ದೊಡ್ಡ ಹಬ್ಬಗಳು ಬಂದಾಗ, ನಮ್ಮ ನೆಂಟರಿಷ್ಟರಿಗೆ ಉಡುಗೊರೆ ನೀಡುವುದು ಹಳೆ ಕಾಲದಿಂದಲೂ ಜಾರಿಯಲ್ಲಿದೆ. ಇದಕ್ಕಾಗಿ ಎಲ್ಲರೂ ಕುತೂಹಲದಿಂದ ವರ್ಷವಿಡೀ ಕಾಯುತ್ತಾರೆ. ಹೀಗೆ ಉಡುಗೊರೆ ಪಡೆದವರ ಮುಖದಲ್ಲಿ ಮೂಡುವ ತೃಪ್ತಭಾವ, ಮಂದಹಾಸ, ಕೃತಜ್ಞತೆಗಳನ್ನು ಅವರಿಗೆ ನೀವು ಕೊಟ್ಟೇ ಗಮನಿಸಿಬೇಕು, ಆಗ ನಿಮಗೂ ಅತ್ಯಧಿಕ ಆತ್ಮತೃಪ್ತಿ ದೊರಕುತ್ತದೆ. ಗಿಫ್ಟ್ ಅಥವಾ ಉಡುಗೊರೆ ನೀಡುವ ನೆಪದಲ್ಲಿ ನೀವು ಎಷ್ಟೋ ದಿನಗಳಿಂದ ಭೇಟಿ ಆಗದೆ ಇರುವ ನೆಂಟರಿಷ್ಟರನ್ನು ಈ ನೆಪದಲ್ಲಾದರೂ ಪರ್ಸನಲ್ ಆಗಿ ಭೇಟಿ ಆಗುವ ಅವಕಾಶವಿದೆ. ಆಗ ಈ ಘಳಿಗೆ ಇಬ್ಬರಿಗೂ ಅತ್ಯಂತ ಸ್ಮರಣೀಯ ಎನಿಸುತ್ತದೆ.

ಹೀಗಾಗಿ ಯಾವುದೇ ಸಂಬಂಧವನ್ನು ವಿಶಿಷ್ಟ ಆಗಿಸಲು, ಒಂದು ಪ್ರೀತಿಯ ಪುಟ್ಟ ಗಿಫ್ಟ್, ನಿಮ್ಮನ್ನು ಇತರರಿಗಿಂತ ಬಲು ಸ್ಪೆಷಲ್ ಆಗಿಸುತ್ತದೆ. ಇದಕ್ಕಾಗಿ ನೀವು ಭಾರಿ ಉಡುಗೊರೆ, ದುಬಾರಿ ಗಿಫ್ಟ್ ಕೊಡಲೇಬೇಕು ಅಂತೇನಿಲ್ಲ. ಒಂದು ಸಣ್ಣ ಗಿಫ್ಟ್ ಆ ಕ್ಷಣಗಳನ್ನು ಅಮೃತಘಳಿಗೆ ಆಗಿಸಬಲ್ಲದು!

ಹಿಂದೆಲ್ಲ ಗಿಫ್ಟ್ ಅಂದ್ರೆ ಎಲ್ಲರೂ ಸ್ವೀಟ್‌ ಬಾಕ್ಸ್, ರೆಡಿಮೇಡ್‌ ಡ್ರೆಸ್‌ ಇತ್ಯಾದಿ ಕೊಡುತ್ತಿದ್ದರು. ಆದರೆ ಕಾಲ ಸರಿದಂತೆ ಈ ಕುರಿತು ಜನರ ಆಲೋಚನೆಯೂ ಬದಲಾಗಿದೆ. ಮಿಠಾಯಿ ಎಲ್ಲರ ಆರೋಗ್ಯಕ್ಕೂ ಒಳ್ಳೆಯದಲ್ಲ, ಅದನ್ನು ಅವರು ಒಂದು ಸೈಡ್‌ ಗೆ ಇರಿಸಿಬಿಟ್ಟರೆ, ಅದು ತಾನಾಗಿ ಕೆಡುತ್ತದೆ. ಹೀಗಾಗಿ ಕೆಡದೆ ಇರುವಂಥ, ನಿಮ್ಮ ಬಜೆಟ್‌ ಗೆ ಫಿಟ್‌ ಆಗುವಂಥ ಗಿಫ್ಟ್ ಕೊಡಿ!

