ʻಭರ್ಜರಿ ಬ್ಯಾಚುಲರ್ಸ್‌ʼ ರಿಯಾಲಿಟಿ ಶೋ ಖ್ಯಾತಿಯ ರಮೋಲಾ ವಿರುದ್ಧ ʻರಿಚ್ಚಿʼ ಸಿನಿಮಾ ನಿರ್ಮಾಪಕ ಫಿಲ್ಮ್‌ ಚೇಂಬರ್‌ಗೆ ದೂರು ನೀಡಿದ್ದಾರೆ.

ಈ ಸಿನಿಮಾದ ನಾಯಕಿಯಾಗಿ ನಟಿಸಿರುವ ರಮೋಲಾ, ʻಸಿನಿಮಾಗೆ ಸಪೋರ್ಟ್‌ ಮಾಡುತ್ತಿಲ್ಲ, ಪ್ರಮೋಷನ್ಸ್‌ಗೆ ಬರುತ್ತಿಲ್ಲʼ ಎಂದು ನಟ,ನಿರ್ಮಾಪಕ ಹೇಮಂತ್‌ ರಿಚ್ಚಿ ಫಿಲ್ಮ್‌ ಚೇಂಬರ್‌ನಲ್ಲಿ ದೂರು ನೀಡಿದ್ದಾರೆ.

ಕಿರುತೆರೆ ಧಾರಾವಾಹಿ ಹಾಗೂ ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕನ್ನಡಿಗರ ಮನೆ ಮಾತಾಗಿದ್ದ ರಮೋಲಾ ವಿರುದ್ಧ ಫಿಲ್ಮ್‌ ಚೇಂಬರ್‌ನಲ್ಲಿ ದೂರು ದಾಖಲಿಸಲಾಗಿದೆ.

“ನಮ್ಮ ಚಿತ್ರದಲ್ಲಿ ಮಾನ್ವಿತಾ ಹರೀಶ್‌ ಹಾಗೂ ರಮೋಲಾ ಇಬ್ಬರು ನಾಯಕ ನಟಿಯರಿದ್ದಾರೆ. ರಮೋಲಾ ಮೇಜರ್‌ ರೋಲ್‌ ಮಾಡಿದ್ದಾರೆ. ಪ್ರಮೋಷನ್‌ಗೆ ಬನ್ನಿ, ಸಿನಿಮಾಗೆ ಸಪೋರ್ಟ್‌ ಮಾಡಿ ಅಂತ ಫೋನ್‌ ಮಾಡುತ್ತಲೇ ಇದ್ದೇವೆ, ಆದರೆ ಅವರು ರೆಸ್ಪಾನ್ಸ್‌ ಮಾಡುತ್ತಲೇ ಇಲ್ಲ. ಒಬ್ಬ ನಿರ್ಮಾಪಕ ಕಷ್ಟ ಪಟ್ಟು ಎಲ್ಲಿಂದಲೋ ಸಾಲ ತಂದು ಸಿನಿಮಾ ಮಾಡಿರುತ್ತಾನೆ. ನಮಗೆ ಪ್ರಮೋಷನ್‌ ಮಾಡಿ ಕೊಡಿ ಅಂತ ನಾವು ಕೇಳುತ್ತಿದ್ದೇವೆ. ಒಂದು ಸಿನಿಮಾದಲ್ಲಿ ಆಕ್ಟಿಂಗ್‌ ಮಾಡಿದ ಮೇಲೆ ಪ್ರಮೋಷನ್‌ ಮಾಡೋದು ಅವರ ಕರ್ತವ್ಯ. ಒಬ್ಬ ನಿರ್ಮಾಪಕ ಗೆದ್ದರೆ, ಎಷ್ಟೋ ಜನಕ್ಕೆ ಕೆಲಸ ಸಿಗುತ್ತದೆ. ಇನ್ನೊಂದು ಎರಡ್ಮೂರು ಸಿನಿಮಾ ಮಾಡುತ್ತಾನೆ. ಹೀಗೆ ಮಾಡಿದರೆ ಹೇಗೆ?” ಎಂದು ಹೇಮಂತ್‌ ರಿಚ್ಚಿ ಪ್ರಶ್ನಿಸಿದ್ದಾರೆ.

“ ರಮೋಲಾ ಕಾಲ್‌ ಪಿಕ್‌ ಮಾಡಿ, ಇವತ್ತು ಆಗಲ್ಲ ಆದರೆ ಬರುತ್ತೇನೆ ಅಂತ ಆದರೂ ಹೇಳಬಹುದಿತ್ತು. ಇದು ಅವರ ಸಿನಿಮಾ. ಪ್ರಮೋಷನ್‌ ಬಗ್ಗೆ ರೆಸ್ಪಾನ್ಸ್‌ ಇಲ್ಲಾಂದ್ರೆ, ನಿರ್ಮಾಪಕ ಎಲ್ಲಿ ಹೋಗಬೇಕು. ಹಾಗಾಗಿ ಫಿಲ್ಮ್‌ ಚೇಂಬರ್‌ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಅವರನ್ನು ಕರೆಸುತ್ತೇವೆ, ಮಾತನಾಡೋಣ ಅಂತ ಹೇಳಿದ್ದಾರೆ.

“ರಿಯಾಲಿಟಿ ಶೋ ಮುಗಿದಿದೆ. ಸಿನಿಮಾವನ್ನೇ ನೀವು ಮರೆತು ಹೋದರೆ ಹೇಗೆ? ಫೋನ್‌ ಮಾಡುತ್ತಿದ್ದೇವೆ, ಕಾಲ್‌ ಪಿಕ್‌ ಮಾಡಲ್ಲ. ನಿಮ್ಮ ಸಿನಿಮಾಗೆ ಬಂದು ಸಪೋರ್ಟ್‌ ಮಾಡಿ ಅಂತ ಹೇಳುತ್ತಿರೋದು,” ಎಂದಿದ್ದಾರೆ ಹೇಮಂತ್‌ ರಿಚ್ಚಿ.

“ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್‌ ಮಾಡೋಣ ಅಂದುಕೊಂಡಿದ್ದೆವು. ಹಾಗಾಗಿ ಈಗಿನಿಂದಲೇ ಪ್ರಮೋಷನ್‌ ಮಾಡಿದ್ರೆ ಜನಕ್ಕೆ ರೀಚ್‌ ಆಗೋದು? ಎಂದಿದ್ದಾರೆ ನಿರ್ಮಾಪಕ ಹೇಮಂತ್‌ ರಿಚ್ಚಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