ರಾಘವೇಂದ್ರ ಅಡಿಗ ಎಚ್ಚೆನ್.

“ವಿಷ್ಣುವರ್ಧನ್ ಅಂತ್ಯ ಕ್ರಿಯೆ ಆದ ಜಾಗ ಪವಿತ್ರವಾದ ಜಾಗವದು. ಆ ಜಾಗವನ್ನ ಕೊಡಲೇಬೇಕು ಅಂತ ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಗೆ ಮನವಿ ಮಾಡಿದ್ದೇನೆ. ಕಾರ್ತಿಕ್ ಒಂದು ವಾರ ಸಮಯ ತಗೊಂಡಿದ್ದಾರೆ.” ನಿರ್ಮಾಪಕ ಕೆ. ಮಂಜು ಹೇಳಿದ್ದಾರೆ. ಸ್ಯಾಂಡಲ್‌ವುಡ್ ನಿರ್ಮಾಪಕ ಕೆ ಮಂಜುಅವರು ನಟ ವಿಷ್ಣುವರ್ಧನ್ ಬಗ್ಗೆ, ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನ್ನಾಡಿದ್ದಾರೆ.

download (5)

ಅಂಬರೀಶ್ ಗೆ ಕೊರಗಿತ್ತು
ನಟಿ ದಿವಂಗತ ಅಂಬರೀಶ್ ಅವರಿಗೆ ವಿಷ್ಣುವರ್ಧನ್ ಸ್ಮಾರಕ ವಿಚಾರ ಕೊರಗಿತ್ತು ಈ ವಿಷಯದಲ್ಲಿ ಅಂಬರೀಶ್ ಅವರು ಕೊರಗಿ ಕೊರಗಿ ನೋವಲ್ಲಿ ಇದ್ರು. ಸರ್ಕಾರ ಬಾಲಣ್ಣ ಅವರಿಗೆ ಕೊಟ್ಟ 20 ಎಕರೆ ಜಾಗ ಅಭಿಮಾನ್ ಸ್ಟುಡಿಯೋ. ಅಲ್ಲೇ ಅಂಥ್ಯಕ್ರಿಯೆ ಮಾಡಿ ಅಂತ ದೇವೇಗೌಡ್ರು ಹೇಳಿದ್ರು. ಆಗ ಕುಮಾರ್ ಸ್ವಾಮಿ ಅವರೇ ಮುಂದೆ ನಿಂತು ನಟ ಹಾಗೂ ವಿಷ್ಣುವರ್ಧನ್ ಸ್ನೇಹಿತ ಅಂಬರೀಷ್ ಅವರು ಅಭಿಮಾನ್ ಸ್ಟೂಡಿಯೋದಲ್ಲಿ ಅಂತ್ಯಕ್ರಿಯೆ ಮಾಡೋಕೆ ವ್ಯವಸ್ಥೆ ಮಾಡಿದ್ರು. ನಾವು ಕಾರ್ತಿಕ್ ಅವರಿಗೆ ಕೈ ಮುಗಿದು ಮನವಿ ಮಾಡ್ತಿದ್ದೀವಿ, ನಮಗೆ ಅಲ್ಲಿ 10 ಗುಂಟೆ ಕೊಡಿ.. ಹಾಗಂತಲೇ ನಾನು ಮನವಿ ಮಾಡಿದ್ದೀನಿ. ಯಾಕೆ ಅಂದ್ರೆ, ಅಂತ್ಯಕ್ರಿಯೆ ಆಗಿದ್ದ ಜಾಗವೇ ನಮಗೆ ಪವಿತ್ರ ಜಾಗ. ವಿಷ್ಣುವರ್ಧನ್ ಅವರ ಈ ಜಾಗವನ್ನ ಪಡೆದುಕೊಳ್ಳಲು ಅಂಬರೀಶ್ ಅಣ್ಣ ಪ್ರಯತ್ನ ಇತ್ತು. ಅದಕ್ಕೆ ಸರ್ಕಾರ ಕೂಡ ಸ್ಪಂದಿಸಿದೆ.
