ದೇಹ ತೋರ್ಪಡಿಕೆಯಲ್ಲಿ ತಪ್ಪೇನು? : ಕೆಲವು ದೇಶಗಳಲ್ಲಿ ಹಿಜಾಬ್ ಬುರ್ಖಾಗಳನ್ನು ಬಲವಂತವಾಗಿ ಹೇರುತ್ತಿರಬಹುದು, ಆದರೆ ತರುಣಿಯರು ಮಾತ್ರ ಬಿಕಿನಿ ಧರಿಸುವ ಅವಕಾಶವನ್ನು ಎಂದೂ ಕಳೆದುಕೊಳ್ಳುವುದಿಲ್ಲ. ದೇಶಾದ್ಯಂತದ ಸ್ವಿಮಿಂಗ್ ಪೂಲ್ಸ್, ಬೀಚುಗಳಲ್ಲಿ ತಮ್ಮ ಸ್ಪೆಷಲ್ ಬಿಕಿನಿಯನ್ನು ಪ್ರದರ್ಶಿಸುವ ಬಿಂದಾಸ್ ಹುಡುಗಿಯರಿಗೇನೂ ಕೊರತೆ ಇಲ್ಲ. ಇದರ ಕುರಿತಾಗಿ ದೊಡ್ಡ ರಿಸರ್ಚ್ ಗಳೂ ನಡೆದಿವೆ. ಎಷ್ಟೋ ಕಂಪನಿಗಳು ಯಾವಾಗ, ಯಾವ ರೀತಿ ಮಾರ್ಕೆಟ್ ಡೆವಲಪ್ ಆಗುತ್ತದೆಂದು ವರದಿ ಕಳುಹಿಸುತ್ತಿವೆ. ಮೈಕಟ್ಟು ಪ್ರದರ್ಶನಕ್ಕೆ ಯೋಗ್ಯವಾಗಿದ್ದರೆ ಅದನ್ನು ತೋಪರ್ಡಿಸಲು ಸಂಕೋಚವೇಕೆ?
ಎಲ್ಲಕ್ಕೂ ದೊಡ್ಡ ಅಪರಾಧಿ : ಇತ್ತೀಚೆಗೆ ಅತಿ ಶ್ರೀಮಂತ ದೇಶಗಳೇ ಅಲ್ಲದೆ ಸಣ್ಣಪುಟ್ಟ ದೇಶಗಳ ನಗರದ ಮಂದಿ ಸಹ ಕಸದ ವಿಲೇವಾರಿ ಕುರಿತು ಚಿಂತೆಗೀಡಾಗಿದ್ದಾರೆ. ಯಾವ ದೇಶಗಳ ಬಳಿ ದುಬಾರಿ ಹಣವಿದೆಯೋ, ಅವು ಬಡ ದೇಶಗಳಿಗೆ ದುಡ್ಡಿನಾಸೆಗೆ, ಹಡಗುಗಳಲ್ಲಿ ರಾಶಿ ರಾಶಿ ಕಸ ರವಾನಿಸುತ್ತಿವೆ. ನಗರದ ಮಂದಿ ದಿನೇ ದಿನೇ ಕೊರಿಯರ್ ನಲ್ಲಿ ಹೊಸ ಸಾಮಗ್ರಿ ತರಿಸುತ್ತಾ, ಹಳೆಯದನ್ನೂ ಅವು ಏನಾಗುತ್ತಿವೆ ಎಂದೂ ಯೋಚಿಸದೆ ಬಿಸಾಡುತ್ತಿದ್ದಾರೆ. ಫಿಲಿಪೀನ್ಸ್ ನಲ್ಲಂತೂ ಇದರ ವಿರುದ್ಧ ದೊಡ್ಡ ಆಂದೋಲನವೇ ನಡೆದಿದೆ, ನಮ್ಮ ದೇಶಕ್ಕೆ ಕಸ ಕಳಿಸಬೇಡಿ ಅಂತ! ಖಾಸಗಿ ಕಂಪನಿಗಳಂತೂ ಪರಿಸರದ ಬಗ್ಗೆ ಒಂದಿಷ್ಟೂ ಕಾಳಜಿ ವಹಿಸದೆ ಹಗಲೂರಾತ್ರಿ ಈ ರವಾನೆ ಕೆಲಸಕ್ಕೆ ಮುಗಿಬಿದ್ದಿವೆ. ಈ ವಿಷಯದ ಕುರಿತಾಗಿ ಒಂದು ಅಂತಾರಾಷ್ಟ್ರೀಯ ಒಪ್ಪಂದ ನಡೆದಿದೆ. ನಿಮ್ಮ ಮನೆಯ ಅನಗತ್ಯ ಫರ್ನೀಚರ್, ಮೊಬೈಲ್, ಇನ್ನಿತರ ಕಸದ ಸಾಮಗ್ರಿ ಎಲ್ಲಿಗೆ ಹೋಗುತ್ತಿವೆ ಎಂಬ ಐಡಿಯಾ ನಿಮಗಿದೆಯೇ? ಈ ನಿಟ್ಟಿನಲ್ಲಿ, ನೀರಿನ/ಹೆಂಡದ ಬಾಟಲಿ ಬಿಸಾಡುವ ಮಂದಿ ಎಲ್ಲಕ್ಕೂ ದೊಡ್ಡ ಅಪರಾಧಿಗಳು!
