ಮಗುವಿನ ಚರ್ಮ ಬಲು ನಾಜೂಕು, ಅತಿ ಕೋಮಲ. ಹೀಗಾಗಿ ಅದರ ಸೆನ್ಸಿಟಿವ್ ಸ್ಕಿನ್ ಗೆ ಹಾನಿಯಾಗುವಂಥ ಯಾವುದೋ ಪ್ರಾಡಕ್ಟ್ ನ್ನು ಹಿಂದೆಮುಂದೆ ಯೋಚಿಸದೆ ಬಳಸಲೇಬಾರದು. ಅದರಲ್ಲೂ ಮುಖ್ಯವಾಗಿ ಚರ್ಮ ಕೇಂದ್ರಿತ ಪ್ರಾಡಕ್ಟ್ಸ್. ಏಕೆಂದರೆ ಮಗುವಿನ ಕೋಮಲ ಚರ್ಮಕ್ಕೆ ಸಾಫ್ಟ್, ಕೆಮಿಕಲ್ ಫ್ರೀ, ಜೆಂಟಲ್ ಪ್ರಾಡಕ್ಟ್ಸ್ ನ್ನು ಮಾತ್ರವೇ ಬಳಸಬೇಕು. ಈ ಕುರಿತಾಗಿ ನುರಿತ ಮಕ್ಕಳ ವೈದ್ಯರು ನೀಡುವ ಸಲಹೆಗಳು ಹೀಗಿವೆ :
ಶವರ್ ನಲ್ಲಿ ನೋ ಮಿಸ್ಟೇಕ್
ಮಗುವಿಗೆ ನೀವು ಸ್ನಾನ ಮಾಡಿಸುವಾಗೆಲ್ಲ, ಅದು ಬೆಚ್ಚಗಿನ ನೀರಾಗಿರಬೇಕೇ ಹೊರತು, ಕುದಿಯುವ ನೀರಾಗಿರಬಾರದು. ಇದರಿಂದ ನಿಮ್ಮ ಮಗು ಸೇಫ್ ಆಗಿರುವುದರ ಜೊತೆಯಲ್ಲೇ, ಅದರ ಚರ್ಮಕ್ಕೂ ಯಾವುದೇ ಹಾನಿ ಆಗುವುದಿಲ್ಲ. ಏಕೆಂದರೆ ಮಗುವಿನ ಸ್ಕಿನ್‌ಸಿಸ್ಟಂ ಎರಡೂ ಬಲು ಸೆನ್ಸಿಟಿವ್. ಇನ್ನೊಂದು ವಿಷಯ ನೆನಪಿಡಿ, ಮಗುವಿಗೆ 5-6 ನಿಮಿಷಗಳ ಸ್ನಾನ ಸಾಕು, ಅರ್ಧ ಗಂಟೆ ಅದನ್ನು ಉಜ್ಜಾಡಬೇಡಿ! ಇಲ್ಲದಿದ್ದರೆ ಬಹಳ ಹೊತ್ತಿನ ಬಿಸಿ ನೀರ ಸಂಪರ್ಕದಿಂದ ಅದರ ಚರ್ಮದ ಮೇಲೆ ರಾಶೆಸ್, ಡ್ರೈನೆಸ್ ಮೂಡಿ ಅತಿ ಸೆನ್ಸಿಟಿವಿಟಿ ಕಾರಣ, ಚರ್ಮ ಪೀಲ್ ಆಗುವ ಸಾಧ್ಯತೆಗಳಿವೆ.
ಮಗುವಿಗೆ ಸ್ನಾನ ಮಾಡಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ, ನಿಮ್ಮ ಮಗುವಿನ ಸ್ಕಿನ್ ಸದಾ ಸಾಫ್ಟ್ ಆಗಿರುವುದಲ್ಲದೆ ಹೆಲ್ದಿಯಾಗಿಯೂ ಉಳಿಯುತ್ತದೆ.
