ಹಬ್ಬಗಳು ಸಮೀಪಿಸುತ್ತಿದ್ದಂತೆ ಅಡುಗೆ ಮನೆಯಲ್ಲಿ ನಾನಾ ಭಕ್ಷ್ಯಗಳ ತಯಾರಿ ಶುರು. ಹಬ್ಬ ಬಂದೊಡನೆ ಎಲ್ಲರ ಅಡುಗೆಮನೆ ಅತಿ ಚುರುಕಾಗಿ ಬಿಡುತ್ತದೆ. ಹೀಗಾಗಿ ಹಬ್ಬಗಳ ಸಂದರ್ಭಕ್ಕೆ ಅಲ್ಲಿ ಹೆಚ್ಚಿನ ಆಧುನಿಕ ಸೌಲಭ್ಯಗಳು ಸಿಗುವಂತಾದರೆ ಎಷ್ಟು ಚೆನ್ನ ಅಲ್ಲವೇ? ಹೀಗಾಗಿಯೇ ಈಗೀಗ ಮಾಡರ್ನ್‌ ಕಿಚನ್‌ ಎಲ್ಲೆಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. ಹೀಗಾಗಿ ದೊಡ್ಡ ಹಬ್ಬಗಳು ಸಮೀಸುತ್ತಿದ್ದಂತೆ ನಿಮ್ಮ ಮನೆಯ ಇಂಟೀರಿಯರ್ಸ್‌ ಮಾಡಿಸುವಾಗ, ಅಗತ್ಯವಾಗಿ ನಿಮ್ಮ ಕಿಚನ್‌ ಗೆ ಹೊಸ ಟಚ್‌ ಕೊಡಿ. ಇದರಿಂದ ಮನೆಯ ಗೃಹಾಲಂಕಾರದ ಲುಕ್ಸ್ ಹೆಚ್ಚುವುದು ಮಾತ್ರವಲ್ಲದೆ, ಮಾಡರ್ನ್‌ ಕಿಚನ್‌ ಗೃಹಿಣಿಯ ಎಷ್ಟೋ ಕಷ್ಟದ ಕೆಲಸಗಳನ್ನು ಹಗುರಗೊಳಿಸುತ್ತದೆ, ಸಮಯದ ಉಳಿತಾಯವಾಗುತ್ತದೆ. ಹೊಸ ಮಾಡ್ಯುಲರ್‌ ಕಿಚನ್‌ ರೂಪಿಸುವಾಗ ಈ ಕೆಳಗಿನ ಸಲಹೆಗಳನ್ನು ಅಗತ್ಯ ಅನುಸರಿಸಿ :

Hobs

ವುಡನ್ಸಾಮಗ್ರಿ ಹೇಗಿರಬೇಕು?

ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆ ಹೊಂದುವ ಕನಸು! ಅದರಲ್ಲಿನ ಕಿಚನ್‌ ಮಾಡ್ಯುಲರ್‌ ಆಗಿರುವುದರ ಜೊತೆ ಎಲ್ಲ ಸೌಲಭ್ಯ ಇರಲಿ ಎಂದು ಬಯಸುವುದು ಸಹಜ. ಆದರೆ ಎಷ್ಟೋ ಸಲ ಉಳಿತಾಯದ ನೆಪದಲ್ಲಿ ಕಿಚನ್‌ ಗೆ ಅಗ್ಗದ ವುಡನ್‌ ಸಾಮಗ್ರಿ ಬಳಸುತ್ತೇವೆ. ಇದು ಬೇಗ ಕೆಡುವುದಲ್ಲದೆ, ನಿಮ್ಮ ಇಡೀ ಬಜೆಟ್‌ ನ್ನು ಬಿಗಡಾಯಿಸುತ್ತದೆ.