ಸಂಪಾದನೆಗೆ ಹೊಸ ದಾರಿ : ಇಂಟರ್ ನೆಟ್ ನಲ್ಲಿ ಇನ್ ಫ್ಲೂಯೆನ್ಸರ್ ನ ಒಂದು ಹೊಸ ತಂಡ, ವಿಶ್ವದೆಲ್ಲೆಡೆಯ ಪ್ರಾಜೆಕ್ಟ್ ಮ್ಯಾನೇಜರ್ಸ್ ಗೆ ಮನೆಮನೆಗೂ ಮೆಸೇಜ್ ತಲುಪಿಸುವ ಒಂದು ಹೊಸ ಅವಕಾಶ ಹುಡುಕಿಕೊಂಡಿದೆ. ಈ ಮಂದಿ ರೀಲ್ಸ್, ಮೋಟಿವೇಶನ್ ಮೆಸೇಜ್, ಕುಕರಿ, ಟ್ರಾವೆಲಿಂಗ್, ಸಣ್ಣ ಸಮುದಾಯಗಳ ಸುದ್ದಿ ಸಮಾಚಾರಗಳಲ್ಲಿ ಮಸಾಲೆ ಬೆರೆಸಿ ಪ್ರಸ್ತುತಪಡಿಸುತ್ತಾ, ಎಸ್ಟಾಬ್ಲಿಶ್ಡ್ ಮೀಡಿಯಾಗೆ ದೊಡ್ಡ ಸವಾಲಾಗಿದ್ದಾರೆ. ದುಬಾರಿ ಕಾರು ತಯಾರಿಸು ಪೋರ್ಶ್ ಕಂಪನಿ ಥೈಲೆಂಡ್ 88 ರೈಝಿಂಗ್ ಸೋಶಿಯಲ್ ಮೀಡಿಯಾ ಜೊತೆ ಬೆರೆತು, ಕಲಾವಿದರಿಗೆ ಹೊಸ ಹೊಸ ವೇದಿಕೆ ಒದಗಿಸುತ್ತಿದೆ. ತಮ್ಮ ಕ್ರಿಯೇಟಿವ್ ಐಡಿಯಾಗಳಿಂದ ಈ ಇನ್‌ಫ್ಲೂಯೆನ್ಸರ್ಸ್ ಸಂಪಾದನೆಗೆ ಒಂದು ಹೊಸ ದಾರಿ ಸಿಕ್ಕಿದೆ.
ನಮ್ಮ ದನಿ ಆಲಿಸಿ : ಹೆಂಗಸರು ತಮ್ಮ ಹಕ್ಕು, ಸುರಕ್ಷತೆಗಾಗಿ ಮತ್ತೆ ಮತ್ತೆ ಹೋರಾಡಬೇಕಿದೆ. ಆಗ ಮಾತ್ರವೇ ದೂರ ದೇಶಗಳು ತಮ್ಮ ಕಾನೂನಿನ ರೀತಿ ನೀತಿ ನಡಲಿಸುತ್ತವೆ. 6 ವರ್ಷಗಳ ಹಿಂದೆ ಇಸ್ತಾಂಬುಲ್ ಕನ್ವೆನ್ಶನ್ ನಲ್ಲಿ ಹೆಂಗಸರ ವಿರುದ್ಧ ಹಿಂಸಾಚಾರ ನಿಲ್ಲಿಸುವ ವಿಷಯವನ್ನು ಗಂಭೀರವಗಿ ಪರಿಗಣಿಸಬೇಕೆಂದು ಹೊಸ ಪ್ರಸ್ತಾಪಗಳು ಬಂದವು. ಇಲ್ಲಿಯವರೆಗೆ ಅಂಥದ್ದರ ಕುರಿತು ಐರೋಪ್ಯ ಯೂನಿಯನ್ ಗಳು ಕ್ರಮ ಕೈಗೊಳ್ಳಲೇ ಇಲ್ಲ. ಹೆಂಗಸರನ್ನು ಹಿಂಸಿಸುವ ಪತಿ, ತಂದೆ, ಬೀದಿ ಕಾಮಣ್ಣರು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಇಲ್ಲಿನ ಆ್ಯಕ್ಟಿವಿಸ್ಟ್ಸ್ ತೀವ್ರವಾಗಿ ದಂಗೆ ಎದ್ದಿದ್ದಾರೆ. ನಮ್ಮ ದೇಶದಲ್ಲಂತೂ ಬಿಡಿ, ಹೆಂಗಸರ ಮೇಲೆ ಕೈ ಮಾಡುವುದು, ಮೈ ಸವರುವುದು ಯಾವ ಕಾಲದಿಂದೋ ದೊಣೆನಾಯಕನ ಅಪ್ಪಣೆ ಎಂಬಂತೆ ನಿಲ್ಲದೇ ಮುಂದುವರಿದಿದೆ.