ಆಫ್ಟರ್ ಬಾತ್ ಮಾಯಿಶ್ಚರೈಸರ್
ನಮ್ಮ ಮುಂದಿನ ಪ್ರಶ್ನೆ, ಬೇಬಿ ಮಾಯಿಶ್ಟರೈಸರ್ ಹೇಗಿರಬೇಕು?
ಇದಕ್ಕಾಗಿ ನೀವು ಕೇವಲ ಉತ್ತಮ ಸುಗಂಧಕ್ಕೆ ಮಾರುಹೋಗಬೇಡಿ. ಯಾರೋ ಹೇಳಿದರೆಂದು, ಅವರ ಮಗುವಿಗೆ ಬಳಸುತ್ತಿದ್ದಾರೆಂದು, ನೀವು ಹಾಗೆ ಮಾಡಬೇಡಿ. ನಮ್ಮ ದೊಡ್ಡ ಮಗುವಿಗೆ ಇದೇ ಬ್ರಾಂಡ್ ಬಳಸಿದ್ದೆ, ಎರಡನೇ ಮಗುವಿಗೂ ಅದೇ ಇರಲಿ ಎಂಬ ತರ್ಕ ಸಲ್ಲದು. ಪ್ರತಿ ಮಗುವಿನ ಚರ್ಮದ ಆರೈಕೆ ಬೇರೆ ತರಹವೇ ಮಾಡಬೇಕು, ಏಕೆಂದರೆ ಪ್ರತಿ ಮಗು ವಿಭಿನ್ನ! ಪ್ರತಿ ಮಗು ಇಂಥ ಪ್ರಾಡಕ್ಟ್ಸ್ ಗೆ ವಿಭಿನ್ನವಾಗಿಯೇ ಪ್ರತಿಕ್ರಿಯಿಸುತ್ತದೆ.
ಹೀಗಾಗಿ ನೀವು ನಿಮ್ಮ ಮಗುವಿಗೆ ಯಾವಾಗ ಬೇಬಿ ಮಾಯಿಶ್ಚರೈಸರ್ ಕೊಂಡರೂ ಅದು ಕೆಮಿಕಲ್ಸ್, ಪ್ಯಾರಾಬಿನ್, ಫ್ರಾಗ್ರೆನ್ಸ್ ಫ್ರೀ ಆಗಿರಬೇಕು ಎಂಬುದನ್ನು ಗಮನಿಸಿ. ಆದಷ್ಟೂ ಇಂಥಗಳಲ್ಲಿ ಝಿಂಕ್ ಆಕ್ಸೈಡ್ ಇರುವಂಥದ್ದನ್ನೇ ಬಳಸಿರಿ. ಜೊತೆಗೆ ಜೆಂಟಲ್ ಮಾಯಿಶ್ಚರೈಸರನ್ನು ಮಾತ್ರ ಬಳಸಬೇಕು. ಏಕೆಂದರೆ ಇದು ಬೇಬಿಯ ಸ್ಕಿನ್ ಮೇಲೆ ಬ್ಯಾರಿಯರ್ ನ ಕೆಲಸ ಮಾಡುತ್ತದೆ, ಆಗ ಸಹಜವಾಗಿಯೇ ಮಗುವಿನ ಚರ್ಮಕ್ಕೆ ಎಕ್ಸ್ ಟ್ರಾ ಕೇರ್ ನ ಜೊತೆ ಜೊತೆಗೆ ಎಕ್ಸ್ ಟ್ರಾ ಪ್ರೊಟೆಕ್ಷನ್ ಸಹ ಸಿಗುತ್ತದೆ.
ಎಂಥ ಬೇಬಿ ಪೌಡರ್ ಆರಿಸಬೇಕು?