  1. ನೆಕ್‌ ಲೇಸ್‌ ಯಾ ಬ್ರೇಸ್‌ ಲೆಟ್ಸ್ ಗೆ ಹೊಂದುವಂಥ ಹ್ಯಾಂಡ್‌ ಜ್ಯೂವೆಲರಿ ಹಲವು ಬಗೆಯ ಬೀಡ್ಸ್, ಪರ್ಲ್ಸ್, ಸೆಮಿ ಪ್ರೆಶಿಯಸ್ ಸ್ಟೋನ್ಸ್ ಇತ್ಯಾದಿ ಸಣ್ಣಪುಟ್ಟವು ಸಿಗುತ್ತದೆ. ಇದರಲ್ಲಿನ ಬೋನಸ್‌ ಪಾಯಿಂಟ್‌ ಅಂದ್ರೆ, ಅವರನ್ನು ನೆನೆಸುತ್ತಾ ನೀವು ಹೊಸ ಕ್ರಿಯೇಟಿವ್ ಗಿಫ್ಟ್ ಆರಿಸಬಹುದು. ಜೊತೆಗೆ ಸ್ವಹಸ್ತದಿಂದ ತಯಾರಿಸಲಾದ ಇಂಥ ಗಿಫ್ಟ್ಸ್ ಬಲು ಅಮೂಲ್ಯ ಸಹ!
  2. ಕೆಲವು ಬಗೆಯ ವಿಶೇಷ ವಸ್ತ್ರ, ಮೆಡಿಸಿನ್‌ ಪ್ಲಾಂಟ್ಸ್ ನೀಡಿ ಹೊಸ ಬಗೆಯ ಗಿಫ್ಟ್ ಕೊಡಿ. ಇವು ಕಸ್ಟಮೈಸ್ಡ್ ಆಗಿರುವುದರಿಂದ, ಆಕರ್ಷಕ ಎನಿಸುತ್ತದೆ.
  3. ಸಣ್ಣ ಗಾತ್ರವೇ ಆಗಿದ್ದರೂ ಪೆಂಡೆಂಟ್ಸ್ ಸ್ಪೆಷಲ್ ಎನಿಸುತ್ತದೆ. ಸಣ್ಣಪುಣ್ಣ ಗಿಫ್ಟ್ ಸೆಂಟರ್‌ ಗಳಲ್ಲೂ ಇಂಥ ನೂರಾರು ಬಗೆಯ ಪೆಂಡೆಂಟ್ಸ್ ಲಭ್ಯ. ಇದರಲ್ಲಿ ಹಾರ್ಟ್‌ ಶೇಪ್‌, ಕ್ರಿಸ್ಟಲ್, ಹೆಸರಿನ ಮೊದಲ ಅಕ್ಷರ, ಪ್ರಾಣಿ/ಪಕ್ಷಿ ಚಿತ್ರ ಇತ್ಯಾದಿ ಲಭ್ಯ ಉಂಟು.
  4. ಫೋಟೋ ಫ್ರೇಮ್ ತುಸು ಅಗ್ಗವೇ ಆದರೂ ಬಲು ಪ್ರಯೋಜನಕಾರಿ ಗಿಫ್ಟ್. ನೀವು ಯಾರಿಗೆ ಗಿಫ್ಟ್ ಕೊಡಲಿದ್ದೀರೋ, ಅವರೊಂದಿಗೆ ನೀವು ತೆಗೆಸಿಕೊಂಡಿರುವ ಫೋಟೋ ಸಹಿತ ಇದನ್ನು ನೀಡಿದರೆ, ಅವರು ಬಲು ರೋಮಾಂಚಿತರಾಗುತ್ತಾರೆ, ಇದನ್ನು ಸ್ಮರಣೀಯ ಕಾಣಿಕೆಯಾಗಿ ಇರಿಸಿಕೊಳ್ಳುತ್ತಾರೆ.
