ಹಬ್ಬಗಳಿಗಾಗಿ ಮನೆ ಪೇಂಟ್ ಮಾಡಿಸುವಾಗ ಈ ಸಲಹೆಗಳನ್ನು ಅಗತ್ಯ ಅನುಸರಿಸಿರಿ......!
ಶ್ರಾವಣ ಮಾಸ ಬಂದೊಡನೆ ಸಾಲು ಸಾಲು ಹಬ್ಬಗಳು ಶುರು. ಹೀಗಿರುವಾಗ ವರ್ಷಕ್ಕೊಮ್ಮೆ ಮನೆಗೆ ಪೇಂಟ್ ಮಾಡಿ ಗೃಹಾಲಂಕಾರದ ಸೊಬಗು ಹೆಚ್ಚಿಸುವುದು ಎಲ್ಲರ ಆಶಯ ಆಗಿರುತ್ತದೆ. ಅದಕ್ಕೆ ತಕ್ಕಂತೆ ಮನೆಯ ಇಂಟೀರಿಯರ್ಸ್ ಸಹ ಬದಲಾಯಿಸುತ್ತಾ ಇರಬೇಕು. ಇದರಿಂದ ಮನೆಯ ಗೃಹಾಲಂಕಾರ ಅಚ್ಚುಕಟ್ಟಾಗಿ, ಹೊಸ ರಂಗುರಂಗಿನ ಕಾಂತಿ ತುಂಬಿಕೊಳ್ಳುತ್ತದೆ. ಪೇಂಟ್ ಮಾಡಿಸುವ ಸಂದರ್ಭದಲ್ಲಿ ಕೇವಲ ಅದರ ಬಣ್ಣ, ಡಿಸೈನ್ ಮಾತ್ರ ಗಮನಿಸಿದರೆ ಸಾಲದು. ಗೋಡೆಗಳ ಸರ್ಫೇಸ್, ಕೋಣೆಯ ವಾತಾವರಣ, ಯಾವುದಕ್ಕಾಗಿ ಅದರ ಬಳಕೆ ಇತ್ಯಾದಿಗಳನ್ನೂ ಗಮನಿಸಬೇಕು. ಇವನ್ನು ನಿರ್ಲಕ್ಷಿಸುವುದರಿಂದ, ಪೇಂಟ್ ಪೂರ್ತಿ ಕೆಟ್ಟೇ ಹೋಗುತ್ತದೆ ಅಥವಾ ಅದರಲ್ಲಿ ಪ್ಯಾಚೆಸ್ ಕಾಣಿಸಿಕೊಳ್ಳುತ್ತದೆ.
ಪೇಂಟ್ ಮಾಡಿಸುವಾಗ ಎಷ್ಟೋ ಸಲ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಹೀಗಾದಾಗ ಗೋಡೆಯ ಅಂದಚೆಂದ ಹೆಚ್ಚುವ ಬದಲು ಇನ್ನಷ್ಟು ಕೆಟ್ಟದಾಗಿ ಕಾಣುತ್ತದೆ. ಹೀಗಾಗಿ ಅಂಥ ತೊಂದರೆ ಕಾಡದಿರಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿರಿ :
ಬ್ಲಿಸ್ಟರಿಂಗ್ ಪೇಂಟ್
ಮಾಡಿದ ನಂತರ, ಗೋಡೆಯ ಸರ್ಫೇಸ್ ಮೇಲೆ ಸಣ್ಣದಾಗಿ ಕಾಳುಗಳ ತರಹ ಅಲ್ಲಲ್ಲಿ ಉಬ್ಬಿರುವಂತೆ ಕಂಡುಬಂದರೆ, ಅಂದ್ರೆ ಪೇಂಟ್ ನಲ್ಲಿ ಬಬಲ್ಸ್ ಕಾಣಿಸಿದರೆ, ಇದನ್ನೇ ಬ್ಲಿಸ್ಟರಿಂಗ್ ಎನ್ನುತ್ತಾರೆ. ಗೋಡೆಯಲ್ಲಿ ಮೊದಲೇ ತುಸು ತೇವಾಂಶ ಇದ್ದರೆ ಈ ತರಹದ ಕಷ್ಟ ಬರುತ್ತದೆ. ಒಂದು ಕೋಟ್ ನಂತರ, ಅದನ್ನು ಪೂರ್ತಿ ಒಣಗಲು ಬಿಡದೆ ಮತ್ತೊಂದು ಕೋಟ್ ನ್ನು ಅರ್ಜೆಂಟಾಗಿ ಬಳಿದರೆ ಹೀಗಾಗುತ್ತದೆ.