ನಿಮ್ಮ ಮಗುವಿಗಾಗಿ ಎಂಥದ್ದೋ ಒಂದು ಬೇಬಿ ಪೌಡರ್ ಆರಿಸಿಕೊಂಡು ಬಳಿದರಾಯಿತು ಎಂದು ಭಾವಿಸಬೇಡಿ. ಮಾರ್ಕೆಟ್ ನಲ್ಲಿ ನಿಮಗೆ ಹಲವು ಬಗೆಯ ಬ್ರಾಂಡ್ ಗಳು ಲಭ್ಯವಿವೆ. ಆದರೆ ನೀವು ಈ ಬಗ್ಗೆ ಖುದ್ದಾಗಿ ಒಂದಿಷ್ಟು ರಿಸರ್ಚ್ ನಡೆಸಿ, ನಂತರ ಚರ್ಮತಜ್ಞರ ಸಲಹೆಯ ಮೇರೆಗೆ, ನಿಮ್ಮ ಮಗುವಿಗೆ ಒಪ್ಪುವಂಥ ಬೇಬಿ ಪೌಡರ್ ಆರಿಸಬೇಕು.
ನೀವು ಮಗುವಿಗಾಗಿ ಸದಾ ಝಿಂಕ್ ಆಕ್ಸೈಡ್ ಯುಕ್ತ ಜೆಂಟಲ್ ಬೇಬಿ ಪೌಡರ್ ನ್ನೇ ಆರಿಸಿ. ಏಕೆಂದರೆ ಇದರಲ್ಲಿ ನಿಮ್ಮ ಮಗುವನ್ನು ಸದಾ ಕೂಲ್, ಫ್ರೆಶ್, ಹ್ಯಾಪಿ ಆಗಿರಿಸುವಂಥ ಅಂಶಗಳಿವೆ. ಜೊತೆಗೆ ಹೀಲಿಂಗ್ ಗುಣಗಳೂ ಹೆಚ್ಚಿರುತ್ತವೆ, ಹಾಗಾಗಿ ಮಗುವಿನ ಚರ್ಮ ಸದಾ ಸ್ಮೂತ್ ಆಗಿರುತ್ತದೆ. ಜೊತೆಗೆ ಬೇಬಿ ಪೌಡರ್ ನಲ್ಲಿ ನ್ಯಾಚುರಲ್ ಆ್ಯಕ್ಟಿವ್ ಏಜೆಂಟ್ಸ್ ಆದ ರೈಸ್ ಸ್ಟಾರ್ಚ್ ಇದ್ದರೆ, ಅದು ಬೇಬಿಯ ಸೆನ್ಸಿಟಿವ್ ಸ್ಕಿನ್ ಗೆ ಪೂರಕ. ಇದು ಸ್ಕಿನ್ ಮೇಲೆ ಬ್ರೀದಿಬಲ್ ಲೇಯರ್ ಉಂಟು ಮಾಡಬಲ್ಲದು. ಅದರಿಂದ ಸ್ಕಿನಿನ್ನ ಪೋರ್ಸ್ ಕ್ಲಾಗ್ ಆಗುವುದಿಲ್ಲ.
ಸ್ಕಿನ್ ರಿಪೇರಿಗಾಗಿ ಆ್ಯಲೆನ್ ಟೈನ್
ಮಗು ಹಾಯಾಗಿ ನಿದ್ರಿಸಲಿ ಎಂಬ ಕಾರಣಕ್ಕಾಗಿ ಪೇರೆಂಟ್ಸ್ ಸದಾ ಅದಕ್ಕೆ ಡೈಪರ್ ತೊಡಿಸುತ್ತಾರೆ. ಇದರ ದೆಸೆಯಿಂದ ಮಗುವಿನ ತೊಡೆ ಸಂದಿನಲ್ಲಿ ರಾಶೆಸ್, ರೆಡ್ ನೆಸ್, ಇಚಿಂಗ್ ಕಾರಣ ಹಿಂಸೆ ಆಗುತ್ತದೆ. ಆದ್ದರಿಂದ ಪ್ರತಿ ಗಂಟೆಗೊಮ್ಮೆ ಡೈಪರ್ ಬದಲಾಯಿಸುತ್ತಿರಿ. ಸದಾ ಅದರ ಸ್ಕಿನ್ ಡ್ರೈ ಆಗಿರುವಂತೆ ನಿಗಾವಹಿಸಿ. ಇದಕ್ಕಾಗಿ ನೀವು ಮಗುವಿಗೆ ಆಗಾಗ ಆ್ಯಲೆನ್ ಟೈನ್ ಯುಕ್ತ ಮಾಯಿಶ್ಚರೈಸರ್, ಲೋಶನ್ ಯಾ ಪೌಡರ್ ಬಳಸಿಕೊಳ್ಳಿ. ಇದು ಸೆನ್ಸಿಟಿವ್ ಸ್ಕಿನ್ ಗೆ ಪರ್ಫೆಕ್ಟ್ ಆಗಿರುವುದರ ಜೊತೆಗೆ, ಅದನ್ನು ಎಕ್ಸ್ ಫಾಲಿಯೇಟ್ ಮಾಡಿ, ಅದನ್ನು ಹೀಲ್ ಮಾಡುವ ಕೆಲಸವನ್ನೂ ಮಾಡುತ್ತದೆ. ಇದರಿಂದ ಮಗುವಿನ ಚರ್ಮ ಸದಾ ಸಾಫ್ಟ್, ಸಿಲ್ಕಿ, ಸ್ಮೂತ್ ಆಗಿರುತ್ತದೆ.
