ದೇಹ ತೋರ್ಪಡಿಕೆಯಲ್ಲಿ ತಪ್ಪೇನು? : ಕೆಲವು ದೇಶಗಳಲ್ಲಿ ಹಿಜಾಬ್‌ ಬುರ್ಖಾಗಳನ್ನು ಬಲವಂತವಾಗಿ ಹೇರುತ್ತಿರಬಹುದು, ಆದರೆ ತರುಣಿಯರು ಮಾತ್ರ ಬಿಕಿನಿ ಧರಿಸುವ ಅವಕಾಶವನ್ನು ಎಂದೂ ಕಳೆದುಕೊಳ್ಳುವುದಿಲ್ಲ. ದೇಶಾದ್ಯಂತದ ಸ್ವಿಮಿಂಗ್‌ ಪೂಲ್ಸ್‌, ಬೀಚುಗಳಲ್ಲಿ ತಮ್ಮ ಸ್ಪೆಷಲ್ ಬಿಕಿನಿಯನ್ನು ಪ್ರದರ್ಶಿಸುವ ಬಿಂದಾಸ್‌ ಹುಡುಗಿಯರಿಗೇನೂ ಕೊರತೆ ಇಲ್ಲ. ಇದರ ಕುರಿತಾಗಿ ದೊಡ್ಡ ರಿಸರ್ಚ್‌ ಗಳೂ ನಡೆದಿವೆ. ಎಷ್ಟೋ ಕಂಪನಿಗಳು ಯಾವಾಗ, ಯಾವ ರೀತಿ ಮಾರ್ಕೆಟ್‌ ಡೆವಲಪ್‌ ಆಗುತ್ತದೆಂದು ವರದಿ ಕಳುಹಿಸುತ್ತಿವೆ. ಮೈಕಟ್ಟು ಪ್ರದರ್ಶನಕ್ಕೆ ಯೋಗ್ಯವಾಗಿದ್ದರೆ ಅದನ್ನು ತೋಪರ್ಡಿಸಲು ಸಂಕೋಚವೇಕೆ?

istanbul-convnention-sd-meps

ಎಲ್ಲಕ್ಕೂ ದೊಡ್ಡ ಅಪರಾಧಿ : ಇತ್ತೀಚೆಗೆ ಅತಿ ಶ್ರೀಮಂತ ದೇಶಗಳೇ ಅಲ್ಲದೆ ಸಣ್ಣಪುಟ್ಟ ದೇಶಗಳ ನಗರದ ಮಂದಿ ಸಹ ಕಸದ ವಿಲೇವಾರಿ ಕುರಿತು ಚಿಂತೆಗೀಡಾಗಿದ್ದಾರೆ. ಯಾವ ದೇಶಗಳ ಬಳಿ ದುಬಾರಿ ಹಣವಿದೆಯೋ, ಅವು ಬಡ ದೇಶಗಳಿಗೆ ದುಡ್ಡಿನಾಸೆಗೆ, ಹಡಗುಗಳಲ್ಲಿ ರಾಶಿ ರಾಶಿ ಕಸ ರವಾನಿಸುತ್ತಿವೆ. ನಗರದ ಮಂದಿ ದಿನೇ ದಿನೇ ಕೊರಿಯರ್‌ ನಲ್ಲಿ ಹೊಸ ಸಾಮಗ್ರಿ ತರಿಸುತ್ತಾ, ಹಳೆಯದನ್ನೂ ಅವು ಏನಾಗುತ್ತಿವೆ ಎಂದೂ ಯೋಚಿಸದೆ ಬಿಸಾಡುತ್ತಿದ್ದಾರೆ. ಫಿಲಿಪೀನ್ಸ್ ನಲ್ಲಂತೂ ಇದರ ವಿರುದ್ಧ ದೊಡ್ಡ ಆಂದೋಲನವೇ ನಡೆದಿದೆ, ನಮ್ಮ ದೇಶಕ್ಕೆ ಕಸ ಕಳಿಸಬೇಡಿ ಅಂತ! ಖಾಸಗಿ ಕಂಪನಿಗಳಂತೂ ಪರಿಸರದ ಬಗ್ಗೆ ಒಂದಿಷ್ಟೂ ಕಾಳಜಿ ವಹಿಸದೆ ಹಗಲೂರಾತ್ರಿ ಈ ರವಾನೆ ಕೆಲಸಕ್ಕೆ ಮುಗಿಬಿದ್ದಿವೆ. ಈ ವಿಷಯದ ಕುರಿತಾಗಿ ಒಂದು ಅಂತಾರಾಷ್ಟ್ರೀಯ ಒಪ್ಪಂದ ನಡೆದಿದೆ. ನಿಮ್ಮ ಮನೆಯ ಅನಗತ್ಯ ಫರ್ನೀಚರ್‌, ಮೊಬೈಲ್‌, ಇನ್ನಿತರ ಕಸದ ಸಾಮಗ್ರಿ ಎಲ್ಲಿಗೆ ಹೋಗುತ್ತಿವೆ ಎಂಬ ಐಡಿಯಾ ನಿಮಗಿದೆಯೇ? ಈ ನಿಟ್ಟಿನಲ್ಲಿ, ನೀರಿನ/ಹೆಂಡದ ಬಾಟಲಿ ಬಿಸಾಡುವ ಮಂದಿ ಎಲ್ಲಕ್ಕೂ ದೊಡ್ಡ ಅಪರಾಧಿಗಳು!

