ಲಾನ್‌ ಚಿಕ್ಕದಾಗಿದ್ದರೂ ಪರವಾಗಿಲ್ಲ, ಆದರೆ ಸದಾ ಹಸಿರು ತುಂಬಿಕೊಂಡು ಕಣ್ಣಿಗೆ ತಂಪು ನೀಡುವಂತಿರಬೇಕು. ಅದರಲ್ಲಿ  ಬರಿಗಾಲನ್ನು ಇರಿಸಿದಾಗ, ತಾನಾಗಿ ಒಳಗಿಳಿಯುವಂತೆ ಮೃದುವಾಗಿರಬೇಕು. ಇಂಥ ಲಾನ್‌ ಗಾಗಿ ಈ ಕೆಳಗಿನ ಸಲಹೆ ಅನುಸರಿಸಿ :

ನೆಲದ ಆಯ್ಕೆ : ಅಂಗಳದ ಲಾನ್‌ ಯಾವ ಗಾತ್ರದಲ್ಲಿ ಹೇಗಿರಬೇಕು ಎಂಬ ಐಡಿಯಾಗಾಗಿ, ಮನೆ ಮುಂದಿನ ಅಂಗಳದ ಪ್ಲಾಟ್ ಸೈಜ್‌ ಚೆಕ್‌ ಮಾಡಿ. 500 ಗಜದ ಪ್ಲಾಟ್‌ ನಲ್ಲಿ ಲಾನ್‌ ರೆಡಿ ಮಾಡಿಸುತ್ತಿದ್ದರೆ, ಹುಲ್ಲು ಕೆಡದಂತೆ ಚೆನ್ನಾಗಿರಲು, ಅದರ ಮೇಲೆ ಹಾಯಾಗಿ ನಡೆದಾಡಲು, ಅಗತ್ಯವಾಗಿ ಅದರ ಸುತ್ತಲೂ ವಾಕಿಂಗ್‌ ಪಾತ್‌ ಇರುವಂತೆ ಜಾಗ ಮಾಡಿಸಿ. ಇದಕ್ಕಾಗಿ ಒಂದಿಷ್ಟು ದುಂಡನೆಯ ಕಲ್ಲು (ಪೆಬಲ್ಸ್) ಬಳಸಿಕೊಂಡರೆ ಹೆಚ್ಚು ಆಕರ್ಷಕ ಎನಿಸುತ್ತದೆ. ಆ ಜಾಗ ಗಿಡಮರಗಳಿಂದ ಆವೃತ್ತವಾಗದೆ ನಡೆದಾಡಲು ಅನುಕೂಲಕರ ಆಗಿರಲಿ. ಅಲ್ಲಿ ನೀರು ನಿಲ್ಲುವಂತಿರಬಾರದು, ಕಲ್ಲುಮುಳ್ಳಿನ ಮಣ್ಣಾಗಬಾರದು.

ಮಣ್ಣಿನ ಪರೀಕ್ಷೆ : ಲಾನ್‌ ಗಾಗಿ ನೆಲ ಆರಿಸಿದ ನಂತರ, ಸಾಯಿಲ್ ‌ಏಜೆಂಟ್‌ ನ್ನು ಕರೆಸಿ, ನಿಮ್ಮ ಲಾನಿನ ಮಣ್ಣು ಹೇಗಿದೆ ಎಂದು ಪರೀಕ್ಷೆ ಮಾಡಿಸಿ. ನಿಮ್ಮ ಊರಿನ ಸಾಯಿಲ್ ‌ಇನ್‌ ಸ್ಟಿಟ್ಯೂಟ್‌ ನಿಂದ ಅಥವಾ ಹತ್ತಿರದ ನರ್ಸರಿಯಿಂದ ಸಂಬಂಧಿಸಿದ ಎಕ್ಸ್ ಪರ್ಟ್‌ ನ್ನು ಕರೆಸಿ. ಈ ಮಣ್ಣು ಮರಳು ಮಿಶ್ರತವೋ, ಹುಲ್ಲು ಬೆಳೆಯಲು ಹದವಾಗಿದೆಯೋ ಇತ್ಯಾದಿ ಎಲ್ಲ ವಿವರವನ್ನು ಆತ  ಒದಗಿಸುತ್ತಾರೆ.