ಹೀಗಾಗಿ ವುಡನ್‌ ಕೆಲಸ ಮಾಡಿಸುವಾಗ, ಅದು ವಾಟರ್‌ ಪ್ರೂಫ್‌ ಆಗಿರುವಂತೆ ಎಚ್ಚರವಹಿಸಿ. ಆಗ ತೇವಾಂಶದ ಕುಪ್ರಭಾ ಅದರ ಮೇಲಾಗದು. ನಿಮ್ಮ ಬಜೆಟ್‌ ಗೆ ಹೊಂದುವಂತಿದ್ದರೆ, ಟರ್ಮೈಟ್‌ ಪ್ರೂಫ್‌ ವುಡ್‌ ಬಳಸಿದರೆ ಲೇಸು. ಆಗ ಗೆದ್ದಲು ಹುಳು ನಿಮ್ಮ ಕಟ್ಟಿಗೆಯನ್ನು ಆಕ್ರಮಿಸದು. ಸದಾ ಉತ್ತಮ ಗುಣಮಟ್ಟದ ಪ್ಲೈವುಡ್‌ ಬಳಸಿದರೆ, ದೀರ್ಘ ಕಾಲ ಬಾಳಿಕೆ ಬರುತ್ತದೆ.

Countertop

ಡಬಲ್ ಪ್ರೊಟೆಕ್ಷನ್

ನಿಮ್ಮ ಕಿಚನ್‌ ಗೆ ಡಬಲ್ ಪ್ರೊಟೆಕ್ಷನ್‌ ನೀಡಲು ಲ್ಯಾಮಿನೇಟ್‌ ಆಯ್ಕೆ ಮಾಡುತ್ತೀರಾದರೆ, ಕೌಂಟರ್‌ ಕೆಳಗಿನ ಸ್ಟೋರೇಜ್‌ ಗಾಗಿ ಎಂದೂ ಟೆಕ್ಸ್ ಚರ್‌ ಲ್ಯಾಮಿನೇಟ್‌ ಆರಿಸಬಾರದು ಎಂದು ನೆನಪಿಡಿ. ಇದರಲ್ಲಿ ಹೆಚ್ಚಿನ ಅಂಶ ಕೊಳೆ ತುಂಬಿಕೊಳ್ಳುತ್ತದೆ, ಹಾಗಾಗಿ ಬೇಗನೇ ಕೆಡುವ ಸಾಧ್ಯತೆ ಹೆಚ್ಚು.

ಇದರ ಬದಲಿಗೆ ಪ್ಲೇನ್‌ ಲ್ಯಾಮಿನೇಟ್‌ ಆರಿಸಿ. ಲ್ಯಾಮಿನೇಟ್‌ ಮೆಟೀರಿಯಲ್ ನ್ನು ಕ್ಲೀನ್‌ ಮಾಡಿಸುವುದು ಸುಲಭ, ಜೊತೆಗೆ ದೀರ್ಘ ಬಾಳಿಕೆ ಸಹ ಬರುತ್ತದೆ. ನೀವು ಕಿಚನ್ನಿನ ಮೇಲು ಭಾಗದ ಸ್ಟೋರೇಜಿನಲ್ಲಿ  ಲ್ಯಾಮಿನೇಟ್‌ ಮಾಡಿಸ ಬಯಸಿದರೆ, ಆಗ ಲೈಟ್‌ಟೆಕ್ಸ್ ಚರ್‌ ನ, ಹೆವಿ ಟೆಕ್ಸ್ ಚರ್‌ ನ ಲ್ಯಾಮಿನೇಟ್‌ ಅಳವಡಿಸಿ, ನಿಮ್ಮ ಕಿಚನ್‌ ನ್ನು ಸುರಕ್ಷಿತಗೊಳಿಸಿ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ನಿಮ್ಮ ಕಿಚನ್‌ ನಲ್ಲಿ ಸಾಧ್ಯವಾದಷ್ಟೂ ಕನಿಷ್ಠ ಬಣ್ಣಗಳ ಲ್ಯಾಮಿನೇಟ್‌ ಮಾತ್ರ ಬಳಸಿರಿ. ಇದರಿಂದ ನೀವು ಟ್ರೆಂಡ್‌ ಫಾಲೋ ಮಾಡುವುದೇ ಅಲ್ಲದೆ, ಕಿಚನ್‌ ಸಹ ಬ್ಯೂಟಿಫುಲ್ ಆಗುತ್ತದೆ. ನಿಮ್ಮದು ತುಸು ಚಿಕ್ಕ ಕಿಚನ್‌ ಆಗಿದ್ದರೆ, ಮೇಲೆ ಕೆಳಗೆ ಎರಡೂ ಭಾಗದಲ್ಲೂ ಒಂದೇ ಬಣ್ಣ ಬಳಸಿರಿ. ಇದರಿಂದ ಕಿಚನ್‌ ಬ್ಯೂಟಿಫುಲ್ ಆಗಿ, ಇರುವುದಕ್ಕಿಂತ ತುಸು ದೊಡ್ಡದಾಗಿ ಕಾಣಿಸುತ್ತದೆ.

