ಜಾಗೀರ್ದಾರ್*
ಕನ್ನಡ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ನಟಿಸಿ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದ ಮಹಾನಟಿ ಪದ್ಮಭೂಷಣ ಬಿ.ಸರೋಜದೇವಿ ಅವರು ನಿಧನರಾಗಿದ್ದಾರೆ.
ಶ್ರೀರಾಘವೇಂದ್ರ ಚಿತ್ರವಾಣಿ ಸ್ಥಾಪಕ ಹಾಗೂ ಕನ್ನಡದ ಮೊದಲ ಚಲನಚಿತ್ರ ಪ್ರಚಾರಕರ್ತ ದಿ ಡಿ.ವಿ.ಸುಧೀಂದ್ರ ಅವರು ಬಿ.ಸರೋಜದೇವಿ ಅವರ ಅಭಿನಯದ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರೋಜದೇವಿ ಅವರಿಗೂ ಡಿ.ವಿ.ಸುಧೀಂದ್ರ ಹಾಗೂ ಕುಟುಂಬದವರ ಬಗ್ಗೆ ಬಹಳ ಅಕ್ಕರೆ.
ಭಾರತ ಚಿತ್ರರಂಗದ ಪ್ರಖ್ಯಾತ ನಟಿ ಸರೋಜದೇವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