ಪರಿಹಾರ : ಗೋಡೆಗೆ ಪೇಂಟ್ ಹಚ್ಚಿಸುವ ಮೊದಲು ಅದು ಪೂರ್ತಿ ಒಣಗಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಮೊದಲು ಬಳಿದ ಕೋಟ್ 100% ಒಣಗುವವರೆಗೂ, 2ನೇ ಕೋಟ್ ಬೇಡ. ಇದರಿಂದ ಮಾಡಿಸಿದ ಪೇಂಟಿಂಗ್ ವ್ಯರ್ಥವಾದೀತು. ಇಂಥ ಗೋಡೆಗಳಿಗೆ ಸೂಕ್ತ ಅಂಡರ್ ಕೋಟ್ ಪ್ರೈಮರ್ ಆರಿಸಬೇಕು, ಆಗ ಇಂಥ ಸಮಸ್ಯೆ ಬರುವುದಿಲ್ಲ.
ಮೌಲ್ಡ್
ಇದು ಒಂದು ತರಹದ ಫಂಗಸ್ ಆಗಿದ್ದು, ಗೋಡೆಗಳ ಸರ್ಫೇಸ್ ನಲ್ಲಿ ಬ್ಲ್ಯಾಕ್, ಗ್ರೇ, ಬ್ರೌನ್, ಗ್ರೀನ್ ಮುಂತಾದ ಕಲೆಗಳು ಕಾಣಿಸಲು ಕಾರಣವಾಗುತ್ತದೆ. ಯಾವ ಗೋಡೆಗಳಲ್ಲಿ ಅತ್ಯಧಿಕ ತೇವಾಂಶ, ವೆಂಟಿಲೇಶನ್ ಇಲ್ಲದಿರುವುದು, ಸೂರ್ಯನ ಕಿರಣ ತಗುಲದಂಥ ಕೋಣೆ ಇತ್ಯಾದಿ ಕಡೆ ಇದರ ಕಾಟ ಹೆಚ್ಚು. ಉತ್ತಮ ಗುಣಮಟ್ಟದ ಪೇಂಟ್ ಬಳಸದಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಎಕ್ಸ್ ಪರ್ಟ್ಸ್ ಸಲಹೆ ಪಡೆದು ಸೂಕ್ತ ಪೇಂಟ್ ಆರಿಸಿಕೊಳ್ಳಿ.
ಪರಿಹಾರ : ಮೌಲ್ಡ್ ಸಮಸ್ಯೆಗಳಿರುವ ಗೋಡೆಗಳ ಮೇಲೆ, ಪೇಂಟ್ ಮಾಡಿಸುವ ಮೊದಲೇ ಇದನ್ನು ನಿವಾರಿಸಬೇಕು. ಇದಕ್ಕಾಗಿ ಸ್ಟೇನ್ ಬ್ಲಾಕಿಂಗ್ ಪ್ರೈಮರ್ ಆರಿಸಬೇಕು. ಇದರಿಂದ ಗೋಡೆಗಳ ಮೇಲೆ ಕಲೆ ಗುರುತು ಆಗುವುದಿಲ್ಲ. ತೇವಾಂಶ ಇರುವ ಗೋಡೆಗಳಿಗೆ ಇದರಿಂದ ಹೆಚ್ಚಿನ ರಕ್ಷಣೆ ಸಿಗುತ್ತದೆ. ಇಂಥ ಕಡೆ ಅಗ್ಗದ ಪೇಂಟ್, ಆಯಿಲ್ ಪೇಂಟ್ ಬಳಸಬಾರದು. ಅದರ ಬದಲು ಮೌಲ್ಡ್ ರೆಸಿಸ್ಟೆಂಟ್ ಪೇಂಟ್‌ಪ್ರೈಮರ್ ಆರಿಸಿ. ಇದು ತುಸು ದುಬಾರಿಯಾದರೂ ಸರಿ, ಪೇಂಟಿಂಗ್ ಪರ್ಫೆಕ್ಟ್ ಆಗಿರುತ್ತದೆ.