Port-Collector-John-Simon-joins-activists-in-pushing-for-strong-policies-to-end-foreign-waste-dumping

ಸಂಪಾದನೆಗೆ ಹೊಸ ದಾರಿ : ಇಂಟರ್‌ ನೆಟ್‌ ನಲ್ಲಿ ಇನ್‌ ಫ್ಲೂಯೆನ್ಸರ್‌ ನ ಒಂದು ಹೊಸ ತಂಡ, ವಿಶ್ವದೆಲ್ಲೆಡೆಯ ಪ್ರಾಜೆಕ್ಟ್ ಮ್ಯಾನೇಜರ್ಸ್‌ ಗೆ ಮನೆಮನೆಗೂ ಮೆಸೇಜ್‌ ತಲುಪಿಸುವ ಒಂದು ಹೊಸ ಅವಕಾಶ ಹುಡುಕಿಕೊಂಡಿದೆ. ಈ ಮಂದಿ ರೀಲ್ಸ್, ಮೋಟಿವೇಶನ್‌ ಮೆಸೇಜ್‌, ಕುಕರಿ, ಟ್ರಾವೆಲಿಂಗ್‌, ಸಣ್ಣ ಸಮುದಾಯಗಳ ಸುದ್ದಿ ಸಮಾಚಾರಗಳಲ್ಲಿ ಮಸಾಲೆ ಬೆರೆಸಿ ಪ್ರಸ್ತುತಪಡಿಸುತ್ತಾ, ಎಸ್ಟಾಬ್ಲಿಶ್ಡ್ ಮೀಡಿಯಾಗೆ ದೊಡ್ಡ ಸವಾಲಾಗಿದ್ದಾರೆ. ದುಬಾರಿ ಕಾರು ತಯಾರಿಸು ಪೋರ್ಶ್‌ ಕಂಪನಿ ಥೈಲೆಂಡ್‌ 88 ರೈಝಿಂಗ್‌ ಸೋಶಿಯಲ್ ಮೀಡಿಯಾ ಜೊತೆ ಬೆರೆತು, ಕಲಾವಿದರಿಗೆ ಹೊಸ ಹೊಸ ವೇದಿಕೆ ಒದಗಿಸುತ್ತಿದೆ. ತಮ್ಮ ಕ್ರಿಯೇಟಿವ್ ಐಡಿಯಾಗಳಿಂದ ಈ ಇನ್‌ಫ್ಲೂಯೆನ್ಸರ್ಸ್‌ ಸಂಪಾದನೆಗೆ ಒಂದು ಹೊಸ ದಾರಿ ಸಿಕ್ಕಿದೆ.

