ಶರತ್ ಚಂದ್ರ 

ಸು ಫ್ರಮ್ ಸೋ ಚಿತ್ರದ ಅದ್ಭುತ ಯಶಸ್ಸು, ಬುಕ್ ಮೈ ಶೋನಲ್ಲಿ ದಾಖಲೆಯ ಟಿಕೆಟ್ ಮಾರಾಟ, ಥೀಯೇಟರ್ ಮುಂದೆ ಜನ ಸಾಗರ ಹೀಗೆ ಒಂದು ವಾರದಿಂದ ಈ ಸಿನಿಮಾದ ಬಗ್ಗೆ ಮಾಧ್ಯಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಕಡೆ ಹವಾ ಸೃಷ್ಟಿ ಮಾಡಿದ್ದು ನಿಮಗೆಲ್ಲ ಗೊತ್ತಿದೆ.

ಚಿತ್ರದಲ್ಲಿನ ಹಾಸ್ಯದ ಜೊತೆಗೆ ಚಿತ್ರದ ಸಂಗೀತ ಅದರಲ್ಲೂ ಚಿತ್ರದ ಎರಡು ಹಾಡುಗಳು ವರ್ಲ್ಡ್ ಫೇಮಸ್ ಆಗಿವೆ. ಅದರಲ್ಲೂ Danks anthem ನಲ್ಲಿ ಬರುವ ಥೀಮ್ ಮ್ಯೂಸಿಕ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಜನ ರೀಲ್ಸ್ ಮಾಡುತ್ತಿದ್ದಾರೆ.

1000626256

ಅಂದ ಹಾಗೆ ಈ ಹಾಡನ್ನು ಕಂಪೋಸ್ ಮಾಡಿದ್ದು ಸುಮೇದ್. ಕೆ. ಎನ್ನುವ ಯಂಗ್ ಟ್ಯಾಲೆಂಟ್. ಅತೀ ಚಿಕ್ಕ ವಯಸ್ಸಿನಲ್ಲಿ ಮ್ಯೂಸಿಕ್ ಕಂಪೋಸರ್ ಆಗಿರುವ ಸುಮೇದ್. ಕೆ. ಪ್ರತಿಭೆ

ಶರತ್ ರಾಯ್ಶದ್ ನಿರ್ದೇಶಿಸಿದ್ದ ‘ಪೆಟಲ್’ ಎಂಬ ಕನ್ನಡ ಶಾರ್ಟ್ ಫಿಲಂಗೆ ಪ್ರಥಮ ಬಾರಿಗೆ ಮ್ಯೂಸಿಕ್ ನೀಡಿದ್ದರು.

1000626259

ರಿಷಬ್ ಶೆಟ್ಟಿ ಯವರ ಯೂಟ್ಯೂಬ್ ಚಾನೆಲ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಚಿತ್ರದ ಮೂಲಕ

ಸುಮೇದ್ ಪ್ರತಿಭೆ ರಾಜ್. ಬಿ. ಶೆಟ್ಟಿ ಅವರ ಕಣ್ಣಿಗೆ ಬಿದ್ದಿತ್ತು. ಸು ಫ್ರಮ್ ಸೋ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸುಮೇದ್ ತಮ್ಮ ಪ್ರಥಮ ಪ್ರಯತ್ನದಲ್ಲೇ ಗೆದ್ದಿದ್ದಾರೆ.

ಈ ಆಲ್ಬಮ್ನಲ್ಲಿ ಹೊಸಬರ ಜೊತೆಗೆ ವಿಜಯ ಪ್ರಕಾಶ್,ವಾಸುಕಿ ವೈಭವ್, ಇಂದು ನಾಗರಾಜ್.      ನಟಿ ಚೈತ್ರ ಆಚಾರ್, ಸಿದ್ದಾರ್ಥ್ ಬೆಲ್ಮಣ್ಣು, ಮುಂತಾದ ಗಾಯಕರು ಹಾಡಿದ್ದಾರೆ.

1000626261

ಚಿತ್ರದಲ್ಲಿ ಬಾವ ಪಾತ್ರದಾರಿ ಎಂಟ್ರಿಯಾದಾಗಲೆಲ್ಲ ಬರುವ   ಹಾಡು’ ಬಂದರು ಬಂದರು ಬಾವ ಬಂದರು ‘ ಹಾಡು ಕೂಡ ಟ್ರೆಂಡಿಂಗ್ ನಲ್ಲಿದೆ.  .ಚಿತ್ರಮಂದಿರದಲ್ಲಿ ಈ ಹಾಡು ಬಂದಾಗ ಜನರ ರೆಸ್ಪಾನ್ಸ್ ಕೂಡ ಅಲ್ಟಿಮೇಟ್ ಆಗಿದೆ.

ಇನ್ನೊಬ್ಬ ಯುವ ಸಂಗೀತ ನಿರ್ದೇಶಕ ಸಂದೀಪ್ ತುಳಸಿದಾಸ್  ಚಿತ್ರಕ್ಕೆ ಹಿನ್ನಲೆ ಸಂಗೀತ  ನೀಡುವುದರ ಜೊತೆಗೆ  ವೈರಲ್ ಆಗಿರುವ ಬಿಟ್ ಸಾಂಗ್ ನ್ನು ಕಂಪೋಸ್ ಮಾಡಿದ್ದಾರೆ.

ಸು ಫ್ರಮ್ ಸೋ ಮೂಲಕ ಕನ್ನಡ ಚಿತ್ರರಂಗಕ್ಕೆ

ಒಂದಷ್ಟು ಹೊಸ ಪ್ರತಿಭೆಗಳು ಸಿಕ್ಕಿವೆ.  ಸುಮೇದ್. ಕೆ. ಮತ್ತು ಸಂದೀಪ್ ತುಳಸಿದಾಸ್ ರಂತಹ ಯುವ ಪ್ರತಿಭೆಗಳಿಗೆ ಇನ್ನಷ್ಟು ಉತ್ತಮ ಅವಕಾಶ ಗಳು ಸಿಗಲಿ, ಈ ಜೆನ್ ನೆಕ್ಸ್ಟ್ ಟ್ಯಾಲೆಂಟ್ ಗಳಿಂದ ಹೊಸತನ ತುಂಬಿದ ಹಾಡುಗಳು ಬರಲಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