ಮುಖಕ್ಕೆ ಹೆಚ್ಚಿನ ಕಾಂತಿ ತಂದುಕೊಂಡು, ಹೆಚ್ಚುತ್ತಿರುವ ವಯಸ್ಸಿನ ಪ್ರಭಾವ ತಗ್ಗಿಸಲು ಬಯಸುವಿರಾದರೆ, ಫೇಸ್ ಸೀರಂ ನೀಡುವ ಲಾಭಗಳ ಬಗ್ಗೆ ತಿಳಿಯಿರಿ……!
ಇತ್ತೀಚಿನ ದಿನಗಳಲ್ಲಿ ನಮ್ಮ ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ, ಎಲ್ಲೆಲ್ಲೂ ಪರಿಸರ ಮಾಲಿನ್ಯ ಇತ್ಯಾದಿಗಳಿಂದಾಗಿ ನಮ್ಮ ಚರ್ಮ ಸಮಯಕ್ಕೆ ಮೊದಲೇ ನಿರ್ಜೀವ, ಶುಷ್ಕ, ವಯಸ್ಸಾದಂತೆ ಕಂಡುಬರುತ್ತದೆ. ಅಂಡರ್ 40+ ನವರಿಗೂ ಸಹ ಈಗೀಗ ಮುಖದಲ್ಲಿ ರಿಂಕಲ್ಸ್, ಕಲೆಗುರುತು, ಆ್ಯಕ್ನೆ ಮೊಡವೆಗಳ ಕಾಟ ತಪ್ಪಿದ್ದಲ್ಲ. ಹೀಗಾಗಿ ಮುಖದ ಚರ್ಮವನ್ನು ನೀಟಾಗಿ ಆರೈಕೆ ಮಾಡಬೇಕಾದುದು ನಮ್ಮ ಕರ್ತವ್ಯ. ಅನಗತ್ಯವಾಗಿ ಅತಿಯಾದ ಮೇಕಪ್ ಮಾಡಿಕೊಂಡು ಈ ಸಮಸ್ಯೆಗಳನ್ನು ಮುಚ್ಚಿಡುವ ಬದಲು, ಇದನ್ನು ಸ್ವಾಭಾವಿಕ ರೂಪದಲ್ಲಿಯೇ ಸ್ವಸ್ಥ, ಆಕರ್ಷಕ ಮಾಡಬಹುದು.
ತ್ವಚೆಯ ಸಂರಕ್ಷಣೆಯ ಒಂದು ಮುಖ್ಯ ಭಾಗ ಎಂದರೆ, ಒಂದು ಉತ್ತಮ ಗುಣಮಟ್ಟದ ಫೇಸ್ ಸೀರಂ ಬಳಸಿಕೊಳ್ಳುವಿಕೆ. ಇದು ಒಂದು ತರಹದ ಲೈಟ್ ವೆಯ್ಟ್ ಮಾಯಿಶ್ಚರೈಸರ್ ಎಂದರೂ ತಪ್ಪಲ್ಲ. ವಾಟರ್ ಬೇಸ್ಡ್ ಆದ್ದರಿಂದ, ಇದು ತಕ್ಷಣ ಚರ್ಮದೊಳಗೆ ಆಳವಾಗಿ ವಿಲೀನ ಆಗಬಲ್ಲದು, ಅದರಿಂದ ಸಹಜವಾಗಿ ಚರ್ಮವನ್ನು ಅತಿ ಕೋಮಲ, ಮೃದುಗೊಳಿಸಬಲ್ಲದು. ನಿಯಮಿತವಾಗಿ ಸೀರಂ ಬಳಸುವುದರಿಂದ ಚರ್ಮ ಹೆಚ್ಚು ಆರೋಗ್ಯಕರ, ನಳನಳಿಸುವ ತಾರುಣ್ಯ, ಆರ್ದ್ರತೆ ಹಾಗೂ ಹೊಳಪನ್ನು ಗಳಿಸುತ್ತದೆ.
