– ರಾಘವೇಂದ್ರ ಅಡಿಗ ಎಚ್ಚೆನ್.
ಮಂಡ್ಯ ರಮೇಶ್ ಮಗಳು ದಿಶಾ ರಮೇಶ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯ ರಮೇಶ್ ಮಗಳು ದಿಶಾ ರಮೇಶ್ ಕೂಡ ನಟಿ. ತಂದೆಯಂತೆ ಅವರು ಕೂಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಸಾಕಷ್ಟು ನಾಟಕಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬಿದ್ದಾರೆ.
ದಿಶಾ ರಮೇಶ್ ಹಾಗೂ ಮನೋಜ್ ಮದುವೆ ಆಗಿದ್ದಾರೆ. ಮನೋಜ್ ಅವರು ಕೂಡ ರಂಗಭೂಮಿ ಕಲಾವಿದ, ಬರಹಗಾರ. ದಿಶಾ, ಮನೋಜ್ ಅನೇಕ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಈಗ ಮದುವೆಯಾಗಿದ್ದಾರೆ.
ಮಂಡ್ಯ ರಮೇಶ್ ಅವರು ʼವೀಕೆಂಡ್ ವಿಥ್ ರಮೇಶ್ʼ ಶೋನಲ್ಲಿ ಭಾಗಿ ಆದಾಗಲೂ ಕೂಡ ಅಲ್ಲಿ ಮನೋಜ್ ಹಾಜರಿ ಹಾಕಿದ್ದರು. ಮಂಡ್ಯ ರಮೇಶ್ ಅವರ ನಟನಾ ತಂಡದಲ್ಲಿ ಮನೋಜ್ ಪಳಗಿದವರು. ದಿಶಾ ರಮೇಶ್ ಹಾಗೂ ಮನೋಜ್ ಈಗಾಗಲೇ ಒಟ್ಟಿಗೆ ಅನೇಕ ನಾಟಕಗಳಲ್ಲಿ ನಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಜೋಡಿ ಆಗಾಗ ಪರಸ್ಪರ ಇಬ್ಬರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತದೆ. ಲವ್ ಬರ್ಡ್ಸ್ ಮದುವೆ ಆಗಿದ್ದಾರೆ ಎಂದು ಇವರಿಬ್ಬರಿಗೆ ಅನೇಕರು ಶುಭಾಶಯ ತಿಳಿಸಿದ್ದಾರೆ.
ದಿಶಾ ರಮೇಶ್ ಹಾಗೂ ಮನೋಜ್ ಅವರು ಮೈಸೂರಿನ ಚಾಮುಂಡಿ ದೇವಾಲಯದಲ್ಲಿ ಮದುವೆ ಆಗಿದ್ದಾರೆ. ಸುವರ್ಣನಗರದಲ್ಲಿರುವ ಬೋಗಾದಿ ದೇವಸ್ಥಾನ ಇದಾಗಿದೆ. ಬಹಳ ಸರಳವಾಗಿ, ಆತ್ಮೀಯರ ಸಾಕ್ಷಿಯಾಗಿ ಈ ಮದುವೆ ನಡೆದಿದೆ.