ಇಡೀ ದಿನ ದುಡಿದು, ದಣಿದು ಮನೆ ತಲುಪಿದಾಗ ಯಾರಿಗೆ ತಾನೇ 2 ಘಳಿಗೆ ವಿಶ್ರಾಂತಿ ಬೇಕು ಎನಿಸುವುದಿಲ್ಲ? ಮನೆ ಎಂದರೆ ಖುಷಿ, ಸಕಾರಾತ್ಮಕತೆಯ ತಾಣ. ಹೀಗಿರುವಾಗ ನಮ್ಮ ದೈನಂದಿನ ಜೀವನದಲ್ಲಿ ಬೆಳಕಿನ ವ್ಯವಸ್ಥೆ ಬಲು ಮುಖ್ಯ ಅಲ್ಲವೇ? ನಾವು ನಮ್ಮ ಮನೆಗೆ ಸೂಕ್ತ ಲೈಟಿಂಗ್ ಅರೇಂಜ್ ಮೆಂಟ್ ಮಾಡಿಸಿರಬೇಕಲ್ಲವೇ? ಹೌದು ಎಂದಾದರೆ ಏಕೆ? ಈ ಕುರಿತಾಗಿ ದೇಶದ ಖ್ಯಾತ ಇಂಟೀರಿಯರ್ ಡಿಸೈನರ್ಸ್ ಸಲಹೆ ಏನು? ಮನೆಯ ಯಾವುದೇ ಮೂಲೆಗೆ ಹೋದರೂ ನಿಮಗೆ ಧಾರಾಳ ಸಕಾರಾತ್ಮಕತೆಯ ಶಕ್ತಿ ತುಂಬಿಕೊಂಡಿದೆ ಎಂಬ ಅನುಭವವಾದರೆ, ನಿಮ್ಮ ಮೂಡ್ ತಂತಾನೇ ರೀಫ್ರೆಶ್ ಆಗುತ್ತದೆ. ಆಗ ಮನದಲ್ಲಿ ಮೂಡುವ ಪ್ರಶ್ನೆ ಎಂದರೆ, ಈ ರೀತಿ ಆಗಲು ಕಾರಣವೇನು? ಇದನ್ನು ಗ್ರಹಿಸಲು ಆಗದಿದ್ದರೆ ನೀವು ಈ ಅನುಭವವನ್ನೇ `ಪಾಸಿಟಿವ್ ಎನರ್ಜಿ' ಎಂದು ಅರ್ಥೈಸುವಿರಿ. ಆದರೆ ಮುಂದಿನ ಸಲ ನಿಮಗೆ ಇಂಥದ್ದೇ ಅನುಭವವಾದರೆ, ಕೋಣೆಯ ಬೆಳಕಿನ ವ್ಯವಸ್ಥೆಯತ್ತ ಸೂಕ್ಷ್ಮವಾಗಿ ಗಮನಹರಿಸಿ.
ಗುಡ್/ ಬ್ಯಾಡ್ ಲೈಟಿಂಗ್ ಎಫೆಕ್ಟ್ಸ್
ನಮಗೆಲ್ಲರಿಗೂ ಗೊತ್ತಿರುವ ವಿಷಯ ಎಂದರೆ ಅಸಮರ್ಪಕ ಲೈಟಿಂಗ್ ವ್ಯವಸ್ಥೆಯಿಂದ ಓದಿ ಬರೆಯಲು ಕಷ್ಟವಾಗುತ್ತದೆ ಎಂಬುದು. ಇದರರ್ಥ ಕಂಗಳ ಮೇಲೆ ಒತ್ತಡ ಹೇರಿದಂತಾಗುತ್ತದೆ. ಅದೇ ತರಹ ಕಣ್ಣು ಚುಚ್ಚು ಬೆಳಕಿದ್ದರೂ, ಕಂಗಳಿಗೆ ಹಾನಿ ತಪ್ಪಿದ್ದಲ್ಲ. ಈ ಎರಡೂ ಸ್ಥಿತಿಗಳೂ ನಮ್ಮ ಕಂಗಳಿಗೆ ಪ್ರತಿಕೂಲ ಪರಿಣಾಮವನ್ನೇ ಬೀರುತ್ತವೆ. ಈ ತರಹದ ದೋಷಪೂರ್ಣ ಬೆಳಕಿನ ವ್ಯವಸ್ಥೆ, ಡಿಸೈನರ್ ಹೌಸ್ ಗಳಲ್ಲಿ ದೀರ್ಘಕಾಲ ಉಳಿದರೆ, ಅದು ನಮ್ಮ ಆರೋಗ್ಯಕ್ಕೆ ಎಂದೂ ಹಿತಕರವಲ್ಲ, ಇದರಿಂದ ತೊಂದರೆ ತಪ್ಪಿದ್ದಲ್ಲ. ಈ ಕಾರಣದಿಂದಲೇ ನಮ್ಮ ಮನೆ ಹಾಗೂ ಆಫೀಸ್ ಏರಿಯಾಗಳಲ್ಲಿ ಅತಿ ಸೂಕ್ತ ಲೈಟಿಂಗ್ ವ್ಯವಸ್ಥೆ ಇರಲೇಬೇಕು.