  5. ಗೃಹಾಲಂಕಾರಕ್ಕೆ ಬಳಕೆಯಾಗುವ ವಸ್ತುವನ್ನು ಉಡುಗೊರೆಯಾಗಿ ನೀಡುವುದೇ ಒಂದು ಚೆನ್ನ. ನಿಮ್ಮ ಆಯ್ಕೆಗಿಂತ ಇದನ್ನು ಯಾರಿಗೆ ಕೊಡಬೇಕೆಂದಿರುವಿರೋ ಅವರ ಇಷ್ಟ ಗಮನಿಸಿ, ಅಂಥವನ್ನೇ ಆರಿಸಿ. ಡೆಕೋರೇಟಿವ್ ಲೈಟ್ಸ್, ಕ್ಯಾಂಡಲ್ ಸ್ಟಾಂಡ್‌, ಮೆಟಾಲಿಕ್‌ ಗಿಫ್ಟ್, ಪೆನ್‌ ಸ್ಟಾಂಡ್‌, ವಾಲ್ ‌ಹ್ಯಾಂಗಿಂಗ್ಸ್, ಕ್ಲಚ್‌ ಬ್ಯಾಗ್‌, ರಂಗೋಲಿ ಡಿಸೈನ್‌…… ಇತ್ಯಾದಿ ಏನೇ ಆಗಿದ್ದರೂ ಸರಿ.
  6. ಕೆಲವರಿಗೆ ಪ್ರವಾಸ ಅಂದ್ರೆ ಬಹಳ ಇಷ್ಟ ಅಂಥವರಿಗೆ ನೀವು ಅವರು ಮೆಚ್ಚುವ ದೂರದೂರಿನ ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಿ, ಅವರನ್ನು ಆಶ್ಚರ್ಯಪಡಿಸಿ!
  7. ಸ್ಪೆಷಲ್ ಚಾಕಲೇಟ್‌, ಕುಕೀಸ್‌ ಬಾಕ್ಸ್ ಸಹ ಉತ್ತಮ ಗಿಫ್ಟ್ ಆಗಿದೆ. ನಿಮ್ಮ ಗೆಳೆಯರ ಮಕ್ಕಳ ಆಯ್ಕೆ ತಿಳಿದುಕೊಂಡು ಇಂಥವನ್ನು ಆರಿಸಿ.
  8. ಇತ್ತೀಚಿನ ಹೊಸ ಟ್ರೆಂಡ್‌ ಅಂದ್ರೆ, ವಿಶಿಷ್ಟ ವಿನ್ಯಾಸದ ಗಿಫ್ಟ್ ರಾಪಿನಲ್ಲಿ ಬರುವಂಥ ಡ್ರೈಫ್ರೂಟ್ಸ್ ಗಿಫ್ಟ್! ಇದನ್ನು ಬಹಳ ಜನ ಇಷ್ಟಪಡುತ್ತಾರೆ, ಆರೋಗ್ಯಕ್ಕೆ ಇದು ಅಷ್ಟೇ ಒಳ್ಳೆಯದು. ಈ ಕಂಟೇನರ್‌ ಖಾಲಿ ಆದರೆ ಇದನ್ನು ಬೇರೆ ವಸ್ತುಗಳ ಸಂಗ್ರಹಕ್ಕೂ ಬಳಸಬಹುದು.
  9. ಎಲ್ಲಾ ಕಾಲಕ್ಕೂ ಸಲ್ಲುವ ಟ್ರೆಂಡಿ ಗಿಫ್ಟ್ ಅಂದ್ರೆ ಗ್ರೀಟಿಂಗ್‌ ಕಾರ್ಡ್ಸ್! ಇದನ್ನು ನೀವು ಯಾವುದೇ ವಯಸ್ಸಿನವರಿಗಾದರೂ ಯಾವ ಹಬ್ಬಕ್ಕಾದರೂ ಕೊಡಬಹುದು. ಈ ರೀತಿ ನಿಮ್ಮ ಮನದಾಳದ ಮಾತುಗಳನ್ನು ಗಿಫ್ಟ್ ಕಾರ್ಡ್‌ ನಲ್ಲಿ ಬರೆದು, ನಿಮ್ಮ ಬಾಂಧವ್ಯ ಹೆಚ್ಚಿಸಿಕೊಳ್ಳಿ.
  10. ಕೆಲವು ಎಲೆಕ್ಟ್ರಾನಿಕ್‌ ಐಟಂ ಎಲ್ಲರಿಗೂ ಉಪಯುಕ್ತ ಆಗುತ್ತದೆ. ಅಂದ್ರೆ…. ಪೋರ್ಟೆಬಲ್ ಬ್ಯಾಟರಿ ಚಾರ್ಜರ್ಸ್, ಇಯರ್‌ ಫೋನ್‌, ಕಾರ್ಡ್‌ ಲೆಸ್‌ ಸೆಟ್‌, ಮಿನಿ ಮೊಬೈಲ್ ‌ಇತ್ಯಾದಿ ಗಿಫ್ಟ್ ನೀಡಬಹುದು.