ನಿಮ್ಮ ಕೌಂಟರ್‌ ಡಾರ್ಕ್‌ ಕಲರ್‌ ನದಾಗಿದ್ದರೆ, ಕೆಳ ಭಾಗದಲ್ಲಿ ಡಾರ್ಕ್‌ ಕಲರ್‌ ಲ್ಯಾಮಿನೇಟ್‌ ಬಳಸ ಬಯಸಿದರೆ, ಆಗ ನೀವು ಹ್ಯಾಂಡಲ್ಸ್ ಬದಲಾಗಿ ಪ್ರೊಫೈಲ್‌, ಬಳಸಬೇಕು. ಇದು ಕಲರ್ಸ್‌ ಮಧ್ಯೆ ಬ್ಯಾಲೆನ್ಸ್ ಮೇಂಟೇನ್‌ ಮಾಡುತ್ತದೆ. ನಿಮಗೆ ಒಂದು ಪಕ್ಷ ವುಡನ್‌ ಪ್ರಿಂಟ್‌ ಲ್ಯಾಮಿನೇಟ್‌ ಬೇಕೆನಿಸಿದರೆ, ಆಗ ವುಡನ್ನಿನ ಡಿಸೈನ್‌ ಉದ್ದಕ್ಕೆ ಇರಬೇಕು, ಇದರಿಂದ ಕಿಚನ್‌ ಗೆ ಉತ್ತಮ ಲುಕ್ಸ್ ಬರುತ್ತದೆ.

ಕೌಂಟರ್ಟಾಪ್ಸ್ಪೆಷಲ್ ಇರಲಿ

ಕಿಚನ್‌ ನಲ್ಲಿ ಕೌಂಟರ್‌ ಟಾಪ್‌ ಬಹಳ ಯೂಸ್‌ ಆಗುತ್ತಿರುತ್ತದೆ. ಹೀಗಾಗಿ ಇದನ್ನು ಬದಲಾಯಿಸುವಾಗ ಇದು ಹೀಟ್‌ ರೆಸಿಸ್ಟೆಂಟ್‌, ಸ್ಟೇನ್‌ ರೆಸಿಸ್ಟೆಂಟ್‌ ಖಂಡಿತಾ ಆಗಿರಬೇಕು. ಆಗ ಶಾಖಕಲೆ ಗುರುತುಗಳ ಬಾಧೆ ಇದನ್ನು ಕಾಡದು. ಕಲೆಗುರುತಾದರೂ ಸುಲಭವಾಗಿ ಅದನ್ನು ಕ್ಲೀನ್‌ ಮಾಡಬಹುದು. ಕಿಚನ್‌ ಕೌಂಟರ್‌ ಟಾಪ್ಸ್ ಬೇಕಾದಷ್ಟು ಬಗೆಯಲ್ಲಿ ಸಿಗುತ್ತವೆ…. ಗ್ರಾನೈಟ್‌ ಸ್ಲಾಬ್‌, ಟೈಲ್ಸ್, ನ್ಯಾನೋ ವೈಟ್‌, ಸಾಲಿಡ್‌ ಸರ್ಫೇಸ್‌, ಸ್ಲೇಟ್‌, ರೀಸೈಕಲ್ಡ್ ಗ್ಲಾಸ್‌ ಸ್ಲಾಬ್‌ಟೈಲ್ಸ್ ಇತ್ಯಾದಿ. ನಿಮ್ಮ ಇಷ್ಟದಂತೆ ಇವನ್ನು  ಆರಿಸಿ, ಲಾಂಗ್‌ ಲಾಸ್ಟಿಂಗ್‌ಬ್ಯೂಟಿಫುಲ್ ಆಗಿಸಿ.