PORSCHE-X-88RISING

ನಮ್ಮ ದನಿ ಆಲಿಸಿ  : ಹೆಂಗಸರು ತಮ್ಮ ಹಕ್ಕು, ಸುರಕ್ಷತೆಗಾಗಿ ಮತ್ತೆ ಮತ್ತೆ ಹೋರಾಡಬೇಕಿದೆ. ಆಗ ಮಾತ್ರವೇ ದೂರ ದೇಶಗಳು ತಮ್ಮ ಕಾನೂನಿನ ರೀತಿ ನೀತಿ ನಡಲಿಸುತ್ತವೆ. 6 ವರ್ಷಗಳ ಹಿಂದೆ ಇಸ್ತಾಂಬುಲ್ ಕನ್ವೆನ್ಶನ್‌ ನಲ್ಲಿ ಹೆಂಗಸರ ವಿರುದ್ಧ ಹಿಂಸಾಚಾರ ನಿಲ್ಲಿಸುವ ವಿಷಯವನ್ನು ಗಂಭೀರವಗಿ ಪರಿಗಣಿಸಬೇಕೆಂದು ಹೊಸ ಪ್ರಸ್ತಾಪಗಳು ಬಂದವು. ಇಲ್ಲಿಯವರೆಗೆ ಅಂಥದ್ದರ ಕುರಿತು ಐರೋಪ್ಯ ಯೂನಿಯನ್‌ ಗಳು ಕ್ರಮ ಕೈಗೊಳ್ಳಲೇ ಇಲ್ಲ. ಹೆಂಗಸರನ್ನು ಹಿಂಸಿಸುವ ಪತಿ, ತಂದೆ, ಬೀದಿ ಕಾಮಣ್ಣರು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಇಲ್ಲಿನ ಆ್ಯಕ್ಟಿವಿಸ್ಟ್ಸ್ ತೀವ್ರವಾಗಿ ದಂಗೆ ಎದ್ದಿದ್ದಾರೆ. ನಮ್ಮ ದೇಶದಲ್ಲಂತೂ ಬಿಡಿ, ಹೆಂಗಸರ ಮೇಲೆ ಕೈ ಮಾಡುವುದು, ಮೈ ಸವರುವುದು ಯಾವ ಕಾಲದಿಂದೋ ದೊಣೆನಾಯಕನ ಅಪ್ಪಣೆ ಎಂಬಂತೆ ನಿಲ್ಲದೇ ಮುಂದುವರಿದಿದೆ.

nowhere-now-here1317262009

ಅಬ್ಬಾ…. ಅದ್ಭುತ ಪ್ರತಿಭೆ : ನ್ಯೂಯಾರ್ಕಿನ ಹೈಬ್ರಿಡ್‌ ಮೂವ್ ಮೆಂಟ್‌ ಥಿಯೇಟರ್‌ ಕಂಪನಿ, ಫ್ರೆಂಚ್‌ ಸರ್ಕಸ್‌ ನಿಂದ ಪ್ರಭಾವಿತಗೊಂಡು ಡ್ಯಾನ್ಸ್ ಪರ್ಫಾರ್ಮೆನ್ಸ್ ಪ್ರಸ್ತುತಪಡಿಸಿದೆ. ಇದರಲ್ಲಿನ ಲೈಟ್‌ಬಾಡಿ ಮೂವ್ ಮೆಂಟ್ಸ್ ಕಂಗಳಿಗೆ ಪವಾಡವೆನಿಸುವ ಆ್ಯಕ್ಷನ್ಸ್ ನೀಡುತ್ತಿವೆ. ಸರ್ಕಸ್‌ ಗಳಲ್ಲಿ ಪ್ರಾಣಿ ಪ್ರದರ್ಶನ ರದ್ದಾದಾಗಿನಿಂದ, ಥಿಯೇಟರ್‌ಸರ್ಕಸ್‌ ಈ ಬಾಡಿ ಮೂವ್ ‌ಮೆಂಟ್ಸ್ ಮೂಲಕ ಅದ್ಭುತ ಕಲಾಪ್ರದರ್ಶನ ಪ್ರಸ್ತುತಪಡಿಸುತ್ತಿದೆ. ನಮ್ಮ ದೇಶದಲ್ಲಂತೂ ದೀನದಲಿತರ ಮೇಲೆ ಮೂತ್ರ ವಿಸರ್ಜಿಸುವ ರಾಕ್ಷಸೀ ಕಲಾಪ್ರದರ್ಶನಗಳಿಗೇನೂ ಕಡಿಮೆ ಇಲ್ಲ, ಮ. ಪ್ರದೇಶದ ಸೀಧೀ ಜಿಲ್ಲೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ!