  11. ಇಂದು ಸ್ಮಾರ್ಟ್‌ ಫೋನ್‌ ಇಲ್ಲದವರೇ ಇಲ್ಲ ಎನ್ನಬಹುದು. ಯಾವುದಾದರೂ ಉಪಯುಕ್ತ ಆ್ಯಪ್‌, ಮ್ಯಾಗಝೀನ್‌ ನ್ನು ಸಬ್‌ಸ್ಕ್ರೈವೆಬ್‌ ಮಾಡಿ ಕೊಡುದು ಸಹ ಉತ್ತಮ ಉಡುಗೊರೆಯೇ ಹೌದು.
  12. ಲೇಟೆಸ್ಟ್ ಬ್ರಾಂಡ್‌ ನ ಮೇಕಪ್‌ ಕಿಟ್‌, ಪರ್ಫ್ಯೂಮ್, ಡಿಯೋ ಇತ್ಯಾದಿಗಳಿಗೆ ಹಬ್ಬದ ಸೀಸನ್‌ ನಲ್ಲಿ ಭಾರಿ ರಿಯಾಯಿತಿ ಉಂಟು. ಹೀಗಾಗಿ ಇಂಥವನ್ನು ಇಷ್ಟಪಡುವವರಿಗೆ ಇಂಥದ್ದೇ ಗಿಫ್ಟ್ ಕೊಡಿ.
  13. ಸರ್‌ ಪ್ರೈಸ್‌ ಗಿಫ್ಟ್ ಮತ್ತೊಂದು ಸ್ಪೆಷಲ್! ಇದು ಎಲ್ಲರಿಗೂ ಇಷ್ಟ. ಇದನ್ನು ನಿಮ್ಮ ಕೆಲವೇ ಆಪ್ತ ಮಂದಿಗೆ ಹಂಚಲು ಇರಿಸಿಕೊಳ್ಳಿ. ಪತ್ನಿಗೆ ಮೇಕಪ್‌ ಸೆಟ್‌, ನೆಕ್‌ ಲೇಸ್‌, ಉಂಗುರ, ಟ್ರೆಂಡಿ ಜ್ಯೂವೆಲರಿ, ವಯಸ್ಕ ಮಕ್ಕಳಿಗೆ ಟೀ ಶರ್ಟ್‌, ಜೀನ್ಸ್, ಪ್ಯಾಂಟ್‌, ಮೊಬೈಲ್‌, ಕಾಫಿ ಮಗ್‌, ಮಕ್ಕಳಿಗೆ ಆಟದ ಸಾಮಾನು, ಪೆನ್‌ ಸೆಟ್‌, ವಿಡಿಯೋ ಗೇಮ್ಸ್, ಫ್ರೆಂಡ್ಸ್ ಗೆ ಗಡಿಯಾರ, ವಾಚ್‌, ಕೀ ಚೈನ್‌, ಸೆಂಟ್‌ ಬಾಟಲ್ ಇತ್ಯಾದಿ ಕೊಡಬಹುದು.
  14. ಸಸ್ಟೇನೆಬಲ್ ಗಿಫ್ಟ್ ಇಂದಿನ ಕಾಲದ ಆಧುನಿಕ ಆಯ್ಕೆ. ಹೀಗಾಗಿ ಜನ ಇಂಥದ್ದೇ ಗಿಫ್ಟ್ ನೀಡುತ್ತಾರೆ. ಯಾರಿಗೆ ಆಗಲಿ, ಸ್ಪೆಷಲ್ ಫೀಲ್ ಬರುವಂಥ ಗಿಫ್ಟ್ ಕೊಡಿ. ನಮ್ಮ ಭಾವನೆಗಳನ್ನು ಗುರುತಿಸುವಂಥವರಿಗೆ ಆರಿಸಿ ಇವನ್ನು ಉಡುಗೊರೆ ನೀಡಿ. ಪಾಕೆಟ್‌ ಫ್ರೆಂಡ್ಲಿ ಆಗಿರಬೇಕಾದ ಇವನ್ನು ನೀವು ಕೊಡುವ ವ್ಯಕ್ತಿಯ ವಯಸ್ಸು, ಅಭಿರುಚಿ, ಇಷ್ಟಾನಿಷ್ಟ ಗಮನಿಸಿಕೊಂಡೇ ಕೊಡಿ.

ಜಿ. ಪ್ರೇರಣಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