ಹೊಸದಾಗಿ ಬಂಗಾರ ತೆಗೆದುಕೊಳ್ಳಲಿದ್ದೀರಾ? ಇದಕ್ಕಾಗಿ ನಿಮಗೆ ದೀಪಾವಳಿಗಿಂದ ಬೇರೆ ಸುವರ್ಣಾವಕಾಶ ಬೇಕೇ.....?

ಭಾರತೀಯ ಕುಟುಂಬಗಳಲ್ಲಿ ಅನಾದಿ ಕಾಲದಿಂದಲೂ ಬಂಗಾರದ ಆಭರಣಗಳ ಕೊಳ್ಳುವ ಬಗ್ಗೆ ದೊಡ್ಡ ಕ್ರೇಝ್ ಇದ್ದೇ ಇದೆ. ತೀರಾ ಸಣ್ಣಪುಟ್ಟ ಸಂದರ್ಭ ಅಲ್ಲದಿದ್ದರೂ, ಮದುವೆ ಮುಂಜಿಗಳಂಥ ಶುಭ ಸಮಾರಂಭ ಏರ್ಪಡಿಸುವಾಗ ಅವರವರ ಬಜೆಟ್‌ ಗೆ ತಕ್ಕಂತೆ ಮಧ್ಯಮ, ಕೆಳ ಮಧ್ಯಮ ವರ್ಗದವರೂ ಸಹ ಚಿನ್ನ ಕೊಳ್ಳದೇ ಇರಲಾರರು. ಬಂಗಾರದ ಒಡವೆ ಹೆಣ್ಣಿನ ಮೊದಲ ಅಕ್ಕರೆಯ ವಸ್ತುವಾದರೆ, ಇದರ ಮೇಲೆ ಹಣ ಹೂಡುವಿಕೆ ಖಂಡಿತಾ ನಮ್ಮ ಆಪತ್ತಿನ ಕಾಲಕ್ಕೆ ನೆರವಾಗುತ್ತದೆ.

ಯಾವುದೇ ವಿಷಮ ಪರಿಸ್ಥಿತಿಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಏರುಪೇರಾದಾಗ, ಚಿನ್ನ ಮಾತ್ರವೇ ಮನೆಯ ಪರಿಸ್ಥಿತಿ ಸರಿದೂಗಿಸಬಲ್ಲದು! ಹೀಗಾಗಿಯೇ ಜನ ಕಷ್ಟ ಕಾಲ ಬಂದಾಗ ನೆಂಟರಿಷ್ಟರೆದುರು ಆರಡಿ ದೇಹವನ್ನು ಮೂರಡಿ ಮಾಡಿ ಬೇಡುವುದಕ್ಕಿಂತ, ತಮ್ಮ ಬಳಿ ಇರುವ ಬಂಗಾರವನ್ನು ಅಡವಿಟ್ಟೋ, ಮಾರಿಯೋ, ಬಂದ ಕಷ್ಟ ಸರಿಪಡಿಸಿಕೊಳ್ಳುವುದೇ ಸೂಕ್ತ ಎಂದು ಭಾವಿಸುತ್ತಾರೆ. ಇಂದಿನ ಆಧುನಿಕ ದಿನಗಳಲ್ಲಿ ನಮ್ಮ ಬಳಿಯ ಬಂಗಾರವನ್ನು ಬ್ಯಾಂಕಿನಲ್ಲಿಟ್ಟರೆ ಅದಕ್ಕೆ ಉತ್ತಮ ಸಾಲ ಸಿಗುತ್ತದೆ. ಚಿನ್ನಕ್ಕೆ ಬದಲು ಸಾಲ ಪಡೆಯುವ ಈ ಪ್ರಕ್ರಿಯೆಯೂ ಅತಿ ಸರಳ. ಬ್ಯಾಂಕಿನ ಅತಿ ಕ್ಲಿಷ್ಟಕರ ವ್ಯವಹಾರಗಳೇನೂ ಇಲ್ಲ.