ಇದನ್ನು ಮಾಯಿಶ್ಚರೈಸರ್, ಸನ್ ಸ್ಕ್ರೀನ್ ಹಾಗೂ ಮೇಕಪ್ ನ ಕೆಳಭಾಗದಲ್ಲಿ ಒಂದು ಬೇಸ್ ಪದರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ 30ರವರೆಗೂ ಚರ್ಮಕ್ಕೆ ಇದರ ಅಗತ್ಯ ಇಲ್ಲವಾದರೂ, ಮುಂದೆ ಕ್ರಮೇಣ ಇದರ ಅಗತ್ಯ ಹೆಚ್ಚುತ್ತದೆ. ಇದರ ಬಳಕೆಯಿಂದ ಅಂಥವರಿಗೂ ಉತ್ತಮ ಆರೋಗ್ಯಕರ, ಕಲೆರಹಿತ ಚರ್ಮ ಸಿಗುತ್ತದೆ. ಕಾಲಕ್ಕೆ ಮೊದಲೇ ಮುಪ್ಪು ಅಮರದಂತೆ ಕಾಪಾಡುತ್ತದೆ. ಸುಕ್ಕುಗಳ ನಿವಾರಣೆಗೆ ಧಾವಿಸುತ್ತದೆ. ನಿಮ್ಮ ಚರ್ಮದ ಕ್ಲೆನ್ಸಿಂಗ್‌ಟೋನಿಂಗ್ ನಂತರ, ದಿನಕ್ಕೆ 2 ಸಲ ಈ ಸೀರಂ ಬಳಸಿಕೊಳ್ಳಿ.
ಮುಖಕ್ಕೆ ಇದರ ಅಗತ್ಯವೇನು?
ಯಾರಿಗೆ ಮುಖದಲ್ಲಿ ವಯಸ್ಸು ಹೆಚ್ಚುವಂತೆ ಅಧಿಕ ಸುಕ್ಕುಗಳು, ಆಳವಾದ ಕಲೆಗುರುತು, ಹೈಪರ್ ಪಿಗ್ಮೆಂಟೇಶನ್, ಆ್ಯಕ್ನೆ, ಕ್ಲೋಸ್ಡ್ ಹೇರ್ ಫಾಲಿಕ್ಸ್, ಡೀ ಹೈಡ್ರೇಶನ್ನಿನ ಕಾಟಗಳಿವೆಯೋ ಅಂಥವರಿಗೆ ಫೇಸ್ ಸೀರಂ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೇಲ್ಕಂಡ ಎಲ್ಲಾ ಸಮಸ್ಯೆಗಳೂ ಕ್ರಮೇಣ ದೂರಾಗುತ್ತವೆ.
ಮುಖದ ಕಲೆಗುರುತುಗಳ ನಿವಾರಣೆಗಾಗಿ : ನಾವು ಹೊರಗೆ ಓಡಾಡಿದಾಗೆಲ್ಲ ಸೂರ್ಯನ UV ಕಿರಣಗಳು ನಮ್ಮ ಚರ್ಮವನ್ನು ನಿರ್ಜೀವಗೊಳಿಸಿ ಹಿಂಸಿಸುತ್ತವೆ. ಹೀಗಾಗಿ ಫೇಸ್ ಸೀರಂನಲ್ಲಿನ ಗ್ಲೈಕಾಲಿಕ್ ಆ್ಯಸಿಡ್, ಚರ್ಮವನ್ನು ಹೊಳೆಯುವಂತೆ ಮಾಡಿ, ಹೊಸ ಕಾಂಪ್ಲೆಕ್ಷನ್ ನೀಡುತ್ತದೆ. ನೀವು ಇದನ್ನು ನಿಯಮಿತವಾಗಿ ಬಳಸಿದರೆ, ಕೆಲವೇ ದಿನಗಳಲ್ಲಿ ನಿಮಗೇ ವ್ಯತ್ಯಾಸ ತಿಳಿಯುತ್ತದೆ. ಮುಖದಲ್ಲಿದ್ದ ಗಾಢ ಕಲೆಗುರುತು ತಂತಾನೇ ತಗ್ಗುತ್ತಿರುವುದು ತಿಳಿಯುತ್ತದೆ. 1-2 ತಿಂಗಳ ಬಳಕೆಯಿಂದ ಮುಖದ ಡಾರ್ಕ್ ಸರ್ಕಲ್ಸ್, ಸುಕ್ಕುಗಳು ಕ್ರಮೇಣ ದೂರವಾಗುತ್ತವೆ.