ಪ್ರೊಫೈಲ್ ಹ್ಯಾಂಡಲ್ಸ್

ಇವು ಸಹ ಹ್ಯಾಂಡಲ್ಸ್ ತರಹವೇ ಕೆಲಸ ಮಾಡುತ್ತವೆ. ಆದರೆ ಇತ್ತೀಚಿನ ಟ್ರೆಂಡ್‌ ಪ್ರಕಾರ, ಮಾಡ್ಯುಲರ್‌ ಕಿಚನ್‌ ಗಾಗಿ ಇದನ್ನೇ ಹೆಚ್ಚು ಬಳಸುತ್ತಾರೆ, ಇದು ಡೋರ್‌ ನ್ನು ಸುಲಭವಾಗಿ ತೆರೆದು ಮುಚ್ಚಲು ಸಹಕಾರಿ. ಆದರೆ ಇಡೀ ಕಿಚನ್‌ ಕ್ಯಾಬಿನೆಟ್ಸ್ ಗೆ ಒಂದೇ ಪ್ಯಾಟರ್ನ್‌ ಬಳಸಿಕೊಂಡರೆ ಅಂದ್ರೆ, ಲೋಯರ್‌ ಕ್ಯಾಬಿನೆನ್ಸ್ ನಲ್ಲಿ ಪ್ರೊಫೈಲ್ ಹ್ಯಾಂಡಲ್ಸ್ ಬಳಕೆ ಆಗುವಂತೆ ಮಾಡಿಕೊಳ್ಳಬೇಕು ಎಂಬುದನ್ನು ಗಮನಿಸಿ. ಆಗ ಹಿಂದೂಮುಂದೂ ಸಹ ಒಂದೇ ಪ್ಯಾಟರ್ನ್‌ ಫಾಲೋ ಮಾಡಿ.

ಅದೇ ತರಹ, ನಾರ್ಮಲ್ ಹ್ಯಾಂಡಲ್ಸ್ ಬಳಸಿದ್ದಾದರೆ, ಇಡೀ ಕಿಚನ್‌ ತುಂಬಾ ಇಂಥದ್ದೇ ಹ್ಯಾಂಡಲ್ಸ್ ಬಳಸುವುದು ಲೇಸು. ಇಲ್ಲದಿದ್ದರೆ ಕಿಚನ್‌ ಲುಕ್‌ ಲೈಸ್‌ ಸುಂದರವಾಗಿರಲ್ಲ ಹಾಗೂ ಕಂಫರ್ಟ್‌ ಕೂಡ ಆಗಿರಲ್ಲ. ಆದ್ದರಿಂದ ಒಂದೇ ಪ್ಯಾಟರ್ನ್‌ ಫಾಲೋ ಮಾಡಿ.