ಇದರಲ್ಲಿ ಪೋಷಕಾಂಶಗಳು ತುಂಬಿವೆ ತಾನೇ, ಇದು ಹುಲ್ಲು ಬೆಳೆಯಲು ಫಲವತ್ತಾಗಿದೆಯೇ ಅಥವಾ ಏನಾದರೂ ಸುಧಾರಣೆ ಬೇಕಿದೆಯೇ ಎಂದೂ ಸೂಚಿಸುತ್ತಾರೆ. ಉತ್ತಮ ತಳಿಯ ಲಾನ್‌ ಹುಲ್ಲಿಗಾಗಿ ಪಿಟ್‌ ಲೆವೆಲ್-‌ಇರಬೇಕು. ಉಳಿದ ಕೊರತೆಗಳ ನಿವಾರಣೆಗೆ ಅವರು ಸೂಚಿಸಿದಂತೆ ಮಾಡಿ.

ಲಾನ್ಗಾಗಿ ಆಹಾರ : ಹಸಿರು ತುಂಬಿದ ಲಾನ್‌ ಗಾಗಿ ಎಂಥ ಗೊಬ್ಬರ, ಯಾವಾಗ, ಎಷ್ಟು, ಹೇಗೆ ಹಾಕಬೇಕೆಂಬುದೂ ಮುಖ್ಯ. ತಜ್ಞರ ಪ್ರಕಾರ ಸಿಂಥೆಟಿಕ್‌ ಗೊಬ್ಬರಕ್ಕಿಂತಲೂ ಸಾವಯವ ಗೊಬ್ಬರವೇ ಮೇಲು. ಸೀ ವೀಡ್‌ ಯಾ ಬೋನ್‌ ಮೀಲ್ ‌ಬೆರೆತ ಗೊಬ್ಬರ ಆರಿಸಿ.

ಜೊತೆಗೆ ಕಂಪೋಸರ್‌ಬೆರೆತ ಮಣ್ಣನ್ನು ಇಂಥ ನೆಲಕ್ಕೆ ಬೆರೆಸುವುದು ಉತ್ತಮ. ಸ್ಟಾಂಡರ್ಡ್‌ ಲಾನ್‌ ಗಾಗಿ ಈ ನೆಲದ ಮೇಲೆ ಟ್ರಾಕ್ಟರ್‌ ಚಲಾಯಿಸಿ, ಮೇಲು ಪದರದ ಮಣ್ಣು 6 ಇಂಚು ಇರುವಂತೆ ನೋಡಿಕೊಳ್ಳಿ. ಹೀಗೆ ಗೊಬ್ಬರ ಬೆರೆಸುವ ಪ್ರಕ್ರಿಯೆ ವರ್ಷಕ್ಕೆ 2 ಸಲ, ವಸಂತ ಋತು ಹಾಗೂ ಶಿಶಿರ ಋತುವಿನಲ್ಲಿ ಮಾಡಬೇಕು. ಇಂಥ ಗೊಬ್ಬರ ಬಳಕೆಯಿಂದ ಅದರ ಪೋಷಕಾಂಶ ಸಹಜವಾಗಿ ಹೆಚ್ಚುತ್ತದೆ.

3-4 ಸಲ ಮೇಲ್ಪದರದ ಮಣ್ಣನ್ನು ಕೆದಕಿ ಅಡಿಭಾಗಕ್ಕೆ ಹೋಗುವಂತೆ ಮಾಡಿ. ಕಲ್ಲುಮುಳ್ಳು, ಕಳೆ ತೆಗೆದು ನೀಟಾಗಿಸಿ. ಸಗಣಿ ಗೊಬ್ಬರ ಉತ್ತಮ ಆಯ್ಕೆ ಆಗಿದೆ. ಈಗ ಎಲ್ಲೆಡೆ ಗೊಬ್ಬರದ ಅಂಗಡಿಗಳಲ್ಲಿ ಬಗಬಗೆಯ ಪ್ಯಾಕೆಟ್‌ ಗೊಬ್ಬರ ಸಿಗುತ್ತಿದೆ, ನೋಡಿಕೊಂಡು ಉತ್ತಮವಾದುದನ್ನೇ ಆರಿಸಿ.