ನಿರ್ಜೀವ ಚರ್ಮಕ್ಕೆ ಹೊಸ ಕಾಂತಿ ತುಂಬಲು : ವಯಸ್ಸು ಹೆಚ್ಚ ತೊಡಗಿದಂತೆ, ನಮ್ಮ ಚರ್ಮ ತನ್ನ ಸಹಜ ಕಾಂತಿ ಕಳೆದುಕೊಂಡು ನಿರ್ಜೀವ ಎನಿಸುತ್ತದೆ. ಹೀಗಾಗಿ ಇಂಥ ಚರ್ಮಕ್ಕೆ ಫೇಸ್ ಸೀರಂ ಅತ್ಯಗತ್ಯ. ಇದು ಚರ್ಮದ ಆಳಕ್ಕಿಳಿದು, ಚರ್ಮಕ್ಕೆ ಹೊಸ ಕಾಂತಿ ತರಿಸಿಕೊಟ್ಟು, ನಿಮ್ಮ ತಾರುಣ್ಯ ನಳನಳಿಸುವಂತೆ ಮಾಡುತ್ತದೆ.
ಆ್ಯಂಟಿ ಏಜಿಂಗ್ ಪ್ರಕ್ರಿಯೆಗಾಗಿ : ಮುಖದಲ್ಲಿ ಕಾಣಿಸುವ ಅತಿ ನವಿರಾದ ರೇಖೆಗಳು, ಸುಕ್ಕು, ನೆರಿಗೆಗಳ ನಿವಾರಣೆಯಲ್ಲಿ ಸೀರಂ ಎತ್ತಿದ ಕೈ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದನ್ನು 2-3 ವಾರ ಸತತ ಬಳಸುವುದರಿಂದ, ನಿಮಗೆ ಮುಖದಲ್ಲಿನ ವ್ಯತ್ಯಾಸ ತಂತಾನೇ ತಿಳಿಯುತ್ತದೆ. ಆ್ಯಂಟಿ ಏಜಿಂಗ್ ಗಾಗಿ ನೀವು ಹ್ಯಾಲೂರೋನಿಕ್ ಆ್ಯಸಿಡ್ ಯುಕ್ತ ಹೈಡ್ರೇಟಿಂಗ್ ಸೀರಂ ಆರಿಸಿಕೊಳ್ಳಬೇಕು. ಈ ಫೇಸ್ ಸೀರಂ ನಿಮ್ಮ ಚರ್ಮಕ್ಕೆ ಚಿರಯೌವನ ಒದಗಿಸಿಕೊಟ್ಟು, ಸುಕ್ಕುಕಲೆಗಳನ್ನು ದೂರ ಓಡಿಸುತ್ತದೆ. ಕೆಲವು ವಿಟಮಿನ್ ಸಿಯಿಂದ ತುಂಬಿರುತ್ತವೆ, ನಿಮ್ಮ ಚರ್ಮದ ಚಿರಯೌವನಕ್ಕೆ ಇದೇ ಬೆಸ್ಟ್!
ಆ್ಯಕ್ನೆ ಮೊಡವೆ ನಿವಾರಣೆಗಾಗಿ : ನಿಮ್ಮ ಮುಖವನ್ನು ಆಗಾಗ ಆ್ಯಕ್ನೆ ಮೊಡವೆಗಳು ದಾಳಿ ಮಾಡುತ್ತದೆಯೇ? ಇದರ ಸಂಪೂರ್ಣ ನಿವಾರಣೆಗಾಗಿ ನೀವು ಫೇಸ್ ಸೀರಂ ಬಳಸಬೇಕು. ಇದರಲ್ಲಿನ ಬೆನ್ಝಾಯ್ ಪೆರಾಕ್ಸೈಡ್‌ಸ್ಯಾಲಿಸಿಲಿಕ್ ಆ್ಯಸಿಡ್ ಕಾರಣ, ಆ್ಯಕ್ನೆ ಮೊಡವೆಗಳು ಕ್ರಮೇಣ ತಗ್ಗುತ್ತಾ ಹೋಗುತ್ತದೆ. ನಿಮಗೆ ಆರೋಗ್ಯಕರ ಚರ್ಮ ಮರಳಿ ಬರುತ್ತದೆ.