– ಪ್ರತಿನಿಧಿ
ಹೀಗೆ ನಿಭಾಯಿಸಿ ಕ್ರೇಡ್ ಕ್ಯಾಪ್
ಸಣ್ಣ ಶಿಶುಗಳಲ್ಲಿ ಈ ತರಹದ ಸಮಸ್ಯೆ ಕಂಡು ಬರುತ್ತವೆ. ಇದಕ್ಕಾಗಿ ನೀವು ಮಗುವಿನ ಕೋಮಲ ತಲೆಯಲ್ಲಿ ಹಳದಿ ಅಥವಾ ಗ್ರೀಸೀ ಪ್ಯಾಚೆಸ್ ಗಮನಿಸುವಿರಿ. ಒಮ್ಮೊಮ್ಮೆ ಇದು ನಿಮ್ಮ ಮಗುವಿನ ಹಣೆ, ಐಬ್ರೋ, ಕಿವಿ, ಕುತ್ತಿಗೆ ಬಳಿ ಕಂಡುಬರಬಹುದು. ಇದು ಸಹಜವಾಗಿ ತಂತಾನೇ ಹೋಗಿಬಿಡುತ್ತದೆ. ಸಣ್ಣ ಮಗುವನ್ನು ಮುದ್ದಿಸಲಿಕ್ಕಾಗಿ ಎಲ್ಲರೂ ಅದರ ತಲೆ ಹಿಡಿದುಕೊಂಡು ಆಗಾಗ ಎತ್ತಿಕೊಳ್ಳುತ್ತಿರುತ್ತಾರೆ, ಇದರಿಂದ ಅದರ ಸೆನ್ಸಿಟಿವ್ ಸ್ಕಿನ್ ಗೆ ಹಾನಿ ಆಗಬಹುದು. ಸಾಮಾನ್ಯವಾಗಿ ಈ ಸಮಸ್ಯೆ ಮಗುವಿನ ತಲೆಯಲ್ಲಿನ ಹೇರ್ ಫಾಲಿಕ್ಸ್ ಬಳಿ, ಹೆಚ್ಚಿನ ತೈಲಾಂಶದ ಕಾರಣ ಆಗಬಹುದು. ಇದು ತಂತಾನೇ ಹೋಗದಿದ್ದರೆ, ಕ್ರೇಡ್ ಕ್ಯಾಪ್ ಬಳಸಿ (ರೆಡಿಮೇಡ್ ಲಭ್ಯ) ಮಗುವಿಗೆ ಈ ಸಮಸ್ಯೆ ಕಾಡದಂತೆ ತಡೆಯಬಹುದು. ಪರಿಸ್ಥಿತಿ ಆಗಲೂ ಸುಧಾರಿಸದಿದ್ದರೆ, ಸೂಕ್ತ ಶಿಶು ಚರ್ಮ ತಜ್ಞರನ್ನು ಭೇಟಿಯಾಗಿ.