Gold-1

ಗೋಲ್ಡ್ ಲೋನಿನ ಅಗತ್ಯ

ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಮನೆ ಮಂದಿಗೆ ಆಪರೇಶನ್‌ ನಂಥ ಗಂಭೀರ ಪರಿಸ್ಥಿತಿ, ವ್ಯವಹಾರದಲ್ಲಿ ಲಾಸ್‌, ಆಕಸ್ಮಿಕ ದುರ್ಘಟನೆ..... ಇತ್ಯಾದಿ ಏನೇ ಸಂಕಷ್ಟಗಳಿರಲಿ, ಹಣದ ಅಗತ್ಯ ತುರ್ತಾಗಿ ಬೇಕಾದಾಗ, ಜನ ಗೋಲ್ಡ್ ಲೋನ್ ಪಡೆಯಲು ಮುಂದಾಗುತ್ತಾರೆ. ಆದರೆ ಇದಕ್ಕೆ ಮೂಲಾಧಾರ.... ಮನೆಯಲ್ಲಿ ಚಿನ್ನ ಇರಲೇಬೇಕು! ಅಂದರೆ ಪರಿಸ್ಥಿತಿ ಅನುಕೂಲವಾಗಿದ್ದಾಗ ಅಗತ್ಯವಾಗಿ ಚಿನ್ನ ಕೊಂಡು ಇಟ್ಟುಕೊಂಡಿರಬೇಕು. ಮಧ್ಯಮ ವರ್ಗದವರಿಗೆ ವರ್ಷವಿಡೀ ಏನೋ ಒಂದು ಕಾಟ ಇದ್ದದ್ದೇ, ಹೀಗಾಗಿ ಏನಾದರೂ ಮಾಡಿ, ಹೇಗಾದರೂ ವರ್ಷ ಪೂರ್ತಿ ಹಣ ಕೂಡಿಟ್ಟು, ದೀಪಾವಳಿ ಸಂದರ್ಭದಲ್ಲಿ ಕನಿಷ್ಠ 8-10 ಗ್ರಾಂ. ಚಿನ್ನವಾದರೂ ಕೊಳ್ಳಲೇಬೇಕು.

ಹಾಗಾದಾಗ ಮಾತ್ರ ಮುಂದಿನ ದಿನಗಳಲ್ಲಿ ಇಂಥ ಕಷ್ಟ ಎದುರಾದಾಗ, ಕಂಡವರ ಬಳಿ ಸಾಲಕ್ಕೆ ಕೈ ಒಡ್ಡದೇ, ತಮ್ಮದೇ ಚಿನ್ನದಿಂದ ಸಾಲ ಪಡೆದು ಮರ್ಯಾದೆ ಉಳಿಸಿಕೊಳ್ಳಬಹುದು. ಆದ್ದರಿಂದ ಏನಾದರೂ ಮಾಡಿ ಬ್ಯಾಂಕ್‌ ನಲ್ಲಿ ಪ್ರತಿ ತಿಂಗಳೂ ಕನಿಷ್ಠ 1-2 ಸಾವಿರ ಆರ್‌.ಡಿ. ಅಕೌಂಟ್‌ ನಲ್ಲಿ ಹಣ ಕೂಡಿಸಿ, ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಚಿನ್ನ ಕೊಂಡುಕೊಳ್ಳಿ.

ಲೋನಿನ ಪ್ರೀ ಪೇಮೆಂಟ್

ಲೋನಿನ ಪ್ರೀ ಪೇಮೆಂಟ್‌ ಬಹುತೇಕ ಪ್ರಕರಣಗಳಲ್ಲಿ ಉತ್ತಮ ಎಂದೇ ಪರಿಗಣಿಸಲ್ಪಟ್ಟಿದೆ. ಬಲ್ಲವರು ಹೇಳುವಂತೆ, ಪ್ರೀ ಪೇಮೆಂಟ್‌ ಗೆ ಹೋಲಿಸಿದಾಗ ಅದೇ ಮೊತ್ತಕ್ಕಿಂತ ತುಸು ಹೆಚ್ಚಿನ ಹಣ ಸಿಗುವುದಾದರೆ, ಅದರಲ್ಲಿ ಇನ್‌ ವೆಸ್ಟ್ ಮಾಡುವುದು ಉತ್ತಮ ಎಂದಾಗುತ್ತದೆ.

ಒತ್ತಡಕ್ಕೆ ಸಿಲುಕದಿರಿ

ಗೋಲ್ಡ್ ಲೋನ್‌ ಅಥವಾ ಯಾವುದೇ ಲೋನ್‌ ಇರಲಿ, ನಿಮ್ಮ ಮಾಸಿಕ ಆದಾಯವನ್ನು ಗಮನದಲ್ಲಿಟ್ಟುಕೊಂಡೇ ಸಾಲ ಪಡೆಯಿರಿ, ಆಗ ಮಾತ್ರವೇ ನೀವು ಆ ಭಾಗದ ಮಾಸಿಕ ಕಂತನ್ನು ಸುಲಭವಾಗಿ ಕಟ್ಟಲು ಸಾಧ್ಯ. ನಿಮ್ಮ ಆದಾಯದ ಗರಿಷ್ಠ ಮೊತ್ತ, ಮಾಸಿಕ ಕಂತು ತೀರಿಸುವುದರಲ್ಲಿ ವ್ಯರ್ಥವಾದೀತು!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