ಮಾಯಿಶ್ಚರ್ ವಾಲ್ಯೂಂ ಸುಧಾರಣೆಗಾಗಿ : ವಯಸ್ಸು ಹೆಚ್ಚುತ್ತಾ ಹೋದಂತೆ ನಿಮ್ಮ ಚರ್ಮ, ವಿಶೇಷವಾಗಿ ಕೆನ್ನೆ ಮತ್ತು ಕಂಗಳ ಕೆಳಗಿನ ಭಾಗ, ಮಾಯಿಶ್ಚರ್‌ವಾಲ್ಯೂಂ ಎರಡನ್ನೂ ಕಳದೆುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಸೀರಂ ಬಳಕೆಯಿಂದಾಗಿ ಮುಖದ ಈ ಭಾಗ ತಾನು ಕಳೆದುಕೊಂಡ ವಾಲ್ಯೂಂ ಮಾಯಿಶ್ಚರ್ ನ್ನು ಮರಳಿ ಪಡೆಯುತ್ತದೆ. ಇದರ 2-3 ಹನಿಗಳನ್ನು ನಿಮ್ಮ ಬೆರಳ ತುದಿಗೆ ಹಾಕಿಕೊಂಡು, ನೀವು ಮುಖವಿಡೀ ನಿಧಾನವಾಗಿ ಮಸಾಜ್ ಮಾಡಿ. ಕೆಲವೇ ವಾರಗಳಲ್ಲಿ ನಿಮಗೆ ಸ್ಪಷ್ಟ ವ್ಯತ್ಯಾಸ ತಿಳಿಯುತ್ತದೆ.
ಚರ್ಮವನ್ನು ಎಕ್ಸ್ ಫಾಲಿಯೇಟ್ ಗೊಳಿಸುವುದಕ್ಕಾಗಿ : ಫೇಸ್ ಸೀರಂನಲ್ಲಿನ ಲ್ಯಾಕ್ಟಿಕ್‌ಫಾಲಿಕ್ ಆ್ಯಸಿಡ್ ಪ್ರಸ್ತುತವಿದ್ದು, ಅದು ಒರಟಾದ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಿ, ಸ್ಮೂತ್ ಫೀಲ್‌ಈವೆನ್ ಟೋನ್ ಒದಗಿಸಬಲ್ಲದು.
ಚರ್ಮವನ್ನು ಹೈಡ್ರೇಟ್ ಗೊಳಿಸುವುದಕ್ಕಾಗಿ : ನಿಮ್ಮ ಚರ್ಮ ಡ್ರೈ ಆಗಿ, ಲೈಫ್ ಲೆಸ್ ಎನಿಸುತ್ತಿದೆಯೇ? ಇದರರ್ಥ, ನೀವು ಮಾಯಿಶ್ಚರೈಸರ್ ಮಾತ್ರವಲ್ಲದೆ ಬೇರೇನೋ ಬಳಸಬೇಕು ಅಂತ. ಆಗ ನೀವು ಫೇಸ್ ಕ್ರೀಂ ಒಂದನ್ನೇ ಅವಲಂಬಿಸದೆ, ಹೈಡ್ರೇಟಿಂಗ್ ಫೇಸ್ ಸೀರಂ ಬಳಸುತ್ತಾ, ನಿಮ್ಮ ಡ್ರೈ ಸ್ಕಿನ್ ಗೆ ಮತ್ತೆ ಆರ್ದ್ರತೆ ತಂದುಕೊಳ್ಳಬಹುದು.
ಬ್ಯೂಟಿಫುಲ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು : ಫೇಸ್ ಸೀರಂನಲ್ಲಿ ಕೊಲೋಜೆನ್ ಕಂಟೆಂಟ್ ಇದ್ದು, ಇದರ ನೆರವಿನಿಂದ ನಿಮ್ಮ ಸ್ಕಿನ್ ಟೆಕ್ಸ್ ಚರ್ ಸುಧಾರಣೆಗೊಂಡದ್ದು ತಿಳಿಯುತ್ತದೆ. ಬಳಕೆಗೆ ಮುಂಚಿನದಕ್ಕೆ ಹೋಲಿಸಿದರೆ, ಚರ್ಮ ಎಷ್ಟೋ ಬ್ಯೂಟಿಫುಲ್ ಹೆಲ್ದಿ ಎನಿಸುತ್ತದೆ. ನಿಮ್ಮಲ್ಲಿ ಓಪನ್ ಪೋರ್ಸ್ ಹೆಚ್ಚಾಗಿದ್ದರೆ, ಅದು ತಾನಾಗಿ ಕಡಿಮೆ ಆಗುತ್ತದೆ. ಬ್ಲಾಕ್ ಹೆಡ್ಸ್ ಜೊತೆ ವೈಟ್ ಹೆಡ್ಸ್ ಕೂಡ ಕಡಿಮೆ ಆಗುತ್ತದೆ.
