ಭಾರತದ ಅತಿ ದೊಡ್ಡ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ZEE ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL), ಕಳೆದ ಮೂರು ದಶಕಗಳಿಂದ ಹಲವು ಭಾಷೆಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಇನ್ನು ಕರ್ನಾಟಕದಲ್ಲಿ ZEEL ಸಂಸ್ಥೆಯ Zee Kannada ಕೇವಲ ಒಂದು ವಾಹಿನಿ ಆಗಿರದೇ ಪ್ರತೀ ಮನೆಯ ಮನರಂಜನೆಯ ಮೊದಲ ಆಯ್ಕೆಯಾಗಿದೆ.
ಜೀ಼ ಕನ್ನಡದ ಅಭೂತಪೂರ್ವ ಯಶಸ್ಸಿನ ನಂತರ ಈಗ ZEEL ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ವಾಹಿನಿ “ಜೀ಼ ಪವರ್” ಮೂಲಕ ಕನ್ನಡ ಮನರಂಜನೆ ಜಗತ್ತಿನಲ್ಲಿ ಮತ್ತೊಂದು ಅಲೆ ಸೃಷ್ಟಿಸಲು ಸಜ್ಜಾಗಿದೆ.
ಆಗಸ್ಟ್ 23, 2025 ರಂದು ಪ್ರಾರಂಭವಾಗಲಿರುವ ಜೀ಼ ಪವರ್ ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ. ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ, ಮತ್ತು ಕರುನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ. ಪ್ರಬಲ ಕಥಾನಾಯಕಿಯರು ಮತ್ತು ಕಥಾನಾಯಕರಿರುವ ಧಾರಾವಾಹಿಗಳು, ಸಮಾಜವನ್ನು ತಲುಪುವ ವಾಸ್ತವ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್ಬಸ್ಟರ್ ಚಲನ ಚಿತ್ರಗಳು, ಹಬ್ಬದ ಮತ್ತು ವಿಶೇಷ ಕಾರ್ಯಕ್ರಮಗಳೊಂದಿಗೆ ಜೀ಼ ಪವರ್ ಆಧುನಿಕ ಕನ್ನಡಿಗರ ನೆಚ್ಚಿನ ವಾಹಿನಿಯಾಗಲಿದೆ.
ಜೀ಼ ಪವರ್ ಪ್ರತಿ ಪೀಳಿಗೆಯನ್ನೂ ಆಕರ್ಷಿಸುತ್ತದೆ. ಮಹಿಳಾಪ್ರಧಾನ ಕಥೆಗಳು ಇದ್ದರೂ ಯುವಕರು ಮತ್ತು ಪುರುಷರ ಭಾವನೆಗಳಿಗೂ ಒತ್ತುಕೊಟ್ಟಿರುವುದರಿಂದ ಎಲ್ಲಾ ಪೀಳಿಗೆಯವರನ್ನೂ ತನ್ನತ್ತ ಸೆಳೆಯುವಲ್ಲಿ ಜೀ಼ ಪವರ್ ಯಶಸ್ವಿಯಾಗಲಿದೆ. ಪ್ರತಿಯೊಂದು ಧಾರಾವಾಹಿಯೂ ತನ್ನ ಸಂಭಾಷಣೆ, ವಿಭಿನ್ನ ಕಥಾಹಂದರದಿಂದ ಮೊದಲದಿನದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ZEEL ನ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರ್, ” ಜೀ಼ ಪವರ್ ಮನರಂಜನಾ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆ. ಈ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ತಮ್ಮ ವಿಭಿನ್ನ ಮತ್ತು ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿವೆ. ಅಷ್ಟೇ ಅಲ್ಲ ನಮ್ಮ ಕಥೆಗಳು ಸಂಕ್ಷಿಪ್ತ ಮತ್ತು ವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿವೆ. ಜೀ಼ ಪವರ್ ನ ಮೂಲಕ ಕರುನಾಡ ಜನರಿಗೆ ಹಿಂದೆದೂ ಕಾಣದ ರೀತಿಯ ಮನರಂಜನೆ ನೀಡುವ ಮೂಲಕ ಜೀ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ” ಎಂದರು.
ZEELನ ಸೌತ್ ಅಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್ ಸಿಜು ಪ್ರಭಾಕರನ್ ಮಾತನಾಡಿ, ” ಜೀ಼ ಪವರ್ ನ ಪ್ರಾರಂಭ ಕರ್ನಾಟಕದಲ್ಲಿನ ನಮ್ಮ ಪಯಣಕ್ಕೆ ಒಂದು ಮಹತ್ವದ ಮೈಲುಗಲ್ಲಾಗಿರಲಿದೆ. ನಾವು ಪ್ರೇಕ್ಷಕರ ಅಭಿರುಚಿಯನ್ನು ಅರ್ಥಮಾಡಿಕೊಂಡಿದ್ದು, ಈ ವಾಹಿನಿಯ ಮೂಲಕ ಎಲ್ಲರಿಗೂ ತಲುಪುವಂತಹ ಕಥೆಯನ್ನು ನೀಡಲಿದ್ದೇವೆ” ಎಂದರು.