ಹುಲ್ಲಿನ ಬಗೆ : ಲಾನ್‌ ಗೆ ಎಂಥ ಹುಲ್ಲು ಇರಬೇಕು ಎಂಬುದೂ ಮುಖ್ಯ. ಹವಾಮಾನ, ಲಾನಿನ ಜಾಗ, ಕ್ಷೇತ್ರ, ಲಾನಿನ ಆಕಾರ ಗಮನದಲ್ಲಿಟ್ಟುಕೊಂಡೇ ಪೂರಕ ಬಗೆಯ ಹುಲ್ಲನ್ನು ಆರಿಸಿ. ಇತ್ತೀಚೆಗೆ ನರ್ಸರಿಗಳಲ್ಲಿ ಬಗಬಗೆಯವು ಲಭ್ಯವಿವೆ. ಆರ್ದ್ರತೆಯುಳ್ಳ, ನೆರಳು ಬೇಕಾದ ಜಾಗದಲ್ಲಿ ಹುಲ್ಲು ಬೆಳೆಸಬೇಕಿದ್ದರೆ, ಇದಕ್ಕೆ . ವೆರೈಟಿಯೇ ಸರಿ. ಇದರಿಂದ ಲಾನ್‌ ಉತ್ತಮಗೊಂಡು, ಕಾಲಿಗೆ ಚುಚ್ಚದೆ ಹಿತ ನೀಡುತ್ತದೆ, ಮೃದುವಾಗಿದ್ದು, ಅದರ ಮೇಲೆ ನಡೆದರೂ ಒತ್ತಡಕ್ಕೆ ಒಳಗಾಗದು. ಇದು ಬೇಗ ಕೆಡುವ ಸಾಧ್ಯತೆಯೂ ಇಲ್ಲ. ಗಾಢ ಹಸಿರು ಬಣ್ಣ ಬೇಕಿದ್ದರೆ, ಎಲ್ಲರಿಗೂ ಪ್ರಿಯವಾಗುವಂಥ ಹುಲ್ಲಿನ ತಳಿ ಆರಿಸಿ, ಹೊಳೆಯುವಂತೆ ಮಾಡಿ.

ಜೈಸಿಸ್ವೆರೈಟಿ : ನಿಮ್ಮ ಬಳಿ ಕೈತೋಟಕ್ಕಾಗಿ ಹೆಚ್ಚಿನ ಸಮಯವಿದ್ದರೆ, ಅದರ ರಕ್ಷಣೆಯ ಜವಾಬ್ದಾರಿ ಹೊರಬಲ್ಲಿರಾದರೆ, ಆಗ್ನೇಯ ಏಷ್ಯಾದಲ್ಲಿ ಪ್ರಸಿದ್ಧವಾದ ಜೈಸಿಸ್‌ ವೆರೈಟಿಯ ಹುಲ್ಲಿನ ತಳಿ ಆರಿಸಿ. ಇದು ನೋಡಲು ಸುಂದರ, ಗಾಢ ಹಸಿರು ಬಣ್ಣ ಹೊಂದಿರುತ್ತದೆ.

ಭಾರತದಲ್ಲಿ ಸೈನೋಡೋನ್‌ : ಇದು ಬಹು ಜನರ ಮೊದಲ ಆಯ್ಕೆ! ಇದನ್ನು ಬೆಳೆಯಲು ವಸಂತ ಋತು ಅನುಕೂಲಕರ ಹವಾಮಾನ. ಹುಲ್ಲು ಬಲು ಒತ್ತಾಗಿದ್ದು, ಬೆಳಗಿನ ಹೊತ್ತು ಇದರ ಮೇಲೆ ಬರಿಗಾಲಲ್ಲಿ ನಡೆಯುವುದರಿಂದ ನಿಮ್ಮ ಆರೋಗ್ಯ ಎಷ್ಟೋ ಸುಧಾರಿಸುತ್ತದೆ.

ನೀರು ಹನಿಸುವಿಕೆ : ತಜ್ಞರ ಪ್ರಕಾರ, ಪ್ರತಿ ದಿನ ಲಾನ್‌ ಗೆ ನೀರು ಹನಿಸುವಂತಿಲ್ಲ. ಋತು ಮತ್ತು ಆಯಾ ದಿನಗಳ ತಾಪಮಾನ ಗುರುತಿಸಿಕೊಂಡು, ಲಾನ್‌ ಗೆ ನೀರು ಹನಿಸಿ. ಆಗ ಅದರ ಬೇರು ಆಳವಾಗಿ ಒಳಗಿಳಿಯುತ್ತದೆ, ಹುಲ್ಲು ಹಸನಾಗುತ್ತದೆ.