peace-pole-day

ಯುದ್ಧವಲ್ಲ ಶಾಂತಿ ಬೇಕು : ಪೀಸ್‌ ಅಡ್ವೋಕೇಟ್‌ ಟೆರೀ ಏಂಜಲ್ 1 ಕೋಟಿಗೂ ಅಧಿಕ ಹಣ ಖರ್ಚು ಮಾಡಿ, `ಮೇ ಪೀಸ್‌ ಪ್ರಿವೇಸ್ ‌ಆನ್‌ ಅರ್ಥ್‌’ ಎಂಬ ಸಂದೇಶವನ್ನು ಬರೆದು, ಪೋಸ್ಟರ್‌ ಮಾಡಿ, ದೇಶದ ಉದ್ದಗಲಕ್ಕೂ ಕಂಬ ಕಂಬಗಳ ಮೇಲೆ ಅಂಟಿಸುತ್ತಿದ್ದಾರೆ. ಸಮರದ ಬದಲು ಶಾಂತಿ ಬೇಕು ಎಂದು ಪ್ರತಿಯೊಬ್ಬರಿಗೂ ತಿಳಿಸುವುದೇ ಈಕೆಯ ಉದ್ದೇಶ! ಈ ಕೆಲಸ ಸುಲಭದ್ದಲ್ಲ, ಏಕೆಂದರೆ ರಷ್ಯಾ ಯೂಕ್ರೇನ್‌ ಮಾತ್ರವಲ್ಲದೆ, ಭಾರತ ಸೇರಿದಂತೆ ಫ್ರಾನ್ಸ್, ಅಮೆರಿಕಾ, ಚೀನಾ, ಜಪಾನ್‌, ಕೊರಿಯಾಗಳಲ್ಲಿ ಸರ್ಕಾರದ ಮಂದಿ ಯುದ್ಧವನ್ನು ಮತ್ತಷ್ಟು ಗಂಭೀರಗೊಳಿಸಲು ಸತತ ಯತ್ನಿಸುತ್ತಿದ್ದಾರೆ. ನಮ್ಮ ಮಣಿಪುರದ ರಾಜ್ಯದಲ್ಲಿ ಯುದ್ಧದಂಥ ಪರಿಸ್ಥಿತಿ ಇದೆ. ಧರ್ಮದ ಹೆಸರಲ್ಲಿ ವಿಧರ್ಮಿಗಳನ್ನು ನೆರೆಯವರಲ್ಲ, ಶತ್ರುಗಳೆಂದೇ ಭಾವಿಸುತ್ತೇವೆ. ಟೆರೀ ಏಂಜೆಲ್ ‌ರ ಕೆಲಸ ಹುಚ್ಚರದ್ದು ಎಂದು ವ್ಯಂಗ್ಯವಾಡುವವರಿಗೇನೂ ಕೊರತೆ ಇಲ್ಲ, ಇಂಥ ಹುಚ್ಚರಿಂದಲೇ ವಿಶ್ವ ಪ್ರಗತಿ ಕಂಡೀತು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