10 ಗುಂಟೆ ಜಾಗ ಕೊಡಿ
10 ಗುಂಟೆ ಜಾಗ ಕೊಡಿ ಸಾಕು. ಘೋರಿ ಮೇಲೆ ಕಟ್ಟಿದ ಸಾಮ್ರಾಜ್ಯ ಉಳಿದಿಲ್ಲ ಅಲ್ವೇ. ಎಂದು ಅವರು ಹೇಳಿದರು.
ನಮ್ಮ ಸಂಸ್ಕೃತಿ ಸಮಾಧಿ ಮಾಡಿದ್ದೀರಿ. ಕಾನೂನಲ್ಲೂ ನ್ಯಾಯ ಸಿಗಲ್ವಾ? ಚಿತ್ರರಂಗಕ್ಕಾಗಿ ಸರ್ಕಾರ ಕೊಟ್ಟ ಜಾಗ ಬಾಲಣ್ಣ ಕುಟುಂಬದ ಸ್ವಯಾರ್ಜಿತ ಹೇಗ್ ಆಗುತ್ತೆ ? ಆಗಲೇ ಪ್ಯಾನ್ ಇಂಡಿಯಾ ಸ್ಟಾರ್ ಅವರು. ಆಗ ಸರ್ಕಾರವೇ ಮುಂದೆ ನಿಂತು ಅಂತ್ಯಕ್ರಿಯೆ ಮಾಡಿತ್ತು. ಈ ಸ್ಥಳದ ಬಗ್ಗೆ ಈ ಗೊಂದಲ ಯಾಕೆ ? ಇದರ ಹಿಂದೆ ಇರೋದ್ಯಾರು ? ಭೂಗಳ್ಳರು ಯಾರು ?
ಅಂತ್ಯಕ್ರಿಯೆ ಜಾಗವೇ ಮಹಾನ್ ಜಾಗ, ನಮಗೆ 10 ಗುಂಟೆ ಕೊಡಿ ಸಾಕು ಅಂತ, ಈ ವಿಷಯದಲ್ಲಿ ತುಂಬಾ ನೊಂದಿದ್ದೀವಿ.
ನಮ್ಮ ಹಿಂದೆ ಶಕ್ತಿ ಇದೆ, ಎಲ್ಲರೂ ಕೈ ಜೋಡಿಸುತ್ತಾರೆ. ಅಂಬರೀಶ್ ಅವರಂತೂ ಕೊರಗಿ ಕೊರಗಿ ಹೋಗಿದ್ರು. ಕಾರ್ತಿಕ್ ಅವರು 5 ದಿನ‌ ಟೈಮ್ ತಗೊಂಡಿದ್ದಾರೆ. ವಿಷ್ಣುಸೇನೆ ಹಾಗೂ ಅಭಿಮಾನಿಗಳು ತುಂಬಾ ನೊಂದು ಹೋಗಿದ್ದಾರೆ. ಪ್ರೀತಿಯಿಂದ ಕೊಡ್ತೀನಿ ಅಂದಿದ್ದಾರೆ ಕಾರ್ತಿಕ್.. ಏನೇ ಆಗಿದ್ರೂ ಎಲ್ಲರ ಪರವಾಗಿ ಕ್ಷಮೆ ಕೇಳ್ತೀನಿ ಅಂತ ಪರಿ ಪರಿಯಾಗಿ ಮನವಿ ಮಾಡ್ಕೊಂಡಿದ್ದೀನಿ.
.ಈ ಪವಿತ್ರ ಜಾಗ ಪಡೆಯಲು ನಾವು ಕಾನೂನು ಹೊರಟ ಮಾಡಿಯೇ ಮಾಡ್ತೇವೆ. 10 ಗುಂಟೆ ಜಾಗ ಬಿಟ್ಟು ಕೊಡಲೇಬೇಕು.
ಸೆಪ್ಟೆಂಬರ್ 18ನೇ ತಾರೀಕು ವಿಷ್ಣುವರ್ಧನ್ ಹುಟ್ಟು ಹಬ್ಬ ಮಾಡೋಕೆ ಕೋರ್ಟ್ ಅನುಮತಿ ಪಡೆಯುತ್ತೆವೆ..’ ಕೆ. ಮಂಜು ವಿವರಿಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