ಲಾನಿನ ನಡುನಡುವೆ, ಅಂಚಿನಲ್ಲಿ ಸಣ್ಣಪುಟ್ಟ ಟಿನ್‌ ಡಬ್ಬಾ ಅಥವಾ ಖಾಲಿ ಪ್ಲಾಸ್ಟಿಕ್‌ ಡಬ್ಬಾ ಇರಿಸಿಬಿಡಿ. ನೀವು ಸ್ಪ್ರಿಂಕ್ಲಿಂಗ್ ವಿಧಾನದಿಂದ 15-20 ನಿಮಿಷ ನೀರು ಹನಿಸುವುದು ಲೇಸು. ಬದಿಯಲ್ಲಿರಿಸಿದ ಡಬ್ಬಾಗಳಲ್ಲಿ ಅರ್ಧ ಒಂದಿಂಚು ನೀರು ತುಂಬಿತೇ ಎಂದು ಪರೀಕ್ಷಿಸಿ. ಉತ್ತಮ ಇಳುವರಿಗಾಗಿ ಇಷ್ಟು ಪ್ರಮಾಣದ ನೀರು ಬೇಕೇ ಬೇಕು.

ಕಟಿಂಗ್ರೋಲಿಂಗ್‌ : ಬೇರು ಬಿಟ್ಟ ಹುಲ್ಲನ್ನು ಹಸನು ಮಾಡಿದ ನೆಲದಲ್ಲಿ, 1-2 ಇಂಚು ಅಂತರದಲ್ಲಿ ಚೆನ್ನಾಗಿ ಒತ್ತರಿಸಿ ನೆಡಬೇಕು. ತೀರಾ ಹತ್ತಿರ ಹತ್ತಿರ ಬೇಡ, ಆಗ ಅದು ಬೇಗ ಬೇಗ ಬೆಳೆದು, ನಿರ್ವಹಣೆ ದುಬಾರಿ ಆಗುತ್ತದೆ.

ಮಾರುಕಟ್ಟೆಯಲ್ಲಿ ಬಗೆಬಗೆಯ ಲಾನ್‌ ಹುಲ್ಲು ಲಭ್ಯ. ವಿದೇಶಗಳಲ್ಲಿ ಮಾನವ ನಿಯಂತ್ರಿತ, ಮೋಟರ್‌ ಬೇಸ್ಡ್ ಹುಲ್ಲು ಕತ್ತರಿಸುವ ಯಂತ್ರಗಳು ಲಭ್ಯ. ಅಲ್ಲಂತೂ ಮನೆಯ ಸುತ್ತಲೂ 1-2 ಎಕರೆ ಲಾನ್‌ ಹೊಂದಿರುವುದು ಮಾಮೂಲಿ. ನಮ್ಮಲ್ಲಿನ ಮಾಲಿ, ಹುಲ್ಲು ಕತ್ತರಿಸುವ ಸಾಧಾರಣ ಯಂತ್ರ ಬಳಸುತ್ತಾರೆ. ಇದರ ಬ್ಲೇಡ್‌ ತೀಕ್ಷ್ಣವಾಗಿದ್ದು, ಕತ್ತರಿಸುವಿಕೆ ಸಮ ಪ್ರಮಾಣದಲ್ಲಿ ಆಗಲಿ, ಬುಡ ಸಮೇತ ಕೀಳಬಾರದು.

ಹೀಗಾಗಿ ಮತ್ತೆ ಮತ್ತೆ, ಅತಿ ಸಣ್ಣ ಗಾತ್ರದಲ್ಲಿ ಹುಲ್ಲು ಕತ್ತರಿಸಬಾರದು. ಎಂಥ ಹುಲ್ಲಿಗೆ ಎಂಥ ಕಟಿಂಗ್‌ ಎಂಬುದನ್ನು ತಜ್ಞರ ಸಲಹೆಯಂತೆ ಅನುಸರಿಸಿ. ಎಲ್ಲವನ್ನೂ ಒಂದೇ ರೀತಿಯ ಕಟಿಂಗ್‌ ನಿಂದ ಮಾಡಲಾಗದು.

ಇರುವುದರಲ್ಲಿ ತೃಪ್ತಿ : ನಿಮ್ಮ ಇಡೀ ಲಾನ್‌ ಹಸಿರುಮಯ ಹುಲ್ಲಿನಿಂದಲೇ ತುಂಬಿರಬೇಕು ಎಂದೇನಲ್ಲ. ನೆರಳು, ನೀರು ಹೆಚ್ಚಾಗಿರುವ ಕಡೆ, ಮರಗಳ ಕೆಳಗೆ ಹುಲ್ಲು ಒತ್ತಾಗಿರದು. ಹೀಗಾಗಿ ಅಂಥ ಕಡೆ ಉತ್ತಮ ಹೂಬಳ್ಳಿಗಳನ್ನು ಬೆಳೆದು ಈ ಕೊರತೆ ನಿವಾರಿಸಿ, ಇದರಿಂದ ಲಾನಿನ ಸೌಂದರ್ಯ ಹೆಚ್ಚುತ್ತದೆ.

ಜಿ. ಮನೋಹರಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