Storage-basket

ಸ್ಟೋರೇಜ್ಬಾಸ್ಕೆಟ್ಸ್

ಈಗ ಎಲ್ಲೆಲ್ಲೂ ಮಾಡ್ಯುಲರ್‌ ಕಿಚನ್‌ ಜನಪ್ರಿಯ ಆಗಿರುವಂತೆ, ಆ ಮಾಡ್ಯುಲರ್‌ ಕಿಚನ್‌ ಗಳಲ್ಲಿ ಈ ಸ್ಟೋರೇಜ್‌ ಬಾಸ್ಕೆಟ್ಸ್ ಗೆ ದೊಡ್ಡ ಪಾತ್ರವಿದೆ, ಆಗ ಕಿಚನ್‌ ನಲ್ಲಿ ಎಲ್ಲೆಂದರಲ್ಲಿ ಸಾಮಗ್ರಿ ಹರಡಿಕೊಳ್ಳದೆ ನೀಟಾಗಿರುತ್ತದೆ. ನಿಮಗೆ ಮಾರುಕಟ್ಟೆಯಲ್ಲಿ ಹೈ ಕ್ವಾಲಿಟಿಯ ಸ್ಟೇನ್‌ ಲೆಸ್‌ ಸ್ಟೀಲಿನ ವಿಭಿನ್ನ ಆಕಾರಗಳ ಸ್ಟೋರೇಜ್‌ ಬಾಸ್ಕೆಟ್ಸ್ ಲಭ್ಯ. ಇದನ್ನು ತಂದು ಸುಲಭವಾಗಿ ನಿಮ್ಮ ಕಿಚನ್ ನಲ್ಲಿ ಫಿಟ್‌ ಮಾಡಿಸಿ. ನಿಮ್ಮ ಆಯ್ಕೆ ಪ್ರಕಾರ ಫೋನ್‌ ವೈರ್‌ ಬಾಸ್ಕೆಟ್‌, ಪ್ಲೇಟ್‌ ಬಾಸ್ಕೆಟ್‌, ಕಟ್ಲರಿ ಬಾಸ್ಕೆಟ್‌, ಕಪ್‌ಸಾಸರ್ ಬಾಸ್ಕೆಟ್‌, ಅಂಡರ್‌ ಸಿಂಕ್‌ ಬಾಸ್ಕೆಟ್‌, ಡಿಶ್‌ ಡ್ರೇನಿಂಗ್‌ ಬಾಸ್ಕೆಟ್‌, ಬಿನ್‌ ಬಾಸ್ಕೆಟ್‌, ಬಾಟಲಿ ಬಾಸ್ಕೆಟ್‌, ಕಾರ್ನರ್‌ ಯೂನಿಟ್ಸ್ ಇತ್ಯಾದಿ ಅಳವಡಿಸಿಕೊಂಡು ನಿಮ್ಮ ಅಡುಗೆಮನೆಯನ್ನು ಚಂದಗೊಳಿಸಿ.

ಕಲರ್ಕಾಂಬಿನೇಶನ್

ನೀವು ಮನೆಯಲ್ಲಿ ಎಂಥದ್ದೇ ಇಂಟೀರಿಯರ್ಸ್‌ ಮಾಡಿಸಿರಲಿ, ಕಲರ್‌ ಕಾಂಬಿನೇಶನ್‌ ಕಡೆ ಗಮನ ಹರಿಸದಿದ್ದರೆ, ನಿಮ್ಮ ಪರಿಶ್ರಮ ವ್ಯರ್ಥ ಆದೀತು. ಹೀಗಾಗಿ ಇಡೀ ಮನೆಯ ಪ್ರತಿ ಮೂಲೆಗೂ ಮಹತ್ವ ಕೊಡುವಂತೆ, ಕಿಚನ್‌ ಕ್ಯಾಬಿನೆಟ್‌ ನಲ್ಲೂ ಕಲರ್ ಕಾಂಬಿನೇಶನ್ನಿನ ಕಡೆ ವಿಶೇಷ ಗಮನ ಕೊಡಬೇಕು. ಆಗ ಕಿಚನ್‌ ಅತ್ತ ವುಡ್‌ ಆಗುವುದೂ ಇಲ್ಲ, ಇತ್ತ ಓವರ್‌ ಶೈನಿಂಗ್ ಎನಿಸುವುದಿಲ್ಲ. ಇದಕ್ಕಾಗಿ ಕಿಚನ್ನಿನ ಸ್ಪೇಸ್‌ಕಡೆಯೂ ಗಮನವಿರಲಿ.