ಎಂಥ ಸೀರಂ ಆರಿಸಿಕೊಳ್ಳಬೇಕು?
ಇಂದು ಮಾರುಕಟ್ಟೆಯಲ್ಲಿ ಹಲವು ವೈವಿಧ್ಯಮಯ ಸೀರಂ ಲಭ್ಯವಿವೆ. ಇವು ಚರ್ಮದ ಹಲವಾರು ಬಗೆಯ ಸಮಸ್ಯೆಗಳನ್ನು ದೂರಗೊಳಿಸುತ್ತವೆ. ಆದರೆ ನನಗಾಗಿ ಎಂಥ ಸೀರಂ ಆರಿಸಲಿ ಎಂದು ಪ್ರತಿ ಹುಡುಗಿಯೂ ಚಿಂತಿಸುತ್ತಾಳೆ. ಇದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಗಮನದಲ್ಲಿಡಿ.
ಚರ್ಮದ ಬಗೆ : ನಿಮ್ಮದು ಯಾವ ಬಗೆಯ ಚರ್ಮ (ಆಯ್ಲಿ, ಡ್ರೈ, ನಾರ್ಮಲ್) ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇದರ ಜೊತೆ ಸೆನ್ಸಿಟಿವ್ ಮಿಕ್ಸ್ಡ್ ಸ್ಕಿನ್ ಸಹ ಸೇರುತ್ತವೆ. ನಿಮ್ಮದು ಆಯ್ಲಿ ಚರ್ಮದಾಗಿದ್ದರೆ, ನಿಮ್ಮ ಸೀರಂ ಘಟಕದಲ್ಲಿ ಅದನ್ನು ಮತ್ತಷ್ಟು ಆಯ್ಲಿಗೊಳಿಸುವ ಅಂಶ ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಹೀಗೆ ನಿಮ್ಮ ಚರ್ಮದ ಬಗೆ ತಿಳಿದೇ ಸೀರಂ ಆರಿಸಿ.
ಚರ್ಮಕ್ಕೆ ಸಂಬಂಧಿಸಿದ ತೊಂದರೆ : ಯಾವುದೇ ಫೇಸ್ ಸೀರಂ ಕೊಳ್ಳುವ ಮುನ್ನ, ಅದನ್ನು ನೀವೇಕೆ ಕೊಳ್ಳುತ್ತಿದ್ದೀರಿ ಎಂದು ಯೋಚಿಸಿ, ನಿಮ್ಮ ಮುಖದಲ್ಲಿನ ಸುಕ್ಕು ಕಡಿಮೆ ಆಗಬೇಕೇ? UV ಕಿರಣಗಳ ಹಾನಿಯಿಂದ ಮುಖದಲ್ಲಿನ ಕಲೆಗುರುತು ತೊಲಗಿಸಬೇಕೇ? ಆ್ಯಕ್ನೆ ಮೊಡವೆ ದೂರಗೊಳಿಸಬೇಕೇ? ನಿಮ್ಮ ಸಮಸ್ಯೆ ಯಾವುದೆಂದು ತಿಳಿದು ಅದಕ್ಕೆ ಪೂರಕವಾಗುವ ಸೀರಂ ಆರಿಸಬೇಕು.
ವಿಭಿನ್ನ ಸೀರಂಗಳಲ್ಲಿ ಹಲವಾರು ಬಗೆಯ ಘಟಕಗಳು ಅಡಗಿರುತ್ತವೆ. ಉತ್ತಮ ಗುಣಮಟ್ಟದ ಸೀರಂನಲ್ಲಿ ಸೆರಮೈಡ್ಸ್, ಗ್ಲಿಸರಿನ್, ಆ್ಯಲೋವೇರಾ, ವಿಟಮಿನ್ಸ್, ಲಿಕೋರೈಸ್, ಝಿಂಕ್, ಆರ್ನಿಕ್ ನಂಥ ಆ್ಯಂಟಿ ಇನ್ ಫ್ಲಮೆಟರಿ ಅಂಶಗಳಿದ್ದು, ಜೊತೆಗೆ ಅನೇಕ ನೈಸರ್ಗಿಕ ಅಂಶಗಳನ್ನೂ ಒಳಗೊಂಡಿರುತ್ತವೆ. ಇದು ನಿಮ್ಮ ಚರ್ಮದಲ್ಲಿ ಆಳವಾಗಿ ಇಳಿದು, ಉತ್ತಮ ಪರಿಣಾಮ ಬೀರುತ್ತದೆ. ಸೀರಂನ ಉಳಿದ ಸ್ಕಿನ್ ಪ್ರಾಡಕ್ಟ್ಸ್ ಗೆ ಹೋಲಿಸಿದಾಗ, ಆ್ಯಕ್ಟಿವ್ ಘಟಕಗಳ ಕಾನ್ ಸಂಟ್ರೇಶನ್ ಹೆಚ್ಚಾಗುತ್ತದೆ.
