನ್‌ಇವರ ಮಕ್ಕಳು.

ಪ್ರಗತಿ ಟಿವಿಯು ಪ್ರಾರಂಭವಾಗುವುದಕ್ಕೆ ನಾಗಣ್ಣರ ಆಲೋಚನೆ ಮೂಲವಾಗಿತ್ತು. ತುಮಕೂರಿನ ಜನತೆಯ ಧ್ವನಿಯಾಗಿದ್ದ `ಪ್ರಜಾ ಪ್ರಗತಿ' ಪತ್ರಿಕೆಯ ಜೊತೆಗೆ ತಮ್ಮದೇ ಆದ ಟಿವಿ ಚಾನೆಲ್ ‌ಬೇಕೆನ್ನುವುದು ನಾಗಣ್ಣನವರ ಯೋಜನೆಯಾಗಿತ್ತು.

ಪ್ರಗತಿ ಟಿವಿ ಒಂದು ಆಕಸ್ಮಿಕ ಸನ್ನಿವೇಶದಲ್ಲಿ ಶಿಲ್ಪಶ್ರೀ ಇದರ ಭಾಗವಾಗಿದ್ದರು. ಶಿಲ್ಪಶ್ರೀಯವರ ಕಾರ್ಯತಂತ್ರ, ದೂರದೃಷ್ಟಿ ಹಾಗೂ ನಿಖರವಾದ ಕಾರ್ಯ ವೈಖರಿಯಿಂದ ಇಂದು ಪ್ರಗತಿ ಟಿವಿಯು ಕೇವಲ ತುಮಕೂರು ಮಾತ್ರವಲ್ಲದೆ, ರಾಜ್ಯದ ನಾನಾ ಭಾಗಗಳಲ್ಲಿ ವಿವಿಧ ನೆಟ್‌ ವರ್ಕ್‌ ಗಳ ಮೂಲಕ ಪ್ರಸಾರ ಕಾಣುತ್ತಿದೆ. ಈ ಬಗ್ಗೆ ಮಾತನಾಡಿರುವ ಶಿಲ್ಪಶ್ರೀ ಇಂದು ನಮ್ಮ ಪ್ರಗತಿ ಟಿವಿ ವ್ಯಾಪಕವಾಗಿ ಜನರನ್ನು ತಲುಪಿದೆ. ನಮ್ಮ ಟಿವಿ ಕಾರ್ಯಕ್ರಮಗಳನ್ನು ನೋಡಿದ ಜನತೆ ನಮಗೆ ಕರೆ ಮಾಡುತ್ತಾರೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಗಳಲ್ಲಿ ಅಡ್ಡಿಯಾದರೆ ಅದನ್ನೂ ಜನ ಪ್ರಶ್ನಿಸುತ್ತಾರೆ ಎಂದರು.

ಪ್ರಗತಿ ಟಿವಿ ಎನ್ನುವುದು ಒಂದು ಇನ್‌ ಫೈನ್‌ ಮೆಂಟ್‌ ಚಾನೆಲ್ ‌ಆಗಿದೆ. ಇದು ಕೇವಲ ಸುದ್ದಿ ವಾಹಿನಿಯಷ್ಟೇ ಅಲ್ಲ, ಮನರಂಜನೆಯ ಜೊತೆ ಮಾಹಿತಿ ಪ್ರಸಾರ ಇದೆ. ದಿನಕ್ಕೆ ಮೂರು ಸುದ್ದಿ ಬುಲೆಟಿನ್‌ ಗಳನ್ನು ನೀಡುವ ಪ್ರಗತಿ ಟಿವಿಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಸುದ್ದಿಗಳೇ ಇರುತ್ತವೆ. ಆದರೆ ಮುಖ್ಯವಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಹ ಪ್ರಸಾರ ಮಾಡಲಾಗುತ್ತದೆ.

ರಾಗ ಮಂದಾರ

ಇದಲ್ಲದೆ, ಮನರಂಜನೆ ವಿಚಾರದಲ್ಲಿ ಸಹ ಪ್ರಗತಿ ಟಿವಿ ಎಂದೂ ಹಿಂದೆ ಬಿದ್ದಿಲ್ಲ. `ರಾಗ ಮಂದಾರ' ಎನ್ನುವ ರಿಯಾಲಿಟಿ ಶೋ ನಡೆಸುವ ಮೂಲಕ ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಗಾಯಕರಿಗೆ ಗಮನಾರ್ಹ ವೇದಿಕೆ ಒದಗಿಸಿದೆ. ಈ ಕಾರ್ಯಕ್ರಮದಿಂದಾಗಿ ಸ್ಥಳೀಯ ಗಾಯಕರು ಅದ್ಭುತ ಗಾನ ಪ್ರದರ್ಶನ ನೀಡಿದ್ದಾರೆ. ಈ ಸಂಬಂಧ ಮಾತನಾಡಿರುವ ಶಿಲ್ಪಶ್ರೀ, `ರಾಗ ಮಂದಾರ' ಎನ್ನುವ ರಿಯಾಲಿಟಿ ಶೋ ಇದಾಗಲೇ ಮೂರು ಸೀಸನ್‌ ಮುಗಿಸಿದೆ. ಇದರಲ್ಲಿ ಚಿಕ್ಕ ಮಕ್ಕಳ ವಿಭಾಗದಲ್ಲಿ ಹಾಗೂ 18 ರಿಂದ 30 ವರ್ಷದೊಳಗಿನ ಹಿರಿಯರ ವಿಭಾಗಗಳಲ್ಲಿ ಸ್ಪರ್ಧೆ ಇತ್ತು. ಎಲ್ಲಾ ಜನರಿಗೆ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ಭಾಗಹಿಸುವುದು ಸಾಧ್ಯವಿಲ್ಲ. ಅಲ್ಲಿ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನಡೆಯುವುದರಿಂದ ಇವರಿಗೆ ಅದು ಕಠಿಣ ಸಾಲವಾಗಿದೆ. ಆದರೆ ತುಮಕೂರಿನಲ್ಲಿ ನಾವು ನಡೆಸಿದ ರಿಯಾಲಿಟಿ ಶೋ ಇಂತಹವರಿಗೆ ವರದಾನವಾಗಿದೆ. ಇಲ್ಲಿ ನಾವು ಕೇವಲ ಸ್ಪರ್ಧೆ ನಡೆಸುವುದು ಮಾತ್ರವಲ್ಲ, ತರಬೇತಿಯನ್ನೂ ನೀಡಿದ್ದೇವೆ. ಇಲ್ಲಿ ತರಬೇತಿ ಪಡೆದವರು ರಾಜ್ಯ ಮಟ್ಟದ ರಿಯಾಲಿಟಿ ಶೋಗಳಲ್ಲಿ ಸಹ ಭಾಗಹಿಸಿದ್ದಾರೆ ಎಂದು ಸಂತಸ ಹಂಚಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