ಇದಕ್ಕಾಗಿ ವಿಶೇಷ ಕಲರ್ಸ್‌ಎಂದರೆ ಸೀ  ಸ್ಕೈ, ಲೀಫ್‌ಗ್ರೀನ್‌ೈಟ್‌, ಬೋ್ಡ್‌ಬ್ಲೂ  ಸಾಫ್‌್ಟ ಬ್ಲೂ, ಚೆರ್ರಿ ಕಲರ್‌, ಕೂ್‌ಗ್ರೇ  ಹಾಟ್‌ ಆರೆಂಜ್‌, ಡೀಪ್‌ ಆ್ಯಕ್ವಾ ಲೈಟ್‌, ಕಾರ್ನ್‌ ಫ್ಲೋರ್‌ಯೆಲ್ಲೋ ಇತ್ಯಾದಿ ಕಾಂಬಿನೇಶನ್ಸ್ ನಲ್ಲಿ ಬೇಕಾದ್ದನ್ನು ಆರಿಸಿ.

ಹಾಬ್

ನಿಮಗೆ ಬ್ಯೂಟಿಫುಲ್ ಕಿಚನ್‌ ಬೇಕಾದರೆ, ಉತ್ತಮ ಹಾಬ್‌ ಅಳವಡಿಸಲು ಮರೆಯದಿರಿ. ಇದರಲ್ಲಿ ಕಿಚನ್‌ ಸ್ಲಾಬ್ಸ್ ನ್ನು ಕಟ್ ಮಾಡಿಸಿ, ಅದರಲ್ಲಿ ಹಾಬ್‌ ನ್ನು ಇನ್‌ ಸ್ಟಾಲ್ ಮಾಡಿಸುತ್ತಾರೆ, ನಂತರ ಪೈಪ್ಸ್ ಇತ್ಯಾದಿ ಅಳವಡಿಸುತ್ತಾರೆ, ಆಗ ಹೊರಗಿನಿಂದ ಏನೂ ಕಾಣಿಸುವುದಿಲ್ಲ. ಇದರಿಂದ ನಿಮ್ಮ ಬಜೆಟ್‌ ತುಸು ಹೆಚ್ಚಾಗಬಹುದು, ಆದರೆ ಆದರ್ಶ ಮಾಡ್ಯುಲರ್‌ ಕಿಚನ್‌ ಗೆ ಇದು ಅತ್ಯಗತ್ಯ. ಆದರೆ ಇದಕ್ಕಾಗಿ ಮೊದಲೇ ಪ್ಲಾನಿಂಗ್‌ ಮಾಡಿಟ್ಟುಕೊಳ್ಳುವುದು ಲೇಸು. ಹಾಗೆ ಸಿಂಕ್‌ ಆಯ್ಕೆಯಲ್ಲೂ ವಿಶೇಷ ಗಮನವಿರಲಿ.

ಚಿಮನಿ

ನೀವು ಆರ್ಡರ್‌ ಮಾಡಿದ ತಕ್ಷಣ ಮನೆಗೆ ಚಿಮನಿ ಬಂದಿಳಿಯುತ್ತದೆ, ಇದು ಮಾಮೂಲಿ. ಆದರೆ ಮಾಡ್ಯುಲರ್‌ ಕಿಚನ್‌ ಅಳವಡಿಸಿದಾಗ, ಸ್ಪೇಸ್‌ಅಳತೆ ಪ್ರಕಾರ, ಮೊದಲೇ ಚಿಮನಿ ಖರೀದಿಸಿಡಿ, ನಂತರ ಅದರ ಅಳವಡಿಕೆಯಲ್ಲಿ ತೊಂದರೆ ಆಗಬಾರದು. ಇದು ಹೊಗೆಯನ್ನು ಹೊರಗೆ ಓಡಿಸುತ್ತದೆ, ಜೊತೆಗೆ ಕಿಚನ್‌ ಗೆ ಮಾಡ್‌ ಲುಕ್‌ ನೀಡುತ್ತದೆ. ಹೀಗಾಗಿ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಮಾಡ್ಯುಲರ್‌ ಕಿಚನ್‌ ನಲ್ಲಿ ಸುಧಾರಣೆ ಬಯಸಿದರೆ, ಈ ಎಲ್ಲ ಅಂಶಗಳನ್ನೂ ಮರೆಯದೆ ನೆನಪಿಡಿ.

ಪದ್ಮಾ ಮೂರ್ತಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