ಲೈಟಿಂಗ್ ನ ಅವಶ್ಯಕತೆ
ಲೈಟಿಂಗ್ ಪ್ರಮಾಣವನ್ನು `ಲಕ್ಸ್' ಎಂಬ ಮಾಪಕದಿಂದ ಅಳೆಯುತ್ತಾರೆ. ಒಂದು ಮನೆಯಲ್ಲಿ ಪ್ರತಿ ಕೋಣೆಯಲ್ಲೂ ಇಂತಿಷ್ಟೇ ಪ್ರಮಾಣದ ಲಕ್ಸ್ ಬೆಳಕು ಇರಬೇಕೆಂಬ ನಿಯಮವಿದೆ. ಹಗಲು ಅಥವಾ ರಾತ್ರಿ, ನಮ್ಮ ಅಗತ್ಯಕ್ಕೆ ತಕ್ಕಂತೆ ಮನೆಯಲ್ಲಿ ಬೆಳಕಿನ ವ್ಯವಸ್ಥೆ ಇರಬೇಕು. ಸರಿಯಾದ ಪ್ರಮಾಣದಲ್ಲಿ ಸೂಕ್ತವಾಗಿ ಮಾಡಿದ ವ್ಯವಸ್ಥೆ ಮಾತ್ರ ಉತ್ತಮ ಪರಿಣಾಮ ನೀಡಬಲ್ಲದು.
ಲೈಟ್ ಅರೇಂಜ್ ಮೆಂಟ್
ನಾವು ಬೆಳಕಿನ ವ್ಯವಸ್ಥೆ ಬಗ್ಗೆ ಮಾತನಾಡುವಾಗ, ಲೈಟ್ ಅರೇಂಜ್ ಮೆಂಟ್ ನ ವಿವಿಧ ಹಂತಗಳು ಕಣ್ಮುಂದೆ ಬರುತ್ತದೆ. ಸಾಮಾನ್ಯವಾಗಿ ಜನ ಕಣ್ಣು ಕೊರೈಸುವ ಬೆಳಕನ್ನೇ ಬೆಸ್ಟ್ ಲೈಟಿಂಗ್ ಅರೇಂಜ್ ಮೆಂಟ್ ಎಂದು ಭಾವಿಸುತ್ತಾರೆ. ಆದರೆ ಪ್ರತಿ ಸಂದರ್ಭದಲ್ಲೂ ಇದರಿಂದ ಉತ್ತಮ ಪ್ರಭಾವ ಸಿಗುತ್ತದೆ ಎಂದೇನಿಲ್ಲ. ಇದನ್ನು ಜನ ಸಾಮಾನ್ಯವಾಗಿ ಗುರುತಿಸುವುದೇ ಇಲ್ಲ ಅಥವಾ ನಮ್ಮ ಸುತ್ತಮುತ್ತಲಿನ ಬೆಳಕಿನ ವ್ಯವಸ್ಥೆಗೆ ಮಹತ್ವವನ್ನೇ ನೀಡುವುದಿಲ್ಲ. ಆದರೆ ಈ ವ್ಯವಸ್ಥೆ ನಮ್ಮ ಮನಃಸ್ಥಿತಿ, ಆರೋಗ್ಯ, ದೃಷ್ಟಿ, ನಮ್ಮ ಸಾಮಾನ್ಯ ಜೀವನದ ಮೇಲೂ ಜಬರ್ದಸ್ಟ್ ಪ್ರಭಾವ ಬೀರುತ್ತದೆ.