ಇದರಲ್ಲಿನ ಸೆರಮೈಡ್ಸ್ ತ್ವಚೆಯ ಒಳಭಾಗದ ಮಾಯಿಶ್ಚರ್ ನ್ನು ಲಾಕ್ ಮಾಡಿ ಡ್ರೈನೆಸ್ ತಡೆಯುವ ಕೆಲಸ ಮಾಡುತ್ತದೆ. ಗ್ಲಿಸರಿನ್ ಚರ್ಮದ ಹೈಡ್ರೇಶನ್ ನ್ನು ಸುಧಾರಿಸುತ್ತಾ, ದೇಹದ ನ್ಯಾಚುರಲ್ ಪ್ರೊಟೆಕ್ಟಿವ್ ಬ್ಯಾರಿಯರ್ ನ್ನು ರೆಸ್ಟೋರ್ ಮಾಡುತ್ತದೆ. ಆ್ಯಲೋವೇರಾ ಚರ್ಮದಲ್ಲಿನ ಜಿಡ್ಡಿನಂಶ ತೊಲಗಿಸುತ್ತದೆ. ವಿಟಮಿನ್ಸ್, ಆ್ಯಂಟಿ ಆಕ್ಸಿಡೆಂಟ್ಸ್ ಆಗಿದ್ದು, ಚರ್ಮವನ್ನು ಒತ್ತಡ ಹಾಗೂ ಇತರ ಸಾಮಾನ್ಯ ಪರಿಸರ ಸಂಬಂಧಿತ ಫ್ರೀ ರಾಡಿಕಲ್ಸ್ ಜೊತೆ ಹೋರಾಡಿ, ಆ ಹಾನಿ ತಡೆಯುತ್ತವೆ. ಲಿಕೋರೈಸ್(ಜೇಷ್ಠಮಧು) ಚರ್ಮ ಹೊಳೆಯುವಂತೆ ಮಾಡಲು ನೆರವಾಗುತ್ತದೆ. ಇದರಲ್ಲಿ ಲಿಕ್ವಿರಿಟಿವ್ ಎಂಬ ಸಕ್ರಿಯ ಅಂಶ ಯೌಗಿಕ ರಕ್ಷಣೆ ಒದಗಿಸಿದರೆ, ಝಿಂಕ್ ನ ಆ್ಯಂಟಿ ಏಜಿಂಗ್ ಗುಣ ನಿಮ್ಮ ಚಿರಯೌವನ ಕಾಪಾಡುತ್ತದೆ. ಇದೇ ತರಹ ಆರ್ನಿಕ್, ಚರ್ಮದ ಗಾಯ ಗುಣಪಡಿಸುವಲ್ಲಿ ಸದಾ ಮುಂದು.
– ಜಿ. ಪಂಕಜಾ
ಸೀರಂ ಹೀಗೆ ಬಳಸಿಕೊಳ್ಳಿ!
