- ರಾಘವೇಂದ್ರ ಅಡಿಗ ಎಚ್ಚೆನ್.
ಅಮಿತ್ ಪೂಜಾರಿ ನಿರ್ಮಾಣದ ಭೈರಾ ಸಿನಿಮಾದ ಮುಹೂರ್ತ ಗುರುವಾರ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪಂಚಮುಖಿ ಗಣಪತಿ ದೇಗುಲದಲ್ಲಿ ಬೆಳಗ್ಗೆ ನೆರವೇರಿದೆ. ಅಕುಲ್.ಎನ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ನಟ ನೆನಪಿರಲಿ ಪ್ರೇಮ್ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಆಗಮಿಸಿ, ಕ್ಲಾಪ್ ಮಾಡಿದರು. ಮಹೇಶ್ ಸಿದ್ದು ನಾಯಕನಾಗಿ ನಟಿಇದ್ದು, ಶ್ವೇತಾ ಸುರೇಂದ್ರ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಗೋಪಾಲ್ ದೇಶಪಾಂಡೆ, ರವಿ ಕಾಳೆ, ಸಂಪತ್‌ಕುಮಾರ್, ಕಾಕ್ರೋಚ್ ಸುಧಿ, ಯಶ್‌ಶೆಟ್ಟಿ, ಜಾಕ್ ಜಾಲಿಜಾಲಿ ಪಾತ್ರವರ್ಗದಲ್ಲಿದ್ದಾರೆ.
ಇದೊಂದು ಏರಿಯಾದಲ್ಲಿ ನಡೆಯುವ ಕಥೆ. ಲವ್, ಫ್ಯಾಮಿಲಿ ಸೆಂಟಿಮೆಂಟ್,ಎಮೋಷನಲ್, ಥ್ರಿಲ್ ಇರುವ ಸಿನಿಮಾ ಇದು. ಮುಗ್ಧ ಹುಡುಗನೊಬ್ಬನನ್ನು ಆ ಏರಿಯಾದ ಲೀಡರುಗಳು ಟಾರ್ಗೆಟ್ ಮಾಡಿದಾಗ ಏನೇನು ಆಗಲಿದೆ ಎಂದು ಹೇಳುವ ಕಥೆ. ಇದೊಂದು ಕಾಲ್ಪನಿಕ ಕಥೆ.
ಮುಹೂರ್ತ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಅಕುಲ್.ಎನ್ ಮಾತನಾಡಿ " ಇದು ಈ ನಿರ್ಮಾಪಕರೊಂದಿಗ ನನ್ನ ಎರಡನೇ ಚಿತ್ರ. ಅವರು ಮಾತು ಕೊಟ್ಟ ಹಾಗೆ ನನಗೇ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಇದು ಪರಿಪೂರ್ಣ ಕಮರ್ಷಿಯಲ್ ಚಿತ್ರ ಎನ್ನುವುದರಲ್ಲಿ ಸಂದೇಹವಿಲ್ಲ. " ಎಂದರು. ಅಂತೆಯೇ "ನಟ ಪ್ರೇಮ್ ಸಹ ಶೂಟಿಂಗ್ ಇದ್ದರೂ ಸಹ ಬೆಳಿಗ್ಗೆ ಬೇಗ ಬಂದು ನಮ್ಮ ಸಿನಿಮಾಗೆ ಕ್ಲಾಪ್ ಮಾಡಿದರು. ಅದು ಅವರ ಸ್ನೇಹದ ಸ್ವಭಾವ ತೋರಿಸುತ್ತಿದೆ" ಎಂದು ನಟ ಪ್ರೇಮ್ ಅವರ ಕುರಿತು ನಿರ್ದೇಶಕ ತಿಳಿಸಿದ್ದಾರೆ.
ನಾಯಕಿ ಶ್ವೇತಾ ಮಾತನಾಡಿ " ಕನ್ನಡದಲ್ಲಿ ಇದು ನನ್ನ ಮೂರನೇ ಚಿತ್ರ. ಕಥೆ ಬಹಳ ಯೂನಿಕ್ ಆಗಿದೆ. ನನ್ನ ಪಾತ್ರ ಸಹ ಚಾಲೆಂಜಿಂಗ್ ಆಗಿದೆ." ಎಂದರು.
ನಟ ಯಶ್ ಶೆಟ್ಟಿ ಮಾತನಾಡಿ" ಇದರಲ್ಲಿ ನನಗೆ ಆಕ್ಷನ್ ಇದೆ. ಫೈಟ್ ಇದ್ದು ನಿರ್ದೇಶಕರೊಂದಿಗೆ ಈ ಮುನ್ನ ನಾನು ಕೆಲಸ ಮಾಡಿದ್ದಾಗಿ ಹೇಳಿದರು.
ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಹಾಡುಗಳ ಚಿತ್ರೀಕರಣ ಬೆಂಗಳೂರು ಹೊರಗೆ ನಡೆಯಲಿದೆ.
ಚಿತ್ರದ ಸಂಗೀತ ಮಂಜು ಮಹಾದೇವ್, ಛಾಯಾಗ್ರಹಣ ಹಾಲೇಶ್ ಮಾಡಿದ್ದಾರೆ. ವಿಕ್ರಂ ಹಾಗೂ ವಿನೋದ್ ಮಾಸ್ಟರ್ ಸಾಹಸ ಚಿತ್ರಕ್ಕಿದೆ.ಕೆ.ಎಂ. ಪ್ರಕಾಶ್ ಎಡಿಟರಾಗಿ ಕೆಲಸ ಮಾಡಲಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಶೂಟಿಂಗ್ ಪ್ರಾರಂಭ ಆಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.