ಜೀ಼ ಪವರ್ ನ ಬಿಸಿನೆಸ್ ಹೆಡ್ ಭಾಸ್ಕರ್ ಅಯ್ಯರ್ ಮಾತನಾಡಿ, ” ಜೀ಼ ಪವರ್ ಹೈಬ್ರೀಡ್ ಚಾನೆಲ್ ಆಗಿದ್ದು ಇಲ್ಲಿ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆಯುವ ಕಂಟೆಂಟ್ ಇರೋದು ವಿಶೇಷತೆ. ಅಷ್ಟೇ ಅಲ್ಲ, ಈ ವಾಹಿನಿಯಲ್ಲಿ ಬರಲಿರುವ 4 ಧಾರಾವಾಹಿಗಳು ಮಹಿಳಾಪ್ರಾಧಾನವಾಗಿದ್ದರೂ, ಅಲ್ಲಿ ಪುರುಷರು ಹಾಗೂ ಯುವಜನತೆಯ ಭಾವನೆಗಳಿಗೂ ಬೆಲೆ ಕೊಟ್ಟಿರುವುದರಿಂದ ಇದು ಕನ್ನಡಿಗರನ್ನು ಮೊದಲ ದಿನದಿಂದಲೇ ತನ್ನತ್ತ ಆಕರ್ಷಿಸಲಿದೆ. ಇಲ್ಲಿ ಕರುನಾಡಿನ ಸಂಸ್ಕೃತಿ, ಕನ್ನಡಿಗರ ವಿಶಾಲ ಮನೋಭಾವ, ಶ್ರೀಮಂತ ಪರಂಪರೆ ಎಲ್ಲವೂ ಇದರಲ್ಲಿದೆ.” ಎಂದರು.
ಕನ್ನಡದ ಮೊದಲ ಹೈಬ್ರಿಡ್ ಚಾನೆಲ್ ಜೀ಼ ಪವರ್ ನಲ್ಲಿ, ನಾಲ್ಕು ಧಾರಾವಾಹಿಗಳಾದ ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ ಮತ್ತು ಗೌರಿ, ಒಂದು ರಿಯಾಲಿಟಿ ಶೋ – ಹಳ್ಳಿ ಪವರ್ ಮತ್ತು ಭಕ್ತಿ ಕಾರ್ಯಕ್ರಮ-ಭವಿಷ್ಯ ದರ್ಶನ ಸೇರಿದಂತೆ ಅತ್ಯಾಕರ್ಷಕ ಕಾರ್ಯಕ್ರಮಗಳು ಇರಲಿವೆ. ಎಲ್ಲಾ ಧಾರಾವಾಹಿಗಳ ಕಥೆಗಳು ತನ್ನೆಲ್ಲಾ ಚೌಕಟ್ಟುಗಳನ್ನು ದಾಟಿ ದಿಟ್ಟ ಹೆಜ್ಜೆ ಇಟ್ಟು ವೀಕ್ಷಕರಿಗೆ ಹೊಸತನ ನೀಡಲು ಸಜ್ಜಾಗಿವೆ. ಇನ್ನು ಈ ವಾಹಿನಿಯಲ್ಲಿ ಎಲ್ಲಾ ವಯಸ್ಸಿನವರನ್ನೂ ಸೆಳೆಯುವ ಕಥೆಗಳಿರಲಿದ್ದು ಕುಟುಂಬದವರು ಒಟ್ಟಾಗಿ ಕುಳಿತು ನೋಡುತ್ತಾ ಮತ್ತೆ ಹಳೆಯ ಕಳೆದುಹೋದ ಫ್ಯಾಮಿಲಿ ಕ್ಷಣಗಳು ಮರುಕಳಿಸುವಂತೆ ಮಾಡುತ್ತವೆ. ಇದು ಕೇವಲ ವೀಕ್ಷಕರು ಏನು ನೋಡುತ್ತಾರೆ ಎಂಬುದರ ಬಗ್ಗೆ ಅಲ್ಲ, ಬದಲಾಗಿ ಅವರು ಹೆಚ್ಚಿನ ಉತ್ಸಾಹ ಮತ್ತು ಹೆಚ್ಚಿನ ಕಾರಣಗಳೊಂದಿಗೆ ನಮ್ಮ ವಾಹಿನಿಯನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ಬಗ್ಗೆಯಾಗಿದೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25 ರಿಂದ ಆರಂಭವಾಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ 23 ರಿಂದ ಪ್ರಸಾರವಾಗಲಿದೆ.