ಮೊಟ್ಟ ಮೊದಲಿಗೆ ಮುಖದಲ್ಲಿ ಯಾವುದೇ ತರಹದ ಕೊಳೆಯನ್ನು ಕ್ಲೆನ್ಸರ್ ನಿಂದ ಶುಚಿಗೊಳಿಸಿ. ನಂತರ ನಿಮ್ಮ ಆಯ್ಕೆಯ ಸೀರಂನ 2 ಹನಿಗಳನ್ನು ಬೆರಳ ತುದಿಯಲ್ಲಿ ತೆಗೆದುಕೊಂಡು, ಕ್ಲೀನಾದ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡುತ್ತಾ, ಅದು ಸಹಜವಾಗಿ ಚರ್ಮದಲ್ಲಿ ವಿಲೀನಗೊಳ್ಳುವಂತೆ ಮಾಡಿ. ಡ್ರೈ ಸ್ಕಿನ್ ಮಂದಿ, ಸೀರಂನ್ನು ಒದ್ದೆ ಚರ್ಮದ ಮೇಲಷ್ಟೇ ಹಚ್ಚಿಕೊಳ್ಳಬೇಕು! ಏಕೆಂದರೆ ತೇವಾಂಶವಿರುವ ಕಡೆ ಇದು ಸುಲಭವಾಗಿ ವಿಲೀನಗೊಳ್ಳುತ್ತದೆ. ಸೆನ್ಸಿಟಿವ್ ಸ್ಕಿನ್ ಮಂದಿ, ತಮ್ಮ ಚರ್ಮ ತುಸು ಡ್ರೈ ಆಗುವವರೆಗೂ ಕಾದು ನಂತರ ಹಚ್ಚಿಕೊಳ್ಳಬೇಕು. ಏಕೆಂದರೆ ಅವರ ಚರ್ಮದ ವಿಧ ಈ ಸೀರಂ ವಿಲೀನಗೊಳ್ಳುವುದನ್ನು ನಿಧಾನ ಮಾಡುತ್ತದೆ. ಅದು ಚರ್ಮದ ಉರಿಗೆ ನಾಂದಿ ಆದೀತು.
ಪ್ರತಿ ಸಲ ಸೀರಂ ಹಚ್ಚಿಕೊಂಡ ನಂತರ, ನಿಮ್ಮ ಚರ್ಮಕ್ಕೆ ಅಗತ್ಯವಾಗಿ ಮಾಯಿಶ್ಚರೈಸರ್ ಹಚ್ಚಿಕೊಳ್ಳಲು ಮರೆಯಬೇಡಿ. ಹಾಗೆಯೇ 30-40 SPFನ ಸನ್ ಸ್ಕ್ರೀನ್ ಸಹ ಹಚ್ಚಬೇಕು. ಸೀರಂ ನಮಗೆ ಮೇಕಪ್ ಬೇಸ್ ಆಗಿಯೂ ಕೆಲಸ ಮಾಡುತ್ತದೆ. ಇದನ್ನು ಹಚ್ಚಿಕೊಂಡ ನಂತರ, ಮಾಡಿದ ಮೇಕಪ್ ಸುಲಭವಾಗಿ ವಿಲೀನಗೊಂಡು ದೀರ್ಘಬಾಳಿಕೆ ಬರುತ್ತದೆ. ಮೇಕಪ್ ನ ಪರಿಣಾಮ ಉತ್ತಮ ಮಟ್ಟದ್ದಾಗಿರುತ್ತದೆ. ಇದೇ ತರಹ ಹೆಚ್ಚುತ್ತಿರುವ ವಯಸ್ಸಿನ ಕಾರಣ ಡಾರ್ಕ್ ಸರ್ಕಲ್ಸ್, ಫೈನ್ ಲೈನ್ಸ್, ರಿಂಕಲ್ಸ್ ನ್ನು ನಿವಾರಿಸಲು ಆಯಾ ಜಾಗದಲ್ಲಿ 1-2 ಹನಿ ಅಧಿಕ ಸೀರಂ ಹಾಕಿ, ಮಸಾಜ್ ಮಾಡಿ. ಲಿಪ್ ಸ್ಟಿಕ್ ಬಳಸುವ ಮುನ್ನ, ತುಟಿಗಳ ಸುತ್ತಲೂ ಈ ಎಚ್ಚರಿಕೆ ಅತ್ಯಗತ್ಯ. ಹಾಗೆಯೇ ಕನ್ಸೀಲರ್ ಹಚ್ಚುವ ಮುಂಚೆ ಅಲ್ಲಿ ಸೀರಂ ಸವರಬೇಕು. ಆಗ ಕಂಗಳ ಸುತ್ತ ಮಾಡಿದ ಮೇಕಪ್ ಸ್ಮಜ್ ಆಗುವುದಿಲ್ಲ. ಸೀರಂ ಆ ಭಾಗದ ಮೇಕಪ್ ಗೆ ಸ್ಮೂತ್ ಫಿನಿಶ್ ನೀಡುತ್ತದೆ.